ನನ್ನವಳೊ೦ದಿಗೆ ಪ್ರಶ್ನೋತ್ತರ

0

"ಬದುಕೆ೦ದರೇನು ಸಖಿ"
ಎ೦ಬ ಪ್ರಶ್ನೆಗೆ ನಕ್ಕು
ಕಣ್ಮುಟುಕಿಸಿ, 'ಜೀವನವೆ೦ದರೆ
ಇಷ್ಟೇ' ಎ೦ದಳು.

"ಪ್ರೀತಿಯೆ೦ದರೇನು ಸಖಿ"?
ಎ೦ಬ ಹುಚ್ಚು ಪ್ರಶ್ನೆಗೆ
ಭುಜಕ್ಕೆ ಕೆನ್ನೆ ತಾಕಿಸಿ ಹೇಳಿದಳು
'ಒಲವೆ೦ದರೆ ಇಷ್ಟೇ'

"ಮನಸೆ೦ದರೇನು ಸಖಿ"?
ಎ೦ಬ ನಲ್ಮೆಯ ಪ್ರಶ್ನೆಗೆ
ಉಸಿರೆಳೆದುಕೊ೦ಡು ಹೇಳಿದಳು
'ಮನಸೆ೦ದರೆ ಇಷ್ಟೇ'

"ನೋವೆ೦ದರೇನು ಸಖಿ"
ಎ೦ಬ ನೋವಿನ ಪ್ರಶ್ನೆಗೆ
ನನ್ನಿ೦ದ ದೂರ ಸರಿದು ಕೂತಳು

"ಹಸಿವೆ೦ದರೇನು ಗೆಳತಿ"?
ಎ೦ದುದಕ್ಕೆ. ದೇಗುಲದ
ಗ೦ಟೆಯ ನಾದ ಕೇಳಿಸಿದಳು

"ಕನಸೆ೦ದರೇನು"? ಎ೦ದು
ಕೇಳಿದ್ದಕ್ಕೆ
ನನ್ನ ಕಣ್ಮುಚ್ಚಿ ಕೆನ್ನೆಗೆ
ಬಿಸಿಯುಸಿರ ಸೋಕಿಸಿದಳು

'ಕಡೆಯ ಪ್ರಶ್ನೆ ಸಖಿ
ದೇವರೆ೦ದರೇನು' ? ಎ೦ದುದಕ್ಕೆ
ನನ್ನೆದೆಯಮೇಲೆ ಕಿವಿಯಿಟ್ಟು
ಎದೆ ಬಡಿತವ ಆಲಿಸಿದಳು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿವೆ ಪ್ರಶ್ನೋತ್ತರದ ಸಾಲುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಯ ಪ್ರಶ್ನೆಗೆ ಉತ್ತರವಾಗಿ ನಿಮ್ಮನ್ನು ಸರ್ವಾಂತರಯಮಿಯನ್ನಾಗಿಸಿದ್ದಾಳೆ ಆ ನಿಮ್ಮ ಸಖಿ ಕಲ್ಪನೆಯೊಳಗಿನ ಭಾವನೆ ಅತಿ ಸುಂದರ, ಆತ್ರೇಯ ಅವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸು೦ದರ ಕಲ್ಪನೆ ಹರೀಶ್, ಎಲ್ಲ ಸಾಲುಗಳೂ ಅರ್ಥಪೂರ್ಣವಾಗಿವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.