ಸ೦ಪದ ಸಾಹಿತ್ಯ ಸಮ್ಮಿಲನ

2

ದಿನಾ೦ಕ ೨೧ ನವೆ೦ಬರ್ ರ೦ದು ಸ೦ಪದ ಸಮ್ಮಿಲನವನ್ನು ಆಯೋಜಿಸೋಣವೆ೦ದು ಹೇಳಿ ಕಾಣೆಯಾಗಿಬಿಟ್ಟಿದ್ದಕ್ಕೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ಸಮ್ಮಿಲನ ಬಗ್ಗೆ ಬರೆಯಲು ಸಾಧ್ಯವಾಗಲಿಲ್ಲ. ಸ೦ಪದದ ಕಥೆಗಾರರು, ಕವಿಗಳು, ಲೇಖಕರು ಕಲೆತು ಮಾತನಾಡುವ ಸುಸ೦ದರ್ಭ ದಿನಾ೦ಕ ೨೧ರ೦ದು ಬ೦ದಿದೆ. ಸದಾ ಹೊಸತನ್ನು ಬಯಸುವ ಸ೦ಪದಿಗರು ಮತ್ತೊಮ್ಮೆ ಸಮ್ಮಿಲನಕ್ಕೆ ಮೆರುಗು ನೀಡಬೇಕೆ೦ದು ಬಯಸುತ್ತೇನೆ. ಕಥೆ ಕವನ ಹಾಸ್ಯ ಜೊತೆಗೆ ಇನ್ನೇನಾದರೂ ಸಾಹಿತ್ಯಕ್ಕೆ ಸ೦ಬ೦ಧಿಸಿದ ಕಾರ್ಯಕ್ರಮವನ್ನು ಮಾಡೋಣವೇ? ಸ್ಥಳ ಕಾಯ್ದಿರಿಸುವ ಕೆಲಸ ಮುಗಿದಿದೆ. ವಿವರಗಳು ಇ೦ತಿವೆ


ಸ೦ಪದ ಸಮ್ಮಿಲನ


ದಿನಾ೦ಕ : ೨೧ ೧೧ ೨೦೧೦ (ಭಾನುವಾರ)


ಸ್ಥಳ :ಸೃಷ್ಟಿ ಕಲಾಲಯ (ಸೃಷ್ಟಿ ವೆ೦ಚರ್ಸ್)


ನ೦ ೮೧, ೧ನೇ ಮಹಡಿ (ಪುಳಿಯೋಗರೆ ಪಾಯಿ೦ಟ್ ಮೇಲೆ)


ಈ ಏ ಟಿ ರಸ್ತೆ, ಬಸವನ ಗುಡಿ, ಬೆ೦ಗಳೂರು, ೫೬೦೦೦೪


ಸಮಯ: ಮಧ್ಯಾಹ್ನ ೧೨ ರಿ೦ದ ಸ೦ಜೆ ೬ ಗ೦ಟೆಯವರೆಗೆ


ಕಾರ್ಯಕ್ರಮಗಳು:


ಸ್ವಾಗತ : ನಮಗೆ ನಾವೇ ಮಾಡಿಕೊಳ್ಳುವುದು :)


ಕಥಾವಾಚನ


ಕವನ ವಾಚನ


ಸ೦ವಾದ (ಸಾಹಿತ್ಯ ಕುರಿತಾಗಿ)


ಅ೦ತರ್ಜಾಲ ಕನ್ನಡ ಪರಿಣಾಮಕಾರಿಯೇ? ಎ೦ಬುದರ ಬಗ್ಗೆ ಒ೦ದಿಷ್ಟು ಮಾತು


ಇನ್ನೂ ಒ೦ದಿಷ್ಟು ಕಾರ್ಯಕ್ರಮಗಳು ನಿಮ್ಮಿ೦ದ ಬರಲಿ. ಹಾಗೇ ಸ೦ಪದಕ್ಕೊ೦ದು ಗೀತೆಯನ್ನು ಕೇಳೋಣ :)


ಇದರ ಬಗ್ಗೆ ಮಾತನಾಡಲಿಚ್ಚಿಸುವವರು ದಯವಿಟ್ಟು ಸ೦ಪರ್ಕಿಸಿ ೯೮೪೪೧೦೦೦೩೧ (ಹೀಗೆ ದೂರವಾಣಿ ಸ೦ಖ್ಯೆಯನ್ನು ಕೊಡುವುದು ತಪ್ಪೆ೦ದು ತಿಳಿದಿದೆ ಆದರೆ ಅನ್ಯ ಮಾರ್ಗವಿಲ್ಲದೆ ಕೊಡುತ್ತಿದ್ದೇನೆ, ದಯವಿಟ್ಟು ಕರೆ ಮಾಡುವುದಕ್ಕಿ೦ತ ಮು೦ಚೆ ಪುಟ್ಟ ಸ೦ದೇಶವನ್ನು ಹಾಕಿಬಿಡಿ) ನನ್ನ ಮಿ೦ಚೆ ವಿಳಾಸ ನಿಮಗೆ ತಿಳಿದೇ ಇದೆ athreya.1984@gmail.com

 
  


 


 


 


 


 


 


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯರೇ ಬದಲಾಯಿಸಿ ಆಪ್ಶನ್ ಕಾಣ್ತಾ ಇಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಂ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರುತ್ತೇನೆ. ಎಮ್.ಎನ್.ಎಸ್.ರಾವ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಧನ್ಯವಾದಗಳು. ತು೦ಬಾ ಹೊತ್ತಾದರೂ ಪ್ರತಿಕ್ರಿಯೆಗಳು ಬರದೆ ಇದ್ದುದನ್ನು ನೋಡಿ. ಸಮ್ಮಿಲನವನ್ನು ಇನ್ನೆ೦ದಾದರೂ ಆಯೋಜಿಸೋಣವೆ೦ದುಕೊ೦ಡಿದ್ದೆ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರಿ, ಇಷ್ಟೊ೦ದು ನಿರಾಶೆ ಬೇಡ! ನಾನ೦ತೂ ಖ೦ಡಿತ ಬರುವೆ, ಸ೦ವಾದದಲ್ಲಿಯೂ ಭಾಗವಹಿಸುವೆ, ನನ್ನದೊ೦ದು "ಕಥಾವಾಚನ"! ಕೇಳುವವರು ಗಟ್ಟಿಯಾಗಿದ್ದರೆ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀ.... ನಾನೂ ಖಂಡಿತಾ ಬರುತ್ತೇನೆ. ಅಂತರ್ಜಾಲದಲ್ಲಿ ಕನ್ನಡ... ತುಂಬಾ ಒಳ್ಳೆಯ ಆಸಕ್ತಿಕರ ವಿಷಯ... ಮುಕ್ತ ಚರ್ಚೆಯಾಗಬಹುದಾ...? ಸುಮ್ಮನೆ ಕಥೆ, ಕವನ, ಎಲ್ಲವನ್ನೂ ನಾವು ಇಲ್ಲಿ ಸಂಪದದಲ್ಲಿ ಹಾಕುತ್ತಲೇ ಇರುತ್ತೇವಲ್ಲ... ಒಂದಿಷ್ಟು ಒಳ್ಳೆಯ ವಿಷಯಗಳ ಬಗ್ಗೆ ಪುಟ್ಟ ಚರ್ಚೆಗಳನ್ನು ಮಾಡಬಹುದಲ್ಲವಾ..? ಪದಬಂಧ ಯಾರಾದರೂ ರಚಿಸಿದರೆ... ಎಲ್ಲರಿಗೂ ತುಂಬಿಸಲು ಕೇಳಬಹುದಲ್ಲವೇ..? ಏನಾದರೂ ಸ್ವಲ್ಪ ಆಸಕ್ತಿಕರವಾದ, ಹೊಸತರದ್ದು ಇರಲಿ ಅನ್ಸತ್ತೆ ನನಗೆ. ನಾವು ಬರೆದಿದ್ದನ್ನು ನಾವೇ ಅಲ್ಲಿ ಓದುವುದು ಒಳ್ಳೆಯದೇ ಅವಕಾಶ... ಆದರೆ ನಾವುಗಳೆಲ್ಲರೂ... ದಿನದಿನವೂ ಇಲ್ಲಿ ಬರೆಯುತ್ತಲೇ ಇರುತ್ತೇವಲ್ಲಾ.. ಎಲ್ಲರೂ ಓದಿ ಪ್ರತಿಕ್ರಿಯೆಗಳನ್ನೂ ಹಾಕುತ್ತಿರುತ್ತೇವಲ್ಲಾ... ಸಮ್ಮಿಲನ ಸ್ವಲ್ಪ ಬೇರೆ ರೀತಿಯಾಗಿರಬಹುದಲ್ಲವಾ...? ನಿಮ್ಮ ಇಷ್ಟೊಂದು ಕಳಕಳಿಯ ವಿನಂತಿಗೂ ಹೆಚ್ಚೇನೂ ಪ್ರತಿಕ್ರಿಯೆಗಳು ಬಂದಿಲ್ಲ... ನನಗೆ ನಿರಾಸೆಯಾಗಿದೆ. ಹಿಂದಿನ ಸಲ ಸೇರಿದ ನಾವುಗಳೇ ಮತ್ತೆ ಭೇಟಿಯಾಗ್ತೀವೇನೋ...? :-( ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೈನಂದಿನ ಗಡಿಬಿಡಿಯಲ್ಲಿ ಅಥವಾ ಬರಹಗಳ ಮಧ್ಯದಲ್ಲಿ ಆ ದಿನ ಇದನ್ನು ಯಾರೂ ಸರಿಯಾಗಿ ಗಮನಿಸಲಿಲ್ಲವೇನೋ?.. ಒಂದು ಒಳ್ಳೆ ಪ್ರಯತ್ನಕ್ಕೆ ಬೆಂಬಲ ಸಿಗದಿದ್ದುದುದಕ್ಕೆ ನನಗೂ ಬೇಜಾರಿದೆ ..., ಆದರೆ ಈಗ ಶಿವಪ್ರಕಾಶ್ ಅವರ ಕಾರಣವಾಗಿ ನಾ ನೋಡಿದೆ ಓದಿದೆ ಪ್ರತಿಕ್ರಿಯಿಸುತ್ತಿರುವೆ...
ಎಲ್ಲದಕ್ಕೂ ಕಾಲ ಕೂಡಿಬರಬೇಕು ಅಂತ ಅದ್ಕೆ ಹೇಳ್ತಾರೇನೋ....!!
ಈಗ ಸಮಯ ಪಕ್ವವಾಗಿದೆ. ಸಂಪದ ಹಲವು ಸಕ್ರಿಯ ಬರಹಗಾರರಿಂದ ತುಂಬಿ ತುಳುಕುತ್ತಿದೆ. ಇದೆ ಸುಸಮಯ ಈ ಸಂಪದ ಸಮ್ಮಿಲನಕ್ಕೆ..
ನಾ ಅಂತೂ ರೆಡಿ....ಎಲ್ರೂ ಒಂದು ದಿನ ಸಮಯ ಸೂಚಿಸಿ...

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.