ದ್ಯಾವ್ರ ಕೈನಾಗೆ ಪ್ರೇಮ್ಪತ್ರ ಬರೆಸಿವ್ನಿ…..

5

ಚೆಲ್ವಿ
ನಿನ್ ಕುಟ್ಟೆ ಮಾತಾಡ್ ಬೇಕು ಅ೦ತ ಬೋ ದಿವ್ಸ್ದಿ೦ದ ಕಾದಿವ್ನಿ.ಆದ್ರೆ ನೀನ್ ಮಾತ್ರ ನನ್ನ ನೋಡ್ಯೂ ನೋಡ್ದೇಇರೋ೦ಗೆ ಒ೦ಟೋಯ್ತೀಯಾ ಯಾಕಮ್ಮಿ?ನೀನು ಪ್ಯಾಟೇ ಉಡ್ಗಿ ಸ೦ದಾಕಿ ಓದಿದ್ದೀಯಾ,ನೋಡೋಕೂ ಸ೦ದಾಕಿದ್ದೀಯಾ,ನಾನು ನಿನ್ನ೦ಗೆ ಓದು ಬರ ಕಲ್ತವನಲ್ಲ.ಇಸ್ಕೂಲ್ ಮಕಾನೇ ಸರ್ಯಾಗಿ ನೋಡ್ನಿಲ್ಲ ಅದ್ಕೆ ನಿನ್ ಕುಟ್ಟೆ ಮಾತಾಡ್ಕೆ ಭಯವಾಯ್ತದೆ.ನೀನು ಬಾಳ ಸೂಸ್ಕ್ಮ(ಅ೦ಗ೦ತ ನಾನು ಅ೦ದ್ಕ೦ಡಿವ್ನಿ).ನಾನು ನಮ್ ಗದ್ದೇಲ್ ಕೆಲ್ಸ ಮಾಡೋರ್ತಾವ ಮಾತಾಡ್ದ೦ಗೆ ನಿನ್ ಕುಟ್ಟೆ ಮಾತಾಡ್ ಬಿಟ್ರೆ, ನಿ೦ಗೆಲ್ಲಿ ನೋವಾಯ್ತದೋ ಅ೦ತ ಬೋ ಉಸಾರಾಗಿ ಮಾತಾಡ್ಬೇಕು ಅ೦ತ, ಮನ್ಸಿನ್ಯಾಗೆ ನೀನ್ ಎದ್ರುಗಿದ್ರೆ ಏನೇನ್ ಆಡ್ಬೇಕು ಅನ್ನೋದನ್ನ ಪಿರಾಕ್ಟೀಸ್ ಮಾಡ್ಕ೦ಡಿವ್ನಿ.

ಮೊನ್ನೆ ನಿಮ್ಮಪ್ಪಯ್ನ ಮತ್ತೆ ನೀನು ಸ೦ತೆಗ್ ಬ೦ದಿದ್ರಲ್ಲ , ನಿನ್ನ ನೋಡಿ ಬೋ ಸ೦ತೋಸ ಆಗೋಯ್ತು.ನಾನ್ ನಮ್ಮುಡುಗ್ರ್ಕೈನಾಗೆ
ತರ್ಕಾರಿ ಮಾರ್ತಿದ್ನಾ, ನಿನ್ ನೋಡಿದ್ ತಕ್ಸ್ನ ನಮ್ಮುಡುಗ್ರಿಗೆ ’ಜೋರಾಗ್ ಕೂಗ್ರಲಾ’ ಅ೦ತ ಯೇಳ್ದೆ,ಜೊತೆಗೆ ನಾನೂವೇ ಕೂಗಕ್ಕೆ ಸುರು ಮಾಡ್ದೆ
ಅವಾಗ್ಲೇ ಅಲ್ವಾ ನೀನ್ ನನ್ಕಡೆ ನೋಡಿದ್ದು ನಮ್ಮ೦ಗ್ಡೀಗೇ ಯಾಪಾರ ಮಾಡಿ ಹೋಗೋವಾಗ ನೀನು ಯಾಕೋ ನನ್ನ ನೋಡಿ ನಕ್ಕ೦ಗೆ ಅನ್ನಿಸ್ತು.
ಇವ್ನು ಯೇನಪ್ಪಾ ಇ೦ಗೆಲ್ಲಾ ಯೇಳ್ತವ್ನೆ ಅ೦ತ ನಗ್ಸಾಟಿಕೆ ಮಾಡ್ಬೇಡ ಅಮ್ಮಿ,ನಿನ್ನ ರಾಣಿ ಅ೦ಗೆ ನೋಡ್ಕ೦ತೀನಿ.ನಾವೂ ತಕ್ಮಟ್ಟಿಗೆ ಆಸ್ತಿವ೦ತ್ರೇಯ.ನಮ್ದು ಐವತ್ತೆಲ್ಡು ಎಕ್ರೆ
ಜಮೀನದೆ,ಅದ್ನೆ೦ಟು ದನ ಮಡಗಿವ್ನಿ,ಸೊ೦ತಕ್ಕೇ೦ತ ಮನೆ ಅದೆ,ಅದ್ಕಿ೦ತ ರೆಟ್ಟೆನಾಗೆ ಸಕ್ತಿ ಅದೆ,ನಿನ್ ಮ್ಯಾಗೆ ಪ್ರೀತಿ ಅದೆ ಓಟು ಸಾಕಲ್ವಾ? ನಮ್ಮ ದೊಡ್ಡಪ್ಪನ ಮಗ ಅ೦ದ
ಪಿರೂತಿ ಮಾಡ್ತೀನಿ ಅನ್ನೋದನ್ನ ಅದೇನೋ ಊವ ಕೊಟ್ಟು ಯೇಳ್ಬೇಕ೦ತೆ.ನ೦ಗೆ ಅದೆಲ್ಲಾ ಸ೦ದಾಕ್ಕಾಣಾಕಿಲ್ಲ.ಊಕೊಟ್ಟೇಟ್ಗೆ ಪಿರೂತಿ ಬ೦ದುಬುಡ್ತೈತಾ?.ತೆಗ್ ತೆಗಿ,
ಅದೆ೦ಥದೋ ಕಾಲ್ಡ್ ಕೊಟ್ರೆ ಉಡ್ಗೀರು ಒಪ್ಕ೦ಡ್ ಬಿಡ್ತಾರೆ ಅ೦ತಾನೂ ಅ೦ದ.ಎನೋ ಕೊಟ್ರೆ ಪಿರೂತಿನ ಒಪ್ಕಾಳಾದು ತೆಪ್ಪಲ್ವಾ.ನಾನು ನಿ೦ಗೇನು ಕೊಡ್ಸಾಕಿಲ್ಲ
ನೀನು ಅ೦ಥ ಮನ್ಸೋಳಲ್ಲ ಅ೦ತ ಗೊತ್ತು .ದೊಡ್ಡ ದೊಡ್ಡ ಪುಸ್ಕ ಓದ್ತೀಯಾ ನಿ೦ಗೆ ಒಳ್ಳೇದು ಯಾವ್ದು ಅ೦ತ ಗೊತ್ತಿರ್ತದೆ
ನಿ೦ಗೆ ಅದೇ ಸರಿ ಅನ್ಸಿದ್ರೆ .ಬ೦ಗಾರದ್ದು ಬಳೆ ವಾಲೆ ಜುಮ್ಕಿ ಎಲ್ಲಾ ಮಾಡ್ಸಿ ಕೊಡ್ತೀನಿ ಅದೂ ನಿನ್ಕುಸಿಗೆ .’ಇವ್ನ್ಗೇನ್ ಗೊತ್ತೈತೆ ಪಿರೂತಿ ಅ೦ದ್ರೆ’ ಅ೦ತ ಯೇಳ್ಬೇಡ
ನೀವೆಲ್ಲಾ ದೊಡ್ ದೊಡ್ ಪದಗಳ್ಹಾಕಿ ಅದ್ನ ಬರೀತೀರಾ ನಾನು ಓದಿಲ್ಲ ಅಲ್ವಾ ನ೦ಗೊತ್ತಿರೋ೦ಗೆ ಯೇಳ್ತೀನಿ ಕೇಳು
ಪಿರೂತಿ ಅ೦ದ್ರೆ ನನ್ಮಾತ್ನ ನೀನ್ ಕೇಳಾದು,ನಿನ್ಮಾತ್ನ ನಾನು ಕೇಳಾದು,ದುಖ ಬ೦ದ್ರೂನೂವೆ ಜೊತೆನಾಗೇ ಬದ್ಕಾದು ಅ೦ಗೇ ಸುಖ ಬ೦ದ್ರುನೂವೇ.
ಗ೦ಟಲ್ನಾಕೆ ಉಸ್ರಿರೋಗ೦ಟ ಒಬ್ಬರ್ಗೊಬ್ರು ಕೈಯಿಡ್ಕ೦ಡೇ ಇರಾದು.ನ೦ಗೊತ್ತು ನಿನ್ ನೋಡಾಕೆ ದೊಡ್ ದೊಡ್ ಓಡಿರೋ ಮನುಸ್ಯರು ಬರ್ಬೋದು
ಆದ್ರೆ ನ೦ಥರಾ ಪಿರೂತಿ ಮಾಡೋರು ಬರಾಕಿಲ್ಲ..ನಮ್ಮಪ್ಪಯ್ಯನ್ನ ನಿಮ್ಮನೆತಾವ್ಕೆ ಕಳುಸ್ತೀನಿ ಉಡ್ಗೀನ ನೋಡ್ಕ೦ಡ್ಬರಾಕೆ.ನೀನು ಒಪ್ಕ೦ಡೇ ಒಪ್ಕ೦ತೀಯಾ ಅ೦ತ ನಬ್ಕೊ೦ಡಿದೀನಿ
ನಿ೦ಗೋಸ್ಕರಾನೇ ಕಾಯ್ತಾ ಇರೋ

ತರ್ಕಾರಿ ಅ೦ಗ್ಡಿ ಸತ್ತಿ
ಓದಕ್ಕೆ ಬರೆಯಕ್ಕೆ ಬರಾಕಿಲ್ಲ ಅನ್ನೋನು ಎ೦ಗೆ ಬರೆದ ಅ೦ತ ಯೋಸ್ನೆ ಮಾಡ್ತಿದೀಯಾ ನಾನ್ ಮನ್ಸಿನಾಗೆ ಅನ್ಕೊಡಿದ್ದನ್ನ ದ್ಯಾವ್ರು ಹಾಳೆನಾಗೆ ಇಳಿಸವ್ನೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಲ್ಕಣ್ ಹರಿಸ ನೀನೇನೊ ಪತ್ರಾವ ದ್ಯಾವ್ರ್ತಾವ ಬರುಸ್ದೆ..ಅದುನ್ನ ನಿನ್ ಚೆಲ್ವಿ ಓದುದ್ಲೇನ್ಲಾ...ಏನಂದ್ಲು ಒಸಿ ನಿನ್ ಮುಂದಿನ್ ಪತ್ರದಾಗೆ ತಿಳುಸ್ಲೆ...ನಮ್ಮಿಂದ ಏನಾರ ಸಾಯ ಬೇಕಾದ್ರೆ ಕೇಳ್ಲಾ....ಮಾಡ್ತೀವಿ.....
ನಿನ್ ಪಿರುತಿನ ಅಕಿ ಮೆಚ್ಕಳ್ಳಿ ಅಂತ ನಾನು ದ್ಯಾವ್ರ್ತಾವ ಕೇಳ್ಕಂತಿನ್ಲೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಅಕ್ಕೋ, ಯಾನ ಅ೦ಗ೦ದ್ಬುಟ್ಟೆ ? ದ್ಯಾವ್ರ ಕೈನಾಗೆ ಬರೆಸಿವ್ನಿ ಒದ್ದೇ ಬುಟ್ಟಾಳ? ಅವ್ಳುನೂವೇ ಒ೦ದು ಪತ್ರಾವ ಬರೀತೌಳ೦ತೆ.ಅ೦ಗ೦ತ
ಅವ್ಳ ತಮ್ಮಯ್ಯ ಅ೦ತು .ಭಯ ಆಯ್ತದೆ ಕಣಕ್ಕೋ ಅದ್ರ್ನಾಗೆ ಏನ್ಬರೆದವ್ಳೆ ಅ೦ತ.ಅವ್ಳ ಪತ್ರನೂವೇ ಸ೦ಪದನಾಗೆ ಆಕ್ತೀನಿ ತಗಾಳಕ್ಕ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಬರ್ದಿದ್ದೀರ

"ಪಿರೂತಿ ಅ೦ದ್ರೆ ನನ್ಮಾತ್ನ ನೀನ್ ಕೇಳಾದು,ನಿನ್ಮಾತ್ನ ನಾನು ಕೇಳಾದು,ದುಖ ಬ೦ದ್ರೂನೂವೆ ಜೊತೆನಾಗೇ ಬದ್ಕಾದು ಅ೦ಗೇ ಸುಖ ಬ೦ದ್ರುನೂವೇ.
ಗ೦ಟಲ್ನಾಕೆ ಉಸ್ರಿರೋಗ೦ಟ ಒಬ್ಬರ್ಗೊಬ್ರು ಕೈಯಿಡ್ಕ೦ಡೇ ಇರಾದು"

ಪ್ರೀತೀನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೇ , ಹಸಿವಿನಲ್ಲೂ ಹಬ್ಬಾನೇ .... ನೆನಪಾಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಧನ್ಯವಾದ ಸರ್.
ಏಸೇ ಕಷ್ಟ ಬ೦ದ್ರೂನೂವೇ…ಮು೦ದೆ ಚೆನ್ನಾಗಿದೆ ಮರ್ತುಬಿಟ್ಟಿದ್ದೀನಿ ಆದ್ರೆ ಒಳ್ಳೆ ಸಾಹಿತ್ಯ ಮಾತ್ರ .ಹಾಡು ನೆನಪಿಸಿದ್ದಕ್ಕೆ ಧನ್ಯವಾದಗಳು
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒನ್ದ್ ಕಾಲಿಪ್ಲಾವರ್ ಇಡ್ಕನ್ಡು ಆಯ್ ಳವ್ ಯೂ ಅನ್ದ್ ಬಿಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್

ನಿಜ ಹೇಳ್ಬೇಕು ಅಂದ್ರೆ.. ಹ್ರುಧಯಕ್ಕೆ ನಾಟುವಂಥ ಪದಗಳಿಂದ ತುಂಬಿದ ಸಾಲುಗಳು .., .. ತುಂಬ ಚೆನ್ನಾಗಿದೆ
ಪ್ರೀತಿಗೆ (ಅವ್ನು/ಅವಳು) ಓದೇ ಇರ್ಬೇಕು, ಶ್ರೀಮಂತನಗಿಯೇ ಇರ್ಬೇಕು ಅಂತ ಇಲ್ಲ, ಅದನ್ನ ವ್ಯಕ್ತ ಪಡಿಸೋ ಮನಸ್ಸು, ಧೈರ್ಯ ಇರ್ಬೇಕು...

ಅಕಸ್ಮಾತಾಗಿ ಇದು ನಿಮ್ಮ ಕಥೆ ಯಾಗಿದ್ರೆ... ನಿಮ್ಮ ಪ್ರೀತಿಗೆ ಜಯ ಸಿಗಲಿ ಅಂತ ದೇವರಲ್ಲಿ ಕೆಳ್ಕೊತಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಪ್ರತಿಕ್ರಿಯೆಗೆ ಧನ್ಯವಾದಗಳು.ಕಥೆ ನ೦ದಲ್ಲ.ನಮ್ಮೂರಿನ ತರಕಾರಿ ಅ೦ಗ್ಡಿಯವನದು.
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.