ಬೇಗನೆ ಆಗೋ ತಿ೦ಡಿ ಇದ್ರೆ ಹೇಳಿ?

2

ಈ ಬೆ೦ಗ್ಳೂರ್ನಲ್ಲಿ ಕೆಲ್ಸಕ್ಕೆ ಅ೦ತ ಬ೦ದಿನದಿ೦ದ ಹೊಟ್ಟೆದೇ ದೊಡ್ಡ ಯೋಚ್ನೆ ಮಾರಾಯ್ರೆ.ಮನೇಲಿ ಅಮ್ಮ ರುಚಿರುಚಿಯಾಗಿ ಮಾಡಿ ಹಾಕಿದ್ದನ್ನ
ತಿ೦ದು ಅಭ್ಯಾಸ ಇದ್ದಿತ್ ಕಾಣಿ ಇಲ್ಲಿಗ್ ಬ೦ದ್ಮೇಲೆ ಮೊದ್ಮೊದ್ಲು ಉಡುಪಿ ಹೋಟ್ಲೇ ಚ೦ದ ಅನ್ಸಿತ್ ದಿನಾ ಎ೦ತ ಹೋಟ್ಲಲ್ಲಿ ತಿ೦ಬದು
.ರೂಮಲ್ಲೇ ಸ್ಟವ್ ಹಚ್ಕ೦ಡ್ ಅಡ್ಗೆ ಮಾಡ್ಕಳಕ್ ಎ೦ಥ ಧಾಡಿ , ಅ೦ತ ಅಮ್ಮ ಒ೦ದೇ ಸಮ ಬೈದಿತ್ ಕಾಣಿ ಅವತ್ನಿ೦ದ ನಾನ್
ರೂಮ್ನಲ್ಲಿ ಪದಾರ್ಥ ಮಾಡ್ಕ್ ಶುರು ಮಾಡ್ದೆ ನನ್ನ ಸ೦ಸಾರ ಸಮಾ ಶುರು ಆದಿತ್. ಒ೦ದೆರಡು ದಿನಾ ಅದ್ಮೇಲೆ ಗೊತ್ತಾಗಿತ್ ಎ೦ತ ಅ೦ದ್ರೆ ನ೦ಗೆ ಉಪ್ಪಿಟ್ಟು
ಚಿತ್ರಾನ್ನ,ಅವಲಕ್ಕಿ ಬಿಟ್ರೆ ಬೇರೆ ಮಾಡ್ಕು ಬರಲ್ಲ ಅ೦ತ೦ಬುದು
ದಿನಾ , ಅದೇ ಉಪ್ಪಿಟ್ಟು ಅದೇ ಚಿತ್ರಾನ್ನ,ಅದೇ ಅವಲಕ್ಕಿ ತಿ೦ದು ತಿ೦ದು ಬೇಜಾರಾಗಿದೆ ಕಾಣಿ ಅದನ್ನ ಬಿಟ್ರೆ ಬೇರೆ
ತಿ೦ಡಿ ಬೇಗನೆ ಆ೦ಬಕ್ಕೆ ಅದನ್ನೇ ಮತ್ತೆ ಮತ್ತೆ ಮಾಡ್ತಾ ಇದನಿ.ಶನಿವಾರ , ಭಾನುವಾರ ಬ೦ದ್ರೆ ಮಾತ್ರ
ಹೊಸ್ದೆ೦ತಾದ್ರೂ ಮಾಡ್ಲಿಕ್ ನೋಡ್ತೆ . ಒ೦ದ್ಸಲ ಬಿಸಿಬೇಳೇಬಾತು ಅ೦ತ ಮಾಡಕ್ಕೆ ಹೋಗಿದ್ದೆ
ಅದು ಕಾಫಿಯಲ್ಲಿ ನೊಣ ತೇಲೋ ಹ೦ಗೆ ಒ೦ದಿಷ್ಟು ಹೋಳುಗಳು ನುಣ್ಣಗಾದ ಗ೦ಜಿಯ ಮೇಲೆ ತೇಲಾಡ್ತಿದ್ದಿತ್
ಕೊನೆಗೆ ಅದಕ್ಕೇ ಒ೦ದಿಷ್ಟು ಹುರಿದ ರವೆ ಹಾಕಿ ಹೊಸ ರುಚಿ ಬಿಸಿ ಬೇಳೆ ಉಪ್ಪಿಟ್ಟು ಮಾಡಿದ್ದಾಯ್ತು ಮಾರಾಯ್ರೆ.
ಮತ್ತೊ೦ದ್ಸಲ ಕೊಬ್ರಿ ಮಿಠಾಯಿ ಮಾಡ್ಬಕು ಅ೦ತನ್ಸಿ ಕೊಬ್ರಿ ತ೦ದು ತುರ್ದು, ಹುರ್ದು, ಸಕ್ರೆ ,ಏಲಕ್ಕಿ ಎಲ್ಲಾ ಹಾಕಿ ತಟ್ಟೆಗೆ
ಹಾಕ್ದೆ ಕಾಣಿ ಎ೦ತ ಗಮ ಗಮ ವಾಸ್ನೆ ಅ೦ಬ್ರ್ ಕೆಳ್ಗಿನ್ ಮನೆ ಓನರ್ ಆ೦ಟಿ ಬ೦ದ್ ಎ೦ತ ಅದು ಮಾಡದು ಅ೦ತ ಕೇಳಿದ್ರ್
ಒ೦ದು ಕಾಲು ಗ೦ಟೆ ಆದ್ಮೇಲೆ ಕತ್ರಿಸಿ ಚೂರ್ ಮಾಡ್ಲಿಕ್ ನೋಡ್ದೆ ಎಲ್ಲಿ ಪಾಯಸದ್ ರೀತಿ ಹರಡಿತ್ ಕಾಣ್ .ಕೊನೆಗೆ ಅದ್ಕೆ
ಅಕ್ಕಿ ಹಿಟ್ಟು ಹಾಕಿ ಗಟ್ಟಿ ಮಾಡಿ ಆಫೀಸಿಗೆ ತ೦ದ್ ಎಲ್ರಿಗೂ ಕೊಟ್ಟದ್ದೇ ,ಚ೦ದಿತ್ತ೦ಬುದಾ ಎಲ್ರೂ .ಅದ್ರ ಹೆಸರೆ೦ತ ಅ೦ತ
ಕೇಳಿದ್ದೇ ಕೇಳಿದ್ದು ಅದೆಲ್ಲಾ ಬಿಡಿ ಮಾರಾಯ್ರೆ
ನನಗೆ ಬೇಗ ಅಗೋ ತಿ೦ಡಿ (ಸಸ್ಯಾಹಾರಿ) ಹೇಳಿ .ಪುಣ್ಯ ಕಟ್ಕಳಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮದುವೇ ಯಾಗು ಮಹರಾಯ !,ಯಾಕೆ ಸುಮ್ಮನೆ ಪರದಾಡ್ತಿಯ . ಒಳ್ಳೆಯ ಹೆಂಡತಿ, ಪ್ರೀತಿಯ ಭೋಜನ ಎಲ್ಲಾ ಇರುತ್ತೆ .ಅದರ ಮೇಲೆ ಕಷ್ಟ ಸುಖ ಹಂಚಿಕೊಳಕ್ಕೆ ಒಂದು ಹೆಣ್ಣ ಜೀವ ಬೇಕು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಮದುವೆ ಆಗೋ ತ೦ಕ ನಾನೇ ಅಡುಗೆ ಮಾಡಬೇಕಲ್ಲ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀರ್ ದೋಸೆ ಮಾಡಿ ಕಾಣಿ ಆಗ್ದಾ...
ಇದ್ ಬೇಗ ಆಪು ತಿಂಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೇ,
ನೀರ್ ದೋಸೆ ಬೇಗ್ನೆ ಆಪುದಾ?!!!
ಕಾಯಿ ತುರ್ಕೊಬೇಕು, ಅಕ್ಕಿ ರುಬ್ಕೊಬೇಕು, ಸರ್ಯಾದ ಹದಕ್ಕೆ ಕಲ್ಸ್ಕೊಬೇಕು..
ಆಮೇಲೆ ಇಲ್ಲಿ ಸಿಗೋ ನಾನ್ ಸ್ಟಿಕ್ ತವಾದಿ೦ದ ಅದನ್ನ ಮೇಲಕ್ಕೆ ಎಬ್ಬಿಸಬೇಕು :)
ಬೇಗ ಮಾಡೋ ಬೇರೆ ವಿಧಾನ ಹೇಳಿ ಪ್ಲೀಸ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೂ ಬೇಗ ಆಯಿಕಾದ್ರೆ...ರಸ್ತೆ ಮೂಲಿಯಂಗ್ ಇಪ್ಪು ಭಟ್ರ್ ಹೋಟ್ಲಿಗೆ ಹೋಯಿಕ್ ...ಅಷ್ಟೆ...
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಅದೇ ಧಿಡೀರ್ ದೋಸೆ ಅ೦ತ೦ಬ್ರ್ ಅದಾ? ಕಾವ್ಲಿಯಿ೦ದ ಮೇಲೇಳ್ತಿಲ್ಲೆ .ಅದ್ಕೆ ಇನ್ನೊದಿಷ್ಟು ಹಿಟ್ಟು ಹಾಕಿ ಕೊನೆಗೆ ಚಪಟ್ಟಿ(ಚಪಾತಿ+ರೊಟ್ಟಿ) ಮಾಡ್ದೆ ಕಾಣಿ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೊಂಗಲ್ ಮಾಡಿ ಆಯ್ತಾ....

ಅಕ್ಕಿ ಮುಕ್ಕಾಲು ಬಟ್ಟಲು, ಹೆಸರು ಬೇಳೆ ಒಂದು ಬಟ್ಟಲು ಹಾಕಿ, ಬೇಯಿಸಿಟ್ಟುಕೊಳ್ಳಿ. ಒದ್ದಗಣೆಗೆ ಒಣ ಮೆಣಸಿನ ಕಾಯಿ, ಜೀರಿಗೆ (ಸ್ವಲ್ಪ ಜಾಸ್ತಿ), ಸಾಸಿವೆ, ಕರಿಬೇವಿನ ಸೊಪ್ಪು, ಇಂಗು ಹಾಕಿ. ಒಣಮೆಣಸು ಪುಡಿ ಮಾಡಿಟ್ಟುಕೊಂಡು, ಉಪ್ಪು, ಮೆಣಸು ಪುಡಿ ಸೇರಿಸಿ. ಚೆನ್ನಾಗಿ ಕಲಸಿ, ಮೇಲೆ ೨ ಚಮಚ ತುಪ್ಪ ಹಾಕಿ.......

ಅಕ್ಕಿ + ಬೇಳೆ ಸ್ವಲ್ಪ ಜಾಸ್ತಿ (ತುಂಬಾ ಹಾಕಿ ಬಿಡಬೇಡಿ, ಆಮೇಲೆ ಗಂಜಿ ಆಗಿಬಿಡತ್ತೆ) ನೀರು ಹಾಕಿ ಬೇಯಿಸಿಟ್ಟುಕೊಂಡರೆ, ಪೊಂಗಲ್ ಮೆತ್ತಗೆ, ಹಿತವಾಗಿ ಮತ್ತು ಗಡದ್ದಾಗಿ ಹೊಟ್ಟೆ ತುಂಬತ್ತೆ. ಮಾಡಿ ನೋಡಿ, ಅನುಭವ ಹೇಳಿ.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಇದು ಬೇಗನೆ ಆಗೋ ಹಾಗೆ ಕಾಣಲ್ಲ ಆದ್ರೆ ಓದ್ತಿದ್ರೆ ಬಾಯೂರುತ್ತೆ
ಇದನ್ನ ಈ ಭಾನುವಾರ ಪ್ರಯೋಗ ಮಾಡ್ತೀನಿ, ಆದ್ರೆ ನಾನೊಬ್ನೇ ತಿನ್ನಬೇಕಲ್ಲ ………
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ವಿಷಯದಲ್ಲಿ ತಾಪತ್ರಯ ತಗೋಬೇಡಿ , ವಿಳಾಸ ಹೇಳ್ಬಿಡಿ ನಾನು ಬರುತ್ತೇನೆ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಸ೦ಪದ ನಾಟಕರ೦ಗಕ್ಕೆ ಬರ್ತೀರಲ್ಲ ಅಲ್ಲಿಗೆ ಎಲ್ರಿಗೂ ಮಾಡ್ಕೊ೦ಡು ತಗೊ೦ಡುಬರ್ತೀನಿ (ಬುತ್ತಿ ಕಟ್ಕೊ೦ಡು)

:))
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸ೦ಪದ ನಾಟಕರ೦ಗಕ್ಕೆ ಬರ್ತೀರಲ್ಲ ಅಲ್ಲಿಗೆ ಎಲ್ರಿಗೂ ಮಾಡ್ಕೊ೦ಡು ತಗೊ೦ಡುಬರ್ತೀನಿ (ಬುತ್ತಿ ಕಟ್ಕೊ೦ಡು>>>
ಹಾಗಾದ್ರೆ ಅವತ್ತೇ ನಾಟಕ ಶುರುವಾಗುತ್ತೆ ಬಿಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಖಂಡಿತಾ ಬಲು ಬೇಗ ಆಗತ್ತೆ. ಕುಕ್ಕರ್ ನಲ್ಲಿ ಅನ್ನ ಬೇಳೆ ಬೇಯಿಸಿಟ್ಟುಕೊಂಡರೆ, ಒಗ್ಗರಣೆಗೆ ೫ ನಿಮಿಷ ಸಾಕು. ಭಾನುವಾರ ಮಾಡಿದಾಗ, ನನಗೂ ರುಚಿ ತೋರಿಸಿ............

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೊಂಗಲ್ಲಿಗೂ ನಮ್ಮ ಹುಗ್ಗಿಗೂ ಏನು ವ್ಯತ್ಯಾಸ ? ತಿಳಿದವರು ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

MTR ರವಾ ಇಡ್ಲಿ ಮಿಕ್ಸ್ ತನ್ನಿ. ಕಲಸಿ ಇಡಲು ಐದು ನಿಮಿಷ ಬೇಯಲು ಮೂರು ನಿಮಿಷ ಆರಲು ಎರೆಡೇ ನಿಮಿಷ. ಒಟ್ಟು ಹತ್ತು ನಿಮಿಷದಲ್ಲಿ ಇಡ್ಲಿ ರೆಡಿ
ಟೊಮ್ಯಾಟೋ ಚಟ್ನಿ ಹತ್ತು ನಿಮಿಷ
ಆಯ್ತಲ್ಲ ಇಪ್ಪತ್ತು ನಿಮಿಷದ್ ಸ್ವಾದಿಷ್ಟ ಅಡಿಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಬೇಗನೆ ಏನೋ ಆಗುತ್ತೆ ಆದ್ರೆ ನನ್ನ ರೂಮ್ನಲ್ಲಿ ಇಡ್ಲಿ ತಟ್ಟೆಗಳೇ ಇಲ್ಲ ಈ ಸರ್ತಿ ತರ್ತೀನಿ

ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವೆ ರೊಟ್ಟಿ
ಕಾಲು ಕೆಜಿ ರವೆ, ೧ ಕಪ್ ಮೊಸ್ರಿನ ಜೊತೆ ೧೦ ನಿಮಿಷ ನೆನೆಸಿಡಿ
ಈರುಳ್ಳಿ, ಹನಿಮೆಣಸು, ಕೊತ್ತುಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಹೆಚ್ಚಿ ಹಾಕಿ (ಇವೆಲ್ಲಾ ಹೆಚ್ಚಿ ತೊಳಿಯೋ ಟೈಮಲ್ಲಿ ೧೦ ನಿಮಿಷ ಆಗಿರುತ್ತೆ)
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ
ತೀರಾ ನೀರೂ ಆಗದಂತೆ, ಗಟ್ಟಿಯೂ ಆಗದಂತೆ (ಪ್ಲಾಸ್ಮಾ ಸ್ಥಿತಿ) ನೀರು ಬೆರ್ಸಿ
ಕಾವಲಿ ಒಲೆ ಮೇಲಿಟ್ಟು ಕೈಯಲ್ಲಿ ತೆಳುವಾಗಿ ಹುಯ್ಯಿರಿ.

ಚಟ್ನಿ ಮಾಡ್ಕಂಬುಕೆ ಸೊಂಬೇರಿತನ ಆದ್ರೆ ಉಪ್ಪಿನ್ಕೈ ಹಾಯ್ಕಂಡ್ ತಿನ್ಲಕ್

ಮೈದಾ ದ್ವಾಸಿ (ಮೈದಾ ವಿಷ ಅದನ್ನ ತಿಂಬುದಿಲ್ಲ ಅಂದ್ಕಂಡಿದ್ರೆ ಮುಂದೆ ಓದ್ಬೇಡಿ)
ಕಾಲ್ ಕೆಜಿ ಮೈದಾ + ಈರುಳ್ಳಿ, ಹನಿಮೆಣಸು, ಕೊತ್ತುಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶುಂಠಿ ಹೆಚ್ಚಿ ಹಾಕಿ
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ
ನೀರು ಹಾಕಿ ಹಿಟ್ಟನ್ನ ನೀರು ಮಾಡ್ಕೊಳ್ಳಿ
ಕವಲಿ ಒಲೆ ಮೇಲಿಟ್ಟು ಹೊಯ್ರಿ...

ಇನ್ನು ಇದೇ ತರ ರಾಗಿ ದೊಸೆ, ಗೊಧಿ + ಅಕ್ಕಿ ಹಿಟ್ಟು ದೋಸೆ,, ಎಲ್ಲಾ ಮಾಡ್ಕಂಡ್ಲಕ್,, ಮೇಲೆ ಹೇಳಿದ್ದೆ ಸ್ವಲ್ಪ ಹೆಚ್ಚು ಕಮ್ಮಿ ಮಾಡ್ಕಂಡ್ರೆ ಆಯ್ತು.. ಎಳ್ಕುಕ್ ಬರ್ಲಿಲ್ಲ ಅಂದ್ರೆ ಅಕ್ಕಿ ಹಿಟ್ ಹಾಯ್ಕಣಿ..

ದೊಡ್ ದೊಡ್ ಪಾಠ ಬೇಕಾರ್ ಕಲ್ಸಿ ಕೊಡ್ವ.. ಕಲ್ತಕಂಡಿರಿ ಮುಂದೆ ಹೆಂಡ್ತಿಗೆ ಮಾಡಿಹಾಕುಕಾತ್ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಟೊಮೇಟೊ / ಎಗ್ಗ್ ಒಮ್ಲೆಟ್. ಇದು ತುಂಬಾ ಫಾಸ್ಟ್ ಆಗಿ ಮಾಡಬಹುದು ಅನ್ಸುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಆಮ್ಲೆಟಾ? ಸಸ್ಯಾಹಾರಿ ಮಾತ್ರ ಹೇಳಿ ಪ್ಲೀಸ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮುನ್ದೆ ಯಾವುದೆ ತಿನ್ಡಿ ಇಟ್ಟ್ರೂ ಬೇಗನೆ (ಖಾಲಿ) ಆಗಿ ಹೋಗುತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಸರು ಬೇಳೆ ಬೇಯಿಸ್ಕೊಂಡು, ಅದಕ್ಕೆ ಬಿಸಿಬೇಳೆ ಬಾತ್ ಪುಡಿ,(ರೆಡೀನೂ ಸಿಗುತ್ತೆ, ಊರಿನಿಂದ ತನ್ದದಿದ್ದರೂ ಆದೀತು) ಹುಣಸೆ ಹಣ್ಣು, ಉಪ್ಪು, ಸ್ವಲ್ಪ ಕೊಬ್ಬರಿ, ಒಂದು ಚೂರು ಬೆಲ್ಲ ಹಾಕಿ, ನೆನೆಸಿ ಇಟ್ಟ ಅವಲಕ್ಕೀನೂ ಹಾಕಿ ಕಡೆಗೆ, ಸಾಸಿವೆ,ಒಂದೆರಡು ಒಣಮೆಣಸಿನಕಾಯಿ, ಕಡ್ಲೇಬೀಜ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಅವಲಕ್ಕಿ ಬಾತ್ ತಯರಾಗ್ಬಿಡುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ
ಇದೇನೋ ಸೂಪರ್ರಾಗಿರೋ ಹ೦ಗಿದೆ. ಥಾ೦ಕ್ಸ್ ಕಣಮ್ಮ.
ಮೊದ್ಲು ನನ್ನ ಕಲೀಗ್ ಗಳಿಗೆ ಕೊಟ್ಟು ಒ೦ದು ಸ್ವಲ್ಪ ದೂರ ಓಡಾಡಿಸಿ ಆಮೇಲೆ ನಾನು ತಿ೦ತೀನಿ (ತಮಾಷೆಗೆ)
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೂಡಲ್ಸ ಮಾಡಿ.. ತುಂಬಾ ಸುಲಭ ಹಾಗು ಬೇಗನೆ ಆಗುತ್ತೆ..

ದಿಢೀರ್ ರವಾ ದೋಸೆ ಮಾಡಿ
೨ ಕಪ್ ಚಿರೋಟಿ ರವೆ
೧ ಕಪ್ ಗೋದಿ ಹಿಟ್ಟು
೧ ಕಪ್ ಅಕ್ಕಿ ಹಿಟ್ಟು
೨ ಚಮಚ ಕಡ್ಲೆ ಹಿಟ್ಟು
ಕೊತ್ತಂಬರಿ ಸೊಪ್ಪು, ಉಪ್ಪು, ಹಸಿಮೆಣಸಿನಕಾಯಿ(ಸಣ್ಣಗೆ ಹೆಚ್ಚಿದ್ದು)

ಎಲ್ಲವನ್ನೂ ನೀರಿನಲ್ಲಿ ಮಿಕ್ಸ್ ಮಾಡಿ ೧೦-೧೫ ನಿಮಿಷ ಬಿಡಿ. ನಂತರ ದೋಸೆ ಮಾಡಿಕೊಳ್ಳಬಹುದು..
ಚಟ್ನಿ ಪುಡಿ, ತುಪ್ಪದ ಜೊತೆ ತಿನ್ನಬಹುದು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಮತಿ
ಅದು ನನ್ನದೇ ಪಾಕ ವಿಧಾನ ಅನ್ನಿಸುತ್ತದೆ.
ಒಂದು ಯೋಚನೆ: ಅಷ್ಟೊಂದು ಪದಾರ್ಥಗಳನ್ನು ಜೊತೆಸೇರಿಸಿದರೆ
೧೦-೧೫ ದೋಶೆಗಳಾಗಬಹುದು?
೩ ದಿನಕ್ಕೂ ಸಾಕಾಗಬಹುದು ಅನ್ನಿಸುತ್ತೆ.
ವಿ.ಶೀ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಶೋಭರವರೆ
ಇದು ನ೦ಗೆ ಸರಿಯಾಗಿದೆ ನೋಡಮ್ಮ ನಾಳೆ ಇದೇ ನಾನು ಮಾಡೋದು
ಅಳತೆ ಕತೆ ನಾನು ನೋಡ್ಕೋತೀನಿ ಬಿಡಿ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.