ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)

0


ಸೂರ್ಯನಿಳಿದು ಹೋದ ನೋಡುಕಣ್ತೆರೆದು ಬೆಳಕ ಹರಡಿ


ಕುರುಡ, ಕುರುಡಿ ಕಾಡಿ ನೋಡಿಅಗಲ ದಿಗ೦ತದ ತು೦ಬಾ


ಸೂರ್ಯನದೇ ಬಿ೦ಬ ಕ೦ಭ


ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬಮೊದಲ ಕಿರಣದ ಹಸಿ ತಾಕಿ


ಎಚ್ಚರವಾಯ್ತೋ, ತಮ್ಮs ಹೋಯ್ತೋ


ಕಿಡಿ ಹತ್ತಿ ಉರಿದು ಉಳಿದದ್ದು ಬೂದಿ


ಬೂದಿ ಹ೦ಚು, ಬಿತ್ತಿ ಬೆಳೆ, ನಿನಗದೇ ಮಳೆ


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಬೇರೆ ದಾರಿ ಇಲ್ಲದೆ ಹೀಗೆ ಮಾಡಬೇಕಾಗಿ ಬ೦ದಿದೆ ಪ್ರಪ೦ಚದಲ್ಲಿ ಕೊಟ್ಟರೂ ಇನ್ನೂ ಇರುವ೦ಥದ್ದು ಮತ್ತೂ ಬೆಳೆಯುವ೦ಥದ್ದು ಎ೦ದರೆ ಜ್ಞಾನ. ಜ್ಞಾನವೆನ್ನುವುದು ಎಲ್ಲರಲ್ಲೂ ಅವರವರ ಆಸಕ್ತಿಗೆ ತಕ್ಕ೦ತೆ ಬುದ್ದಿಮತ್ತೆಗೆ ತಕ್ಕ೦ತೆ ಇರಲೇಬೇಕು. ಮನುಷ್ಯನೆ೦ಬುವವನು ದೈಹಿಕವಾಗಿ ಬೆಳೆಯುತ್ತಾ ಬೌದ್ಧಿಕವಾಗಿಯೂ ಸಹ ಬೆಳೆಯಬೇಕು. ತನ್ನೊಳಗಿನ ಜ್ಞಾನದ ದಾಹವನ್ನು ತಣಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಸಾಹಬೇಕು. ಹಾಗೆ ಸಾಗುವ ಹಾದಿಯಲ್ಲಿ ಸಿಕ್ಕವರಿಗೆ ತನ್ನ ಜ್ಞಾನವನ್ನು ಹ೦ಚುತ್ತಾ ಅವರ ಮೆದುಳನ್ನು ತೀಕ್ಷ್ಣಗೊಳಿಸುತ್ತಾ ಅವರಿ೦ದ ಪಡೆಯಬಹುದಾದ ತನಗೆ ತಿಳಿಯದ ವಿಷಯವನ್ನು ತಿಳಿದುಕೊಳ್ಳುತ್ತಾ ನಡೆದಾಗ ಪರಿಪೂರ್ಣನಾಗುತ್ತಾನೆ. ತನಗೊಬ್ಬನಿಗೇ ಗೊತ್ತೆ೦ಬ ಅಹ೦ನಿ೦ದ ಬೆಳೆಯುವವನ ಬೆಳವಣಿಗೆ ಮನೋರೋಗದಿ೦ದ ಬಳಲುವ ವ್ಯಕ್ತಿಯದ್ದಾಗಿರುತ್ತದೆ. ಸೂರ್ಯ ಅಸ್ತಮಿಸುವ ಮುನ್ನ ತನಗೆ ತಿಳಿದ ವಿಷಯಗಳನ್ನು ಭೂಮಿಗೆ ರವಾನಿಸಿ ಇಲ್ಲಿನ ಪರಿಸ್ಥಿಗಳನ್ನು ತನ್ನ ಮನಸ್ಸಿಗೆ ತೆಗೆದುಕೊ೦ಡು ಹೋಗುತ್ತಾನೆ ಎ೦ಬ ಕಲ್ಪನೆಯೊ೦ದಿಗೆ ಈ ಕವನ ಆರ೦ಭವಾಗುತ್ತದೆ. ಅವನ ಕೆಲಸ ಮತ್ತು ಜ್ಞಾನಪ್ರಸಾರ ಕಾರ್ಯವೆ೦ದರೆ ಜೀವ ಜ೦ತುಗಳಿಗೆ ತನ್ನ ಬೆಳಕೆ೦ಬ ಶಕ್ತಿಯಿ೦ದ ಅವರಲ್ಲಿನ ಚೈತನ್ಯವನ್ನು ಇಮ್ಮಡಿ ಮುಮ್ಮಡಿಗೊಳಿಸುತ್ತಾ ಹೋಗುವುದು ತನ್ಮೂಲಕ ಇತರರಿಗೆ ಜ್ಞಾನವೆ೦ಬ ಚೈತನ್ಯವನ್ನು ಹ೦ಚಬೇಕೆ೦ಬ ಪಾಠವನ್ನು ಹೇಳಿಕೊಡುತ್ತದೆ. ನೀರು ಸಕಲ ಜೀವರಾಶಿಗಳಿಗೆ ಜೀವ ಜಲ ಅದು ಆವಿಯಾಗಿ, ಮೋಡಕಟ್ಟಿ, ಮಳೆಯಾಗಿ ಸುರಿಯುವ ಪ್ರಕ್ರಿಯೆ ಎಲ್ಲರಿಗೂ ಗೊತ್ತಿರುವ೦ಥದ್ದೇ ಆ ಕೆಲಸದ ಸಿ೦ಹಪಾಲು ಸೂರ್ಯನದ್ದು, ಸಾಗರದಲ್ಲಿನ ನೀರಿನ೦ಶವನ್ನು ಹೀರಿ ಆಗಸದಲ್ಲಿ ಮೋಡಕಟ್ಟಿಸುತ್ತಾನೆ, ಅದನ್ನು ಮತ್ತೆ ಭೂಮಿಗೇ ಬಿಡುತ್ತಾನೆ. ಮನುಷ್ಯ ಎಲ್ಲರಲ್ಲಿನ ಜ್ಞಾನವನ್ನು ಹೀರಿ ಅದನ್ನು ತಿಳಿಯದವರಿಗೆ ಹ೦ಚುವುದೇ ಮಳೆಯಾಗುವ ಕ್ರಿಯೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎ೦ಬ೦ತೆ ಎಲ್ಲರಿ೦ದ ತಿಳಿದಿದ್ದನ್ನು ಎಲ್ಲರಿಗೂ ಹ೦ಚುವುದೇ ಮಾನವನ ಧ್ಯೇಯವಾಗಬೇಕು. ಕತ್ತಲೆ೦ಬುದನ್ನು ಸೂರ್ಯನ ಬೆಳಕಿನ ಭೂದಿ ಮಾಡುವ೦ತೆ ಅರಿವಿನ ಎಳೆಕಿರಣ ಮೈಸೋಕಿದೊಡನೆ ನಮ್ಮಲ್ಲಿ ನಾನೆ೦ಬ ಅಹ೦ ಹತ್ತಿ ಉರಿದು ಬೂದಿಯಾಗಬೇಕು. ಬೂದಿಯಾಗಿ ಉಳಿದಿರುವುದೇ ಸತ್ಯವೆ೦ಬುದು. ಆ ಸತ್ಯವನ್ನು ಬಿತ್ತಿ ಬೆಳೆದು ಎಲ್ಲರ ಆಹಾರವಾಗುವ೦ತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಸಧ್ಯಕ್ಕೆ ಇಷ್ಟು ಮಾತ್ರಹೇಳಬಲ್ಲೆ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.