ಸಖ್ಯ - ಅಸಹ್ಯ (ಚತುರೋಕ್ತಿ ೧೦)

0


ಅವನೊಡನೆ ಸಖ್ಯ ಪರಮ ಅಸಹ್ಯಕೇಹೂ ಕೂಗಿಗೆ ಬೆಚ್ಚಿ ಅಡಗಿ


ಕೇಕೆ ಹಾಕಿ ಓದುವ ಧರ್ಮ ಗ್ರ೦ಥರ೦ಗಮ೦ಟಪದಲಿ ಸುರ೦ಗ ತೋಡಿ


ಹಾಡುವ ತೋಡಿ ರಾಗ. ನೋಡಿ ನೋಡಿ


ಕಿವಿ ತೆರೆದು ಕೇಳುವರು. ಅ೦ಥ ಮೋಡಿಕಾಕಿ ಹುಶ್ ಎ೦ದರೆ ಓಡುವುದು ಮತ್ತೆ ಬರುವುದು


ಅವನೂ ಅಷ್ಟೆ. ಹಿ೦ದಿನಿ೦ದ ತಿವಿದು ಮು೦ದೆ ನಗುವನು


ಅವನ ಚೂರಿಗೆ ನಮ್ಮ ಬ೦ಗಾರದ ಒರೆ


ಕೋಳಿ ನಮ್ಮದು, ಕುಯ್ದದ್ದು ಅವನು, ರೆಕ್ಕೆ ನಮ್ಮಲ್ಲಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಖ್ಯ ಅಸಹ್ಯವಾದಾಗ ತೊರೆಯುವುದು ಲೇಸು ಅಸಹ್ಯವಾದ ಸಖ್ಯಕ್ಕಿಂತ ಒಂಟಿತನವೇ ಭೇಷ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ತೊರೆಯಲು ನಮ್ಮವರಿಗೆ ಮುಜುಗರ ಮತ್ತು ಹೇಡಿತನ ಅವರಿಗೆ ಅದೇ ಅವಕಾಶ. ಅದಕ್ಕೆ೦ದೇ ನೆತ್ತಿಯ ಮೇಲೆ ಕೂತಿದ್ದಾರೆ. ಅವರಿಗೆ ದುಡ್ಡು ದುಗ್ಗಾಣಿ ಕೊಟ್ಟು ನಾವೇ ನಮ್ಮ ಮೇಲೆ ಬಾ೦ಬುಗಳನ್ನು ಎಸೆದುಕೊಳ್ಳುತ್ತಿದ್ದೇವೆ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಅರ್ಥವಾಗಲಿಲ್ಲ. ದಯವಿಟ್ಟು ತಿಳಿಸುತ್ತೀರಾ ಹರೀಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕವನ ಹೇಳುವುದಿಷ್ಟೇ ಅವರೊಡನೆ ಅ೦ದರೆ ಪಕ್ಕದ ಪಾಕೀಸ್ತಾನದೊಡನೆ ಸಖ್ಯ ಪರಮ ಅಸಹ್ಯದ ಕೆಲ್ಸವಷ್ಟೇ ಪ್ರವಾಹಗಳು ವಿಕೋಪಗಳು ನಡೆದಾಗ ಸಹಾಯ ಹಸ್ತ ಚಾಚುವುದು ಭಾರತೀಯರ ವಿಶಾಲ ಮನೋಭಾವವನ್ನು ತೋರಿಸುತ್ತೆ ಆದರೆ ಅದರ ದುರುಪಯೋಗವನ್ನ ಆ ದೇಶ ಪಡೆದುಕೊಳ್ತಾ ಇದೆ. ನಮ್ಮ ಕೇಹೂ ಎ೦ಬ ಕೂಗಿಗೆ ಅದು ಬೆಚ್ಚಿ ಬಿದ್ದದ್ದು ಎಲ್ಲರಿಗೂ ಗೊತ್ತು. ಅದು ಕಾರ್ಗಿಲ್ ಯುದ್ದ. ಆಗಲೇ ಆ ದೇಶ ನಮ್ಮ ತಾಕತ್ತನು ಕ೦ಡಿದೆ. ನೇರವಾಗಿ ಯುದ್ದ ಮಾಡಲು ಅಸಮರ್ಥರಾದ ಅವರಿಗೆ ಹಿ೦ದಿನಿ೦ದ ಇರಿಯುವುದು ಪೌರುಷದ೦ತೆ ತೋರುತ್ತಿದೆ. ಮತ್ತು ಇರಿದಾದ ಮೇಲೆ ಪಾಪದ ಮುಖವಾಡ ಹೊತ್ತು ದರ್ಮಗ್ರ೦ಥವನ್ನು ಓದುತ್ತೆ. ರಾಜಕೀಯವೆ೦ಬ ರ೦ಗಮ೦ಟಪದಲ್ಲಿ ಅದು ನಮ್ಮೆಡೆಗೆ ಸಹಾಯವನ್ನು ಮತ್ತು ನಿರ್ಮಲ ಮುಖವಾಡವನ್ನು ಹೊತ್ತು ತಿರುಗುತ್ತಿದೆ. ಆದರೆ ಅದೇ ರ೦ಗಮ೦ಟಪದಲ್ಲಿ ಅದು ಸುರ೦ಗ ತೋಡಿ ನಮ್ಮೆಡೆಗೆ ದಾಳಿ ನಡೆಸಲು ಸನ್ನದ್ಧವಾಗಿದೆ. ಆದರೆ ನಮ್ಮ ರಾಜಕೀಯ ಪರಿಣಿತರು ಅದಕ್ಕೆಲ್ಲಾ ಮೂಕ ಸಾಕ್ಷಿಗಳಾಗಿ ಅವರ ರಾಗವನ್ನು ಕೇಳುತ್ತಾ ಆನ೦ದಿಸುತಿದ್ದಾರೆ. ಅವರ ಪಾಪದ ಕೂಸನ್ನು ನಮ್ಮವ್ ಅರು ಬಲಗೊಳಿಸುತ್ತಾ ಬರುತ್ತಿದ್ದಾರೆ. ಕಾಗೆಗೆ ಹುಶ್ ಎ೦ದು ಓಡಿಸಿದರೆ ಹೋಗಿ ಮತ್ತೆ ಬ೦ದು ಕೂರುತ್ತದೆ. ಅದೇ ಕಾಗೆಗೆ ಕಲ್ಲಿನಿ೦ದಲೋ ಇಲ್ಲ ಕೋಲಿನಿ೦ದಲೋ ಹೊಡೆದುಬಿಟ್ಟರೆ ಮತ್ತೆ ತಲೆ ಹಾಕುವುದಿಲ್ಲ. ನಮ್ಮ ದೇಶದ ಮುಖ್ಯಸ್ಥರು ಬರೀ ಹುಶ್ ಎನ್ನುವುದರಲ್ಲೇ ಪರಿಣಿತರು. ಅವರು ಚೂರಿ ಹಿಡಿದು ಹಿ೦ದಿನಿ೦ದ ಬ೦ದು ಇರ್ದು ರಕ್ತ ಹರಿಸಿ ಮತ್ತೆ ಪಾಪದ ಮುಖವನ್ನು ಹೊತ್ತು ತಿರುಗುತ್ತಾರೆ. ಅವರಿಗೆ ಜೀವದಾನ ಕ್ಷಮಾದಾನಕ್ಕೆ ಚುಚ್ಚಿಸಿಕೊ೦ಡ ದೇಶದವರೇ ಹೋರಾಡುತ್ತಾರೆ ಎ೦ಥ ವಿಪರ್ಯಾಸ ನೋಡಿ. ಅವರು ಇರಿಯುವ ಚೂರಿಗೆ ನಮ್ಮವರೇ ದುಡ್ಡು ಕೊಟ್ಟು ಬ೦ಗಾರದ ಒರೆ ಹಾಕಿಸಿ ಕೊಡುತ್ತಾರೆ. ನಮ್ಮ ದೇಶವನ್ನು ತಿ೦ದು ಅದರ ರೆಕ್ಕೆ ಪುಕ್ಕವನ್ನು ನಮ್ಮ ಮೇಲೇ ಹಾಕಿ ನಾವೇ ಅದಕ್ಕೆ ಕಾರಣವೆ೦ದು ಹೇಳುತ್ತಾ ಪ್ರಪ೦ಚದೆದುರಿಗೆ ನಿರ್ಲಜ್ಜರಾಗಿದ್ದಾರೆ. ಇಷ್ಟನ್ನು ಹೇಳಲು ಪ್ರಯತ್ನ ಪಟ್ಟಿದ್ದೇನೆ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.