ಕೃಷ್ಣನ ಕೊಳಲಿನಾ ಕರೆ

0

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು ವೀಣೆಯನ್ನು ನುಡಿಸುತ್ತ, ರಾಮನ ಮುಂದೆ ರಾಮಾಯಣವನ್ನು ಹಾಡಿದರೆಂಬ ಸಂಗತಿ ರಾಮಾಯಣದ ಉತ್ತರಕಾಂಡದಲ್ಲಿದೆ. ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ. ಏಕೆಂದರೆ, ವಾಲ್ಮೀಕಿರಾಮಾಯಣದ ಪ್ರಕ್ಷಿಪ್ತಭಾಗಗಳೂ (ಬಾಲಕಾಂಡ, ಉತ್ತರಕಾಂಡ) ಸುಮಾರು ಕ್ರಿಸ್ತನ ಕಾಲದ ಆಸುಪಾಸಿನವು ಎಂಬುದು ಗೊತ್ತಿರುವ ವಿಚಾರವೇ.

ಆದರೆ ಪುರಾಣ-ಪ್ರಸಿದ್ಧರಲ್ಲಿ ಸಂಗೀತಗಾರನೆಂದು ಜನಜನಿತವಾಗಿರುವುದು ಕೃಷ್ಣ. ಕೃಷ್ಣನ ಕೊಳಲು ವಾದನದ ಕೌಶಲ ಮಹಾಭಾರತದಲ್ಲಿ (ನನಗೆ ತಿಳಿದ ಮಟ್ಟ್ಟಿಗೆ) ಹೆಚ್ಚಾಗಿಲ್ಲವಾದರೂ, ನಂತರ ಬಂದ ಭಾಗವತ - ಗೀತಗೋವಿಂದದಿಂದ ಹಿಡಿದು ಕಳೆದ ಶತಮಾನದ ಗೋಕುಲನಿರ್ಗಮನ (ಪುತಿನ) ದ ವರೆಗೂ ಹಲವಾರು ಕವಿಗಳು ಕೃಷ್ಣನ ಕೊಳಲಿನ ಕರೆಯನ್ನು ಬಣ್ಣಿಸಿದ್ದಾರೆ.

ಹರಿದಾಸರಿಗೆ ಕೃಷ್ಣ ಪರಮದೈವವಲ್ಲವೇ ? ವ್ಯಾಸರಾಯರು ಕೊಳಲನೂದುವ ಚದುರನಾರೇ ಪೇಳಮ್ಮ ಎನ್ನುವ ಹಾಡಿನಲ್ಲಿ ಹೇಗೆ ಕೃಷ್ಣನ ಕೊಳಲನ್ನು ಕೇಳುತ್ತ ಪ್ರಪಂಚವೆಲ್ಲ ಸ್ತಭ್ದವಾಯಿತು ಎನ್ನುವುದನ್ನು ಹೀಗೆ ಚಿತ್ರಿಸುತ್ತಾರೆ.

ಮೇವ ಮರೆತವು ಗೋವುಗಳೆಲ್ಲ

ಸಾವಧಾನದಿ ಹರಿದಳೆ ಯಮುನೆ

ಆವಕಾಯುತಲೆ ಪಶುಗಳ ಮರೆತರು

ಸಾವಧಾನದಲಿ ಬೃಂದಾವನದಿ || ಕೊಳಲನೂದುವ ಚದುರನಾರೇ ಪೇಳಮ್ಮ||

ಇನ್ನು ಇವರ ಶಿಷ್ಯರಾದ ಪುರಂದರ ದಾಸರನ್ನಂತೂ ಕೇಳಲೇ ಬೇಕಿಲ್ಲ. ಅವರೇ ಕರ್ನಾಟಕಸಂಗೀತ ಪಿತಾಮಹರಲ್ಲವೇ? ಹಾಗಾಗಿ ಕೃಷ್ಣನ ಕೊಳಲಿನ ವಾದನದ ವಿಧಾನವನ್ನು ತುತ್ತುರುತೂರೆಂದು ಬತ್ತಿಸ ರಾಗಗಳನ್ನು ಚಿತ್ತಜ ಜನಕ ತನ್ನ ಕೊಳಲಲ್ಲೂದಿದನು ಎನ್ನುವ ಹಾಡಿನಲ್ಲಿ, ಅವನ ಕೊಳಲ ನಾದದ ವಿಶೇಷತೆಯನ್ನೂ , ಅವನು ನುಡಿಸುವ ಸೊಬಗನ್ನೂ, ಅವನ ಪ್ರೀತಿಯ ರಾಗಗಳನ್ನೂ ಹೆಸರಿಸುತ್ತಾ ವರ್ಣಿಸುತ್ತಾರೆ.

ಇನ್ನೂ ಹೆಚ್ಚಿನ ವಿವರ ಇದ್ದರೆ ಚೆನ್ನಾಗಿರುತ್ತೆ ಅಲ್ಲವೇ ? ಹಾಗಾದರೆ ಈ ಕೆಳಗಿನ ಕೊಂಡಿ ನಿಮಗ ಖಂಡಿತ ಇಷ್ಟವಾಗುತ್ತೆ :) ಅಂತ ನನಗೆ ಗೊತ್ತು.

ಹಾಗಾದ್ರೆ ತಡ ಯಾಕೆ? ಕ್ಲಿಕ್ಕಿಸಿ!

ತುತ್ತುರು ತೂರೆಂದು ಬತ್ತಿಸರಾಗಗಳನ್ನು .......

-ಹಂಸಾನಂದಿ

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂಸಾನಂದಿಯವರೇ,

ನಿಮ್ಮ ಲೇಖನ ಮಿಕ್ಕ ಲೇಖನಗಳಂತೆ, ಇದೂ ಬಹು ಸೊಗಸಾಗಿದೆ... :)

"ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ."

ಸಾಮ ವೇದದಲ್ಲಿ ಸಂಗೀತ, ಸಾಹಿತ್ಯದ ಬಗ್ಗೆ ವ್ಯಕ್ತವಾಗಿದೆ ಅಲ್ಲವೇ?? ಇದು ರಾಮಾಯಣಕ್ಕೂ ಮೊದಲಾಯಿತಲ್ಲವೇ???

ಇದು ಹಾಗಿರಲಿ, ನಾನು ’ಕೃಷ್ಣನ ಕೊಳಲಿನಾ ಕರೆ’ ಎಂಬುದನ್ನು ನೋಡಿ, ನೀವು ’ಸುಬ್ಬಾಶಾಸ್ತ್ರಿ’ ಚಿತ್ರದಲ್ಲಿ ಇರುವ ಈ ಹಾಡಿನ ಬಗ್ಗೆ ಬರೆದಿದ್ದೀರ ಎಂದು ಕೊಂಡೆ.
ಈ ಹಾಡಿನ ಕೊಂಡಿ ಸಿಗುವುದಾ? ನನ್ನ ನೆಚ್ಚಿನ ಹಾಡದು... :)

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು 'ವಾದ್ಯಸಂಗೀತ' ಆಗಬೇಕಿತ್ತು. ತಪ್ಪು ತಿದ್ದುತ್ತೇನೆ.

ಸಾಮವೇದದಲ್ಲಿ ವಾದ್ಯಗಳ ಪ್ರಸ್ತಾಪ ಇರುವ ಮಟ್ಟಿಗೆ ಕಾಣೆ.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಅವರೆ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಕೃಷ್ಣನಾ ಕೊಳಲಿನಾ ಕರೆ ಎನ್ನುವ ಹಾಡನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ. ಅದರ ಕವಿಯನ್ನು ಹೇಳಿದ್ದೇನೆ. ಇದು ಪುತಿನ ಅವರ ಗೋಕುಲನಿರ್ಗಮನ ದಲ್ಲಿ ಬರುವ ಒಂದು ಗೀತೆ.

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ,

ಹಂಸಾ ನನ್ದಿಯವ್ರೇ ...

ನಿಮ್ಮ ಬರಹಕ್ಕೆ ವನ್ದನೆಗಳು. ನನಗೆ ಸಂಗೀತ ಜ್ಞಾನ ವಿಲ್ಲ ನಿಮ್ಮ ಲೇಖನಗಳಿಂದ ಅಲ್ಪ ಸ್ವಲ್ಪ ಅರಿವು ( ಕೇಳುವ ) ಬರುತ್ತಿದೆ.

ಈ ಕೊಳಲಿನ ಕರೆ ಯಾರನ್ನು ಸೆರೆ ಹಿಡಿಯಲ್ಲ ಹೇಳಿ?

ಹಿಂದೊಮ್ಮೆ ನನಗೆ ರುದ್ರ ತಾಂಡವ ದ ಬಗ್ಗೆ ಓದುವ ಆಸಕ್ತಿ ಬಂದಿತ್ತು. ( ನಾನು ಓದ್ಲೂ ಇಲ್ಲ, ಓದಿದ್ದರೆ ಅರ್ಥ (!?) ಆಗ್ತಾನೂ ಇರ್ಲಿಲ್ಲ ಬಿಡಿ )
ದಯವಿಟ್ಟು ಮುಂದೆ ಯಾವಾಗಲಾದರೂ ಇದರ ಬಗ್ಗೆ , ನಮಗೆ ಅರ್ಥವಾಗುವ ರೀತಿಯಲ್ಲಿ, ಬರೆಯಿರಿ.

ನಾಟ್ಯ ಮತ್ತು ಸಂಗೀತ ಬೇರ್ಪಡಿಸಲಾಗದಷ್ಟು ಹತ್ತಿರ ಅಂದುಕೊಂಡು ಹೀಗೆ ಕೇಳುತ್ತಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.