ಪಬ್ಲಿಕ್ ಮೆಮೊರಿ ಈಸ್ ಶಾರ್ಟ್

0

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ನಾವಿದ್ದೇವೆ. ಬ್ರಿಟಿಶರ ಆಡಳಿತವನ್ನು ದೇಶ ಕಂಡಿದೆ. ರಾಜ ಮಹಾರಾಜರ ಆಡಳಿತವನ್ನೂ ಕಂಡಿದೆ.ನಾವೀಗ ನಿಜವಾದ ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲಿ ಪ್ರಜೆಯೇ ಪ್ರಭು. ತತ್ವ ಚೆನ್ನಾಗಿಯೇ ಇದೆ.ನಮ್ಮದು ನಿಜವಾದ ಪ್ರಜಾ ತಂತ್ರ ವ್ಯವಸ್ಥೆ.
ಆರು ದಶಕಗಳಲ್ಲಿ ನಮ್ಮ ದೇಶದ ಅಭಿವೃದ್ಧಿಯ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕುಗ್ರಾಮಗಳಿಗೆ ವಿದ್ಯುತ್, ದೂರವಾಣಿ, ಮನೆಬಾಗಿಲಿಗೆ ನಲ್ಲಿ ನೀರು ತಲುಪಿದೆ. ರಸ್ತೆಗಳಾಗಿವೆ.ಗುಡಿಸಿಲಿನ ಜಾಗದಲ್ಲಿ ಮಹಲುಗಳು ಎದ್ದು ನಿಂತಿವೆ. ಆಸ್ಪತ್ರೆಗಳು, ಶಾಲೆಗಳು, ಕೈಗಾರಿಕೆಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಬಾರದಿದ್ದರೆ ಈ ಕೆಲಸಗಳು ಆಗುತ್ತಿರಲಿಲ್ಲವೇ? ಪ್ರಶ್ನೆ ಹಾಕಿಕೊಂಡರೆ, ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗುತ್ತಿತ್ತು ಎನಿಸದೆ ಇರದು. ಇರಲಿ, ಈ ಬರಹದ ಉದ್ಧೇಶ ಅಭಿವೃದ್ಧಿಯ ವಿಚಾರವಲ್ಲ. ನಮ್ಮ ಪ್ರಕೃತಿಯ ನಾಶದ ವಿಚಾರವೂ ಅಲ್ಲ. ಆದರೆ.........
ಬ್ರಿಟಿಶರ ಕಾಲದಲ್ಲಿ ದೇಶವನ್ನು ಆಳುವ ಅರಸರ ಸಂಖ್ಯೆ ಎಷ್ಟಿತ್ತು? ಈಗ ನಮ್ಮನ್ನಾಳುವವರ ಸಂಖ್ಯೆ ಎಷ್ಟು ? ಎಂದು ಯೋಚಿಸಿದಾಗ ............
ಬ್ರಿಟಿಶರಾಗಲೀ, ರಾಜ ಮಹಾರಾಜರಾಗಲೀ ಬೆರಳೆಣಿಕೆಯಲ್ಲಿದ್ದು ಅವರು ರಾಜರು, ಪ್ರಜೆಗಳು ಗುಲಾಮರು. ಕೆಲವರದ್ದು ಮಾತ್ರ ವೈಭೋಗದ ಜೀವನ.ಅವರು ನಮ್ಮನ್ನಾಳುವ ಅರಸರು.
ಇಂದು ಪ್ರಜಾ ಪ್ರಭುತ್ವದಲ್ಲಿ...?
ಹೌದು....ಲಾಲ್ ಬಹದ್ದುರ್ ಶಾಸ್ತ್ರಿಯವರಂತಹ ಪ್ರಧಾನ ಮಂತ್ರಿ, ವಿಶ್ವೇಶ್ವರಯ್ಯ ನವರಂತಹ ಅಧಿಕಾರಿಗಳ ಸಾಲಿಗೆ ಸೇರಿದವರೆಷ್ಟು ಮಂದಿ? ಅವರ ಸರಳ ಜೀವನ, ಸಚ್ಚಾರಿತ್ರ್ಯ, ಸಜ್ಜನಿಕೆ..........
ಅವರ ಸಾಲಿಗೆ ಸೇರಿದವರ ಸಂಖ್ಯೆ ಕ್ಷೀಣಿಸುತ್ತಾ ಬಂದು ಈಗ ಶೂನ್ಯ ಸ್ಥಿತಿ ತಲುಪಿದ್ದಾಗಿದೆ. ಅದರಲ್ಲೂ ಎಲೆಮರೆ ಕಾಯಿಯಂತೆ ಒಬ್ಬಿಬ್ಬರಿದ್ದರೆ ತಾಯಿ ಭಾರತಿಯೇ ಧನ್ಯಳು.
ಸ್ವಾತಂತ್ರ್ಯೋತ್ತರ ಅರು ದಶಕಗಳ ನಮ್ಮ ಅನುಭವವೇನು? ಅನುಭವ ಹೇಳುವವರೇ ಇಲ್ಲ. ಕೇಳುವ ಮನಸ್ಸೂ ಇಲ್ಲ. ಒಂದು ವಿಚಾರವನ್ನು ಯಾರೂ ಕೇಳುವ ಗೋಜಿಗೇ ಹೋಗುವುದಿಲ್ಲ. ನಾವೇ ಚುನಾಯಿಸಿರುವ ಶಾಸಕರು, ಲೋಕಸಭಾ ಸದಸ್ಯರಲ್ಲಿ ಬಹುಪಾಲು ಮಂದಿ ಕೊಟ್ಯಾದೀಶರು. ಹಲವರಂತೂ ಸಾವಿರ ಸಾವಿರ ಕೋಟಿ ಆಸ್ತಿಯ ಒಡೆಯರು.ಇವರಿಗೆಲ್ಲಾ ಎಲ್ಲಿಂದ ಬಂತು ಈ ಅಸ್ತಿ? ಯಾವುದೇ ಪಕ್ಷಗಳು ಈ ಅಪವಾದಕ್ಕೆ ಹೊರತಗಿಲ್ಲ.ಒಬ್ಬಿಬ್ಬರು ಆಳುತ್ತಿದ್ದ ಜಾಗದಲ್ಲಿ ಈಗ ಸಾವಿರಾರು ಮಂದಿ ಅರಸರು!! ಒಂದೆರಡು ದಶಕಗಳಮುಂಚೆ ಬೆರಳೆಣಿಕೆಯ ಪ್ರಾಮಾಣಿಕ ರಾಜಕಾರಣಿಗಳನ್ನು ಕಾಣಬಹುದಿತ್ತು. ಬ್ರಷ್ಟರ ಮಧ್ಯೆ ಇಂತಹ ಕೆಲವರನ್ನು ದೇಶದ ಜನರು ದೇವರ ಸಮಾನ ಕಂಡಿದ್ದರು. ಬರಬರುತ್ತಾ ಈ ಕೆಲವರೂ ಇಲ್ಲವಾದರು. ಇಡೀ ರಾಜಕಾರಣ ಒಂದು ಹೊಲಸು ಮನೆಯಾಯ್ತು. ದುಡ್ದಿದ್ದವ ರಾಜಕಾರಣ ಮಾಡಬಹುದು. ಗೆದ್ದು ಮತ್ತೆ ಸಂಪಾದಿಸ ಬಹುದು.ಕೋಟಿ ಕೋಟಿ ಲೂಟಿ ಹೊಡೆಯಬಹುದು, ಎಂಬ ಸಮಾನ್ಯ ಅಭಿಪ್ರಾಯಕ್ಕೆ ಜನರು ಬಂದು ನಿಂತಿದ್ದಾರೆ.
ರಾಜಕಾರಣಕ್ಕೆ ಇಳಿಯುವ ಮುಂಚೆ ಈಗ್ಗೆ ಮೂರು ನಾಲ್ಕು ದಶಕಗಳಲ್ಲಿ ಮೋಟಾರ್ ಬೈಕ್ ಹೊಂದಿರದ ಈ ನಮ್ಮ ದೇಶಸೇವಕರು ಈಗ ಸಾವಿರ ಸಾವಿರ ಕೋಟಿ ಆಸ್ತಿಯ ಒಡೆಯರು. ಇದಕ್ಕೆ ಪಕ್ಷಬೇಧವಿಲ್ಲ. ಅವರಿವರ ಮೇಲೆ ಪತ್ರಿಕೆಗಳಲ್ಲಿ , ಮಾಧ್ಯಮಗಳಲ್ಲಿ ಆಪಾದನೆಯ ಸುರಿಮಳೆ ಗೈಯ್ಯುವವರು ಒಂದು ದಿನ ಮತ್ತೆ ಅಕ್ಕಪಕ್ಕ ಕುಳಿತು ಸ್ನೇಹಿತರಾಗಿ ಬಿಡುವುದನ್ನು ದೇಶವು ಕಣ್ಮುಚ್ಚಿ ನೋಡುತ್ತದೆ. ಅದಕ್ಕೇ ಹೇಳುವರು ಪಬ್ಲಿಕ್ ಮೆಮೊರಿ ಈಸ್ ಶಾರ್ಟ್.

 

ಈಗ ಇಡೀ ದೇಶವು ಅಭಿವೃದ್ಧಿಯ ಜಪವನ್ನು ಮಾಡುತ್ತದೆ. ಅಂದರೆ ಅಭಿವೃದ್ಧಿಗಾಗಿ ಹೊರದೇಶಗಳಿಂದ ಕೋಟಿ ಕೋಟಿರೂಪಾಯಿ ಸಾಲತಂದು ಇಲ್ಲಿ ರಸ್ತೆ, ನೀರು, ವಿದ್ಯುತ್, ಎಲ್ಲಾ ಅಭಿವೃದ್ಧಿ ಯ ಮಾತು ಕೇಳುತ್ತದೆ. ಅಭಿವೃದ್ಧಿ ಎಷ್ಟು ಪಾಲುಆಗುತ್ತದೋ ಗೊತ್ತಿಲ್ಲ ನಮ್ಮ ರಾಜಕಾರಣಿಗಳು/ಅಧಿಕಾರಿಗಳಂತೂ ಅಭಿವೃದ್ಧಿಯಾಗುತ್ತಾರೆ. ಇಂದಿಗೂ ಹರುಕುಬಟ್ಟೆಯುಟ್ಟು  ಕೂಲಿಮಾಡುವವ, ಕೆಸರು ಗದ್ದೆಯಂತಹ ರಸ್ತೆಗಳು, ಒಂದುಕೊಡ ನೀರಿಗಾಗಿ ಕೊಡಗಳನ್ನು ಹೊತ್ತು ಸಾಲಗಟ್ಟಿ ನಿಲ್ಲುವ ಹೆಂಗಸರು, ಈ ಎಲ್ಲಾ ದೃಶ್ಯಗಳು ಕಾಣುತ್ತಲೇ ಇರುತ್ತವೆ. ಅಭಿವೃದ್ಧಿಯ ಹೆಸರು ಚಾಲ್ತಿಯಲ್ಲಿರುತ್ತದೆ. ಇಂತಹಾ ಚಿಂತನೆಗೆ "ಅಯ್ಯೋ ಪೆದ್ದೇ ನಿನಗೇನೂ ಬೇರೆ ಕೆಲಸವಿಲ್ವಾ?" ಎನ್ನುವವರು ಬಹಳ ಮಂದಿ.

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಜಾಪ್ರಭುತ್ವ ಅಂದರೆ ಮಣ್ಣಿನ ಗೋಡೆಯ ಹಾಗೆ ತೊಳೆದಷ್ಟಕ್ಕೂ ಕೆಸರೇ ಬರುತ್ತೆ ಅಂತ ಹಿರಿಯರೊಬ್ಬರು ಹೇಳೋದನ್ನ ಕೇಳಿದ್ದೇನೆ.
(ಆದರೆ ಪ್ರಜಾಪ್ರಭುತ್ವ ಕ್ಕಿಂತ ನಿರಂಕುಶ ರಾಜ ಪ್ರಭುತ್ವಒಳ್ಳೆಯದೆಂದು ಅವರ ಅಭಿಪ್ರಾಯವಾಗಿರಲಿಲ್ಲ.)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಪ್ರಜಾಪ್ರಭುತ್ವಕ್ಕಿಂತ ರಾಜಪ್ರಭುತ್ವವೇ ಉತ್ತಮ ಅನ್ಸುತ್ತೆ. ಇಲ್ಲಾ ರೈತ,ಕಾರ್ಮಿಕರ ಸರಕಾರ ಸೃಷ್ಟಿ ಆಗಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಅನ್ನುವುದಕ್ಕಿಂತಲೂ ಪಬ್ಲಿಕ್’ಸ್ ಕೆಬೆಬಿಲಿಟಿ ಇಸ್ ಕಟ್ ಶಾರ್ಟ್ ಅನ್ನಬಹುದೇನೋ.
ಚುನಾವಣೆಯ ದಿನ ಮತದಾನ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಲಾರದ ಸ್ಥಿತಿಗೆ ತಂದು ಬಿಟ್ಟಿದೆ ಈ ಪ್ರಜಾಪ್ರಭುತ್ವ.ಇಂತಹಾ >>ಚಿಂತನೆಗೆ "ಅಯ್ಯೋ ಪೆದ್ದೇ ನಿನಗೇನೂ ಬೇರೆ ಕೆಲಸವಿಲ್ವಾ?" ಎನ್ನುವವರು ಬಹಳ ಮಂದಿ. <<

ಚಿಂತನೆ ಮಾಡುವವರನ್ನು ಹೀಗಳೆಯುವರೆಮ್ದು ಚಿಂತನೆಯನ್ನು ನಿಲ್ಲಿಸಲಾದೀತೆ?
ನಿಜವಾಗಿಯೂ ಹೇಳಬೇಕೆಂದರೆ ಚಿಂತನೆ ಮಾಡುವವರ ಸಂಖ್ಯೆ ಕಡಿಮೆ ಇದೆ.
ಬರಿದೆ ಚಿಂತೆ ಮಾಡುವವರ ಸಂಖ್ಯೆ ಸಾಕಷ್ಟು ಇದೆ.
ಚಿಂತನೆಯಿಂದ ಸಮಸ್ಯೆಗೆ ಪರಿಹಾರ ದೊರೆತರೂ ದೊರೆಯಬಹುದು.
ಚಿಂತೆಯಿಂದ ಪರಿಹಾರದ ಮಾತಂತಿರಲಿ, ಸಮಸ್ಯೆ ಉಲ್ಬಣಗೊಳ್ಳಲೂ ಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇಶದ ಸ್ಥಿತಿಗೆ ಪ್ರಜೆಗಳೂ ಕಾರಣವಲ್ಲವೇ? ನಮ್ಮ ಕೊಡುಗೆ ಪ್ರಜಾಬಾಹುಳ್ಯಕ್ಕೆ ಸಹಕಾರಿಯಾಯಿತೇ ಹೊರತು ಅದನ್ನು ಹಿಡಿತದಲ್ಲಿಟ್ಟುಕೊಳ್ಳಲು ಆಯಿತೇ? ಎರಡನೆಯದು ಎಲ್ಲವೂ ಸರ್ಕಾರ ಮಾಡಬೇಕೆನ್ನುವ, ತೆರಿಗೆಯನ್ನು ತಪ್ಪಿಸಿಕೊಳ್ಳುವ, ಸಮಯಸಿಕ್ಕಾಗ ಹಿರಿದುಕೊಳ್ಳುವ ಮನೋಭಾವದಿಂದ ಹೊರಬರಲು ಸರಿಯಾದ ಶಿಕ್ಷಣ ಪದ್ಧತಿಯನ್ನು ತರಲು ಯಾರಿಗೂ ಬೇಕಿಲ್ಲ-ಪ್ರಜೆಗಳು ಮೌಡ್ಯರಾಗಿದ್ದರಲ್ಲವೆ ನೋಟು-ಹೆಂಡದಿಂದ ಓಟು ಪಡೆಯಬಹುದು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಂತನೆಗೆ "ಅಯ್ಯೋ ಪೆದ್ದೇ ನಿನಗೇನೂ ಬೇರೆ ಕೆಲಸವಿಲ್ವಾ?" ಎನ್ನುವವರು ಬಹಳ ಮಂದಿ.
ನಿಜ ಹೀಗೆ ಹೇಳುವವರೆ ಹೆಚ್ಚು ಇದೆಲ್ಲ ಒಬ್ಬರಿಬ್ಬರಿಂದಾಗುವ ಕೆಲಸವಲ್ಲ ಅದಕ್ಕೆ ದೊಡ್ಡ ಕ್ರಾಂತಿಯೆ ಆಗಬೇಕೆನಿಸುತ್ತದೆ....ನನಗಂತು ರಾಜಕಾರಣಗಳನ್ನು ನೋಡಿದರೆ ಕೆಟ್ಟು ಕೋಪಬರುತ್ತದೆ....ನಾಟಕಕಾರರನ್ನು ನೋಡಿದಂತಾಗುತ್ತದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ರವರೆ, ನಮ್ಮದು ನಿಜವಾದ ಪ್ರಜಾ ಪ್ರಭುತ್ವವಲ್ಲ, ಅದರ ಅಣಕ, ಇಲ್ಲಿ ಎಲ್ಲರೂ ಸಲ್ಲುವರು, ಪಪ್ಪು ಯಾದವ್ ನಂಥವರು ಎಂಪಿಗಳಾಗಬಹುದು. ಲಾಲು ಯಾದವ್ ನಂಥವರು ನಮ್ಮನ್ನಾಳುವ ರಾಜರಾಗಬಹುದು. ಇಲ್ಲಿ ಎಲ್ಲವೂ ಸಾಧ್ಯ, ಭ್ರಷ್ಟಾಚಾರದಲ್ಲಿ ನಮ್ಮವರಿಗೆ ಯಾವಾಗಲೂ ವಿಶ್ವದಲ್ಲೇ ಮೊದಲ ಸ್ಥಾನ. ಇದಕ್ಕೆಲ್ಲಾ ಕಡಿವಾಣ ಹಾಕ ಬೇಕಾದರೆ ರಕ್ತ ಕ್ರಾಂತಿಯೇ ಆಗಬೇಕು. ಎಲ್ಲವೂ ಸರ್ಕಾರದ್ದು, ವ್ಯಕ್ತಿಯೊಬ್ಬನಿಗೆ ಯಾವುದೇ ಆಸ್ತಿಯ ಹಕ್ಕಿಲ್ಲವೆಂಬಂತಾಗಬೇಕು. ಆಗ ಮಾತ್ರ ನಮ್ಮ ಭಾರತ, ನಿಜವಾಗಿಯೂ ಭವ್ಯ ಭಾರತವಾಗಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಗೆ ಗಾಂದಿ ಬೇಕು, ಭಗತ್ ಸಿಂಗ್ ಬೇಕು, ವಿವೇಕಾನಂದ ಬೇಕು, ಲಾಲ್ ಬಹುದ್ದೂರ್ ಶಾಸ್ತ್ರಿ ಬೇಕು.
ಆದ್ರೆ :(

ಅವರೆಲ್ಲಾ ನಮ್ಮ ಪಕ್ಕದ ಮನೇಲಿ ಹುಟ್ಬೇಕು. ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

;)
ಪಬ್ಲಿಕ್ ಮೆಮರಿ ಶಾರ್ಟೇ...
ಪ್ರೈವೇಟ್ ಮೆಮರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಒಂದೆರಡು ದಶಕಗಳಮುಂಚೆ ಬೆರಳೆಣಿಕೆಯ ಪ್ರಾಮಾಣಿಕ ರಾಜಕಾರಣಿಗಳನ್ನು ಕಾಣಬಹುದಿತ್ತು. ಬ್ರಷ್ಟರ ಮಧ್ಯೆ ಇಂತಹ ಕೆಲವರನ್ನು ದೇಶದ ಜನರು ದೇವರ ಸಮಾನ ಕಂಡಿದ್ದರು. ಬರಬರುತ್ತಾ ಈ ಕೆಲವರೂ ಇಲ್ಲವಾದರು. "

ಈಗ ರಾಜಕೀಯದಲ್ಲಿ ಪ್ರಾಮಾಣಿಕ ರಾಜಕಾರಣಿಗಳಿಲ್ಲ ಎಂಬುದನ್ನು ಒಪ್ಪಲಿಕ್ಕೆ ಕಷ್ಟ. ಮನಮೋಹನ್ ಸಿಂಗ್ ಇಲ್ಲವೇ? ಇನ್ನೂ ಅನೇಕರು ಇರಬಹುದು . ನಾವು ಹತ್ತಿರದಿಂದ ನೋಡಿದ ಹೊರತು, ಅಥವಾ ನಮ್ಮ ಮಾಧ್ಯಮಗಳು ಬರೆದ ಹೊರತು, ನಮಗೆ ತಿಳಿಯುವುದಿಲ್ಲ.

ಈ ಲೇಖನದ ಹತಾಶ ಮನಸ್ಥಿತಿ ನನಗೆ ಸರಿಯೆನಿಸುವುದಿಲ್ಲ. ನಮ್ಮ ದೇಶ ಬದಲಾವಣೆಯತ್ತ (ಒಳ್ಳೆಯ) ಮುಖ ಮಾಡಿದೆ ಎಂದು ನಾನು ನಂಬುತ್ತೇನೆ.
ಈಗಿನ ಕೇಂದ್ರ ಸರಕಾರದಲ್ಲಿಯೇ ಬೇಕಾದಷ್ಟು ದಕ್ಷ ಮಂತ್ರಿಗಳಿದ್ದಾರೆ.

(ಒಂದು ಪ್ರಶ್ನೆ: ಪ್ರಾಮಾಣಿಕ ಅದಕ್ಷರಿಗಿಂತ , ದಕ್ಷ ಅಪ್ರಮಾಣಿಕರು ಉತ್ತಮವಲ್ಲವೇ?. ಹತ್ತು ಮೈಲಿ ರಸ್ತೆ ಮಾಡಿದ ಲೆಕ್ಕ ತೋರಿಸಿ ಐದೇ ಮೈಲಿ ಮಾಡಿ , ಬಾಕಿ ಐದು ಗುಳುಂ ಮಾಡುವವನು ಪರವಾಗಿಲ್ಲವೋ, ಅಥವಾ ರಸ್ತೆಯನ್ನೇ ಮಾಡಿಸದೆ, ದುಡ್ಡನ್ನೂ ತಿನ್ನದೆ , ಸುಮ್ಮನಿರುವವನು ಪರವಾಗಿಲ್ಲವೋ . ) :-)

ನಾರಾಯಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ಒಪ್ಪುವೆ. ಖಂಡಿತವಾಗಿಯೂ ಒಂದಿಷ್ಟು ಜನ ಪ್ರಾಮಾಣಿಕರಿದ್ದಾರೆ. ಅವರಿಂದಲೇ ಎಲ್ಲಾ ಬ್ಯಾಲೆನ್ಸ್ ಆಗ್ತಾಇದೆ. ಹೌದು ನನ್ನ ಮಾನಸಿಕತೆ ಬದಲಾಯಿಸಿಕೊಳ್ಳಬೇಕು, ನಿಮ್ಮ ಚಿಂತನೆ ಸರಿ ಎನಿಸಿದೆ, ಆದರೆ ಅಪ್ರಮಾಣಿಕ ಬ್ರಷ್ಟ ರಾಜಕಾರಣಿಗಳು/ಬ್ರಷ್ಟ ಅಧಿಕಾರಿಗಳು, ಹಾಗೆಯೇ ನಿರ್ಲಿಪ್ತ ನಾಗರೀಕರ ಮೇಲೆ ನನಗೆ ಒಳಗೊಳಗೇ ಕೋಪ ಇರುವುದಂತೂ ನಿಜ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.