ಅಡಿಗೆಯಲ್ಲೇಕೆ ಕೀಳರಿಮೆ?

3.833335

ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಸಂಪದದಲ್ಲಿ ಇವತ್ತು ನೋಡಿದ ಸುಪರ್ ಮಾರ್ಕೆಟ್ ಬರಹ ಮತ್ತ ಗೋಡಂಬಿ ಪಲ್ಯ ದ ಬರಹದಿಂದ ತಕ್ಷಣ ಬರೆಯೋಣ ಅನ್ನಿಸ್ತು.

ನಮಗ್ಯಾಕೆ ನಮ್ಮ ಅಡಿಗೆ ಊಟದ ಬಗ್ಗೆ ಕೀಳರಿಮೆ ಇರ್ಬೇಕು? ಬೆಂಗಳೂರಲ್ಲಿ, ಮೈಸೂರಲ್ಲಿ ಮಾಡುವ ಎಂಟಿಆರ್, ಆರ್ಕೇ ಮೊದ್ಲಾದವರ ಇನ್ಸ್ಟಾಂಟ್ ಪ್ರಾಡಕ್ಟ್ ಗಳನ್ನ ನೋಡಿ - ಅದು ಯಾಕೆ ’ರವಾ ಇಡ್ಲಿ ಮಿಕ್ಸ್’ ’ರವಾ ದೋಸಾ ಮಿಕ್ಸ್’ ’ರಸಂ ಪೌಡರ್’ ’ಇನ್ಸ್ಟಾಂಟ್ ಉಪ್ಮ’  ’ಮುರುಕು’ ಆಗಿರ್ಬೇಕು? ರವೆ ಇಡ್ಲಿ, ರವೆ ದೋಸೆ, ಸಾರಿನ ಪುಡಿ,  ಹುಳೀ ಪುಡಿ, ಚಕ್ಲಿ ಅಂತ ಯಾಕಿರ್ಬಾರ್ದು? ಒಂದು ಕಡೆ ಅಂತೂ  ಕೋಡುಬಳೆಗೆ ’spicy rice rings' ಅಂತಲೋ ಏನೋ ಬರೆದಿದ್ದನ್ನ ನೋಡಿದ್ದೆ! ಗುಜರಾತಿಗಳು ಅವರ ಡೋಕ್ಲಾನ ಮಾರೋವಾಗ ಡೋಕ್ಲಾ ಅಂತ್ಲೇ ಬರೀತಾರೆ. ಮಲಯಾಳಿಗಳು ಅವರ ಪುಟ್ಟು ನ ಪುಟ್ಟು ಅಂತ್ಲೇ ಕರೀತಾರೆ. ಅಂತಾದ್ರಲ್ಲಿ ನಮ್ಮ ಗೊಜ್ಜು, ಪಲ್ಯ, ಒಬ್ಬಟ್ಟು, ಕೋಡ್ಬಳೇನಾ ಹಾಗೇ ಬರೆಯೋಕೆ, ಹಾಗೇ ಪ್ರಚಾರ ಮಾಡೋಕೆ ನಮಗ್ಯಾಕೆ ಆಗ್ಬಾರ್ದು?

ಬೆಂಗಳೂರಲ್ಲಿ ಎಷ್ಟೋ ಕಡೆ ಮುದ್ದೆ ಊಟ ಸಿಗೋ ಜಾಗಗಳಲ್ಲಿ 'Ragi Balls Available' ಅಂತ ಬರೆದಿರತ್ತೆ. ಇದಕ್ಕೂ ಅಪದ್ಧ ಬೇಕಾ? ಮುದ್ದೆಯ ಸವಿ ಗೊತ್ತಿದ್ದು ಅದನ್ನ ತಿನ್ನಕ್ಕೆ ಬರೋವ್ರಿಗೆ ’ರಾಗಿ ಮುದ್ದೆ’ ಅಂತ (ಲಿಪಿ ಯಾವುದೇ ಇರಲಿ) ಬರೆದ್ರೆ ಸಾಲೋದಿಲ್ವಾ?

ಇನ್ನು ಹೊಸ ರುಚಿ ವಿಭಾಗ - ಟಿವಿಯಲ್ಲಿ ತೋರಿಸೋ ಅಡಿಗೆಗಳು, ಕೆಲವು ಮಟ್ಟಿಗೆ ಪ್ರಿಂಟ್ ಮೀಡಿಯಾದಲ್ಲೂ - ಅದನ್ನ ಕೇಳ್ಲೇ ಬೇಡಿ. ಅಡುಗೆ ಮಾಡಿ ತೋರಿಸ್ತಿರೋದು ಕನ್ನಡ ಕಾರ್ಯಕ್ರಮ - ಆದ್ರೆ ಬೇಕಾಗೋ ಪದಾರ್ಥಗಳು ಮಾತ್ರ "ಒಗ್ಗರಣೆಗೆ ಒಂದು ಚಮಚ ಜೀರಾ, ಒಂದು ಚಿಕ್ಕ ಸ್ಪೂನ್ ಹಲ್ದೀ ಮತ್ತು ಎಂಟು ಗ್ರೀನ್ ಚಿಲ್ಲೀಸ್" - ಅದ್ಯಾಕೋ? ಮೆಣ್ಸಿನಕಾಯಿ, ಜೀರಿಗೆ, ಅರಿಶಿನ ಅಂದ್ರೆ ನಾಲ್ಗೆ ಏನಾದ್ರೂ ಸುಟ್ಟು ಹೋಗತ್ತೋ, ಅಥವಾ ರುಚಿ ಕಡಿಮೆಯಾಗತ್ತೋ?

ಊಟದಲ್ಲೂ ನಮ್ಮತನಾನ ನಾವು ಕಳ್ಕೋಬೇಕಾ? ಇನ್ನೂ ಉದಯ ಟೀವಿ ಸೀರಿಯಲ್ ಸ್ಟೈಲಲ್ಲಿ ಹೇಳ್ಬೇಕಿದ್ರೆ "ಇದು ನಮಗೆ ಬೇಕಿತ್ತಾ?" - (ಇದೂ ತಮಿಳಿನ ’ಇದು ಉನಕ್ಕ್ ತೇವೈಯಾ?’ ಅನ್ನೋ ಮಾತಿನ ನೇರ ಅನುವಾದ ಅನ್ನಿ!). 

ಇನ್ನು ಕನ್ನಡಿಗರ ಅಡುಗೆಯನ್ನ ಯಾರು ಕಾಪಾಡ್ತಾರೋ ಗೊತ್ತಿಲ್ಲ ಬಿಡಿ.

-ಹಂಸಾನಂದಿ

 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರಿಯಾಗಿ ಹೇಳಿದಿರಿ ಸಾರ್. ಅಷ್ಟೇ ಅಲ್ಲ, ನಮ್ಮ ಮದುವೆಗಳಲ್ಲಿ ಸಮಾರಂಭಗಳಲ್ಲಿ ನಾರ್ತ್ ಇಂಡಿಯನ್ ಅದದೇ ರುಚಿಯ ಅಡಿಗೆಗಳನ್ನು ಮಾಡಿಸೋದು ನಾಮ್ಮ ಶೋಕಿಯಾಗಿಬಿಟ್ಟಿದೆ. ನಮ್ಮ ಅಡಿಗೆಗಳಿಗೆ ನಾವೇ ರಸಾಭಾಸ ಮಾಡುತ್ತೇವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ನೋಡಿ http://ismail.in/node/8
ಹೆಚ್ಚು ಕಡಿಮೆ ಇದೇ ಧಾಟಿಯಲ್ಲಿ ಇದೆ (ಮೊದಲ ಭಾಗ). ಆದರೆ ಆ ಲೇಖನದ theme ಬೇರೆ.
ಕನ್ನಡದ್ದೇ ಅಡುಗೆಗಳ ವಿಶಯದಲ್ಲಂತೂ ಪರಭಾಶಾ ಶಬ್ಧಗಳ ತಾಪತ್ರಯ ಇಲ್ಲವಲ್ಲ! ಕನ್ನಡದ್ದೇ ಶಬ್ದಗಳನ್ನೇ ಬಳಸುತ್ತೇವೆ ನಾವೆಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂಗೂ ಹಿಂಗೇ ಅನ್ಸಿತ್ತು, ವಡೆಗೆ ವಡಾ, ದೋಸೆಗೆ ದೋಸಾ.. ಸಧ್ಯ ಇಡ್ಲಿಗೆ ಇಡ್ಲಾ ಅಂತ ಕರೀಲಿಲ್ವಲ್ಲ!
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸಧ್ಯ ಇಡ್ಲಿಗೆ ಇಡ್ಲಾ ಅಂತ ಕರೀಲಿಲ್ವಲ್ಲ!>>
ROFL .....

ಎಲ್ಲವೂ ಕಲಸುಮೇಲೋಗರ ಕಣ್ರೀ ಈಗ .... ಈಗ ಜನಕ್ಕೆ ಆ ಭಾಷೆನೆ ತಿಳಿಯೋದು ...

ಮೊನ್ನೆ ದೇವರಾಯನ ದುರ್ಗ ( ತುಮಕೂರು)ದಿಂದ ವಾಪಸ್ ಬರ್ಬೆಕಾದ್ರೆ ಕಾಮತ್ನಲ್ಲಿ ಊಟಕ್ಕೆ ಹೋದೆವು ... ಅವ್ನು ಸ್ಟೈಲಾಗಿ 'ಸಾರ್ ಈಗ ಸಿಗೊದು ಬರೀ ಲಸ್ಸಿ ಮಾತ್ರ, ಬಟ್ಟರ್ ಮಿಲ್ಕ್ ಖಾಲಿಯಾಗಿದೆ ಅಂದ' ... ಇದು ನೋಡಿ ನಮ್ಮ ಹಣೆಬರಹ ...ನಮ್ಮಲ್ಲೆ ನಾವ್ ತಿನ್ನೊ ಊಟ ಸಿಗೊಲ್ಲಾ .....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸಧ್ಯ ಇಡ್ಲಿಗೆ ಇಡ್ಲಾ ಅಂತ ಕರೀಲಿಲ್ವಲ್ಲ!
:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಬರಹ.

ನಾನಂತೂ ಸಾಕಷ್ಟು ದೇಸೀ ಪದಗಳನ್ನೇ ಬಳಸಲು ಪ್ರಯತ್ನಿಸಿದ್ದೇನೆ.

ಈ ವಿಶಯ ಎಲ್ಲರ ತಲೆಗೆ ಹೋಗುವುದಿಲ್ಲ. ನನ್ನ ಸ್ನೇಹಿತರಿಗೇ ಇದೊಂದು ತುಂಬಾ ಚಿಕ್ಕ ವಿಶಯ. ನನ್ನ ಜೊತೆ ದೋಸೆ ಅಂತಾರೆ.. ಪಕ್ಕದವನ್ ಹತ್ರ ದೋಸಾ ಅಂತಾರೆ. ಇಬ್ರೂ ಜೊತೆಗಿದ್ದಾಗ ಅವರ ಬಾಯಿಂದ ಬರೋದು ದೋಸಾ ಅಂತಾನೆ. :)

ಇಲ್ಲಿ ನಮ್ಮ ರೊಟ್ಟಿ ( ಅಕ್ಷರಶ: ನಮ್ಮ ಜೋಳದ ರೊಟ್ಟಿ) ಹೋಗಿ ರೋಟಿ ಆಗಿದೆ .
ಚಪಾತಿ ( ಗಾತ್ರ ಸಣ್ಣದ್ದು ) ಪುಲ್ಕಾ ಆಗಿದೆ. ( ಬೇಯಿಸುವುದರಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು?)
ಮಸಾಲೆ ದೋಸೆಯ ಒಂದು ವರ್ಶನ್ನು ತಂಜಾವೂರು ದೋಸಾ ಆಗಿ ನಮ್ಮ ಮಸಾಲೆ ದೋಸೆಯನ್ನು ಮರೆ ಮಾಡ್ತಾ ಇದೆ.
ಈರುಳ್ಳಿ ದೋಸೆ ಹೋಗಿ ಉತ್ತಪ್ಪ ಆಗಿದೆ. ( ಇದರಲ್ಲಿ ಬರೋ ವೆರೈಟಿ ಕೇಳ್ಬೇಕು ನೀವು... ಮಜಾ ಬರುತ್ತೆ!)

ರಾಗಿ ಮುದ್ದೆ ರಾಗಿ ಬಾಲ್ ಆಗಿದೆ.

ಬರುದ್ರೆ ಉದ್ದುಕ್ಕೆ ಹೋಗುತ್ತೇನೋ? ಗೊತ್ತಿಲ್ಲ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಪ್ಪ :
ನಮ್ಮ ಕಡೇ ಉತ್ತಪ್ಪಾ ಅಂದರ ಉಳ್ಳಾಗಡ್ಡಿ ಹಾಕಲಾರದನ ಮಾಡತಾರ... ಉತ್ತಪ್ಪಾನ ಬ್ಯಾರೇ.. ಉಳ್ಳಾಗಡ್ಡೀ ದ್ವಾಶೀನ ಬ್ಯಾರೆ...
ಬೆಳಗಾಂ ಕಡೆ ಉತ್ತಪ್ಪಾ ತಿನಬೇಕು.. ಮಸ್ತ್ ಮಾಡತಾರ ಅಲ್ಲಿ ಮಂದಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರಿನಲ್ಲಿ ರಾತ್ರಿ ಮಲ್ಲೇಶ್ವರಂ, ಮೆಜೆಸ್ಟಿಕ್, ಬಸವನಗುಡಿ, ರಾಜಾಜಿನಗರ ಪ್ರದೇಶದಲ್ಲಿ ಬಿಟ್ಟರೆ ಬೆರೆಲ್ಲೂ ದಕ್ಷಿಣ ಊಟ ಸಿಗಲ್ವೆನೋ? ಬೇರೆ ಕಡೆ ವಿಚಾರಿಸಿದರೆ "ದಕ್ಷಿಣ ಊಟದಿಂದ ರಾತ್ರಿ ನಮಗೆ ಅಷ್ಟೊಂದು ಲಾಭ ಬರಲ್ಲ" ಅನ್ನುವುದು ಹೋಟೆಲ್ ಮಾಲಿಕರ ವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈಟ್ ರೈಸ್,ಕರ್ಡ್ಸ್,ಕರ್ಡ್ ರೈಸ್....ಅನ್ನ,ಮೊಸರು,ಮೊಸರನ್ನ ಅಂದರೆ ಬೆಲೆ ಇಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿಗರಿಗೇ ಕನ್ನಡ , ಕನ್ನಡತನದ ಬಗ್ಗೆ ಕೀಳರಿಮೆ ಇದೆ .
ಹೋಟಲುಗಳಲ್ಲಿ ಯಾವಾಗ್ಲೋ ಸಕ್ಕರೆ , ಉಪ್ಪು ಶುಗರ್ರು , ಸಾಲ್ಟು ಆಗಿವೆ .
ಚಿತ್ರಾನ್ನಕ್ಕೆ ಕಲರ್ಡ್ ರೈಸ್ , ಯೆಲ್ಲೋ ರೈಸ್ ಅಂತ ಕೇಳಿದ್ದೀನಿ.
ಕನ್ನಡದ ಸೊಗಸಾದ ಮೊಸರುವಡೆ ಹೆಸರು ಕೈಬಿಟ್ಟು ದಹೀವಡಾ , ತೈರೊಡೆ ತಿನ್ತಾ ಇದ್ದೀವಿ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ದೈನಂದಿನ ಸಂಭಾಷಣೆಗಳಲ್ಲಿ ಆಂಗ್ಲ ಭಾಷೆಯ ಪದಗಳ ಉಪಯೋಗ ಹಾಸು ಹೊಕ್ಕಾಗಿ ಬಿಟ್ಟಿದೆ.
ಇಲ್ಲೇ ಸಂಪದದಲ್ಲೇ...ಎಷ್ಟೊಂದು ಮಂದಿ..."ಸೂಪರ್...", "ಥ್ಯಾಂಕ್ಸ್" ಎನ್ನುವ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ನಾವು ನೋಡುತ್ತಿಲ್ಲವೇ?
ಬೇರೆ ಭಾಷೆಯ ಪದಗಳನ್ನು ಬಳಸುವುದು ತಪ್ಪಲ್ಲ.
ಆದರೆ, ಅಲ್ಲಿ, ಅವುಗಳ ಬದಲಿಗೆ ಕನ್ನಡ ಶಬ್ದಗಳನ್ನು ಉಪಯೋಗಿಸದೇ ಇರುವುದು ಸಮಯೋಚಿತ ಆಗಿರಬೇಕು ಅಷ್ಟೆ.
ಸಂಪದದಲ್ಲೇ ಒಮ್ಮೆ "Love Failure Caseಗಳು" ಎನ್ನುವ ಕವನ ಪ್ರಕಟವಾದಾಗ, ಪ್ರತಿಕ್ರಿಯೆ ನೀಡಿದ ನಾನು, "ಇಲ್ಲಿ ಆಂಗ್ಲ ಭಾಷೆಯ ಅಗತ್ಯ ಇತ್ತಾ" ಅಂತ ಕೇಳಿದಾಗ, ಅಲ್ಪ ಸ್ವಲ್ಪವಾಗಿ ನಮ್ಮ ದಿನಬಳಕೆಯ ಸಂಭಾಷಣೆಯಲ್ಲಿ ಆಂಗ್ಲ ಶಬ್ದಗಳ ಪ್ರಯೋಗ ತಪ್ಪಲ್ಲ ಅನ್ನುವ ಮರುತ್ತರ ಸಿಕ್ಕಿತ್ತು, ನನಗೆ ಕವನ ಬರೆದವರಿಂದ.

ಇನ್ನೊಂದು ಮಾತು:
ನಮ್ಮ ಭಾಷೆಗಳಲ್ಲಿನ ಶಬ್ದಗಳು ಆಂಗ್ಲೀಕರಣಗೊಂಡು ಮರಳಿದಾಗ, ರೂಪ ಪರಿವರ್ತನೆಗೊಂಡಿರುವ ಉದಾಹರಣೆ ಇಲ್ಲಿದೆ.
ಸಿಖ್ ಸಮುದಾಯದವರು ಗುರುದ್ವಾರಗಳಲ್ಲಿ "ಕರ ಸೇವೆ" ಮಾಡುವ ಕ್ರಮ ಇದೆ.
ಅದು ಆಂಗ್ಲೀಕರಣಗೊಂಡು ಈಗ "ಕಾರ್ ಸೇವಾ" ಆಗಿದೆ. ಕರ ಸೇವಕರು, ಕಾರ್ ಸೇವಕ್ಸ್ ಆಗಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.