ಪ್ರಶ್ನಾತೀತರು(?) (ಚತುರೋಕ್ತಿ ೬)

0


ಪಾದದಡಿಯ ಮಣ್ಣು ಕುಸಿಯುತಿದೆ

ವಾಮನರೇ ಎಲ್ಲ, ಒ೦ದು ಕಾಲು ಮೇಲೆ
ಇನ್ನೊ೦ದು ಕಾಲು ಭೂಮಿಯೊಳಗೆ

ಮಣ್ಣ ಮೂರ್ತಿ, ಕಣ್ಣು ಹೊಡೆದು
ನಮ್ಮೆದುರು ನಿ೦ತಿದೆ, ಕತೃಗಳು ನಾವೇ
ನಿಜ ದೇಹ ಅವಿತು ಕೇಕೆ ಹಾಕುತ್ತದೆ

ಅಸ್ತಿತ್ವ, ವ್ಯಕ್ತಿತ್ವ, ಸತ್ತು ಒಳಗೇ ಕೊಳೆತು ನಾತ.
ಪ್ರಶ್ನೆಗಳಿಲ್ಲದ ಬದುಕು ಬದುಕೇ?
ಕೆಸರವಿಗ್ರಹಕ್ಕೆ ಪೂಜೆ. ಅಸಹ್ಯ!
ಕೇಳುವುದೆ೦ದರೆ ನಮಗೆ ಅಪಥ್ಯ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಅರ್ಥವತ್ತಾಗಿದೆ ಆತ್ಮೀಯ ಇವೆಲ್ಲಾ ಯೋಚಿಸಿದಷ್ಟೂ ಅರ್ಥವತ್ತಾಗಿರುತ್ತವೆ ಎಷ್ಟು ಅಗೆದಿರೋ ಅಷ್ಟೂ ಆಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.