ಅಗ್ನಿಹೋತ್ರ (ಚತುರೋಕ್ತಿ 5)

5

 
ಒಲೆ ಉರಿದು ಬೆಳಕಾಯ್ತು, ಉರಿದು ಹುರಿಯಾಯ್ತು

ನಾಲ್ಕು ನಾಲ್ಕುಗಳ ಆಳಕ್ಕಿಳಿದು ಅಗಲವಾಯ್ತು ನೋಡು
ನಾವು ಐವರು ಒಳಕ್ಕಿಳಿದು ಸಮಿಧೆಗಳಾದೆವು

ಕರಣತ್ರಯ ತಾಪತ್ರಯಗಳನ್ನು ಮೀರಿ ನಿ೦ತದ್ದು ಹೀಗೆ
ಓ೦ ಭೂರಗ್ನಯೇ ಎ೦ದುಲಿದು ಉರುಳಿದೆ ಹೇಗೂ ಹಾಗೆ
ಕರಣಶುದ್ದಿ  ಮುಖ್ಯ ಅ೦ತಃಕರಣ ಶುದ್ದಿಯೇ ಮಹಾತ್ಮ

ದಿನದಿನವೂ ಅಗ್ನಿ ಅವಾಹಿಸು ಕ್ರಮೇಣ ನೀನು ಇಲ್ಲವಾಗು
ಹಾರಿದ ಪ್ರತಿಯೊ೦ದು ಕಿಡಿ ನಿರ್ಮಲವಾಗಿಸಲಿ
ಎಲ್ಲ ಕಡೆ ಉರಿದು ಮಿಕ್ಕದ್ದು ಬೂದಿ ಮಾತ್ರ
ಮೇಲೇರಿದ ಗೃಹಸ್ತ ಹಸ್ತದೊಳು ತೋರಿದ ಸೂತ್ರ


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರಿ, ಚೆನ್ನಾಗಿದೆ. ಅಗ್ನಿಹೋತ್ರದ ಬಗ್ಗೆ ತಿಳಿದವರಿಗೆ ಅರ್ಥವಾಗಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.