ಎಚ್ಚರಿಕೆಯ ಏಳು ಗಂಟೆಗಳು

4.2

ಚಿತ್ರ ಕೃಪೆ:ಶ್ರೀಶಾರದಾ ಪೀಠಮ್ ವೆಬ್ಸೈಟ್.
ಬರಹ ಆಧಾರ:ವೇದ ತರಂಗ ಮಾಸ ಪತ್ರಿಕೆ

ಶ್ರೀ ಶಂಕರಾಚಾರ್ಯರು ಮಾನವರಿಗೆ ಎಚ್ಚರಿಕೆಯ ಏಳು ಗಂಟೆಗಳನ್ನು ಭಾರಿಸುತ್ತಾರೆ.

-೧-

ಮಾತಾ ನಾಸ್ತಿ ಪಿತಾ ನಾಸ್ತಿ, ನಾಸ್ತಿ ಬಂಧು ಸಹೋದರ:|
ಅರ್ಥಂ ನಾಸ್ತಿ ಗೃಹಂ ನಾಸ್ತಿ " ತಸ್ಮಾತ್ ಜಾಗ್ರತ ಜಾಗ್ರತ"||

ತಾಯಿ-ತಂದೆ,ಬಂಧು-ಸಹೋದರ, ಹಣ, ಮನೆ, ಯಾವುದೂ ಸತ್ಯವಲ್ಲ , ಆದ್ದರಿಂದ ಹುಷಾರಾಗಿರಿ, ಎಚ್ಚರಿಕೆ, ಎಚ್ಚರಿಕೆ!!

-೨- 

ಜನ್ಮ ದು:ಖಂ ಜರಾ ದುಖಂ, ಜಾಯಾ ದು:ಖಂ ಪುನ: ಪುನ:|
ಸಂಸಾರ ಸಾಗರಂ ದುಖಂ,ತಸ್ಮಾತ್ ಜಾಗ್ರತ ಜಾಗ್ರತ||

ಜನ್ಮವೂ ದು:ಖವೇ, ಮುಪ್ಪೂ ದು:ಖವೇ, ಪತ್ನಿಯೂ ದು:ಖವೇ, ಇಷ್ಟೇ ಏಕೆ? ಸಂಸಾರ ಸಾಗರವೇ ದು:ಖ,ನೆನಪಿರಲಿ,ಎಚ್ಚರಿಕೆ, ಎಚ್ಚರಿಕೆ!!

-೩-

ಕಾಮ: ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾ:|
ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ||

ಕಾಮಕ್ರೋಧಗಳೆಂಬ ಕಳ್ಳರು ನಿನ್ನೊಳಗೇ ಇರುವ ಜ್ಞಾನರತ್ನವನ್ನು ಅಪಹರಿಸುವುದಕ್ಕಾಗಿ ಹೊಂಚುಹಾಕುತ್ತಿದ್ದಾರೆ.ಎಚ್ಚರಿಕೆ, ಎಚ್ಚರಿಕೆ!!

-೪-

ಆಶಯಾ ಬಧ್ಯತೇ ಲೋಕ: ಕರ್ಮಣಾ ಬಹು ಚಿಂತಯಾ|
ಆಯು: ಕ್ಷೀಣಂ ನ ಜಾನಾತಿ ತಸ್ಮಾತ್ ಜಾಗ್ರತ ಜಾಗ್ರತ||

ಆಶೆಯಿಂದ, ಕರ್ಮದಿಂದ,ಚಿಂತೆಯಿಂದ ಮನುಷ್ಯನು ಬದ್ಧನಾಗಿರುತ್ತಾನೆ. ಆಯುಷ್ಯವು ಸವೆಯುತ್ತಿದ್ದರೂ ಅದನ್ನು ಗಮನಿಸುತ್ತಿಲ್ಲ,ಎಚ್ಚರಿಕೆ, ಎಚ್ಚರಿಕೆ!!
-೫-

ಸಂಪದ: ಸ್ವಪ್ನಸಂಕಾಶಾ:,ಯೌವನಂ ಕುಸುಮೋಪಮಮ್|
ವಿದ್ಯುಚ್ಚಂಚಲಮಾಯುಷ್ಯಂ ತಸ್ಮಾತ್ ಜಾಗ್ರತ ಜಾಗ್ರತ||

ಸಂಪತ್ತು ಸ್ವಪ್ನಸಮಾನ, ಯೌವನವು ಹೂವಿನಂತೆ ಬಾಡುತ್ತಿದೆ, ಆಯುಷ್ಯವಂತೂ ಮಿಂಚಿನಂತೆ ಹಾರಿಹೋಗುತ್ತಿದೆ,ಎಚ್ಚರಿಕೆ, ಎಚ್ಚರಿಕೆ!!

-೬-

ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ,ಕ್ಷಣಂ ಜೀವಿತಮೇವಚ|

ಯಮಸ್ಯ ಕರುಣಾ ನಾಸ್ತಿ,ತಸ್ಮಾತ್ ಜಾಗ್ರತ ಜಾಗ್ರತ||

ವಿತ್ತ, ಚಿತ್ತ,ಜೀವಿತ ಎಲ್ಲವೂ ಕ್ಷಣಿಕವೇ.ಯಮನಿಗೆ ದಯೆ ಎಂಬುದಿಲ್ಲ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

-೭-

ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಾ:|

ನಿತ್ಯಂ ಸನ್ನಿಹಿತೋ ಮೃತ್ಯು:, ತಸ್ಮಾತ್ ಜಾಗ್ರತ ಜಾಗ್ರತ||

ದೇಹಗಳು ಅನಿತ್ಯ,ಸಂಪತ್ತೆಲ್ಲವೂ ಅಶಾಶ್ವತ, ಮರಣವು ಹತ್ತಿರದಲ್ಲಿದೆ,ಆದ್ದರಿಂದ ಎಚ್ಚರಿಕೆ, ಎಚ್ಚರಿಕೆ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ
ಇದು ಶ೦ಕರರ "ವಿವೇಕ ಚೂಡಾಮಣಿ" ಯಲ್ಲಿದೆಯಾ ?\
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿದ್ವಾನ್ ಕೆ.ಜಿ.ಸುಬ್ರಾಯ ಶರ್ಮರು ವೇದತರಂಗದ ಏಪ್ರಿಲ್ ೨೦೦೮ ಸಂಚಿಕೆಯಲ್ಲಿ ಬರೆದಿದ್ದಾರೆ. ಮೂಲ ತಿಳಿಸಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಸಾರ್

ತುಂಬಾ ಚೆನ್ನಾಗಿದೆ. ಸಂಗ್ರಹ ಯೋಗ್ಯ. ಧನ್ಯವಾದಗಳು.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಲ್ನುಡಿಗೆ ಶರಣು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಎಚ್ಚರಿಗೆ ನಮ್ಮ ಧನ್ಯವಾದಗಳು....
ಈ ಎಲ್ಲ ಎಚ್ಚರಿಕೆಗಳು ಮನಿಷ್ಯನಿಗೆ ಗೊತ್ತಿದ್ದರು ಪ್ರತಿಯೊಂದಕ್ಕು ಹೊಡೆದಾಡುತ್ತಾನೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ , ಸತ್ಯವಾದ ಮಾತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಗೆ ವೈರಾಗ್ಯ ಬಂದು ಬಿಟ್ಟಿತು!!!! ನಾಳೆನೆ ಕೆಲಸಕ್ಕೆ ರಾಜೀನಾಮೆ ಕೊಡುತ್ತೇನೆ.
ಎಲ್ಲ ಕಡೆ ಬರೀ ದುಃಖ, ಸಾವು, ಮಾಯೆ, ಹಿಂಗಾದ್ರೆ ಬದುಕೋದು ಹೆಂಗೆ ?
ಸಂತೋಷ ಎಲ್ಲಿದೆ ?ಸನ್ಯಾಸದಲ್ಲಾ?
ಬರೀ ದುಃಖ ನೆ ತೋರ್ಸಿದ್ದೀರಲ್ಲ....ಸಂತೋಷ ಎಲ್ಲಿದೆ ಅಂತ ಆಚಾರ್ಯರು ಹೇಳಿಲ್ವ ?
ನಂಗೆ ಅದರಲ್ಲಿ ಆಸಕ್ತಿ ಜಾಸ್ತಿ...!!!!
ಸಾವೊಂದೇ ಸತ್ಯ ಆದ್ರೆ ನಾವೇಕೆ ಬದುಕಿದ್ದೀವಿ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೇ! ಛೇ! ಶಂಕರರು ಸಂತೋಷವಾಗಿರಬೇಡ ಎಂದು ಎಲ್ಲೂ ಹೇಳಿಲ್ಲ. ಆದರೆ ಈ ದೇಹ ಶಾಶ್ವತ ಎಂದು ಭ್ರಮಿಸಬೇಡ, ಎಚ್ಚರವಾಗಿದ್ದುಕೊಂಡು ಸಂತೋಷ ಅನುಭವಿಸು, ಕಡೆಗೆ ಸಾವು ತಪ್ಪಿದ್ದಲ್ಲ, ಇರುವ ಅಲ್ಪ ಅವಧಿಯಲ್ಲಿ ಒಂದಿಷ್ಟು ಒಳ್ಳೆಯದು ಮಾಡು, ಎಂಬ ಹಿತನುಡಿ, ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಎಚ್ಚರಿಕೆಯ ಏಳು ಗಂಟೆಗಳು ನಮಗೆಲ್ಲ ಬದುಕಿನ ಮೂಲ ಅರ್ಥ ಮತ್ತು ಅನ೦ತ ಆನ೦ದದ ಅರಸುವಿಕೆಯನ್ನು ಜಾಗೃತವಾಗುವ೦ತೆ ಮಾಡಲಿ ಶ್ರೀಧರ್. ಇವು ನಮನ್ನು ಜೀವನ್ಮುಖಿಯಾಗುವ೦ತೆ ಪ್ರೇರೇಪಿಸಲಿ. ಸ್ವಾರ್ಥಮುಖಿಯಾಗುವ೦ತೆ ಬೇಡ. ಭಗವ೦ತನನ್ನು ಸಚ್ಚಿದಾನ೦ದ ಸ್ವರೂಪವೆ೦ದಿದ್ದಾರೆ. ಆ ಆನ೦ದವನ್ನು ಎಚ್ಚರಿಸುವಲ್ಲಿ ಈ ಎಚ್ಚರಿಕೆ ಕೆಲಸ ಮಾಡಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂ...ಬಾ ಹಿಂದೆ ಚಂದಮಾಮದ ಒಂದು ಕಥೆಯಲ್ಲಿ ಈ ಎಲ್ಲಾ ಶ್ಲೋಕಗಳನ್ನು ಓದಿದ ನೆನಪು

ನಾರಾಯಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೂ ಅನೇಕ ಕಡೆ ಪ್ರಕಟವಾಗಿರಲೂ ಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇ ಉಪದೇಶಗಳು, ಎಲ್ಲರೂ ಓದಿ ತಿಳಿಯಬೇಕಾಗಿದ್ದಾಗಿದೆ.
ನನ್ನಿ ಶ್ರೀಧರ್,
~ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಅವರೇ,

ಚೆನ್ನಾಗಿದೆ, ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರರಿಗೆ ಧನ್ಯವಾದಗಳು,

ಶ್ರೀ ಆದಿಶಂಕರರ ಅಮೃತ ವಾಣಿಯನ್ನ ನಮಗೆ ತಿಳಿಸಿಕೊಟ್ಟಿದ್ದಕ್ಕೆ. ಸಂಕ್ಷಿಪ್ತ, ಸಂಪೂರ್ಣ - ಇದೇ ಅದ್ವೈತದ, ಶಂಕರರ ವಿಶೇಷತೆ ಎನಿಸುವುದು ನನಗೆ.

- ಅರವಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಂಕರರ ಎಚ್ಚರಿಕೆಯ ಏಳು ಗಂಟೆಗಳ ಶಬ್ಧ ಎರಡೇ ದಿನದಲ್ಲಿ ೪೦೭ ಜನರ ಕಿವಿಗೆ ಕೇಳಿಸಿ ಬರಹ ಸಾರ್ಥಕತೆ ಪಡೆದಿದೆ. ಹಲವರಿಗೆ ಹಿತವಾದರೆ ಕೆಲವರಿಗೆ ಹಿತವೆನಿಸಿಲ್ಲ, ಎಲ್ಲರಿಗೂ ಎಲ್ಲವೂ ಹಿತವಾಗ ಬೇಕಿಲ್ಲ. ಲೋಕೋ ಭಿನ್ನ ರುಚಿ:| ಎರಡು ದಿನಗಳಲ್ಲಿ ಒಟ್ಟು ಪ್ರತಿಕ್ರಿಯೆಗಳು ಮೂವತ್ತಾದರೂ ಅದರಲ್ಲಿ ನನ್ನ ಉತ್ತರ ರೂಪದ ಪ್ರತಿಕ್ರಿಯೆ ಬಿಟ್ಟರೂ ಪ್ರತಿಕ್ರಿಯೆಗಳ ಸಂಖ್ಯೆ ಚೆನ್ನಾಗಿದೆ. ಯಾರು ಕೇಳಲಿ ಎಂದು ನಾನು ಹಾಡುವುದಿಲ್ಲ , ಎಂದು ನಾನು ಹೇಳುವುದಿಲ್ಲ. ಓದುಗರ ಸಂಖ್ಯೆ ಹೆಚ್ಚಿದಷ್ಟೂ ,ಪ್ರತಿಕ್ರಿಯೆಗಳು ಇದ್ದಷ್ಟೂ ಲೇಖಕನಿಗೆ ಸ್ಪೂರ್ಥಿ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಬರಹಗಾರನೇನೂ ಸನ್ಯಾಸಿಯಲ್ಲ. ಸಂತೋಷಕ್ಕಾಗಿಯೇ ತಾನೇ ಎಲ್ಲಾ ಪ್ರಯತ್ನಗಳೂ. ಓದಿದ/ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏಳು ಗಂಟೆ ಕೇಳಿ ಎಚ್ಚರವಾಯಿತು.
ನೋಡಿದರೆ ಯಾವುದೂ ಸತ್ಯವಲ್ಲ,
ಎಲ್ಲವೂ ದುಃಖ,
ವಿತ್ತ ಚಿತ್ತ ಜೀವಿತ ಎಲ್ಲಾ ಕ್ಷಣಿಕ,
ಮರಣ ಹತ್ತಿರದಲ್ಲಿದೆ, ಎಚ್ಚರ, ಎಚ್ಚರ...,
ಎಚ್ಚರವಿದ್ದು ಏನು ಪ್ರಯೋಜನ?ಏನು ಮಾಡುವುದು? ದೇವರ ಧ್ಯಾನ? ಅದು ಸತ್ಯವೋ? ಕ್ಷಣಿಕವಲ್ಲವೋ? ಮರಣ ದೂರವಾಗುವುದೋ?
ಪುನ: ಹೊದ್ದು ಮಲಗಿದೆ.
ಎಲ್ಲಾ ಕ್ಶಣಿಕ ಸುಖಗಳೊಂದಿಗೆ ೮ ಗಂಟೆಗೆ ಹಾಯಾಗಿ ಎದ್ದೆ :)

-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಶ್ಲೋಕಗಳೂ ಬಹಳ ಋಣಾತ್ಮಕವಾದುವು ಹಾಗೂ ಜೀವನದ ಹಾದಿಯಲ್ಲಿ ಯಾವುದೇ ನೆರಳು ನೀಡದ ಮುಳ್ಳಿನ ಪೊದೆಗಳಂತಿವೆ.. ಪತ್ನಿ ಶಾಶ್ವತವಲ್ಲ ಎಂದರೆ ಸಹಿಸಬಹುದಿತ್ತು ಆದ್ರೆ ದುಃಖ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಅದು ಆಕ್ಷೇಪಣೀಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.