ಪ್ರತಿಮೆಯ ಹಿ೦ದೆ

0

ಮು೦ಸೋರೆಯವರ ಪೇರಿಸಿದ ಚಿತ್ರ ನೋಡಿ ಬರೆದದ್ದು

ಪ್ರತಿಮೆಯ ಹಿ೦ದೆ
ಸಾವಿರ ಕೈಗಳಿವೆ
ನೂರಾರು ಕಣ್ಣುಗಳಿವೆ
ಹತ್ತಾರು ಕನಸಿದೆ

ಪ್ರತಿಮೆಯ ಕೆಳಗೆ
ಗೆಲುವೆನೆ೦ಬ ಛಲದ
ಆಳದ ಬೇರುಗಳಿವೆ
ಮೇಲೇರಲು ಹತ್ತಿದ
ಒಡೆದ ಮೆಟ್ಟಿಲುಗಳಿವೆ
ಅಭಿಮಾನಿಗಳ
ಮೆಚ್ಚಿನ ಮಾತುಗಳಿವೆ

ಪ್ರತಿಮೆಯ ಮು೦ದೆ
ನೋವ ಮರೆಸುವ
ನಗುವಿದೆ
ಕ೦ಬನಿ ತು೦ಬಿದ
ಕ೦ಗಳಲಿ ಹೊಳಪಿದೆ
ಸತ್ತ ಮೇಲೂ ಗೆದ್ದ
ಹೆಮ್ಮೆಯಿದೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರೀಶ್ ಕವನ ಸೂಪರ್ರ್....
ಇದು ಒಂದು ದೃಷ್ಟಿಕೋನವಾದರೆ...
ಮತ್ತೊಂದು ದೃಷ್ಟಿಕೋನದಲ್ಲು ಪ್ರತಿಮೆಗಳನ್ನು ನೋಡಬಹುದಲ್ವೆ....
ಆ ಕೋನದಲ್ಲಿ ನಾನು ಚಿತ್ರಿಸಲು ಪ್ರಯತ್ನಿಸಿರುವುದು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಅದು ಯಾವ ಕೋನ?
ನೀವು ಬರೆದಾಗ್ಲೇ ನಮಗೆ ಗೊತ್ತಾಗುತ್ತೆ .ಬೇಗನೆ ಮೌನವನ್ನ ಮುರಿದು ಬರೆದುಬಿಡಿ.ನ೦ಗ೦ತೂ ಕುತೂಹಲ ತಡೆಲಿಕ್ಕೆ ಆಗ್ತಿಲ್ಲ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಸೋರೆ...ನೀವು ಯಾವ ದೃಷ್ಟಿಯಲ್ಲಿ ಚಿತ್ರವನ್ನು ಎಡಿಟ ಮಾಡಿದ್ದೀರಿ ತಿಳಿಸಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ......(ಸತ್ತ ಮೇಲೂ ಗೆದ್ದ
ಹೆಮ್ಮೆಯಿದೆ)---ನಿಮ್ಮ ಕವನ ಕಥೆಯನ್ನೆ ಹೇಳುತ್ತದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ಹಾಗು ಕವನ ಎರೆಡು ಚೆನ್ನಾಗಿದೆ .
ಚಿತ್ರ ಬರೆದ ಮು೦ಸೋರೆಯವರಿಗೂ ಮತ್ತು ಕವನ ಬರೆದ ಹರೀಶ್ ರವರಿಗೂ ನನ್ನ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನೀ ವಿನಯ್....
<<<ಮುಂಸೋರೆ>>> ಅಲ್ಲಾ... :(
ಮಂಸೋರೆ .... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಲಿಲ್ಲ , ಯಾರು ಮತ್ತೆ ಬರೆಯುತ್ತಾರೆ ಅಂತ ಮೇಲೆ ಹರೀಶ್ ರವರು ಬರೆದಿರೋದನ್ನ ಕಾಪಿ ,ಪೇಸ್ಟ್ ಮಾಡಿದೆ .
ನೋಡಿದ್ರೆ ಅವರೇ ತಪ್ಪು ಬರೆದಿದ್ದಾರೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ಪ್ರತಿಮೆಯ ಮು೦ದೆ
ನೋವ ಮರೆಸುವ
ನಗುವಿದೆ
ಕ೦ಬನಿ ತು೦ಬಿದ
ಕ೦ಗಳಲಿ ಹೊಳಪಿದೆ
ಸತ್ತ ಮೇಲೂ ಗೆದ್ದ
ಹೆಮ್ಮೆಯಿದೆ<

ಈ ಸಾಲುಗಳು ಅದ್ಭುತ ಸಾಲುಗಳು ಇಡಿ ಪ್ರತಿಮೆಯ ಕಥೆಯನ್ನೆ ಹೇಳಿತು......, ನಾವು ಅನೇಕ ಪ್ರತಿಮೆಗಳನ್ನು ನೋಡುತ್ತೇವೆ(ರಸ್ತೆ ಬದಿಯಲ್ಲಿ) ಆದರೆ ಅದರ ಹಿಂದಿನ ಹೋರಾಟ, ಕಾದಾಟ ಎಂದೂ ನೆಸಪಿಸೆವು.......... ಕೇವಲ ಒಂದು ಪ್ರತಿಮೆ ಎಂದು ಗುರುತಿಸಿ ಕೈ ತೊಳೆದುಕೊಳ್ಳುತ್ತೇವೆ ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಹೌದು ಸರ್ .ಪ್ರತಿಮೆಗಳು ತು೦ಬಾ ಹೇಳುತ್ತೆ ನಮ್ಮ ನಮ್ಮ ಕಲ್ಪನೆಗೆ , ಮನಸ್ಸಿಗೆ ತಕ್ಕ೦ತೆ ನಾವು ಅದನ್ನ ಕಲ್ಪಿಸಿಕೊಳ್ಳುತ್ತಾ ಹೋಗ್ತೀವಿ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಪ್ರತಿಮೆಗೆಳ ಬಗ್ಗೆ ಸ್ಪೂರ್ತಿ ಕೊಟ್ಟಿದ್ದಕ್ಕೆ ಮ೦ಸೋರೆಯವರಿಗೆ ಮತ್ತೊಮ್ಮೆ ಧನ್ಯವಾದಗಳು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.