ನಾನು ಮತ್ತು ನನ್ನ ಅಸ್ತಿತ್ವ

0

ನಾನು ಮತ್ತು ನನಗೆ ತಿಳಿಯದ
ಪ್ರಶ್ನೆ ಈ ಅಸ್ಥಿತ್ವ
ಎಲ್ಲಿದ್ದೇವೆ ಎ೦ಬುದರ ವಿಸ್ತೃತ ರೂಪ
ಈ ಅಸ್ಥಿತ್ವದ ನಿಜ ದೀಪ
ಈ ಘಳಿಗೆ ಭೂತದೊಳು
ಹೊಕ್ಕ೦ತೆ ಕ೦ಡು ಮತ್ತೆ
ಭವಿಷ್ಯದೆಡೆ ನೋಡುತ್ತಾ
ವರ್ತಮಾನಾವಾಗುವ ಪ್ರಕ್ರಿಯೆ
ಕ್ರಿಯೆಯೊಳಗಿನ ಪ್ರತಿಕ್ರಿಯೆಸುತ್ತಲೂ ಗ೦ವ್ ಎನ್ನುವ ಕತ್ತಲೊಳಗೆ

ನನ್ನ ನೆರಳನ್ನು ಹುಡುಕುತ್ತೇನೆ

ಗಾಳಿಯೊಡನೆ ಸರಸವಾಡಿ

ನಾನು ನಗುತ್ತಲೇ ಹುಡುಕುತ್ತೇನೆ

ಬಿಗಿ ಹಿಡಿದ ಕೈಯೊಳಗೆ

ತಣ್ಣನೆಯ ಅನುಭವವಾಗಿ

ಚಕ್ಕಮಕ್ಕಳ ಹಾಕಿ ಕೂತು

ಧೇನಿಸುತ್ತಾ ಭ್ರೂ ಮಧ್ಯಕ್ಕೆ

ದಿಟ್ಟಿಸುತ್ತೇನೆ. ಏನು ಕ೦ಡದ್ದು?

ಬೆಳಕೇ ಚುಕ್ಕಿಯೇ ಇಲ್ಲಾ

ಸಾಲ ಕೊಟ್ಟವನ ಮುಖವೇ?ದೂರ ದೂರಕೆ ನಡೆದ೦ತೆ

ಶಬ್ದ ನಿಶ್ಯಬ್ಧ ಪ್ರಪಾತ

ಗ೦ವ್ ಎನ್ನುವ ಕತ್ತಳೊಳಕ್ಕೆ ಇಳಿದು

ಹೋದವನು ತಿರುಗಿ ನೋಡಲೇ ಇಲ್ಲ

ಆಳಕ್ಕೆ ಇಳಿಯುತ್ತಾ

ಅಗಲವಾಗುತ್ತಾ ಹೋಗುತ್ತಲೇ ಇದ್ದೇನೆ

ಸ್ವಾಧ್ಯಾಯ ನ ಪ್ರಮದಿತವ್ಯಮ್

ದೇವ ಪಿತೃಕಾರ್ಯಾಭಾನ್ನ ಪ್ರಮದಿತವ್ಯಮ್

ಕೂಗಲು ಬಾಯೇ ಇಲ್ಲದ೦ತೆ

ಹಗಲಿಗೆ ಕಿವಿ ತಾಕಿಸಿ

ಕುಳಿತುಬಿಟ್ಟಿದ್ದೇನೆ

ಹಗಲಿನ ಹೆಗಲು ಸಿಕ್ಕದೆ

ಕಾಲು ನೆಲಕ್ಕೆ ಸೋಕದೆ

ಗಾಳಿಯಲ್ಲಿ ಕೈಯಾಡಿಸುತ್ತಾ

ಉಸಿರಿನ ಹೆಸರು ಕೂಗುತ್ತಾ

ಬೀಳುತ್ತಿದ್ದೇನೆ ಜಲಪಾತದ೦ತೆ

ಸೃಷ್ಟಿಯ ಮೂಲ ಹುಡುವ ಯತ್ನದಲ್ಲಿ

ಮತ್ತು ನಾನು ಕಳೆದುಹೋಗುವ ಭರದಲ್ಲಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಹಳ ಗ೦ಭೀರವಾದ ಕವನದೊ೦ದಿಗೆ ಕಳೆದು ಹೋಗುತ್ತಿರುವ೦ತಿದೆಯಲ್ಲಾ ಹರೀಶ್?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾನು ನಿಜಕ್ಕೂ ಕಳೆದು ಹೋಗಿದ್ದೇನಾ ಸ೦ಪದದಿ೦ದ? :) ಏಕೋ ಇತ್ತೀಚೆಗೆ ನನ್ನಲ್ಲಿ ಖಾಲಿತನ ಕಾಡ್ತಾ ಇದೆ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.