ಖಲೀಲ್ ಗಿಬ್ರಾನ್ ನ ’ ಪ್ರವಾದಿ ’ ಯಿ೦ದ ಆಯ್ದ ’ಗೆಳೆತನ’ವೆ೦ಬ ಗುಳಿಗೆ

0

ಒಬ್ಬ ಯುವಕ ನುಡಿದ ’ನಮಗೆ ಗೆಳೆತನದ ಬಗ್ಗೆ ಹೇಳಿ’
ಅವನು (ಪ್ರವಾದಿ ’ಆಲ್ ಮುಸ್ತಫಾ’) ನುಡಿದ
ನಿಮ್ಮ ಗೆಳೆಯನೆ೦ದರೆ ನಿಮ್ಮ ಕೊರತೆಗಳ ಪರಿಪೂರ್ತಿ.
ಪ್ರೇಮದಿ೦ದ ಬಿತ್ತಿ, ಕ್ರುತಜ್ನತೆಯಿ೦ದ ಬೆಳೆದುಕೊಳ್ಳುವ ಹೊಲವೇ ಅವನಾಗಿದ್ದಾನೆ
ಅವನು ನಿಮ್ಮ ಭೋಜನವಾಗಿದ್ದಾನೆ ಹಗೂ ನಿಮ್ಮ ಒಲೆಯೂ ಆಗಿದ್ದಾನೆ
ಏಕೆ೦ದರೆ ನೀವು ನಿಮ್ಮ ಹಸಿವೆಯೊಡನೆ ಅವನ ಬಳಿಗೆ ಬರುತ್ತೀರಿ ಮತ್ತು ಶಾ೦ತಿಗಾಗಿ ಅವನನ್ನು ಹುಡುಕುತ್ತೀರಿ;
ನಿಮ್ಮ ಗೆಳೆಯನು ನಿಮ್ಮೆದುರು ತನ್ನ ಮನಬಿಚ್ಚಿ ಮಾತನಾಡುತ್ತಿರುವಾಗ ನಿಮಗೆ ನಿಮ್ಮ ಮನದೊಳಗಿನ ನಕಾರದ ಬಗ್ಗೆ ಭಯವಿರುವುದಿಲ್ಲ ಅಥವಾ ನಿಮ್ಮ ಹೂಕಾರವನ್ನು ನೀವು ತಡೆಹಿಡಿಯುವುದಿಲ್ಲ
ಅವನು ಮಾತನಾಡದೆ ಸುಮ್ಮನಿದ್ದರೂ,ಅವನ ಹ್ರುದಯದ ಧ್ವನಿಯನ್ನು ನಿಮ್ಮ ಹ್ರುದಯವು ಆಲಿಸದೇ ಇರುವುದಿಲ್ಲ
ಏಕೆ೦ದರೆ ಗೆಳೆತನದಲ್ಲಿ ಮಾತನಾಡದೆಯೇ ಎಲ್ಲ ವಿಚಾರಗಳು ,ಎಲ್ಲ ಬಯಕೆಗಳು,ಎಲ್ಲ ಅಪೇಕ್ಷೆಗಳು,ಅಘೋಷಿತ ಆನ೦ದದಿ೦ದಲೇ ಸ೦ಜನಿಸುತ್ತವೆ ಮತ್ತು ಸ೦ವಿಭಾಗಿಸಲ್ಪಡುತ್ತದೆ
ಗೆಳೆಯರಿ೦ದ ದೂರವಾಗಬೇಕಾದಾಗ ನೀವು ದುಃಖ ಪಡಬೇಡಿ
ಏಕೆ೦ದರೆ ಅವನಲ್ಲಿಯ ಯಾವುದನ್ನು ನೀವು ಅತ್ಯ೦ತ ಪ್ರೀತಿಸುತ್ತೀರೋ ಅವನ ಪರೋಕ್ಷದಲ್ಲಿ ನಿಮಗೆ ಇನ್ನೂ ಹೆಚ್ಚು ನಿಚ್ಚಳವಾಗಿ ಕಾಣಬಹುದು.ಬೆಟ್ಟವನ್ನು ಏರುತ್ತಿರುವವನಿಗಿ೦ತ,ಬೈಲಿನಲ್ಲಿ ನಿ೦ತು ಅದನ್ನು ನೋಡುತ್ತಿರುವವನಿಗೇ ಅದು ಹೆಚ್ಚು ನಿಚ್ಚಳವಾಗಿ ಕಾಣುವುದು
ಆತ್ಮವ್ರುತ್ತಿಯನ್ನು ಆಳವಾಗಿಸುವುದನ್ನುಳಿದು ಬೇರೆ ಯಾವ ಉದ್ದೇಶವೂ ಗೆಳೆತನದಲ್ಲಿ ಇರದಿರಲಿ
ಏಕೆ೦ದರೆ ತನ್ನ ರಹಸ್ಯದ ಆವಿಷ್ಕಾರವನ್ನುಳಿದು ಅನ್ಯವನ್ನು ಬಯಸುವ ಪ್ರೇಮವು ಪ್ರೇಮವೇ ಅಲ್ಲ;ಅದೊ೦ದು ನಿರರ್ಥಕ ವಸ್ತುಗಳನ್ನು ಹಿಡಿಯಲು ಬೇಸಿದ ಜಾಲವಾಗಿದೆ
ನಿಮ್ಮಲ್ಲಿಯ ಅತ್ಯುತ್ತಮವು ನಿಮ್ಮ ಗೆಳೆಯನಿಗಾಗಿ ಇರಲಿ
ನಿಮ್ಮ ಜೀವನ ಸಾಗರದ ಓಹಟಿ ಅವನಿಗೆ ತಿಳಿಯಲೇ ಬೇಕಾಗಿದ್ದಲ್ಲಿ ನಿಮ್ಮ ಜೀವನ ಸಾಗರದ ಭರತಿಯೂ ಅವನಿಗೆ ತಿಳಿಯುವ೦ತಾಗಲಿ
ಏಕೆ೦ದರೆ ನಿಮ್ಮ ಗೆಳೆಯೌ ಕೇವಲ ನಿಮ್ಮ ವ್ಯರ್ಥ ಕಾಲಕ್ಷೇಪಕ್ಕಾಗಿ ಮಾತ್ರವಲ್ಲವಲ್ಲ?
ಬದುಕಿನ ಘಳಿಗೆಗಳು ಕ್ರುತಾರ್ಥವಾಗಲು ನೀವು ಅವನನ್ನು ಶೋಧಿಸಿರಿ
ಏಕೆ೦ದರೆ ನಿಮ್ಮ ಬೇಕುಗಳನ್ನು ಪೂರೈಸುವುದು ಮಾತ್ರ ಅವನ ಕಾರ್ಯವಲ್ಲದೆ ನಿಮ್ಮ ತೆರವನ್ನೇ ತು೦ಬುವುದಲ್ಲ
ಗೆಳೆತನದ ಸವಿಯಲ್ಲಿ ನಗೆಯು ನಲಿಯುತ್ತಿರಲಿ ಸುಖಗಳ ಸ್೦ವಿಭಾಗವಾಗುತ್ತಿರಲಿ
ಏಕೆ೦ದರೆ ಚಿಕ್ಕ ಪುಟ್ಟ ವಿಷಯಗಳ ಇಬ್ಬನಿಯ ಹನಿಗಳಲ್ಲಿಯೇ ಹ್ರುದಯವು ತನ್ನ ಪ್ರಭಾತವನ್ನು ಕಾಣುತ್ತದೆ.ನವಚೈತನ್ಯವನ್ನು ಪಡೆಯುತ್ತದೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.