ಕನ್ನಡ ಮತ್ತೆ ಸಂಸ್ಕೃತದ ನಡುವಿನ ಸಂಬಂಧವೇನು?

4.666665

ಇತ್ತೀಚೆಗೆ ಗೆಳೆಯರೊಬ್ಬರು ಒಂದು ಪ್ರಶ್ನೆ ಕೇಳಿದರು:

"ಪದ ರಚನೆ, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಏಕವಚನ - ಬಹುವಚನ, ಹೀಗೆ ಗಮನಿಸುತ್ತಾ ಹೋದರೆ ನಾವು ಭಾಷೆಯಲ್ಲಿ ಅನುಸರಿಸುವ ಹಲವು ಮಗ್ಗಲುಗಳಲ್ಲಿ ಕನ್ನಡ - ಹಿಂದಿ ಭಾಷೆಗಳಲ್ಲಿ ಅನೇಕ ಹೋಲಿಕೆಗಳನ್ನು ಕಂಡುಕೊಳ್ಳಬಹುದು. ಅದರಿಂದ ಕನ್ನಡ ಹಿಂದಿ , ಗುಜರಾತಿ ಅಥವಾ ಇನ್ನಾವುದೇ ಉತ್ತರ ಬಾರತೀಯ ಭಾಷೆಯನ್ನೂ ಕಲಿಯಲು ಸಾಕಷ್ಟು ಅನುಕೂಲವಾಗುತ್ತದೆ. ಹಾಗೇ ತೆಲುಗು, ತಮಿಳು ಅಥವಾ ಮಲಯಾಳಂ ಭಾಷೆಯಲ್ಲಿಯೂ ಸಹ ಅದೇ ರೀತಿ ಭಾವನೆ ಬರಬಹುದು. ಅಂದರೆ, ಭಾರತದ ಎಲ್ಲಾ ಭಾಷೆಗಳೆಲ್ಲಾ ಒಂದು ರೀತಿಯ ಸಾಮಾನ್ಯ ನಿಯಮಗಳನ್ನು ಅನುಸರಿಸುವುದು ಕಂಡು ಬರುತ್ತವೆಯಾ? ಆದೇ ರೀತಿ ಸಂಸ್ಕೃತ ಮೂಲದ ಭಾಷೆಗಳಿಗೂ (ಮರಾಠಿ, ಗುಜರಾತಿ,ಹಿಂದಿ ಇತ್ಯಾದಿ), ದ್ರಾವಿಡ ಮೂಲದ ತೆಲುಗು, ತಮಿಳು, ಕನ್ನಡ, ಮಲಯಾಳಂಗೆ ಇರುವ ವ್ಯತ್ಯಾಸವನ್ನು ತಿಳಿಸುವುದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತೆ ಅಂತಲೂ ಓದಿದ್ದೇನೆ. ಇದು ಹೇಗೆ?"

ನನ್ನ ಗೆಳೆಯರಿಗೆ ನಾನು ಕೊಟ್ಟ ಇಮೆಯ್ಲ್ ಗಳಲ್ಲಿ ಕೊಟ್ಟ ಉತ್ತರವನ್ನೇ ಇಲ್ಲಿ ಹಾಕುತ್ತಿದ್ದೇನೆ - ಏನಿಲ್ಲದಿದ್ದರೂ ನನ್ನ ನೆನಪಿನಲ್ಲಿ ಉಳಿಯಲಿ ಅಂತ ಆದ್ರೂ. ಎಷ್ಟೇ ಅಂದ್ರೂ ಒಂದು ಬ್ಲಾಗಿನ ಮೂಲ ಉದ್ದೇಶ ಅದೇ ತಾನೇ!

ಈ ಬಗ್ಗೆ ದೊಡ್ಡ ದೊಡ್ಡ ವಿದ್ವಾಂಸರ ಪುಸ್ತಕಗಳು ಬೇಕಾದಷ್ಟಿವೆ. ಇದೊಂದು ನನ್ನ ಸಣ್ಣ ಇಣುಕು ನೋಟ ಅಷ್ಟೇ
.


ಸಂಧಿ:

ಸಂಧಿಗಳಲ್ಲಿ ಕನ್ನಡಕ್ಕೂ ಸಂಸ್ಕೃತಕ್ಕೂ ವ್ಯತ್ಯಾಸಗಳಿವೆ. ಕನ್ನಡದಲ್ಲಿ ಸಮಸಂಸ್ಕೃತ ಪದಗಳಲ್ಲಿ ಬರುವ ಸವರ್ಣದೀರ್ಘ, ಗುಣ ಮೊದಲಾದ ಸಂಧಿಗಳು ನಿಜವಾಗಿ ಕನ್ನಡ ಸಂಧಿಗಳಲ್ಲ. ಲೋಪ/ಆಗಮ/ಆದೇಶ ಮೊದಲಾದವು ಮಾತ್ರ ಕನ್ನಡ ಮೂಲದ ಸಂಧಿಗಳು. ಕನ್ನಡ ವ್ಯಾಕರಣ ವನ್ನು ಸಂಸ್ಕೃತ ವ್ಯಾಕರಣದ ಮೇಲೆ ವಿವರಿಸುವ ಪದ್ಧತಿ ಬೆಳೆದುಬಂದಿರುವುದರಿಂದ, ನಮಗೆ ಅವೂ ಎಲ್ಲವೂ ಕನ್ನಡವೆಂದೇ ಅನ್ನಿಸುತ್ತದೆ. ಸಂಧಿಗಳಲ್ಲಿ ಬರುವ ಎರಡೂ ಪದಗಳು ಸಂಸ್ಕೃತ ಮೂಲದವೇ, ಇಲ್ಲ ಅಚ್ಚಕನ್ನಡದವೇ ಅನ್ನುವುದನ್ನ ನೋಡಿದರೆ, ಅಲ್ಲಿ ಬರುವ ಸಂಧಿ ಯಾವುದೆಂದು ಸುಲಭವಾಗಿ ತಿಳಿಯಬಹುದು.

ವಿಭಕ್ತಿ:

ಇನ್ನು ವಿಭಕ್ತಿಗಳಿಗೆ ಬಂದರೆ: ಉ - ಅನ್ನು- ಇಂದ- ಗೆ - ದೆಸೆಯಿಂದ- ಅ - ಮತ್ತು ಅಲ್ಲಿ ಎಂಬ ಏಳು ವಿಭಕ್ತಿಗಳನ್ನು ಸಂಸ್ಕೃತದ ವಿಭಕ್ತಿಗಳಂತೆಯೆ ವಿವರಿಸುವುದು ರೂಢಿ.

ಆದರೆ ರಾಮನು ಕಾಡಿಗೆ ಹೋದನು ಅನ್ನುವುದಕ್ಕಿಂತ ರಾಮ ಕಾಡಿಗೆ ಹೋದನು ಅನ್ನುವುದೇ ಕನ್ನಡದ ನೆಲೆಯಿಂದ ಸರಿ. ಅಂದರೆ ಪ್ರಥಮಾ ವಿಭಕ್ತಿಯೂ, ನಾಮಪದವೂ ಕನ್ನಡದಲ್ಲಿ ಒಂದೇನೇ. ಆದರೆ ಸಂಸ್ಕೃತದಲ್ಲಿ ರಾಮ ಅನ್ನುವುದು ಪದವಾದರೆ, ರಾಮಃ ಅನ್ನುವುದು ಪ್ರಥಮಾ ವಿಭಕ್ತಿ.

ಕನ್ನಡದಲ್ಲಿ ತೃತೀಯಾ ಮತ್ತೆ ಪಂಚಮಿ ಅನ್ನುವ ಎರಡು ಬೇರೆ ವಿಭಕ್ತಿಗಳು ನಿಜವಾಗಿ ಇಲ್ಲ. ಪಂಚಮಿ ಅನ್ನುವ ವಿಭಕ್ತಿಗೆ ಅದಕ್ಕೇ ’ದೆಸೆ’ಯಿಂದ ಅನ್ನುವ ಜೋಡಿ ಪ್ರತ್ಯಯಗಳನ್ನ ಸೇರಿಸಲಾಗಿದೆ ಅನ್ನುವುದು ಒಂದು ಅಭಿಪ್ರಾಯ. ಸಂಸ್ಕೃತದಲ್ಲಿ ’ಸಹ’ಯೋಗೇ ತೃತೀಯಾ ಅನ್ನುವ ಸೂತ್ರವಿದೆ. ಅಂದರೆ ಇನ್ನೊಂದರ ಜೊತೆಗೆ ಇದ್ದಾಗ ತೃತೀಯಾ ಬರುತ್ತೆ. ಉದಾ: ರಾಮೇಣ ಸಹ ಕೃಷ್ಣಃ ಆಗತಃ - ರಾಮ’ನಿಂದ’ ಜೊತೆ ಕೃಷ್ಣ ಬಂದ = ರಾಮನ ಜತೆ ಕೃಷ್ಣ ಬಂದ ಇದು ಕನ್ನಡದಲ್ಲಿ ನಿಜವಾಗಲೂ ಷಷ್ಟಿ ಅಲ್ಲವೆ?

ಇದಲ್ಲದಿದ್ದರೆ ತೃತೀಯೆ ಕರ್ಮಣೀ ಪ್ರಯೋಗದಲ್ಲಿ ಬರುತ್ತೆ - ’ರಾಮೇಣ ವನಂ ಗಮ್ಯತೇ’ - ರಾಮನಿಂದ ವನವನ್ನು ಹೊಗಲ್ಪಡುತ್ತದೆ -> ಇದರ ಅರ್ಥ ರಾಮನು ವನವನ್ನು ಹೊಗುತ್ತಾನೆ ಎಂದಲ್ಲವೇ?

ಪಂಚಮಿಯು ಸಂಸ್ಕೃತದಲ್ಲಿ ಭಯ, ನಷ್ಟ, ಕಾತರ ಇಂತಹವುಗಳ ಜೊತೆಯಲ್ಲಿ ಉಪಯೋಗಿಸಲ್ಪಡುತ್ತದೆ. ಕನ್ನಡದಲ್ಲಿ ಬಳಸುವ ’ಇಂದ’ ಬಹುಶಃ ಯಾವಾಗಲೂ ಈ ಪಂಚಮಿಯೇ ಎಂದಿದ್ದಾರೆ ಕೆಲವರು. ರಾಮನಿಂದ ನಾನು ಏಟು ತಿಂದೆ. ಕಳ್ಳನಿಂದ ದರೋಡೆ ಆಯಿತು. ಇತ್ಯಾದಿ. ಒಟ್ಟಿನಲ್ಲಿ ಕನ್ನಡದಲ್ಲಿ ತೃತೀಯ ಮತ್ತೆ ಪಂಚಮಿಗಳು ಒಂದರ ಜಾಗದಲ್ಲಿ ಒಂದು ಬರಬಹುದು.ಆದ್ದರಿಂದಲೇ ಕೆಲವು ವಿದ್ವಾಂಸರು ಕನ್ನಡದಲ್ಲಿ ನಿಜವಾಗಿ ತೃತೀಯೆ ಇಲ್ಲವೇ ಇಲ್ಲ, ಇರುವುದೇ ಬರೀ ಪಂಚಮಿ ಅಂದಿದ್ದಾರೆ. ಅದೇ ರೀತಿ ಇನ್ನೊಂದು ವಿಷಯ ಅಂದ್ರೆ ಕನ್ನಡದಲ್ಲಿ ತೃತೀಯ ಮತ್ತೆ ಸಪ್ತಮಿ ಕೂಡ ಒಂದರ ಜಾಗದಲ್ಲಿ ಒಂದು ಬರಬದುದು! ಮಣ್ಣಿಂದ ಮಾಡಿದ ಗೊಂಬೆ = ಮಣ್ಣಲ್ಲಿ ಮಾಡಿದ ಗೊಂಬೆ ; ಪುಸ್ತಕದಲ್ಲಿ ಓದಿ ಕಲಿತದ್ದು = ಪುಸ್ತಕದಿಂದ ಓದಿ ಕಲಿತದ್ದು. ಸೇಡಿಯಾಪು ಕೃಷ್ಣ ಭಟ್ಟರದೊಂದು ಒಳ್ಳೇ ಬರಹವಿದೆ ಈ ವಿಷಯದ ಬಗ್ಗೆ.

ಒಟ್ಟಲ್ಲಿ ಈ ಕಾರಣಗಳಿಂದ ಸಂಸ್ಕೃತದ ವಿಭಕ್ತಿಗಳೂ ಕನ್ನಡದ ಪ್ರತ್ಯಯಗಳೂ ಪೂರ್ತಿ ಒಂದೇನೇ ಎಂದು ಹೇಳುವುದು ಸಾಧ್ಯವಿಲ್ಲ.

ವಚನ:

ಮತ್ತೆ ವಚನಗಳು - ದ್ವಿವಚನ ಅನ್ನುವ ಕಾನ್ಸೆಪ್ಟ್ ಸಂಸ್ಕೃತದ್ದು ಮಾತ್ರ. ಇದು ಕನ್ನಡಕ್ಕೆ ಹೊಂದೊಲ್ಲ. ಹಸ್ತೌ = ಎರಡು ಕೈಗಳು ಅಂತಲೇ ಹೇಳಬೇಕಾಗುತ್ತೆ ನೋಡಿ. ಒಂದು ಮತ್ತೆ ಹಲವು ಅಂತ ಎರಡೇ ವಚನಗಳು ಕನ್ನಡದಲ್ಲಿ.

ಲಿಂಗ:

ಇನ್ನು ಲಿಂಗ. ಕನ್ನಡದ ಲಿಂಗ ವಿಭಾಗ ಬಹಳ ಸರಳ. ಗಂಡು - ಹೆಣ್ಣು - ಮತ್ತೆ ಮನುಷ್ಯನಲ್ಲದ/ಜೀವವಿಲ್ಲದ ಹೀಗೆ ಮೂರು ಭಾಗ ಮಾತ್ರ. ಅಲ್ಲದೆ ಒಂದು ಪದದ ಅರ್ಥದ ಮೇಲೆ ಲಿಂಗ ಯಾವುದು ಅನ್ನೋದು ನಿರ್ಧಾರ ಆಗುತ್ತೆ. ಆದರೆ ಸಂಸ್ಕೃತದಲ್ಲಿ ದಾರಾ = ಹೆಂಡತಿ ಅನ್ನುವುದು ಪುಲ್ಲಿಂಗ. ಆದರೆ ಛಾಯಾ = ನೆರಳು ಅನ್ನುವುದು ಸ್ತ್ರೀಲಿಂಗ. ಇದನ್ನು ನೋಡಿದಾಗ ಕನ್ನಡದ ಲಿಂಗ ವಿಭಾಗ ಸಂಸ್ಕೃತದ ರೀತಿ ಇಲ್ಲ ಆನ್ನುವುದು ಸ್ಪಷ್ಟ . ಹಿಂದೀ, ಮರಾಠೀ ಮೊದಲಾದ ಭಾಷೆಗಳಲ್ಲಿ ಲಿಂಗಗಳು ಸಂಸ್ಕೃತದ ನೇರ ಪ್ರಭಾವದಿಂದ ಬಂದಿರುವುದು ತಿಳಿಯುತ್ತದೆ.

ಕನ್ನಡದ ಪ್ರತ್ಯಯಗಳು (first person) ಹೇಳುವವರು ಗಂಡಾಗಲಿ, ಹೆಣ್ಣಾಗಲಿ ಬದಲಾಗವು. ಉದಾ: ನಾನು ಊಟ ಮಾಡ್ತೀನಿ. ಅವನು ನನ್ನ ಅಣ್ಣ. ನನ್ನ ಅತ್ತಿಗೆ ಬೆಂಗಳೂರಿನವರು. ಆದರೆ ಹಿಂದಿಯಲ್ಲಿ ಇದು ಮೈ ಖಾವೂಂಗಾ, ಮೈ ಖಾವೂಂಗೀ, ವೊಹ್ ಮೇರಾ ಭಾಯೀ ಹೈ, ಮೇರೀ ಭಾಭೀ ಬೆಂಗಳೂರ್ ವಾಲೀ ಹೈ ಎಂದಾಗುತ್ತೆ. ಆದರೆ ಸಂಸ್ಕೃತದಲ್ಲಿ ಪ್ರಥಮ ಪುರುಷ ಏಕ ವಚನ ಕನ್ನಡದ ಹಾಗೇ ಇದೆ ಅನ್ನೋದು ಬೇರೆ ಸಮಾಚಾರ.

ಬೇರೆ ಬೇರೆ ಭಾಷೆಗಳು (ಬೇರೆ ಮೂಲದ್ದಾದರೂ), ಒಟ್ಟಿಗೆ ಒಡನಾಡುವಾಗ ಹೋಲಿಕೆ ಬರುವುದು ಸಹಜವೇ. ಅದರಲ್ಲೂ ಸಂಸ್ಕೃತದ ಪ್ರಭಾವ ಕನ್ನಡದ ಮೇಲೆ ಬಹಳವೇ ಆಗಿದೆ. ಅತಿ ಮೊದಲ ಕನ್ನಡ ಬರಹದ ದಾಖಲೆಗಳಲ್ಲಿ ಸಂಸ್ಕೃತ ಪದಗಳ ಬಳಕೆ ಬಹಳವೇ ಹೆಚ್ಚಿವೆ. ಈಗ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳು ಮಲೆಯಾಳಕ್ಕೂ, ತೆಲುಗಿಗೂ ಹೊಕ್ಕಿವೆ ಅನ್ನುವುದು ತಿಳಿದ ಸಂಗತಿಯೇ.

ಆದರೆ, ಒಂದು ಭಾಷೆಗೆ ತೀರಾ ಅಡಿಪಾಯವಾದ ಪದಗಳು ಸಂಸ್ಕೃತದಲ್ಲೂ, ಕನ್ನಡದಲ್ಲೂ ಬೇರೆಯಿವೆ. ಆದರೆ, ಕನ್ನಡ/ತಮಿಳು/ತೆಲುಗು ಇತ್ಯಾದಿ ನುಡಿಗಳಲ್ಲಿ ಒಂದಕ್ಕೊಂದನ್ನು ಬಹಳ ಹತ್ತಿರವಾಗಿ ಹೋಲುತ್ತವೆ. ಇದರಿಂದಲೇ ಕನ್ನಡ ತಮಿಳು ತೆಲುಗು ಮೊದಲಾದವು ಸಂಸ್ಕೃತ ಮೂಲವಲ್ಲ ಅಂತ ಖಡಾಖಂಡಿತವಾಗಿ ಹೇಳಬಹುದು.

ಉದಾ: ಸಂಖ್ಯೆಗಳು - ಒಂದು ಎರಡು ಮೂರು .... ಹತ್ತು ಇಪ್ಪತ್ತು ಇತ್ಯಾದಿ; ಹಾಗೇ ಹತ್ತೊಂಬತ್ತು, ಇಪ್ಪತ್ತೊಂಬತ್ತು ( ಸಂಸ್ಕೃತ ಹಿಂದಿಗಳಲ್ಲಿ ಇವೆಲ್ಲ ಒಂದುಕಮ್ಮಿಇಪ್ಪತ್ತು, ಒಂದುಕಮ್ಮಿ ಮೂವತ್ತು ಹೀಗೆ ಹೇಳಲಾಗುತ್ತೆ)
ನಂಟನ್ನು ಹೇಳುವ ಪದಗಳು: ಅಮ್ಮ, ಅಪ್ಪ, ಅಣ್ಣ, ತಂಗಿ, ಅತ್ತೆ, ಮಾವ, ಮೈದುನ, ಮಗ, ಮಗಳು ಇತ್ಯಾದಿ
ದೇಹದ ಭಾಗಗಳನ್ನು ಹೆಸರಿಸುವ ಪದಗಳು: ಮೂಗು, ಬಾಯಿ, ಕಣ್ಣು, ತಲೆ, ಕಿವಿ ಇತ್ಯಾದಿ
ಕಾಲವನ್ನು ತಿಳಿಸುವ ಪದಗಳು: ನೆನ್ನೆ, ಮೊನ್ನೆ, ನಾಳೆ, ಹಿಂದೆ, ಮುಂದೆ ಇತ್ಯಾದಿ

ಇದೇ ರೀತಿ ಸಂಸ್ಕೃತ ಮತ್ತು ಮರಾಠಿ, ಅಥವಾ ಸಂಸ್ಕೃತ ಮತ್ತು ಹಿಂದಿ ನಡುವೆ ಹೋಲಿಸಿನೋಡಿದರೆ ಅವುಗಳ ನಡುವೆ ಇನ್ನೂ ಹತ್ತಿರದ ನಂಟು, ಅಥವಾ ಸಂಸ್ಕೃತ ಮೂಲವಾದ ಪ್ರಾಕೃತಗಳಿಂದ ಬಂದಿರುವುದು ಸ್ಪಷ್ಟವಾಗುತ್ತೆ. ಉದಾ: ಸಂಸ್ಕೃತದ ಮುಖ (=ಬಾಯಿ) ಅನ್ನುವುದು ಹಿಂದಿಯಲ್ಲಿ ಮುಹ್ ಆಗಿದೆ. ಅದೇ ರೀತಿ ಸಂಸ್ಕೃತದ ತುಂಡ (=ಬಾಯಿ) ಅನ್ನುವುದು ಮರಾಠಿಯಲ್ಲಿ ತೊಂಡ್ ಆಗಿದೆ. ಮರಾಠಿಯು ಮಹಾರಾಷ್ಟ್ರೀ ಎಂಬ ಹೆಸರಿನ ಪ್ರಾಕೃತದಿಂದಲೂ, ಹಿಂದಿಯು ಶೌರಸೇನೀ (ನನ್ನ ನೆನಪು ತಪ್ಪಿದ್ದರೂ ಇರಬಹುದು) ಎಂಬ ಪ್ರಾಕೃತದಿಂದಲೂ ಬಂದಿವೆಯೆಂದು ಸಿದ್ಧಪಡಿಸಲಾಗಿದೆ

ಇಂದಿನ ಮರಾಠಿ ಮತ್ತು ಕೊಂಕಣಿ ಭಾಷೆಗಳ ಮೇಲೆ ಮೇಲೆ ಕನ್ನಡದ ಪ್ರಭಾವ ಬಹಳ ಇರುವುದು ಸ್ಪಷ್ಟ. ಕೆಲವು ತೀರಾ ಬಳಕೆಯ ಮರಾಠಿ ಪದಗಳು, ಕೊಂಕಣಿ ಪದಗಳು ಕನ್ನಡದಿಂದಲೇ ಬಂದವಾಗಿವೆ. ಆದರೆ ಅವುಗಳನ್ನು ಕನ್ನಡ ಮೂಲವಾದ ಭಾಷೆಗಳು ಎನ್ನಲಾಗುವುದಿಲ್ಲ. ಅದೇ ರೀತಿ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ವಿಪರೀತವೆನ್ನುವಷ್ಟೇ ಆಗಿದೆ. ನಾವು ದಿನಾಲೂ ಬಳಸುವ ಪದಗಳನ್ನ (ನಾನು ಕಾವ್ಯ ಕವನಗಳ ವಿಷಯ ಮಾತಾಡ್ತಿಲ್ಲ), ನೋಡಿದ್ರೆ ಇದು ಗೊತ್ತಾಗುತ್ತೆ. ಹಲವು ಪದಗಳನ್ನ ನಾವು ಹಾಗೇ ತೆಗೆದುಕೊಂಡಿದ್ದರೆ, ಇನ್ನೊಂದಷ್ಟನ್ನ ಸ್ವಲ್ಪ ಬೇರೆಯದೇ ಅರ್ಥದಲ್ಲಿ ಬರುವಂತೆ ಮಾರ್ಪಡಿಸಿಕೊಂಡಿದ್ದೇವೆ. ಆದರೆ ಇದು ಪದಸಂಪತ್ತಿಗೆ (vocabulary) ಹೊರತು, ಇದರಿಂದ ಕನ್ನಡವನ್ನು ಸಂಸ್ಕೃತದಿಂದ ಹುಟ್ಟಿಸಲು ಸಾಧ್ಯವಾಗುವುದಿಲ್ಲ.

ಹಾಗಂತ ಈಗ ನಮ್ಮ ದಿನಬಳಕೆಯಲ್ಲಿರುವ ಕನ್ನಡದಲ್ಲಿರುವ ಸಂಸ್ಕೃತ ಪದಗಳನ್ನೆಲ್ಲ ಗುಡಿಸಿ ಹಾಕಬೇಕೇ? ನನ್ನನ್ನು ಕೇಳಿದರೆ ಬೇಕಿಲ್ಲ. ಸಂಸ್ಕೃತ ಪದಗಳನ್ನ ಬಳಸಿದ ಮಾತ್ರಕ್ಕೆ ಕನ್ನಡದ ಹಿರಿಮೆ ತಗ್ಗಲಿಲ್ಲ. ಹಾಗೇ, ಕನ್ನಡ ಸಂಸ್ಕೃತ ಪದಗಳನ್ನ ಬಳಸದಿದ್ದರೆ, ಅದರಿಂದ ಸಂಸ್ಕೃತದ ಹಿರಿಮೆಯೂ ಕುಂದುವುದಿಲ್ಲ.

ಅಂದ ಹಾಗೇ ಸಂಸ್ಕೃತದ ಪ್ರಭಾವ ತೀರಾ ಕಡಿಮೆ ಎಂದು ಹೇಳಿಕೊಳ್ಳುವ ತಮಿಳಿನಲ್ಲೂ ದಿನ ನಿತ್ಯದ ಬಳಕೆಯಲ್ಲಿ ಬೇಕಾದಷ್ಟು ಸಂಸ್ಕೃತ ಪದಗಳು ಹೊಕ್ಕಿವೆ ಅನ್ನುವುದು - ಆದರೆ ಹೆಚ್ಚಿನ ಜನಕ್ಕೆ ಅದರ ತಿಳುವಳಿಕೆ ಇಲ್ಲ ಅನ್ನೋದು ಬೇರೆ ವಿಚಾರ. ಅದರ ಬಗ್ಗೆ ಬರೆಯೋ ಅಗತ್ಯವಿಲ್ಲ ಬಿಡಿ ಈಗ!

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸ್ವಲ್ಪ extra ಸೇರ್ಸೋಣ ಅಂತ!!! ೧. ಕನ್ನಡ ದಲ್ಲಿ ವಿಭಕ್ತಿ ಪ್ರತ್ಯಗಳು separate ಗಿ ಇಲ್ಲ. ಪದಗಳೇ ಈ ಪ್ರತ್ಯಯಗಳ ಕೆಲಸ ಮಾಡುತ್ತವೆ. ಒಂದೊಂದನ್ನೂ ವಿವರಿಸುತ್ತಾ ಹೋಗಬಹುದಾದರೂ ಆಸಕ್ತಿ ಯುಳ್ಳವರ ಕೊರತೆ ಮತ್ತು ಬರೆಯುವಲ್ಲಿನ ಸೋಮಾರಿತನ ಇಲ್ಲಿ ಬರಸ್ತಾ ಇಲ್ಲ. ಸಂಸ್ಕೃತದಲ್ಲಿ ಈ ವಿಭಕ್ತಿ ಪ್ರತ್ಯಗಳು ಪ್ರತ್ಯೆಕವಾಗಿವೆ. ೨. ವಚನದ ಬಗ್ಗೆ.... 'ದ್ವಿವಚಮುಚಿತದೆ ಬರ್ಕುಮ್" ಅನ್ನೋ ಕೇಶೀರಾಜನ ಮಾತಿಗೆ ಬೆಲೆಯಿಲ್ಲ. ನೀವಂದಂತೆ ಏಕ ಅನೇಕ ವಚನಗಳು. ೩. ಲಿಂಗ ಕನ್ನಡ ( ದ್ರಾವಿಡದಲ್ಲಿ ) .. ಅರ್ಥಾನುಸಾರಿ. ವೈಜ್ಞಾನಿಕ. ಸಂಸ್ಕೃತದಲ್ಲಿ ಶಬ್ಧಾನುಸಾರಿ. ಅವೈಜ್ಞಾನಿಕ. ನಿಮ್ಮ ಉದಾಹರಣೆಗಳಿಗೆ ಧನ್ಯವಾದಗಳು. ೪. ಉತ್ತಮ ಪುರುಷ ಬಹುವಚನ ಗಳಲ್ಲಿ ನಮ್ಮಲ್ಲಿ inclusive (ಸಮಾವೇಶಕ) exclusive ( ಅಸಮಾವೇಶಕ) ಎಂದು ಎರಡು ರೀತಿ. ಉದಾ. ನಾವು ( inclusive ) ಸಿನಿಮಾಗೆ ಹೋಗೋಣ.. ನಾವು ( exclusive ) ಸಿನಿಮಾಗೆ ಹೋಗುತ್ತೇವೆ. ಸಂಸ್ಕೃತದಲ್ಲಿ ಈ ರೀತಿ ಇಲ್ಲ. ಇನ್ನೂ ಅನೇಕಾನೇಕ ಉದಾ.. ಕೊಡಬಹುದಾದರೂ.... ನಿಮ್ಮ ಬರಹದ ನೆರವಿನಿಂದ ನನಗೆ ಹೊಳೆದವು ಇವು. ಅಂದಾಹಗೆ ಕನ್ನಡದಲ್ಲಿ ದೊಡ್ಡ ಸಂಖ್ಯೆ ಅಂದರೆ ನೂರು. ಇದು ಚೂರು ಅನ್ನೋ ಪದದಿಂದ ಬಂದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೂರು ಕನ್ನಡ ಪದವೇ ಅಲ್ಲ. ನೂಱು = ’ನುಱಿ” ಪದದಿಂದ ಬಂದಿದೆ. ನುಱಿದಾಗ ಬಹಳಷ್ಟು ತುಂಡಾಗುವುದಱಿಂದ ನೂಱ್=೧೦೦. ಪ್ರಾಯಶಃ ಇದೊಂದೇ ಚೆನ್ನುಡಿಗರ ಅತಿ ಹೆಚ್ಚಿನ ಪರಿಮಾಣ ಹೇೞುವ ಪದ. ಹಾಗೆಯೇ ಮೂಱ್(ಱು)= ’ಮುಱಿ’ (ತುಂಡಾಗು) ಪದದಿಂದ ಬಂದಿದೆ. "ಮುಱಿದರೆ ಮೂಱು ತುಂಡಾಗ್ತೀಯ ಮಗನೇ, ಬಹಳ ಮಾತಾಡ್ತೀಯಾ" ಎಂದು ಗದಱುವ ಮಾತು ಕನ್ನಡದಲ್ಲಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕನ್ನಡಕಂದರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಚೂರು ಕನ್ನಡ ಪದವೇ ಅಲ್ಲ.


ನನ್ನ ತಿಳುವಳಿಕೆಯ ಪ್ರಕಾರ ಇದು ದ್ರಾವಿಡ ಮೂಲದ ಪದವೇ. ಅಲ್ಲದಿದ್ದರೆ ಈ ಪದದ ಮೂಲವನ್ನು ತಿಳಿಸಿ.


>>ನುಱಿದಾಗ ಬಹಳಷ್ಟು ತುಂಡಾಗುವುದಱಿಂದ ನೂಱ್=೧೦೦.
ಇದು ಅರ್ಥ ಆಗಲಿಲ್ಲ. ವಿವರಿಸಿ. ತುಂಡಾಗುವುದಕ್ಕೂ ೧೦೦ ಕ್ಕೂ ಏನು ಸಂಬಂಧ?
 
>>"ಮುಱಿದರೆ ಮೂಱು ತುಂಡಾಗ್ತೀಯ ಮಗನೇ, ಬಹಳ ಮಾತಾಡ್ತೀಯಾ"
ಇಂತವೆಲ್ಲ ಪ್ರಾಸಕ್ಕೆ ಹುಟ್ಟಿ ಕೊಂಡ ನ್ತವು. ಆಧಾರವಾಗಿ ತೆಗೆದುಕೊಳ್ಳುವುದು ಕಷ್ಟ.


.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೂರ್ಣ್=ಪುಡಿ ಮಾಡು ಹುಡಿಮಾಡು ಸಂಸ್ಕ್ರುತ ಶಬ್ದ ಇದಱಿಂದ ಚೂರ್ ಬಂದಿದೆ.ಅಥವಾ ಛುರ್=ಕತ್ತರಿಸು, ಛುರೀ, ಚೂರಿಯಿಂದ ಬಂದಿದೆ. ಕನ್ನಡದಲ್ಲಿ ಇದಕ್ಕೆ ನುಱಿ. ಅಕ್ಕಿ ನುಱಿದಾಗ ಬಹಳ ಚೂರುಗಳಾಗುವುದಱಿಂದ. ನೂಱು ಕನ್ನಡಿಗರಿಗೆ ಅಥವಾ ಎಲ್ಲಾ ತೆನ್ನುಡಿಗರಿಗೆ ಎಣಿಸಲು ಬಹುದೊಡ್ಡ ಸಂಖ್ಯೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೂರ್ಣ್=ಪುಡಿ ಮಾಡು ಹುಡಿಮಾಡು ಸಂಸ್ಕ್ರುತ ಶಬ್ದ ಇದಱಿಂದ ಚೂರ್ ಬಂದಿದೆ.ಅಥವಾ ಛುರ್=ಕತ್ತರಿಸು, ಛುರೀ, ಚೂರಿಯಿಂದ ಬಂದಿದೆ. ಕನ್ನಡದಲ್ಲಿ ಇದಕ್ಕೆ ನುಱಿ. ಅಕ್ಕಿ ನುಱಿದಾಗ ಬಹಳ ಚೂರುಗಳಾಗುವುದಱಿಂದ. ನೂಱು ಕನ್ನಡಿಗರಿಗೆ ಅಥವಾ ಎಲ್ಲಾ ತೆನ್ನುಡಿಗರಿಗೆ ಎಣಿಸಲು ಬಹುದೊಡ್ಡ ಸಂಖ್ಯೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುಡಿ ಪುಡಿಯಾಗಿ ಎಣಿಸಲಾಗದಷ್ಟು ತುಂಡಾಗುವುದನ್ನು ನುಱಿ ಎನ್ನುತ್ತೇವೆ. ಕೋಲು ನುಱಿಯುವುದಿಲ್ಲ. ಕೋಲು ತುಂಡಾದರೆ (ಮುಱಿದಾಗ) ಮೂಱೋ ನಾಲ್ಕೋ ತುಂಡಾಗಬಹುದು. ನುಱಿದಾಗ ಎಣಿಸಲು ಕಷ್ಟ. ನುಱಿ‍>ನೂಱ್ (ಕನ್ನಡಿಗರಿಗೆ ಎಣಿಸಲಾಱದಷ್ಟು ದೊಡ್ಡ ಸಂಖ್ಯೆ). ಮುಱಿ>ಮೂಱ್ (ಎಣಿಸಬಹುದಾದ ಸಂಖ್ಯೆ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಂಚ ಸಂದೇಹ >>ಲಿಂಗ ಕನ್ನಡ ( ದ್ರಾವಿಡದಲ್ಲಿ ) .. ಅರ್ಥಾನುಸಾರಿ. ವೈಜ್ಞಾನಿಕ. ಸಂಸ್ಕೃತದಲ್ಲಿ ಶಬ್ಧಾನುಸಾರಿ. ಅವೈಜ್ಞಾನಿಕ. ಎಷ್ಟೋ ಭಾಷೆಗಳಲ್ಲಿ ನಿರ್ಜೀವ ವಸ್ತುಗಳಿಗೂ ಕೂಡ ಸ್ತ್ರೀ/ಪು-ಲಿಂಗ ಜೋಡಿಸಿವುದು ವಾಡಿಕೆ. ಉದಾ: ಫ಼್ರೆಂಚ್. ಇದನ್ನು ಅವೈಜ್ಞಾನಿಕ ಎಂದು ಕರೆಯುವುದು ಎಷ್ಟು ಸರಿ? >>ಅಂದಾಹಗೆ ಕನ್ನಡದಲ್ಲಿ ದೊಡ್ಡ ಸಂಖ್ಯೆ ಅಂದರೆ ನೂರು ಅರ್ಥವಾಗಲಿಲ್ಲ. ಸಾವಿರ? ಲಕ್ಷ? ಕೋಟಿ? >>ಉತ್ತಮ ಪುರುಷ ಬಹುವಚನ ಗಳಲ್ಲಿ ನಮ್ಮಲ್ಲಿ... ಇಂತಹ ದ್ವಂದ್ವ structured languagesಗಳಲ್ಲಿ ಇರುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕೆಂದರೆ, ನಂಟಸ್ತನ, ಕನ್ನಡದಲ್ಲಿ ಸ್ವಲ್ಪ confusionಏ. ಉದಾ: ಅತ್ತೆ ಎಂದರೆ ತಂದೆಯ ಸಹೋದರಿ, ಹೆಂಡತಿಯ ತಾಯಿ ಅಥವಾ ಸೋದರಮಾವನ ಹೆಂಡತಿ!! ಕೆಲವು ದ್ರಾವಿಡ ಭಾಷೆಗಳಲ್ಲಿ ಹೀಗಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾವಿರ ಸಂಸ್ಕೃತದ ಸಹಸ್ರದಿಂದ ಬಂದಿದೆ. ಸಹಸ್ರ>ಸಾಸಿರ>ಸಾವಿರ. ಲಕ್ಷ ಅನ್ನುವದು ಸಂಸ್ಕೃತ ಪದವೇ. ಕೋಟಿ ಎನ್ನುವದೂ ಸಂಸ್ಕೃತದ ಕ್ರೋಢದಿಂದ. ಕ್ರೋಢ>ಕೋಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾವಿರ ಹಾಗೂ ಆಯಿರ(ಂ) ಸಂಸ್ಕೃತದ ಸಹಸ್ರದ ರೂಪಗಳೇ. ಸಹಸ್ರ->ಸಾಸ್ರ->ಸಾಸಿರ->ಸಾಯಿರ->ಸಾವಿರ. ತಮಿೞು ಮಲಯಾಳಿಗಳಲ್ಲಿ ಮೂಲತಃ ಸಕಾರವಿಲ್ಲದಿರುವುದಱಿಂದ ಸಾಯಿರ->ಆಯಿರ (ಕೊಡವದಲ್ಲೂ ಕೂಡ) ಆಯ್ತು. ಕೋಟಿ ಸಂಸ್ಕೃತ ಪದವೇ. ಈ ಶ್ಲೋಕವನ್ನು ನೋಡಿ "ವಕ್ರತುಂಡ ಮಹಾಕಾಯ ಕೋಟಿಸೂರ್ಯ (ಸೂರ್ಯಕೋಟಿ) ಸಮಪ್ರಭ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಂಚ ಸಂದೇಹ >>ಲಿಂಗ ಕನ್ನಡ ( ದ್ರಾವಿಡದಲ್ಲಿ ) .. ಅರ್ಥಾನುಸಾರಿ. ವೈಜ್ಞಾನಿಕ. ಸಂಸ್ಕೃತದಲ್ಲಿ ಶಬ್ಧಾನುಸಾರಿ. ಅವೈಜ್ಞಾನಿಕ. ಎಷ್ಟೋ ಭಾಷೆಗಳಲ್ಲಿ ನಿರ್ಜೀವ ವಸ್ತುಗಳಿಗೂ ಕೂಡ ಸ್ತ್ರೀ/ಪು-ಲಿಂಗ ಜೋಡಿಸಿವುದು ವಾಡಿಕೆ. ಉದಾ: ಫ಼್ರೆಂಚ್. ಇದನ್ನು ಅವೈಜ್ಞಾನಿಕ ಎಂದು ಕರೆಯುವುದು ಎಷ್ಟು ಸರಿ? >>ಅಂದಾಹಗೆ ಕನ್ನಡದಲ್ಲಿ ದೊಡ್ಡ ಸಂಖ್ಯೆ ಅಂದರೆ ನೂರು ಅರ್ಥವಾಗಲಿಲ್ಲ. ಸಾವಿರ? ಲಕ್ಷ? ಕೋಟಿ? >>ಉತ್ತಮ ಪುರುಷ ಬಹುವಚನ ಗಳಲ್ಲಿ ನಮ್ಮಲ್ಲಿ... ಇಂತಹ ದ್ವಂದ್ವ structured languagesಗಳಲ್ಲಿ ಇರುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕೆಂದರೆ, ನಂಟಸ್ತನ, ಕನ್ನಡದಲ್ಲಿ ಸ್ವಲ್ಪ confusionಏ. ಉದಾ: ಅತ್ತೆ ಎಂದರೆ ತಂದೆಯ ಸಹೋದರಿ, ಹೆಂಡತಿಯ ತಾಯಿ ಅಥವಾ ಸೋದರಮಾವನ ಹೆಂಡತಿ!! ಕೆಲವು ದ್ರಾವಿಡ ಭಾಷೆಗಳಲ್ಲಿ ಹೀಗಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇದನ್ನು ಅವೈಜ್ಞಾನಿಕ ಎಂದು ಕರೆಯುವುದು ಎಷ್ಟು ಸರಿ?


ಈ ಹಿಂದೆ ಇದರ ಬಗ್ಗೆ ಸಂಪದದಲ್ಲಿ ಸಾಕಷ್ಟು ಚರ್ಚೆ ಆಗಿರಬಹುದು . ಒಮ್ಮೆ ಹುಡುಕಿ.


ಕನ್ನಡದಲ್ಲಿ ಲಿಂಗ ವಿವೆchaನೆಯಲ್ಲಿ ಯಾವುದೇ ಸಂದೇಹ / ಅಸ್ಪಷ್ಟತೆ ಇಲ್ಲ. ಒಂದು ಸರಿಯಾದ ಸೂತ್ರದಂತೆ ಒಂದು ವಸ್ತುವಿನ ಲಿಂಗವನ್ನು ತೀರ್ಮಾನಿಸಬಹುದು.
ದ್ರಾವಿಡೇತರ ಭಾಷೆಗಳಲ್ಲಿ ಈ ಲಿಂಗ ನಿರ್ಹಾರ ಗೋಜಲು. ನಿಮಗೆ ಹಿಂದಿ ( ಅತ್ವ ಸಂಸ್ಕೃತ)  ಗೊತ್ತಿದ್ದರೆ ಒಮ್ಮೆ ಹಾಗೆಯೇ ಕೆಲ ವಾಕ್ಯಗಳನ್ನು ಕಲ್ಪಿಸಿಕೊಂಡು ಅಲ್ಲಿ ಹೇಗೆ ಲಿಂಗ ನಿರ್ಧಾರ ಆಗುತ್ತೆ ಅಂತ ಒಮ್ಮೆ ಯೋಚಿಸಿ. ಲಿಂಗ ವಿವೇಚನೆಯ ಹಿಂದೆ ಒಂದು ಸರಿಯಾದ ಸೂತ್ರ ಅಲ್ಲಿಲ್ಲ. ಅವೈಜ್ಞಾನಿಕ ಅನ್ನೋ ಪದದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.


ನಮ್ಮಲ್ಲಿ ಲಿಂಗ ನಿಸ್ಧಾರವನ್ನು ಸೂತ್ರೀಕರಿಸಬಹುದು! .. ಮತ್ತು ಈ ಸೂತ್ರ ಅತ್ಯಂತ ಸ್ಪಷ್ಟ ಸರಳ


>>structured languagesಗಳಲ್ಲಿ ....


structured languages ಅಂದ್ರೆ ಏನು?
ನಾನುಇಲ್ಲಿ ಗುರ್ತಿಸಿದ್ದು ವ್ಯತ್ಯಾಸ ವನ್ನು!


>>ಕೆಲವು ದ್ರಾವಿಡ ಭಾಷೆಗಳಲ್ಲಿ ಹೀಗಿಲ್ಲ!


ಉದಾಹರಣೆ ಕೊಡಿ ಏನಾದರೂ ಹೊಸದು ಸಿಗುತ್ತೇನೋ ನೋಡೋಣ


 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{ಅವೈಜ್ಞಾನಿಕ ಅನ್ನೋ ಪದದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.} ನಿಮಗೆ ಸಂಸ್ಕ್ರುತ ವ್ಯಾಕರಣ ತಿಳಿದಿಲ್ಲ ಅನಿಸುತ್ತದೆ, ಅದಕ್ಕೆ ಹಾಗೆ ಹೇಳುತ್ತಿದ್ದೀರಿ. ಸಂಸ್ಕ್ರುತದಲ್ಲಿ ಲಿಂಗ ವೈಜ್ನಾನಿಕವಾಗಿಯೇ ಇದೆ, ಆದರೆ ಕನ್ನಡದ ರೀತಿಯಲ್ಲಿ ಅಲ್ಲ. ಹಾಗೆ ಹೇಳಬೇಕೆಂದರೆ ಕನ್ನಡಕ್ಕಿಂತ ಹೆಚ್ಚು ವೈಜ್ನಾನಿಕವಾಗಿದೆ, ಇರಲಿ ಆ ಚರ್ಚೆ ಇಲ್ಲಿ ಬೇಡ. ಸಂಸ್ಕ್ರುತದಲ್ಲಿ ಲಿಂಗ ನಿರ್ಧಾರವಾಗುವುದು ಧಾತುವಿನ ಅರ್ಥದ ಮೇಲೆ. ಪದದ ಅರ್ಥದ ಮೇಲಲ್ಲ. ಉದಾ "ಶಾಲಾ" ಎನ್ನುವುದರ ಅರ್ಥ ಶಾಲೆ ಎಂದಾಗುತ್ತದೆ ಹಾಗೂ ಅದರ ಪ್ರಕಾರ ಈ ಶಬ್ದ ನಪುಂಸಕ ಲಿಂಗ ಆಗಬೇಕು. ಆದರೆ ನಿಜವಾಗಿ ಅದು ಸ್ತ್ರೀಲಿಂಗ. (ಅಂದ ಹಾಗೆ ಇದನ್ನು ನಾನು ಕಲಿತದ್ದು ಶಾಲೆಯಲ್ಲಿ :) ) ಇದು ಅಸಂಬಧ್ಧವಾಗಿ ಕಾಣಿಸಬಹುದು ಮೊದಲ ನೋಟಕ್ಕೆ. ಆದರೆ ಹಾಗಲ್ಲ. ಸಂಸ್ಕ್ರುತದಲ್ಲಿ ಲಿಂಗವು ಧಾತುವಿನ ಮೂಲಾರ್ಥದ ಮೇಲೆ ನಿರ್ಧರಿತವಾಗಿದೆ. "ಶಾಲಾ" ಎನ್ನುವ ಶಬ್ದದ ಮೂಲ ಧಾತು (ಧಾತುವಿನ ಹೆಸರು ಸರಿಯಾಗಿ ನೆನಪಿಲ್ಲ ಈಗ) ಸ್ತ್ರೀಲಿಂಗ. ಅದಕ್ಕೇ‌ "ಶಾಲಾ‌" ಎನ್ನುವುದು ಕೂಡ ಸ್ತ್ರೀಲಿಂಗ ಆಗುತ್ತದೆ. ಈ ಬಗ್ಗೆ ಹೆಚ್ಚು ಮಾಹಿತಿ ಸಂಪದಿಗ ಹರಿಹರಪುರ ಶ್ರೀಧರ್ ಅವರ ವೇದಸುಧೆ ಬ್ಲಾಗಿನಲ್ಲಿ ಲಭ್ಯವಿದೆ. ನಾನೂ ನಿಧಾನಕ್ಕೆ ಕಲೀತಾ ಇದ್ದೇನೆ. ಸುಧಾಕರ್ ಶರ್ಮಾ ಅವರು ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ ಈ ವಿಚಾರಗಳನ್ನು. ಅವರದೇ‌ ಉಪನ್ಯಾಸದಲ್ಲಿ ಲಕ್ಷ್ಮೀ ಎನ್ನುವುದು ಹೇಗೆ ಸ್ತ್ರೀಲಿಂಗ ಅಲ್ಲ (ಕೆಲವು ಸಂದರ್ಭಗಳಲ್ಲಿ) ಎನ್ನುವುದನ್ನು ವಿವರಿಸಿದ್ದಾರೆ. ಹಾಗೆಯೇ "ಗೋ" ಎಂದರೆ ಮೂಲ ಧಾತುವಿನ ಅರ್ಥ "ಚಲಿಸುವುದು" ಎಂದಾಗುತ್ತದೆ. ಅದರಿಂದ ರೂಪಿತಗೊಂಡ ಶಬ್ದವೇ "ಗೋವು" ಎಂಬರ್ಥದ ಶಬ್ದ. ಈ ಧಾತುಗಳು ಹೇಗೆ ಬಂದವು ಎನ್ನುವುದಕ್ಕೂ ಸಾಕಷ್ಟು ಹಿನ್ನೆಲೆ ಇದೆ. ಇವೆಲ್ಲ ಸದ್ಯಕ್ಕೆ ನನಗೆ ತಿಳಿದಿಲ್ಲ. ಕನ್ನಡದಲ್ಲಿ ಅಥವಾ ಇತರ ಭಾಷೆಗಳಲ್ಲಿ ಧಾತುವಿನ ಕಲ್ಪನೆ ಇಲ್ಲದ ಮಾತ್ರಕ್ಕೆ ಅವು ವೈಜ್ನಾನಿಕವಾಗಬೇಕಿಲ್ಲ, ಅಥವಾ‌ ಸಂಸ್ಕ್ರುತದಲ್ಲಿ ಧಾತುವಿನ ಇರುವಿಕೆಯಿಂದಾಗಿ ಅದು ಅವೈಜ್ನಾನಿಕವಾಗಬೇಕಿಲ್ಲ. ಕನ್ನಡ ಪ್ರೇಮ ಇರಬೇಕಿದ್ದರೆ ಅದು ಪೂರ್ತಿ ವೈಜ್ನಾನಿಕವಾಗಿದೆ ಎಂದು ಯಾವನ ಅಪ್ಪಣೆಯೂ ಬೇಕಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹಾಗೆ ಹೇಳಬೇಕೆಂದರೆ ಕನ್ನಡಕ್ಕಿಂತ ಹೆಚ್ಚು ವೈಜ್ನಾನಿಕವಾಗಿದೆ ಇದು ಹೇಗೆಂದು ಸ್ವಲ್ಪ ವಿವರಿಸುವಿರಾ? ನನ್ನ ತಿಳಿವಳಿಕೆಯ ಪ್ರಕಾರ ಈ ಗೋಜಲು ಅನೇಕ ಇಂಡೋ ಯೂರೋಪಿಯನ್ ಭಾಷೆಗಳಲ್ಲಿ ಇದೆ. ದ್ರಾವಿಡ ಭಾಷೆಗಳಲ್ಲೇ ಪರವಾಗಿಲ್ಲ. ('ಪರವಾಗಿಲ್ಲ' ಏಕೆಂದರೆ ಕನ್ನಡದ ಕೆಲ ಒಳನುಡಿಗಳಲ್ಲಿ ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗವನ್ನು ಪ್ರತ್ಯೇಕಿಸುವುದಿಲ್ಲ). ಇನ್ನು ಧಾತುವಿನಿಂದಾಗುವ ವ್ಯುತ್ಪತ್ತಿಯ ಕುರಿತು. ಸಾಮಾನ್ಯವಾಗಿ ಭಾಷೆ ಮೊದಲು ರೂಪುಗೊಳ್ಳುತ್ತದೆ, ಅನಂತರ ವ್ಯಾಕರಣ ಬರೆಯಲಾಗುತ್ತದೆ. ಸಂಸ್ಕೃತದ ವಿಷಯದಲ್ಲಿ ವ್ಯಾಕರಣ ರಚನೆ ಬಹಳ ಬೇಗ ಆಗಿರುವುದು ನಿಜವಾದರೂ, ಕೆಲವೊಮ್ಮೆ ಹಳೆ (already existing) ಪದಗಳ ವ್ಯುತ್ಪತ್ತಿಯನ್ನು ಬಲವಂತದಿಂದ ಸಿದ್ಧಪಡಿಸಿದ್ದೂ ಇದೆ ಎಂಬ ಸಂಶಯ ನನ್ನದು. ಖಗ = ಆಕಾಶದಲ್ಲಿ ಹಾರುವಂಥದ್ದು = ಹಕ್ಕಿ ಎಂಬ derivation ಸಮಾಧಾನಕರವಾಗಿದ್ದರೂ, ಅಶ್ವದ ವಿಷಯದಲ್ಲಿ 'ತಿರುಚುವಿಕೆ'ಯ ಕುರಿತು ಸಂದೇಹ ಬಲವಾಗುತ್ತದೆ. ವೇದಸುಧೆ ನೋಡಿದೆ. ಅಶ್ ಎಂದರೆ ತಿನ್ನುವುದು, ದಾರಿ ತಿನ್ನುವ (ಕ್ರಮಿಸುವ) ದಾದ್ದರಿಂದ ಅಶ್ವ = ಕುದುರೆ ಎನ್ನಲಾಗಿದೆ. ಹಾಗೆ ನೋಡಿದರೆ, ಇಲ್ಲಿ ಪ್ರಧಾನವಾದ ಅಂಶ ದಾರಿ ಅಥವಾ ಪ್ರಯಾಣ ಎಂಬುದಿರಬೇಕಿತ್ತು. ಅವೆರಡೂ ಪದದ etymology ಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಇನ್ನು 'ಅಶ್ವಮೇಧ'ವು ಪಂಚೇಂದ್ರಿಯಗಳನ್ನು ನಿಗ್ರಹಿಸುವ ಪರಿಯಂತೂ ನನ್ನನ್ನು ಬೆಚ್ಚಿ ಬೀಳಿಸಿತು! ಜೈನ, ಬೌದ್ಧ ಧರ್ಮಗಳು ಅಹಿಂಸೆಯನ್ನು ಎತ್ತಿ ಹಿಡಿದ ನಂತರ ಸಾಮಾನ್ಯ ಮಂತ್ರಗಳಿಗೆ ಇಂಥ 'ಪದೋನ್ನತಿ' ನೀಡುವ ಅನಿವಾರ್ಯತೆ ಬಂತೆಂಬುದು ಒಂದು ಅಭಿಪ್ರಾಯ. ಈ ವಿಜ್ಞಾನದ ಯುಗದಲ್ಲಿ, ಕಾಳಿದಾಸನ ಸುಂದರ ಕಾವ್ಯಗಳಲ್ಲಿ ಕೆಲವರು E = mc ^ 2 ಹುಡುಕುವುದಿಲ್ಲವೇ ಹಾಗೆ.. ;) ವೇದಗಣಿತವೂ ಅಷ್ಟೆ. ಅದರ ಟೆಕ್ನಿಕ್ ಬಗ್ಗೆ ಎರಡು ಮಾತಿಲ್ಲ, ಆದರೆ ಭಾರತಿ ಕೃಷ್ಣ ತೀರ್ಥರು ತಮ್ಮ ಪ್ರತಿಭೆಯನ್ನು ಬಳಸಿ ಕೆಲ ಸಾಮಾನ್ಯ ಮಂತ್ರದ ತುಣುಕುಗಳನ್ನು ಜನಪ್ರಿಯಗೊಳಿಸಿದರಲ್ಲ, ನಮ್ಮವರ ಕೃತಕ ವೈಭವೀಕರಣಕ್ಕೆ ಇನ್ನೇನು ಉದಾಹರಣೆ ಬೇಕು? ಗ್ರೀಕರ hour ಎಂಬ ಮೂಲದ 'ಹೋರಾ' ಶಾಸ್ತ್ರಕ್ಕೆ, 'ಅಹೋರಾತ್ರ' ಎಂಬ ಮೂಲವನ್ನು ಆರೋಪಿಸಲಾಯಿತು. 'ವಿಕಲ್ಪ'ವೆಂಬ ಮುಸುಕಿನಲ್ಲಿ, ಎಡಗಡೆಗೆ ಅ ವನ್ನೂ ಬಲಕ್ಕೆ ತ್ರ ವನ್ನೂ ಟ್ರಿಮ್ ಮಾಡಿದರು, ಸರಿ. ಆದರೆ ಅದು ವೈಜ್ಞಾನಿಕ ಎಂದು ಈಗ ಸಾಧಿಸುವುದು ಬೇಕಿಲ್ಲ ಅಂತ ನಾನು ಹೇಳುವುದು. ಸಂಸ್ಕೃತದಲ್ಲಿ ಹೇರಳವಾಗಿ ಸಿಗುವ ಈ ಸುತ್ತು ಬಳಸಿದ derivation ಗಳನ್ನೂ, ಇಂಡೋ- ಯೂರೋಪಿಯನ್ ಭಾಷಾ ಕುಟುಂಬದ ಗುಂಪಿನಲ್ಲಿ ಕಾಣುವ ಸರಳ ಸಾಮ್ಯತೆಯನ್ನೂ ಒಟ್ಟಿಗೆ ಇಟ್ಟು ನೋಡಿದಾಗ, ಏಕೋ ಎರಡನೆ ಥಿಯರಿಯೇ ಅಪ್ಯಾಯಮಾನ ಎನಿಸುತ್ತದೆ. ಅಂದ ಹಾಗೆ ನನ್ನ ಮೊದಲ ಸಂಪದೀಯ ಬರಹ ಇದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{ಇದು ಹೇಗೆಂದು ಸ್ವಲ್ಪ ವಿವರಿಸುವಿರಾ? ನನ್ನ ತಿಳಿವಳಿಕೆಯ ಪ್ರಕಾರ ಈ ಗೋಜಲು ಅನೇಕ ಇಂಡೋ ಯೂರೋಪಿಯನ್ ಭಾಷೆಗಳಲ್ಲಿ ಇದೆ. ದ್ರಾವಿಡ ಭಾಷೆಗಳಲ್ಲೇ ಪರವಾಗಿಲ್ಲ} ಮೊದಲಾಗಿ ಒಂದು ಸ್ಪಷ್ಟನೆ. ಈ ವೈಜ್ನಾನಿಕತೆ ವಿಷಯ ನಾನು ಮೊದಲಾಗಿ ಬಳಸಿಲ್ಲ. ಭಾಷೆ ವಿಷಯದಲ್ಲಿ ವೈಜ್ನಾನಿಕತೆಯನ್ನು ಹೇಗೆ ನಿರೂಪಿಸುವುದು ಎಂದೂ ನನಗೆ ಗೊತ್ತಿಲ್ಲ. ವ್ಯಾಕರಣ ಸೂತ್ರಗಳು ಎಷ್ಟು ಪೂರ್ಣವಾಗಿದೆ ಎಂಬುದರ ಮೇಲೆ ವೈಜ್ನಾನಿಕತೆಯನ್ನು ನಿರೂಪಿಸುವುದಾದಲ್ಲಿ ಸಂಸ್ಕೃತದಲ್ಲಿ ಯಾವುದೇ ದ್ರಾವಿಡ ಭಾಷೆಗಿಂತ ಹೆಚ್ಚು ಸೂತ್ರಗಳಿವೆ ಹಾಗೂ ಕ್ಲಿಷ್ಟವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ ತಾನೆ. ಅದು ಕ್ಲಿಷ್ಟವಾಗಿದೆ ಎಂದ ಮಾತ್ರಕ್ಕೆ ಅವೈಜ್ನಾನಿಕವಾಗಬೇಕಿಲ್ಲ ಎಂದಷ್ಟೇ ಹೇಳಿದೆ. ಹಾಗೆಯೇ ಕ್ಲಿಷ್ಟವಾದ ವ್ಯಾಕರಣ ಇರುವ ಭಾಷೆಯ ಗರಿಮೆ ಹೆಚ್ಚು ಎಂದೂ ನಾನು ಹೇಳುತ್ತಿಲ್ಲ. ಇನ್ನು ಧಾತು ವಿಚಾರವಾಗಿ ನಿಮ್ಮ ಸಂಶಯಗಳು ಸರಿಯಾದದ್ದೇ. ಇಲ್ಲಿ ನಮಗಿರುವ ಕಷ್ಟವೆಂದರೆ ನಮಗೆ ಧಾತು ರಹಿತ ವ್ಯಾಕರಣ ಬಳಸಿ ಅಭ್ಯಾಸವಾಗಿದೆ. ಅದಕ್ಕೇ ಅವು ಗೋಜಲೆನಿಸುತ್ತವೆ. ವೇದಭಾಷೆಯಲ್ಲಿ Abstract ಅಥವಾ ಧಾತು ರೂಪದ ಬಳಕೆಯಿದೆ. ಅದಕ್ಕೇ ಅಲ್ಲಿ ಅಗ್ನಿ ಎಂದರೆ "ದಹಿಸುವುದು" ಎಂಬ Abstract ಅರ್ಥ ಬರುತ್ತದೆ. ಇಲ್ಲಿ ದಹಿಸುವಿಕೆ ಮರದ ಕೊರಡಿನದ್ದೇ ಇರಬಹುದು ಅಥವಾ ಮನಸಿನ ಭಾವನೆಯೊಂದರ ದಹಿಸುವಿಕೆ ಇರಬಹುದು ಅಥವಾ ಜೀವಕೋಶದಲ್ಲಿ ಸಕ್ಕರೆಯ ದಹಿಸುವಿಕೆ ಇರಬಹುದು. Abstract ಎಂದ ಮೇಲೆ ಕಾಲಕಾಲಕ್ಕೆ ತಕ್ಕಂತೆ ಒಂದೇ ಧಾತುವಿನಿಂದ ಬೇರೆ Concrete ಆದ ಅರ್ಥವನ್ನು ಆರೋಪಿಸುವುದು ತಪ್ಪಾಗುವುದಿಲ್ಲ. ಅದಕ್ಕೇ ವೇದಕಾಲದ ನಂತರ ಅಗ್ನಿ ಎಂಬುದಕ್ಕೆ ಯಜ್ನಕುಂಡದಲ್ಲಿ ಕಾಣಿಸುವ ಬೆಂಕಿಯೇ ಪ್ರಧಾನ ಅರ್ಥವಾಗಿರಬಹುದು. {ಜೈನ, ಬೌದ್ಧ ಧರ್ಮಗಳು ಅಹಿಂಸೆಯನ್ನು ಎತ್ತಿ ಹಿಡಿದ ನಂತರ ಸಾಮಾನ್ಯ ಮಂತ್ರಗಳಿಗೆ ಇಂಥ 'ಪದೋನ್ನತಿ' ನೀಡುವ ಅನಿವಾರ್ಯತೆ ಬಂತೆಂಬುದು ಒಂದು ಅಭಿಪ್ರಾಯ} ಅಹಿಂಸೆಗೆ ಜೈನ ಬೌದ್ಧ ಧರ್ಮಗಳು ಕಾರಣ ಎಂಬುದು ನನಗಂತೂ ಸರಿಯೆನಿಸುವುದಿಲ್ಲ. ಕೆಲವರು ವೈದಿಕರಲ್ಲಿ ಅಹಿಂಸೆ ಎಂಬ ತತ್ವ ಬರಲು ಜೈನ ಬೌಧ್ಧ ಧರ್ಮವೇ ಕಾರಣ ಎನ್ನುತ್ತಾರೆ. ಇದು ಎಷ್ಟು ಸುಳ್ಳು ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. ವೇದದ ಮೂಲ ತತ್ವವೇ ಅಹಿಂಸೆ. ಇದನ್ನು ವೇದ ತಿಳಿದವರು ಹೇಳುತ್ತಾರೆ. ಆದರೂ ನಮಗೆ ವೇದಗಳು ಹಿಂಸಾರೂಪಿ ಎಂದೇ ಪರಿಗಣಿಸುವುದರಲ್ಲಿ ಅದೇನೋ ಆನಂದ. { ಕಾಳಿದಾಸನ ಸುಂದರ ಕಾವ್ಯಗಳಲ್ಲಿ ಕೆಲವರು E = mc ^ 2 ಹುಡುಕುವುದಿಲ್ಲವೇ ಹಾಗೆ} ನೀವು ಈ ವಿಷಯ ಎತ್ತಿದ್ದರಿಂದ ನನಗೆನಿಸಿದ್ದನ್ನು ಹೇಳುತ್ತಿದ್ದೇನೆ. ನಾನು ಹೇಳುತ್ತಿರುವುದಕ್ಕೆ ಪ್ರಮಾಣ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ನನಗನಿಸಿದ್ದು ಪರಮಸತ್ಯ ಎಂದು ಹೇಳುತ್ತಿಲ್ಲ. ಆದರೂ ಹೇಳುತ್ತೇನೆ ಕೇಳಿ.. ಈ ಪ್ರಪಂಚದಲ್ಲಿ ಇರುವ ಮೂರು ನಿಜವಾದ ಅಸ್ತಿತ್ವಗಳು ಯಾವುವು (ಆದಿ, ಅಂತ್ಯ ಇಲ್ಲದ್ದು ಮತ್ತು ರೂಪಾಂತರ ಆಗದ್ದು/ಆಗಲಾರದ್ದು)? ಆತ್ಮ, ಪರಮಾತ್ಮ ಮತ್ತು ಪ್ರಕೃತಿ ತಾನೆ (ಇದರ ಬಗ್ಗೆ ಸುಧಾಕರ ಶರ್ಮರು ಚೆನ್ನಾಗಿ ವಿವರಿಸಿದ್ದಾರೆ). ಇದು ವೇದದ ಸಾರ ಎಂದು ನಮಗೆಲ್ಲ ಗೊತ್ತು. ಹಾಗಿದ್ದಲ್ಲಿ ಇಲ್ಲಿ ಶಕ್ತಿ ಯಾವ ಅಸ್ತಿತ್ವ ಏನು? ಶಕ್ತಿಗೂ ಆದಿ, ಅಂತ್ಯ ಇಲ್ಲ ಎಂದು ಈಗಿನ ವಿಜ್ನಾನ ಹೇಳುತ್ತದಲ್ಲವೇ? ಹಾಗೆಯೇ ಶಕ್ತಿಯ ಪ್ರಕಟನೆ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಗಬಹುದು (ಮೆಕ್ಯಾನಿಕಲ್ ಎನರ್ಜಿ ಯಿಂದ ವಿದ್ಯುತ್ ಶಕ್ತಿ ಉತ್ಪಾದನೆಯಾದಂತೆ), ಆದರೆ ಯಾವ ರೂಪದಲ್ಲಿದ್ದರೂ ಶಕ್ತಿ ಶಕ್ತಿಯೇ. ಈ ನಿಟ್ಟಿನಲ್ಲಿ ವೈದಿಕರು ಶಕ್ತಿಯನ್ನೂ ನಾಲ್ಕನೇ ಅಸ್ತಿತ್ವ ಎಂದು ಪರಿಗಣಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ. ಶಕ್ತಿ ಮತ್ತು ಪ್ರಕೃತಿ (ಮ್ಯಾಟರ್) ಯನ್ನು ಒಂದಾಗಿ ಪ್ರಕೃತಿ ಎಂಬ ಅಸ್ತಿತ್ವವಾಗಿ ಪರಿಗಣಿಸಿದ್ದಾರೆ. ಅಂದರೆ ಅವೆರಡು ಪರಸ್ಪರ ರೂಪಾಂತರವಾಗಬಲ್ಲವುಗಳು ಎಂದು ವೈದಿಕರು ತಿಳಿದಿದ್ದಾರೆಂದಾಯಿತು. E=mc^2 ಎಂಬುದರ ಅರ್ಥವೂ ಅದೇ ತಾನೆ. ಆದರೆ ವೈದಿಕರು ಈ ಸಮೀಕರಣವನ್ನೂ ತಿಳಿದಿದ್ದರು ಎಂದು ನಾನು ಹೇಳುವುದಿಲ್ಲ. ಅವರಿಗೆ ರೂಪಾಂತರದ ಬಗ್ಗೆ ಮಾತ್ರ ಗೊತ್ತಿದ್ದಿರಬಹುದು. {ಆದರೆ ಅದು ವೈಜ್ಞಾನಿಕ ಎಂದು ಈಗ ಸಾಧಿಸುವುದು ಬೇಕಿಲ್ಲ ಅಂತ ನಾನು ಹೇಳುವುದು} ಇರೋ ಬರೋ ಮೂಢನಂಬಿಕೆಗಳನ್ನೆಲ್ಲಾ ವೈಜ್ನಾನಿಕ ಎಂದು ಸಾಧಿಸುವ ಚಿಲ್ಲರೆ ಬುಧ್ಧಿಗೆ ನನ್ನದೂ ವಿರೋಧವಿದೆ. ಆದರೆ ಮೇಲಿನ ಉದಾಹರಣೆಯಲ್ಲಿ ವೈದಿಕರು ಶಕ್ತಿ ಮತ್ತು ಮ್ಯಾಟರ್ ನ ರೂಪಾಂತರವನ್ನು ತಿಳಿದಿದ್ದರು ಎನ್ನುವುದು ಸಾಕಷ್ಟು ಚೆನ್ನಾಗಿ ತಿಳಿಯುತ್ತದೆ. ಇಂತಹವುಗಳನು ಗುರುತಿಸುವುದನ್ನು ವೈಭವೀಕರಣ ಎನ್ನಲಾಗದು. ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸಂಸ್ಕ್ರುತದಲ್ಲಿ ಲಿಂಗ ನಿರ್ಧಾರವಾಗುವುದು ಧಾತುವಿನ ಅರ್ಥದ ಮೇಲೆ. ಪದದ ಅರ್ಥದ ಮೇಲಲ್ಲ. >>ಉದಾ "ಶಾಲಾ" ಎನ್ನುವುದರ ಅರ್ಥ ಶಾಲೆ ಎಂದಾಗುತ್ತದೆ ಹಾಗೂ ಅದರ ಪ್ರಕಾರ ಈ ಶಬ್ದ ನಪುಂಸಕ ಲಿಂಗ ಆಗಬೇಕು. >>ಆದರೆ ನಿಜವಾಗಿ ಅದು ಸ್ತ್ರೀಲಿಂಗ. ಇದು ಅಸಂಬಧ್ಧವಾಗಿ ಕಾಣಿಸಬಹುದು ಮೊದಲ ನೋಟಕ್ಕೆ. ಆದರೆ ಹಾಗಲ್ಲ. ಅಸಂಬದ್ಧವಾಗಿ ಕಾಣುತ್ತೋ ಇಲ್ಲವೋ ಅನ್ನೋದು ನಾವು ಎಲ್ಲಿ ನಿಂತು ನೋಡುತ್ತೇವೆ ಅನ್ನೋದರ ಮೇಲೆ ನಿಲ್ಲುತ್ತೆ. ಕನ್ನಡದ ನೆಲೆಯಿಂದ ನೋಡಿದರೆ ಸರಿಯಾಗಿ ಕಾಣದ್ದು ಸಂಸ್ಕೃತದ ನೆಲೆಯಿಂದ ನೋಡುವಾಗ ಸುಸಂಬದ್ಧ. ಕನ್ನಡದವರಿಗೆ ಹಿಂದಿಯಲ್ಲಿ ಯಾವುದು ಪುಲ್ಲಿಂಗ ಯಾವುದು ಸ್ತ್ರೀಲಿಂಗ ಅನ್ನುವುದು ಗೊಂದಲಾಗಿರಬಹುದು, ಆದರೆ ಹಿಂದಿ ಮಾತನಾಡುವರಿಗೆ ಗೊಂದಲೇನೂ ಇರುವುದಿಲ್ಲ, ಅಲ್ಲವೆ? ಅಸಂಬದ್ಧ ಸುಸಂಬದ್ಧ ಅನ್ನುವುದಕ್ಕಿಂತ ಎರಡಕ್ಕೂ guiding principles ಬೇರೆ ಬೇರೆ ಅನ್ನುವುದು ಮುಖ್ಯವಾದ ಅಂಶ. ಒಂದು ಪ್ರಶ್ನೆ ನೀರ್ಕಜೆ ಅವರಿಗೆ. ಧಾತುವಿನಿಂದಲೇ (ಪದದಿಂದಲ್ಲ) ಲಿಂಗ ನಿರ್ಧಾರವಾಗುವುದಾದರೆ ತ್ರಿಲಿಂಗಕ/ದ್ವಿಲಿಂಗಕ ಪದಗಳನ್ನ ಹೇಗೆ ವಿವರಿಸುವಿರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

{ಅಸಂಬದ್ಧವಾಗಿ ಕಾಣುತ್ತೋ ಇಲ್ಲವೋ ಅನ್ನೋದು ನಾವು ಎಲ್ಲಿ ನಿಂತು ನೋಡುತ್ತೇವೆ ಅನ್ನೋದರ ಮೇಲೆ ನಿಲ್ಲುತ್ತೆ. ಕನ್ನಡದ ನೆಲೆಯಿಂದ ನೋಡಿದರೆ ಸರಿಯಾಗಿ ಕಾಣದ್ದು ಸಂಸ್ಕೃತದ ನೆಲೆಯಿಂದ ನೋಡುವಾಗ ಸುಸಂಬದ್ಧ. ಕನ್ನಡದವರಿಗೆ ಹಿಂದಿಯಲ್ಲಿ ಯಾವುದು ಪುಲ್ಲಿಂಗ ಯಾವುದು ಸ್ತ್ರೀಲಿಂಗ ಅನ್ನುವುದು ಗೊಂದಲಾಗಿರಬಹುದು, ಆದರೆ ಹಿಂದಿ ಮಾತನಾಡುವರಿಗೆ ಗೊಂದಲೇನೂ ಇರುವುದಿಲ್ಲ, ಅಲ್ಲವೆ?} ಹೌದು ನಿಜ. ನಾನೂ ಅದನ್ನೇ ಹೇಳಹೊರಟಿದ್ದು. {ಅಸಂಬದ್ಧ ಸುಸಂಬದ್ಧ ಅನ್ನುವುದಕ್ಕಿಂತ ಎರಡಕ್ಕೂ guiding principles ಬೇರೆ ಬೇರೆ ಅನ್ನುವುದು ಮುಖ್ಯವಾದ ಅಂಶ.} ನಿಜ. :) {ಒಂದು ಪ್ರಶ್ನೆ ನೀರ್ಕಜೆ ಅವರಿಗೆ. ಧಾತುವಿನಿಂದಲೇ (ಪದದಿಂದಲ್ಲ) ಲಿಂಗ ನಿರ್ಧಾರವಾಗುವುದಾದರೆ ತ್ರಿಲಿಂಗಕ/ದ್ವಿಲಿಂಗಕ ಪದಗಳನ್ನ ಹೇಗೆ ವಿವರಿಸುವಿರಿ?} ಕ್ಷಮಿಸಿ, ನಾನು ವ್ಯಾಕರಣ ಪಂಡಿತನಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚು ತಿಳಿಯದು. ಮುಂದೆ ತಿಳಿಯಲು ಪ್ರಯತ್ನಿಸುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಸ್ಕ್ರುತದಲ್ಲಿ ಲಿಂಗ ವೈಜ್ನಾನಿಕವಾಗಿಯೇ ಇದೆ
ಕನ್ನಡದಲ್ಲಿ ( ದ್ರಾವಿಡದಲ್ಲಿ) ಲಿಂಗ ನಿರ್ಧಾರ ಒಂದು 'ವಸ್ತುವಿಗೆ' ಸ್ವಂತ ಬುದ್ದಿ ಇದೆಯೋ ಇಲ್ಲವೋ ಅನ್ನೋ ಸರಳ ನಿಯಮದ ಪ್ರಕಾರ ಲಿಂಗ ನಿರ್ಧಾರ ವಾಗುತ್ತೆ. ಇದು ಎಂತವರಿಗೂ ಅರ್ಥ ಆಗುತ್ತೆ. ...... ೧. ರಾಮ ಯಾವ ದಿಕ್ಕಿನಿಂದ ಬರ್ತಾ ಇದ್ದಾನೆ ಅಂತ ತಿಳ್ಕೊಂಡು ಅವನ ಲಿಂಗವನ್ನು ತೀರ್ಮಾನಿಸಿವುದು ವೈಜ್ಞಾನಿಕವೆ ಸರಿ! ೨. ಎದುರುಗಡೆ ಹುಡುಗ ರಾಮ ಕೂತಿದ್ದಾನೆ, ಲಕ್ಷ್ಮಿ ಅನ್ನೋ ಹುಡುಗಿ ಕಣ್ಣೆದುರೇ ತಾನೆಲ್ಲ ಸ್ತ್ರೀ ವೇಷ ತೊಟ್ಟುಕೊಂಡು ನಿಂತಿದ್ದರೂ ಆಕೆಯ "ಹೆಸರಿನ" ಧಾತುವಿಗೆ ಹೋಗಿ ಲಿಂಗ ನಿರ್ಧಾರ ಮಾಡುವುದು ನಿಜಕ್ಕೂ ವೈಜ್ನೈಕವೇ ಸರಿ!!!. ನೀರ್ಕಜೆಯವರೇ ಸ್ವಲ್ಪ ಓದಿ ಯೋಚಿಸಿ ಉತ್ತರಿಸಿ! ....
ಕನ್ನಡ ಪ್ರೇಮ ಇರಬೇಕಿದ್ದರೆ ಅದು ಪೂರ್ತಿ ವೈಜ್ನಾನಿಕವಾಗಿದೆ ಎಂದು ಯಾವನ ಅಪ್ಪಣೆಯೂ ಬೇಕಿಲ್ಲ"
ಈತರಾವ್ ಸಾಲುಗಳು ಇನ್ನು ಮುಂದಾದರೂ ಕಡಿಮೆ ಆದರೆ ಅರ್ಥ ಪೂರ್ಣ ಚರ್ಚೆ ಸಾಧ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಸವಿತೃ, ಮೊದಲು ನಿಮ್ಮ ವೈಜ್ನಾನಿಕ ಪದದ ಅರ್ಥವೇನೆಂದು ಹೇಳಿ. ಸರಳತೆಯನ್ನೇ ವೈಜ್ನಾನಿಕತೆ ಎನ್ನುವುದಾದರೆ ಚರ್ಚೆಯ ಅಗತ್ಯವಿಲ್ಲ. {ಈತರಾವ್ ಸಾಲುಗಳು ಇನ್ನು ಮುಂದಾದರೂ ಕಡಿಮೆ ಆದರೆ ಅರ್ಥ ಪೂರ್ಣ ಚರ್ಚೆ ಸಾಧ್ಯ} ಅರ್ಥ ಪೂರ್ಣ ಚರ್ಚೆಯಾಗಬೇಕಿದ್ದರೆ ತನ್ನದಲ್ಲದ ಭಾಷೆಯನ್ನು ಅವೈಜ್ನಾನಿಕ (?) ಅನ್ನೋ ಅಹಂಕಾರ ಬಿಡಬೇಕು. ಅಂಥಾ ಮಾತುಗಳಿಗೆ ಅದರದ್ದೇ ಧಾಟಿಯಲ್ಲಿ ಉತ್ತರಿಸುವುದು ನನ್ನ ಹವ್ಯಾಸ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀರ್ಕಜೆ ಮೊದಲು 'ವ್ಯಾಕರಣ' ಅಂದ್ರೆ ಏನು , 'ಭಾಷಾವಿಜ್ಞಾನ' ಅಂದ್ರೆ ಏನು ಅಂತ ಸ್ವಲ್ಪ ನಾದ್ರೂ ಓದಿಕೊಂಡು ಚರ್ಚೆಗೆ ಬನ್ನಿ. ಇನ್ನು ಮುಂದೆ ಆದರೂ ವಿಷಯದ 'ಅ ಆ ಇ ಈ' ನಾದ್ರೂ ತಿಳಿಯದೆ ಚರ್ಚೆಗೆ ಬರಬೇಡಿ. ಕಿತ್ತಾಡಕ್ಕೆ ನಿಮ್ಮಷ್ಟು ಸಮಯವಿಲ್ಲ. ವಿಷಯ ಇದ್ರೆ ಮುಂದುವರೆಯಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾರಿಕೆಯ ಉತ್ತರ ಏಕೆ. ಸಂಸ್ಕೃತದ ವ್ಯಾಕರಣ ಅವೈಜ್ನಾನಿಕ ಅಂತ ಹೇಳಿದ ಮೇಲೆ ಅದನ್ನು ವಿವರಿಸಬೇಕಾದ್ದು ನಿಮ್ಮ ಕರ್ತವ್ಯ. ಬದಲಾಗಿ ನನಗೆ ವ್ಯಾಕರಣ ಗೊತ್ತಿಲ್ಲ ಅನ್ನುವುದು ಏಕೆ. ನನ್ನನ್ನು ಕಿತ್ತಾಡುವವನು ಎಂದು ಹೇಳುವ ಹಕ್ಕು ಇಲ್ಲ ನಿಮಗೆ. ನಿಮ್ಮ ಪ್ರತಿಕ್ರಿಯೆಗಳಲ್ಲಿ ಕನ್ನಡ ಪ್ರೇಮ ಎದ್ದು ಕಂಡರೂ ಸಂಸ್ಕೃತ ದ್ವೇಷ ಇದೆ ಎನ್ನುವಂತಹ ಅರ್ಥವೂ ಬರುತ್ತದೆ. ಹಾಗಾಗುವುದು ಬೇಡ ಎಂದೇ ಕನ್ನಡ ಪ್ರೀತಿಸಬೇಕಿದ್ದಲ್ಲಿ ಇನ್ನೊಂದು ಭಾಷೆಯನ್ನು ತೆಗಳಬೇಕಿಲ್ಲ ಎಂದು ನಾನಂದಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ಮೊದಲು ಭಾಷೆಯಲ್ಲಿ "ಲಿಂಗ" ಅಂದರೆ ಏನು ಗೊತ್ತ? .. ಗೊತ್ತು ಮಾಡಿಕೊಳ್ಳಿ. ೨. ಭಾಷೆಯ ಬಳಕೆಯಲ್ಲಿ ಒಂದು ವ್ಯಕ್ತಿಯ/ವಸ್ತುವಿನ "ಲಿಂಗ" ವನ್ನುನಿರ್ಧಾರ ಮಾಡಬೇಕ ಬೇಡವಾ ಅಂತ ನಿಮ್ಮನ್ನೇ ಕೇಳಿಕೊಳ್ಳಿ ೩.ಮಾಡಬೇಕಾದರೆ ಯಾವ ಯಾವ್ಯಾವ್ ರೀತಿಯಲ್ಲಿ ಮಾಡಬಹುದು ಅಂತ ಓದಿ ತಿಳ್ಕೊಳ್ಳಿ. ೪. ಸಂಸ್ಕೃತದಲ್ಲಿ ಹೇಗೆ ಲಿಂಗ ನಿರ್ಧಾರ ಮಾಡುತ್ತಾರೆ ಅಂತ ಓದಿಕೊಳ್ಳಿ. ೫ ಕನ್ನಡದಲ್ಲಿ ಹೇಗೆ ಲಿಂಗ ನಿರ್ಧಾರ ಮಾಡುತ್ತಾರೆ ಅಂತ ಓದಿಕೊಳ್ಳಿ. ೬. ಎರಡನ್ನೂ ಹೋಲಿಸಿ. ಯಾವುದು ಹೆಚ್ಚು ಸರಿ / ಸ್ಪಷ್ಟ ನಿಖರ ಅಂತ ವ್ಯತ್ಯಾಸ ಕಂಡುಕೊಳ್ಳಿ. ಸಂಸ್ಕೃತದಲ್ಲಿ / ದ್ರಾವಿದೆತರ ಭಾಷೆಗಳಲ್ಲಿ ಲಿಂಗ ನಿರ್ಧಾರ ತುಂಬಾ ಗೋಜಲು. ಅನೇಕ confusions ಗೆ ಎದೆ ಮಾಡಿಕೊಡುತ್ತಾ. ದ್ರಾವಿದದಲ್ಲಿ ಆ ತರ confusions ಇಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದ್ರೆ ೧. ಕನ್ನಡದಲ್ಲಿ ಲಿಂಗ ವಸ್ತು ವಿನ "ಅರ್ಥ"ವನ್ನು ಅನುಸರಿಸಿ ಆಗುತ್ತೆ. ೨ ಸಂಸ್ಕೃತದಲ್ಲಿ ಲಿಂಗ ನಿರ್ಧಾರ ವಸ್ತುವಿನ "ಶಬ್ದ" ( ನೀವೆಂದಂತೆ ಕೆಲವೆಡೆ ಧಾತು ( ಇದ್ದೂ ಶಬ್ಧವೇ ) ಅನುಸರಿಸಿಯೂ ಆಗಬಹುದು ) ಅನುಸರಿಸಿ ಆಗುತ್ತೆ. ಈಗ ಹೇಳಿ ಯಾವುದು ಹೆಚ್ಚು ಸೂಕ್ತ, ಸ್ಪಷ್ಟ, ಗೋಜಲು, ವೈಜ್ಞಾನಿಕ. ಇವು ಯಾವೂ ಅರ್ಥ ಆಗಲಿಲ್ಲ ಅಂದ್ರೆ ವ್ಯಾಕರಣ ಪುಸ್ತಕೆ ತೆಗೆದು ಓದಿಕೊಂಡು ಬನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದಿದ್ದನ್ನೇ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ಕನ್ನಡಕ್ಕೂ ಸಂಸ್ಕೃತಕ್ಕೂ ಇರೋ ವ್ಯತ್ಯಾಸ ನೀವಂದಿದ್ದು ನನಗೂ ಗೊತ್ತು. ಈ ವ್ಯತ್ಯಾಸ ಇದೆ ಅಂದ ಮಾತ್ರಕ್ಕೆ ಸಂಸ್ಕೃತ ಅವೈಜ್ನಾನಿಕ ಹೇಗಾಗುತ್ತೆ ಅಂತ ಕೇಳಿದ್ದು ನಾನು. ಅಂದರೆ ಪಾಣಿನಿಯ ವ್ಯಾಕರಣ ಸೂತ್ರಗಳಲ್ಲಿ ಇರುವ ವೈರುಧ್ಯಗಳು ಯಾವುವು, ಅದರಲ್ಲಿರುವ ತಪ್ಪುಗಳೇನು ಹಾಗೂ ಅವು inconsistent ಆಗಿದ್ದಲ್ಲಿ ಅವುಗಳ ಉದಾಹರಣೆ ಕೊಡಿ. ಕೇವಲ ಕನ್ನಡದ ವ್ಯಾಕರಣದಂತೆ ಸಂಸ್ಕೃತ ಇಲ್ಲ, ಅದರಿಂದಾಗಿ ಸಂಸ್ಕೃತ ಅವೈಜ್ನಾನಿಕ ಎಂದರೆ ಅದು ಒಪ್ಪತಕ್ಕದ್ದಲ್ಲ. {ಈಗ ಹೇಳಿ ಯಾವುದು ಹೆಚ್ಚು ಸೂಕ್ತ, ಸ್ಪಷ್ಟ, ಗೋಜಲು, ವೈಜ್ಞಾನಿಕ.} ಇಲ್ಲಿ ಯಾರಿಗೆ ಎನ್ನುವ ಪ್ರಶ್ನೆ ಬರುತ್ತದೆ. ಇದನ್ನು ಸ್ಪಷ್ಟಪಡಿಸಿ. {ಇವು ಯಾವೂ ಅರ್ಥ ಆಗಲಿಲ್ಲ ಅಂದ್ರೆ ವ್ಯಾಕರಣ ಪುಸ್ತಕೆ ತೆಗೆದು ಓದಿಕೊಂಡು ಬನಿ} ಓದಿನಲ್ಲೇ ಕಾಲಕಳೆಯುವ ನನಗೆ ಓದಿಕೊಂಡು ಬರಲು ಸಲಹೆ ಅಗತ್ಯವಿಲ್ಲ. ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಮಹೇಶ್ ಪ್ರಸಾದ್ ನೀರ್ಕಜೆಯವರೆ ನನ್ನ ಬೆ೦ಬಲ ನಿಮಗೆರೀ. ನಿಮ್ಮಷ್ಟು ಚೆನ್ನಾಗಿ ತಕ್ಷಣಕ್ಕೆ ಉತ್ತರಿಸಕ್ಕೆ ಬರಲ್ಲ. ಆದ್ರೆ ಸ೦ಸ್ಕೃತವನ್ನ ಅವೈಜ್ಞಾನಿಕ ಅನ್ನೋರು ಒಮ್ಮೆ ಶಾಕಟಾಯನ ಗಾರ್ಗ್ಯ ಶಾಕಲ್ಯ, ಯಾಸ್ಕ ಪಾಣಿನಿಯ ಮು೦ತಾದವರ ವ್ಯಾಕರಣವನ್ನ ಓದಿದರೆ ಒಳಿತು. ಯವುದು ವೈಜ್ಞಾನಿಕ ಯಾವುದು ಅವೈಜ್ಞಾನಿಕ ಅ೦ತ ತಿಳಿಯುತ್ತೆ. ಕನ್ನಡ ಅವೈಜ್ಞಾನಿಕ ಅಲ್ಲ ಆದರೆ ಸ೦ಸ್ಕೃತ ವೈಜ್ಞಾನಿಕ . ಇದನ್ನ ಸಮರ್ಥಿಸಿಕೊಳ್ಳೋದಕ್ಕೆ ನಾನು ಓದಿಕೊ೦ಡಿರೋದು ಸಾಲದು. ನೀವು ಮು೦ದುವರೆಸಿ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಆತ್ರೇಯ ಅವರೇ. ನಾನೂ ಸಿಕ್ಕಾಪಟ್ಟೆ ಎಲ್ಲ ಓದ್ಕೊಂಡಿಲ್ಲ. ಆದ್ರೆ ಅರೆ ಬರೆ ಜ್ನಾನ ಇರೋರು ತಾವು ಪೂರ್ತಿ ತಿಳಿಯದ ವಿಷಯವೊಂದನ್ನು ಅವೈಜ್ನಾನಿಕ ಎನ್ನುವಾಗ ಅದರ ವಿರುಧ್ಧ ವಾದಿಸಲು ಅಂಥಾ ಪಾಂಡಿತ್ಯ ಬೇಕಾಗಿಲ್ಲ. :) ಅಷ್ಟೇ ವಿಷ್ಯ. ಸಿಂಪಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಸ್ವಾಮಿ ಎಷ್ಟನೆ ಕ್ಲಾಸು ಓದಿದ್ದೀರಿ ನೀವು!

ನಿಮಗೆ ಕನ್ನಡ ಓದಕ್ಕೆ ಬಂದ್ರೆ?!  ನಾನು ಎಲ್ಲಿ ಸಂಸ್ಕೃತ ಅವೈಜ್ಞಾನಿಕ ಅಂತ ಹೇಳಿದೀನಿ ಅಂತ ತೋರ್ಸಿ. 

ನಾನು ಹೇಳ್ತಾ ಇರೋದು ಸಂಸ್ಕೃತದಲ್ಲಿ ಲಿಂಗ ನಿರ್ಧಾರ ಅವೈಜ್ನಾನಿಕ ಅಂತ!.

 

ಇಲ್ಲಿ ಯಾರಿಗೆ ಎನ್ನುವ ಪ್ರಶ್ನೆ ಬರುತ್ತದೆ. ಇದನ್ನು ಸ್ಪಷ್ಟಪಡಿಸಿ

ಬರೇ ಓದುತ್ತಲೇ ( ಅರ್ಥ ಮಾಡಿಕೊಳ್ಳದೆ?! )  ಕಾಲ ಕಳೆಯುವ ನಿಮಗೆ "comparative Linguistics " ( ತೌಲನಿಕ ಭಾಷಾವಿಜ್ಞಾನ) ಅನ್ನೋ ಒಂದು ಶಾಸ್ತ್ರವೂ ಇದೆ ಅಂತ  ಇದುವರೆಗೆ ತಿಳಿದಿದೆಯ?  ತಿಳಿದು ಅದರ a  b  c  d ನಾದ್ರೂ ಗೊತ್ತಿದ್ರೆ ಈ ಪ್ರಶ್ನೆ ನಿಮಗೆ ಬರ್ತಾ ಇರಲಿಲ್ಲ.   

 

.....


ಗೊಂಡಾರನ್ಯದ ಕತ್ತಲನ್ನು ಒಂದು ಟಾರ್ಚ್ ಓಗಲಾಡಿಸುವುದು ಕಷ್ಟವೇ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಹಿತಿ ಕೇಳಿದರೆ ಯಾಕೆ ಉರಿದು ಬೀಳ್ತೀರಿ ಸವಿತ್ರೂ, {ನಿಮಗೆ ಕನ್ನಡ ಓದಕ್ಕೆ ಬಂದ್ರೆ?! ನಾನು ಎಲ್ಲಿ ಸಂಸ್ಕೃತ ಅವೈಜ್ಞಾನಿಕ ಅಂತ ಹೇಳಿದೀನಿ ಅಂತ ತೋರ್ಸಿ. } ಲಿಂಗ ನಿರ್ಧಾರ ಅನ್ನೋದು ವ್ಯಾಕರಣದ ಭಾಗವೇ ಅಲ್ಲವೇ? ಪಾಣಿನಿಯ ವ್ಯಾಕರಣ ಸಂಸ್ಕೃತ ಭಾಷೆಯದ್ದೇ ತಾನೆ. {ನಾನು ಹೇಳ್ತಾ ಇರೋದು ಸಂಸ್ಕೃತದಲ್ಲಿ ಲಿಂಗ ನಿರ್ಧಾರ ಅವೈಜ್ನಾನಿಕ ಅಂತ}} ಅದನ್ನೇ ನಾನೂ ಕೇಳುತ್ತಿರುವುದು ಹೇಗೆ ಅಂತ. ಕನ್ನಡದಂತಿಲ್ಲ ಎಂದ ಮಾತ್ರಕ್ಕೆ ಅವೈಜ್ನಾನಿಕ ಹೇಗಾಗುತ್ತದೆ ಅಂತ. {ತಿಳಿದು ಅದರ a b c d ನಾದ್ರೂ ಗೊತ್ತಿದ್ರೆ ಈ ಪ್ರಶ್ನೆ ನಿಮಗೆ ಬರ್ತಾ ಇರಲಿಲ್ಲ} ಗೊತ್ತಿದೆರೀ. comparative Linguistics ನ ಅರ್ಥ ವಿಕಿಪಿಡಿಯ ಪ್ರಕಾರ ಹೀಗಿದೆ : "branch of historical linguistics that is concerned with comparing languages to establish their historical relatedness" ಇಲ್ಲಿ ಹಿಸ್ಟಾರಿಕಲ್ ರೆಲೇಟೆಡ್ನೆಸ್ ಅನ್ನು ಕಲಿಯುವುದೇ comparative Linguistics ನ ಉದ್ದೇಶ ಹೊರತು ಯಾವುದು ವೈಜ್ನಾನಿಕ, ಯಾವುದು ಅವೈಜ್ನಾನಿಕ ಎಂದು ಹೇಳುವುದಲ್ಲವಲ್ಲ. {ಬರೇ ಓದುತ್ತಲೇ ( ಅರ್ಥ ಮಾಡಿಕೊಳ್ಳದೆ?! ) } ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಪಾಣಿನಿಯ ಅಷ್ಟೂ ವ್ಯಾಕರಣ ಸೂತ್ರಗಳು, ವೇದಾಂಗಗಳನ್ನೂ ಓದಿಕೊಂಡು ನೀವು ಸಂಸ್ಕೃತದ ಲಿಂಗ ನಿರ್ಧಾರ ಅವೈಜ್ನಾನಿಕ ಎಂದಿದ್ದರೆ ಒಪ್ಪಬಹುದು. ಹಾಗಿದ್ದಲ್ಲಿ ನಾನು ಕೇಳಿದ ಮಾಹಿತಿ ಕೊಡಲು ನಿಮಗೆ ಏನು ಸಮಸ್ಯೆ. ಕೊಟ್ಟರೆ ಬಾಯ್ಮುಚ್ಚಿಕೊಂಡು ಒಪ್ಪಿಕೊಂಡುಬಿಡುತ್ತೇನಲ್ಲ. ಈ ಚರ್ಚೆಗಳೆಲ್ಲ ಯಾಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 ನೀರ್ಕಜೆ ಪ್ರತಿಕ್ರಿಯೆ ಬರೀತಾ ಹಿಂದಿನ ನನ್ನ ಪ್ರತಿಕ್ರಿಯೆಗಳನ್ನು ಮರೆತು ಬಿಡಬೇಡಿ. ಇವನ್ನು ಮತ್ತೊಮ್ಮೆ ಪೇಸ್ಟ್ ಮಾಡ್ತಾ ಇದ್ದೇನೆ. ಓದಿ ಕೊಳ್ಳಿ.


 ೧. ರಾಮ ಯಾವ ದಿಕ್ಕಿನಿಂದ ಬರ್ತಾ ಇದ್ದಾನೆ ಅಂತ ತಿಳ್ಕೊಂಡು ಅವನ ಲಿಂಗವನ್ನು ತೀರ್ಮಾನಿಸಿವುದು ವೈಜ್ಞಾನಿಕವೆ? ಸರಿನಾ!
ಲಿಂಗ ನಿರ್ಧಾರಕ್ಕೆ ರಾಮನ ದಿಕ್ಕು ಸೂಚಿಸುವ ಪದವನ್ನು ಆಧಾರವಾಗಿ ತೆಗೆದುಕೊಳ್ಳುವುದು ಎಷ್ಟರ ಮಟ್ಟಿಗೆ ವೈಜ್ಞಾನಿಕ?


೨. ಎದುರುಗಡೆ ಹುಡುಗ ರಾಮ ಕೂತಿದ್ದಾನೆ, ಲಕ್ಷ್ಮಿ ಅನ್ನೋ ಹುಡುಗಿ ಕಣ್ಣೆದುರೇ ತಾನೆಲ್ಲ ಸ್ತ್ರೀ ವೇಷ ತೊಟ್ಟುಕೊಂಡು ನಿಂತಿದ್ದರೂ ಆಕೆಯ "ಹೆಸರಿನ" ಧಾತುವಿಗೆ ಹೋಗಿ ಲಿಂಗ ನಿರ್ಧಾರ ಮಾಡುವುದು ನಿಜಕ್ಕೂ ವೈಜ್ನೈಕವೇ? ಸರಿನಾ !!!.


೩. ಶಾಲೆ ಅನ್ನೋ ಪದದ ಲಿಂಗ ನಿರ್ಧಾರ ಅದರ ಧಾತುವಿಂದ ಮಾಡಿದರೆ ಒಪ್ಪುತ್ತೋ  ಅತ್ವ ಆ ಪದದ ಅರ್ಥದ ಮೇಲೆ ಮಾಡಿದರೆ ಹೆಚ್ಚು ಒಪುತ್ತೋ?
ಉತ್ತರಿಸಿ. 


೪. ಲಿಂಗ ನಿರ್ಧಾರದ ಬಗ್ಗೆ ಸಂಸ್ಕೃತದಲ್ಲಿ ಅದೆಷ್ಟು ಗೊಂದಲಗಳಿವೆ ನಿಮಗೆ ಗೊತ್ತ?


 ನಿಮ್ಮ ಕಾಮನ್ ಸೆನ್ಸೆ ಗೆ ಯಾವುದು ಹೆಚ್ಚು metured ಅನ್ಸುತ್ತೆ? ಒಮ್ಮೆ ಯಾಕೆ ಓದಿಕೊಂಡು  ಇಲ್ಲಿ  ಪ್ರತಿಕ್ರಿಯಿಸಬಾರದು? 
 


....................
ಇಲ್ಲಿ ಹಿಸ್ಟಾರಿಕಲ್ ರೆಲೇಟೆಡ್ನೆಸ್ ಅನ್ನು ಕಲಿಯುವುದೇ comparative Linguistics ನ ಉದ್ದೇಶ ಹೊರತು ಯಾವುದು ವೈಜ್ನಾನಿಕ, ಯಾವುದು ಅವೈಜ್ನಾನಿಕ ಎಂದು ಹೇಳುವುದಲ್ಲವಲ್ಲ.


ನಿಮ್ಮ ಆಳವಾದ ಜ್ಞಾನವನ್ನು ಪ್ರದರ್ಶಿಸಿದ್ದಕ್ಕೆ ಧನ್ಯಾವದಗಳು . ದಯವಿಟ್ಟು ಯಾವುದಾದರೂ ತೌಲನಿಕ ಬಾಷವಿಜ್ಞಾನದ ಪುಸ್ತವನ್ನು ಒಮ್ಮೆ ಓದಲು ಪ್ರಯತ್ನಿಸಿ.  ಇಷ್ಟು superficial  knowledge ಇಟ್ಟುಕೊಂಡು ಭಾಷಾವಿಜ್ಞಾನದ ಆಳ ಚರ್ಚೆಗೆ ಬರ್ತೀರಲ್ರೀ.. ಓದಿ ಬನ್ನಿ ಗುರುವೇ!


 ...


ನಿಮಗೆ ಅರ್ಥ  ಮಾಡಿಸಲು ಕೆಲ ಪ್ರಶ್ನೆಗಳು.


೧.ಲಿಂಗ ಅಂದ್ರೆ ಏನು?, ಎಷ್ಟು  ವಿಧಗಳಿವೆ?


೨.ಈಗ ಹೇಳಿ ಕನ್ನಡದಲ್ಲಿ ಲಿಂಗ ನಿರ್ಧಾರ ಹೇಗೆ ಆಗುತ್ತೆ ಅಂತ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 ಪಾಣಿನಿಯ ಅಷ್ಟೂ ವ್ಯಾಕರಣ ಸೂತ್ರಗಳು, ವೇದಾಂಗಗಳನ್ನೂ ಓದಿಕೊಂಡು ನೀವು ಸಂಸ್ಕೃತದ ಲಿಂಗ ನಿರ್ಧಾರ ಅವೈಜ್ನಾನಿಕ ಎಂದಿದ್ದರೆ ಒಪ್ಪಬಹುದು.


ನಾನು ಮಾತಾಡ್ತಾ ಇರೋದು  ದ್ರಾವಿಡ ಮತ್ತಿ ಇಂಡೋ ಯುರೋಪೆಯನ್ ಭಾಷೆಗಳಲ್ಲಿ ಲಿಂಗ ನಿರ್ಧಾರದ ಬಗ್ಗೆ.
ಹೇಗೆ ಕನ್ನಡದಲ್ಲಿ ಲಿಂಗ ನಿರ್ಧಾರವನ್ನು ತಿಳಿಯಲು ಕೇಶೀರಾಜನ ಅವಶ್ಯಕತೆಯಿಲ್ಲವೋ ಆಗೆಯೇ ಸಂಸ್ಕೃತದಲ್ಲಿ ಲಿಂಗ ನಿರ್ಧಾರ ತಿಳಿಯಲು ಪಾಣಿನಿ ನೆ  ಆಗಬೇಕಿಲ್ಲ. ಸಾಮಾನ್ಯರ ವ್ಯಾಕರಣ ಪುಸ್ತಕಗಳೂ ಸಾಕು.


ಬಳಕೆಯಲ್ಲಿನ ವಾಕ್ಯಗಳ ನ್ನು ಗಮನಿಸಿದರೆ ಅಭ್ಯಾಸ ಮಾಡಿದರೆ ಸಾಕು ಲಿಂಗ ನಿರ್ಧಾರ ಅರಿತುಕೊಳ್ಳಲು. ಪಾಣಿನಿ ಕೆಶೀರಜರೆ ಆಗಬೇಕಿಲ್ಲ.


 


ನನ್ನ ಪ್ರಷೆನೆಗೆ ಉತ್ತರಿಸಿ. ಮೊದಲು ಭಾಷೆಯೂ ಅತ್ವ ವ್ಯಾಕರಣವೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ ಥರ ಕನ್ನಡದಲ್ಲಿ ಪಿ ಹೆಚ್ ಡಿ ಮಾಡ್ಕೊ೦ಡಿಲ್ಲ ಸ್ವಾಮಿ. ಏನೋ ಒ೦ದ್ಸ್ವಲ್ಪ ಓದ್ಕೊ೦ಡಿದ್ದೀನಿ. ನೀವು ಸ೦ಸ್ಕೃತ ಅವೈಜ್ಞಾನಿಕ ಅ೦ತ ಹೇಳಿದ್ರಿ ಅ೦ದ್ನಲ್ಲ ಅದನ್ನ ಯಾವ್ದಕ್ಕೆ ಅನ್ವಯಿಸುತ್ತೋ (ಲಿ೦ಗ ವಿಚಾರ ) ಅದಕ್ಕೆ ಹಾಕ್ಕೊಳ್ಳಿ ಸ್ವಾಮಿ. ಏನೋ ಅರೀದ್ ಹುಡ್ಗ ತೆಪ್ ಮಾಡ್ಬಿಟ್ರೆ ಹೊಟ್ಟೇಗ್ ಹಾಕ್ಕ೦ಡ್ ಬಿಡಿ. ಪದದಿ೦ದ ಮತ್ತು ಪದ ಧ್ವನಿಯಿ೦ದ ಲಿ೦ಗವನ್ನು ಗುರುತಿಸುವುದು ಕನ್ನಡದ ಲಕ್ಷಣವಿರಬಹುದು. ಆದರೆ ಪದದ ಮೂಲದಿ೦ದ ಅದರ ಲಿ೦ಗವನ್ನು ಗುರುತಿಸುವಿಕೆ ಅತ್ಯ೦ತ ವೈಜ್ಞಾನಿಕ. ಇದರ ಬಗ್ಗೆ ತಿಳ್ಕೊ೦ಡು ಮಾತಾಡ್ತೀನಿ ಅಲ್ಲೀವರೆಗೂ ನಾನು ಗಪ್ ಚುಪ್ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡ್ರೀ ಹರೀಶ್ ವಿಷಯ ಗೊತ್ತಿದ್ರೆ ಚರ್ಚೆಯಲ್ಲಿ ಭಾಗವಹಿಸಿ ಸರಿ/ ತಪ್ಪು ಅಂತ ವಾದಿಸಿ. ಸುಮ್ನೆ ಏನೂ ಗೊತ್ತಿಲ್ದೆ ಇದ್ರೂ ನಡುವೆ ಬರೋದು ವೈಯಕ್ತಿಕವಾಗಿ attack ಮಾಡೋಕ್ಕೆ ಅವಕಾಶ ಮಾಡಿಕೊಡೋದು ನಿಮ್ಮಂತವರಿಗೆ ಹೊಂದಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧಾತುವಿನ ಅರ್ಥದ ಮೇಲಲ್ಲ. ಧಾತುವಿಗೆ ಸೇರುವ ಪ್ರತ್ಯಯವನ್ನವಲಂಬಿಸಿ ಸಂಸ್ಕೃತದಲ್ಲಿ ಲಿಂಗನಿರ್ಣಯವಾಗುತ್ತದೆ. ’ಸ್ತ್ರಿಯಾಂ ಕ್ತಿನ್" ಅಂದರೆ ಕ್ತಿನ್(ತಿ) ಪ್ರತ್ಯಯದಿಂದ ಉಂಟಾಗುವ ನೀತಿ, ಜಾತಿ, ಶಕ್ತಿ, ಯುಕ್ತಿ ಎಲ್ಲವೂ ಸ್ತ್ರೀಲಿಂಗ ಪದಗಳೇ. ’ತ್ರ’ ಪ್ರತ್ಯಯದಿಂದಾಗುವ ಎಲ್ಲಾ ಪದಗಳು ನಪುಂಸಕಲಿಂಗವೇ. ನೇತ್ರ, ಗಾತ್ರ, ಕ್ಷೇತ್ರ, ಖನಿತ್ರವೆಲ್ಲ ನಪುಂಸಕಲಿಂಗವೇ. ಇದನ್ನು ಉೞಿದ ಪ್ರತ್ಯಯಗಳಿಗೂ ಅನ್ವಯಿಸಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀರ್ಕಜೆಯವರೆ, ರಾಜೇಶ್ ಮಹೇಶ್ವರಿ ಎಂಬ ನಾಮಾಂಕಿತರು ನನಗೆ ಗೊತ್ತಿರೋರು ಇರುವರು ದಿಲ್ಲಿಯಲ್ಲಿ - ಹಿಂದಿಯವರು. ಮಹೇಶ್ವರಿ ಅನ್ನೋ ಪುಲ್ಲಿಂಗವೂ ಇದೆ ಅಂದ ಹಾಗೆ ಆಯ್ತು. ಲಕ್ಷ್ಮಿ ಅನ್ನೋ ಪುಲ್ಲಿಂಗ ಇರೋದು ತಿಳಿದು ಇದನ್ನೂ ಹಂಚಿಕೊಳ್ಳೋಣ ಅಂತ ಅಷ್ಟೆ. ಧನ್ಯವಾದ, - ಅರವಿಂದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಸ್ಕೃತವನ್ನು ಸರಿಯಾಗಿ ಕಲಿತರೆ ಕನ್ನಡವನ್ನು ಸರಿಯಾಗಿ ತಪ್ಪಿಲ್ಲದೆ ಬರೆಯಲು ಅನುಕೂಲವಾಗುತ್ತದೆ.ಕನ್ನಡದ ತದ್ಭವ,ಅಪಭ್ರಂಶಗಳ ಕುರಿತು ತಿಳಿವಳಿಕೆ ಬರುತ್ತದೆ.ಕನ್ನಡ ವ್ಯಾಕರಣ ಸಂಸ್ಕೃತದಿಂದ ಪ್ರಭಾವಿತವಾಗಿದೆ,ಆದರೆ ಕನ್ನಡಕ್ಕೆ ಅದರದ್ದೇ ಆದ ವೈಶಿಷ್ಟ್ಯಗಳು ಇದ್ದೇ ಇವೆ.ಸಂಸ್ಕೃತವು ಕನ್ನಡದ ತಾಯಿ ಅಲ್ಲದಿದ್ದರೂ ಸಾಕುತಾಯಿಯೆಂದು ಕರೆಯಬಹುದು.ಐತಿಹಾಸಿಕವಾಗಿ ಕನ್ನಡ-ಸಂಸ್ಕೃತ ಸಂಬಂಧ ಗಾಢವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+++೧ - ನೀರ್ಕಜೆಯವರ ಶಕ್ತಿ, ಧಾತು ವರ್ಣನೆಯ ಬಗ್ಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡದಲ್ಲಿ ತೃತೀಯಾ ವಿಭಕ್ತಿಯೂ ಇದೆ, ಪಂಚಮಿಯೂ ಇದೆ. ಆದರೆ ಅವುಗಳನ್ನು ಗುಱುತಿಸಿದ ರೀತಿ ಸರಿಯೆನ್ನುವನ್ತಿಲ್ಲ. ತೃತೀಯಾ - ಒಡನೆ, ಒಟ್ಟಿಗೆ, ಒನ್ದಿಗೆ. 'ಇನ್ದ' ತೃತೀಯಾ ವಿಭಕ್ತಿಯಲ್ಲ, ಅದು ಪಂಚಮೀ ವಿಭಕ್ತಿ. ವಿವರ: 'ಸಹಯೋಗೇ ತೃತೀಯಾ' ಎನ್ನುವುದಾದರೆ ರಾಮೇಣ ಸಹ ಕೃಷ್ಣಃ ಆಗತಃ ಸಂಸ್ಕೃತದಲ್ಲಿ ಸರಿ. ಆದರೆ ಅದನ್ನು ಕನ್ನಡಕ್ಕೆ ತರುವಾಗ ವಿಭಕ್ತಿ ಪ್ರತ್ಯಯಗಳನ್ನು ಅನುವಾದ ಮಾಡಬಾರದು. ಒನ್ದು 'ಇನ್ನೊನ್ದರ ಜೊತೆಗೆ' ಎನ್ನುವಾಗ ಅದು ಎರಡು ವಿಭಕ್ತಿ ಪ್ರತ್ಯಯಗಳನ್ನು ಎರಡು ವಿಭಿನ್ನ ಪದಗಳಿಗೆ ಜೋಡಿಸಿ ವಾಕ್ಯವ ಪ್ರಯೋಗಿಸುವ ರೀತಿ. 'ಅ' ಎಂಬ ಷಷ್ಠೀ ವಿಭಕ್ತಿಯೂ 'ಗೆ' ಎಂಬ ಚತುರ್ಥೀ ವಿಭಕ್ತಿಯೂ ಅಲ್ಲಿ ಬೞಕೆಯಾಗಿದೆ. 'ಇನ್ನೊನ್ದರ ಜೊತೆಗೆ' ಎನ್ನುವುದನ್ನು ಒನ್ದೇ ಶಬ್ದದಲ್ಲಿ ಹೇೞಬೇಕಾದರೆ 'ಇನ್ನೊನ್ದರೊನ್ದಿಗೆ' ಎನ್ನಬೇಕು. ಹಾಗೆನ್ನುವಾಗ "ರಾಮನ ಜೊತೆ ಕೃಷ್ಣ ಬಂದ" ಎಂಬ ವಾಕ್ಯವೇ ತಪ್ಪು. ಅಲ್ಲಿ 'ಗೆ' ಎಂಬ ಚತುರ್ಥೀ ವಿಭಕ್ತಿಪ್ರತ್ಯಯವನ್ನು ಸೇರಿಸದಿದ್ದರೆ ನೀವು ಹೇೞಿದ ಅರ್ಥವೂ ಬಾರದು. "ಒನ್ದು ಇನ್ನೊನ್ದರ ಜೊತೆಗೆ ಬನ್ದಿತು" ಎನ್ನುವುದಕ್ಕೂ "ಒನ್ದು ಇನ್ನೊನ್ದರ ಜೊತೆ ಬನ್ದಿತು" ಎನ್ನುವುದಕ್ಕೂ ವ್ಯತ್ಯಾಸವಿದೆ. ಇಲ್ಲಿ ಎರಡನೆಯ ವಾಕ್ಯ ತಪ್ಪಾದ ಬೞಕೆಗೆ ಒನ್ದು ಉದಾಹರಣೆಯಾಗಿದೆ. "ರಾಮನಿಂದ ವನವನ್ನು ಹೊಗಲ್ಪಡುತ್ತದೆ" ತಪ್ಪು. ಕನ್ನಡಕ್ಕೆ ತರುವಾಗ ವಿಭಕ್ತಿ ಪ್ರತ್ಯಯಗಳನ್ನು ಅನುವಾದ ಮಾಡಬಾರದು ಎಂಬ ಮಾತು ಇದಕ್ಕೂ ಅನ್ವಯಿಸುತ್ತದೆ. "ರಾಮನು ವನವನ್ನು ಹೊಕ್ಕನು" ಎನ್ದೇ ಅನುವಾದಿಸಬೇಕು. "ರಾಮನಿಂದ ವನವು ಹೊಗಲ್ಪಡುತ್ತದೆ" ಅದೂ ತಪ್ಪು. ಇನ್ನೊನ್ದು ಉದಾಹರಣೆ: "ಬಾಲಕೇನ ಗ್ರಂಥಃ ಪಠಿತಃ" - ಇದು ಹಿನ್ದಿಯಲ್ಲಿ "ಬಾಲಕ ನೇ ಗ್ರಂಥ ಪಢಾ" ಎನ್ದಾಗುತ್ತದೆ. ಒನ್ದೇ ಮೂಲದ ಭಾಷೆಯಾಗಿದ್ದರು ಹಿನ್ದಿ ಅನುಕರಣೆ ಮಾಡಲಿಲ್ಲ. "ಬಾಲಕ್ ಸೇ...." ಅದು ಅಬದ್ಧವೇ ಆಗುತ್ತಿತ್ತು. ಹೀಗೆ ನಾನು ಕಣ್ಡುಕೊಣ್ಡ ವಿಚಾರವೇನೆನ್ದರೆ 'ಇನ್ದ' ಎನ್ನುವುದು ತೃತೀಯಾ ವಿಭಕ್ತಿಯಲ್ಲ. "ಭಗವಾನ್ ನೇ ಹಂ ಕೋ ತುಮ್ಹೇ ದಿಯಾ ಹೈ" ಇದನ್ನು ಹೇಗೆ ಅನುವಾದಿಸುವಿರಿ? "ಭಗವನ್ತನು ನನಗೆ ನಿನ್ನನ್ನು ಕೊಟ್ಟನು" ಎನ್ದಲ್ಲವೇ? ಕೆಲವರು "ಅವರಿಗೆ ಕರೆ" ಎನ್ನುವುದು ಈ ರೀತಿಯಲ್ಲಿ ಅನುವಾದಿಸಿರುವ ಪ್ರಯೋಗಕ್ಕೆ ಇನ್ನೊನ್ದು ಉದಾಹರಣೆ. ಅದು "ಅವರನ್ನು ಕರೆ" ಎನ್ದಿದ್ದರೆ ಚೆನ್ನು. ಮಲೆಯಾಳದಲ್ಲಿ "ಎನಿಕ್ಕು ಅದಿನೆ ವೇಣಂ" ಎನ್ನುತ್ತಾರೆ. ಇದ್ದಕ್ಕಿದ್ದನ್ತೆ ಅನುವಾದಿಸಿದರೆ "ನನಗೆ ಅದನ್ನು ಬೇಕು" ಎನ್ದಾಗುತ್ತದೆ. ಈ ಉದಾಹರಣೆಯಿನ್ದ ತಿಳಿಯುವುದು ಒನ್ದೇ ಭಾಷಾಪರಿವಾರಕ್ಕೆ ಸೇರಿದ್ದರೂ ಒನ್ದರಿನ್ದ ಇನ್ನೊನ್ದಕ್ಕೆ ಅನುವಾದಿಸುವಾಗ ವಿಭಕ್ತಿಪ್ರತ್ಯಯಗಳನ್ನು ಇದ್ದಕ್ಕಿದ್ದನ್ತೆ ಅನುವಾದಿಸಬಾರದು. ಹಾಗಾದರೆ 'ಇನ್ದ' ಎಲ್ಲಿಗೆ ಸೇರಬೇಕು? ಅದು ಅದು ಪಂಚಮೀ ವಿಭಕ್ತಿ. ಇನ್ತ/ಇನ್ದ ಪ್ರಾಚೀನ (ಪೂರ್ವದ) ಹೞಗನ್ನಡದಲ್ಲಿ ಒನ್ದೇ ಆಗಿತ್ತು. ಆದರೆ ಇನ್ತ ಚತುರ್ಥೀ ವಿಭಕ್ತಿಪ್ರತ್ಯಯದೊನ್ದಿಗೆ ಮಾತ್ರ ಬೞಕೆಯಾಗುತ್ತದೆ. ಉದಾಹರಣೆ: ೧. ಅದಕ್ಕಿನ್ತ = ಅದ್+ಅಱ್+ಕ್+ಇನ್ತ = ಅದರ್ಕಿನ್ತ (ಅದರ್ಕಿನ್ನ). 'ಅದರ್ಕಿನ್ನ' ಎನ್ದು ಕೆಲವರು ಉಚ್ಚರಿಸುವುದನ್ನು ನೀವು ಗಮನಿಸಿರಬಹುದು. ಅದರಲ್ಲಿ ತಪ್ಪೇನೂ ಇಲ್ಲದಿದ್ದರೂ ತಮ್ಮನ್ನು ತಾವು ತಿಳಿದವರೆನ್ದುಕೊಣ್ಡವರು ಅದನ್ನು ತಪ್ಪೆನ್ದು ತಿಳಿಯುತ್ತಾರೆ. ಇಲ್ಲಿ 'ಅದಕ್ಕೆ' ಮತ್ತು 'ಇನ್ತ' ಸನ್ಧಿಯಾಗಿದೆಯೆನ್ದುಕೊಣ್ಡರೂ ತಪ್ಪಾಗದು. ೨. ಅದಱಿನ್ದ = ಅದ್+ಅಱ್+ಇನ್ದ = ಅದಱಿನ್ದ. "ಕನ್ನಡದಲ್ಲಿ ನಿಜವಾಗಿ ತೃತೀಯೆ ಇಲ್ಲವೇ ಇಲ್ಲ" ಇದು ಇನ್ನೊನ್ದು ತಪ್ಪು ತಿಳಿವಳಿಕೆ. "ಸಂಸ್ಕೃತದ ವಿಭಕ್ತಿಗಳೂ ಕನ್ನಡದ ಪ್ರತ್ಯಯಗಳೂ ಪೂರ್ತಿ ಒಂದೇನೇ ಎಂದು ಹೇಳುವುದು ಸಾಧ್ಯವಿಲ್ಲ." ಅಲ್ಲ, ಅವು ಪೂರ್ತಿ ಭಿನ್ನವಾಗಿವೆ. ಆದರೆ ಕನ್ನಡದಲ್ಲಿ ಅವುಗಳ ಸ್ಥಾನವನ್ನು ತಿಳಿಯಲು ಸಂಸ್ಕೃತದ ಸೂತ್ರಗಳು ಸಹಾಯ ಮಾಡುತ್ತವೆ. (ಉದಾ: 'ಸಹಯೋಗೇ ತೃತೀಯಾ') ಹೀಗೆ ಕನ್ನಡ ಮತ್ತು ಸಂಸ್ಕೃತದ ನಡುವಿನ ಸಂಬಂಧ ಬಲು ಗಾಢವಾದುದೆನ್ದು ನಿರೂಪಿಸಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿನ್ದಿಯ ಉದಾಹರಣೆ "ಭಗವಾನ್ ನೇ ಹಮೇಂ ತುಮ್ ಕೋ ದಿಯಾ ಹೈ" ಎನ್ದಾಗಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃಷ್ಣಪ್ರಕಾಶರೆ, >>ತೃತೀಯಾ - ಒಡನೆ, ಒಟ್ಟಿಗೆ, ಒನ್ದಿಗೆ. 'ಇನ್ದ' ತೃತೀಯಾ ವಿಭಕ್ತಿಯಲ್ಲ, ಅದು ಪಂಚಮೀ ವಿಭಕ್ತಿ. ಇದು ಬಹುಮಟ್ಟಿಗೆ ಸರಿ ಆದರೂ, ತೃತೀಯೆಯು ಕರ್ತೃತ್ವವನ್ನು ಹೇಳುವಾಗ ಹೊಂದುವುದಿಲ್ಲ. ನನ್ನ ಉದಾಹರಣೆ (ತೃತೀಯೆಗೆ) ಅಷ್ಟು ಸರಿಯಾಗಲಿಲ್ಲ ಅನ್ನುವುದನ್ನು ಒಪ್ಪುವೆ. ಅರೆಬೆಂದ ಮಡಿಕೆ! ಸೇಡಿಯಾಪು ಕೃಷ್ಣಭಟ್ಟರ ಪುಸ್ತಕದಲ್ಲಿ ತೃತೀಯ-ಪಂಚಮೀ ವಿಭಕ್ತಿಗಳ ವಿವರ ಚೆನ್ನಾಗಿದೆ. >> "ಕನ್ನಡದಲ್ಲಿ ನಿಜವಾಗಿ ತೃತೀಯೆ ಇಲ್ಲವೇ ಇಲ್ಲ" >> ಇದು ಇನ್ನೊನ್ದು ತಪ್ಪು ತಿಳಿವಳಿಕೆ. ಇದು ನನ್ನ ಹೇಳಿಕೆ ಅಲ್ಲ - ಕೆಲವು ವಿದ್ವಾಂಸರ ಅಭಿಪ್ರಾಯ ಅಂತ ನಾನು ಬರೆದಿದ್ದೇನೆ. >>ಕನ್ನಡ ಮತ್ತು ಸಂಸ್ಕೃತದ ನಡುವಿನ ಸಂಬಂಧ ಬಲು ಗಾಢವಾದುದೆನ್ದು ನಿರೂಪಿಸಬಹುದು. ಗಾಢವಾದದ್ದು ಅನ್ನುವುದರಲ್ಲಿ ಅನುಮಾನವಿಲ್ಲ. ಗಾಢವಾದ ಸಂಬಂಧವಿದ್ದಾಗ್ಯೂ ಒಂದರಿಂದ ಇನ್ನೊಂದು ಬಂದಿರುವ ಅಗತ್ಯವಿಲ್ಲ ಅನ್ನುವುದು ನನ್ನ ಅನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನನ್ದಿಗಳೇ, >>ಗಾಢವಾದ ಸಂಬಂಧವಿದ್ದಾಗ್ಯೂ ಒಂದರಿಂದ ಇನ್ನೊಂದು ಬಂದಿರುವ ಅಗತ್ಯವಿಲ್ಲ ಅನ್ನುವುದು ನನ್ನ ಅನಿಸಿಕೆ. ಸರಿಯಾಗಿದೆ, ಕನ್ನಡಕ್ಕೆ ಸಂಸ್ಕೃತ ಮೂಲವಲ್ಲ. >>ತೃತೀಯೆಯು ಕರ್ತೃತ್ವವನ್ನು ಹೇಳುವಾಗ ಹೊಂದುವುದಿಲ್ಲ. ಕರ್ತೃತ್ವವನ್ನು ಹೇೞುವಾಗ ಇಂಗ್ಲೀಷಿನಲ್ಲಿ by ಬೞಕೆಯಾಗುವುದು. ಸಮಾನ ಪರಂಪರೆಯ ಭಾಷೆಗಳಲ್ಲಿ ತೃತೀಯಾ ವಿಭಕ್ತಿಗೆ ಎರಡು ಬಗೆಯ ಪ್ರತ್ಯಯಗಳಿವೆ. ಅಲ್ಲಿ '-ಓಡ್' '-ಉಡನ್' (-ಒಡನೆ, -ಒಟ್ಟಿಗೆ, -ಒನ್ದಿಗೆ) ಎಂಬ ಪ್ರತ್ಯಯಗಳ ಜೊತೆಗೆ '-ಆಲ್' ತೃತೀಯಾ ವಿಭಕ್ತಿಯಾಗಿ ಬೞಕೆಯಾಗುವುದು. ಇದು by ಎಂಬುದಕ್ಕೆ ಸಮಾನಾನ್ತರವಾದುದು. from ಎಂಬುದನ್ನು '-ಇನ್ದ' ಎನ್ನಬಹುದು, ಆದರೆ by ಎಂಬುದನ್ನೂ '-ಇನ್ದ' ಎನ್ನಲಾಗದು. ಒನ್ದು ಕೆಟ್ಟ ಉದಾಹರಣೆ: "ಇಂಥವರಿನ್ದ ರಚಿಸಲಾಯಿತು". ರೂಡಿಯ ಪ್ರಯೋಗದನ್ತೆ ಅದು "ಇಂಥವರಿನ್ದ ರಚಿಸಲ್ಪಟ್ಟಿತು". ಆದರೆ ಅದೂ ಪೂರ್ತಿ ಸರಿಯಾದ ಪ್ರಯೋಗವಲ್ಲ. ಇಲ್ಲ್ಲಿ by ಎಂಬುದಕ್ಕೆ '-ಇನ್ದ' ಎನ್ನಲಾಗಿದೆ. ಮೇಲಣ ಪ್ರಯೋಗವೇ ನಾನು ತಿಳಿದಿರುವ ಮಲೆಯಾಳ ಭಾಷೆಯಲ್ಲಿ "ಇನ್ನವರಾಲ್ ರಚಿಕ್ಕಪ್ಪೆಟ್ಟು" ಎನ್ದಾಗುತ್ತದೆ. ಅಲ್ಲಿ by ಎಂಬುದಕ್ಕೆ '-ಆಲ್' ಎನ್ನಲಾಗಿದೆ. ತಮಿೞಿನಲ್ಲೂ ಇದೇ ರೀತಿ. [ತಮಿೞು ನಿಮಗೆ ತಿಳಿದಿರುವ ಭಾಷೆಯೇ ಆಗಿದ್ದರೂ ಇಲ್ಲಿ ವಿವರಣೆಗಾಗಿ ಮಾತ್ರ ಹೇೞುತ್ತಿರುವೆನು.] 'ಅಂಥದೊನ್ದು '-ಆಲ್' ಪ್ರಾಚೀನ ಹೞಗನ್ನಡದಲ್ಲಿ ಇತ್ತೋ ಇಲ್ಲವೋ' ಎನ್ದು ಬೇಕಾದರೆ ಆರಯ್ಯಬಹುದು, ಆದರೆ ಇನ್ತಹ ಆರಯ್ಯುಗೆಯ ಆವಶ್ಯಕತೆ ಅಷ್ಟರ ಮಟ್ಟಿಗೆ ಕಾಣದು. ಯಾಕೆನ್ದರೆ ಅದನ್ನೇ ಕನ್ನಡದಲ್ಲಿ "ಇಂಥವರು ರಚಿಸಿದರು" ಎನ್ನಬಹುದು. "sung by" ಎಂಬುದನ್ನು ಕನ್ನಡಕ್ಕೆ ಅನುವಾದಿಸುವಾಗ ಅದು "ಹಾಡಿದವರು" ಎನ್ದೇ ಆಗುತ್ತದೆ. ಕೊ.ಕೊ.ಕೊ [ನಿಮ್ಮ ಶೈಲಿಯಲ್ಲಿ] : ಇನ್ದಿನ ಕನ್ನಡದಲ್ಲಿ "-ಒಡನೆ", "-ಒಟ್ಟಿಗೆ", "-ಒನ್ದಿಗೆ" ಹೆಚ್ಚು ಬೞಕೆಯಾಗುವುದೇ ಕಾಣದು. ಪಶ್ಚಿಮ ಕರಾವಳಿಯಲ್ಲೂ "-ಒಟ್ಟಿಗೆ" ಮಾತ್ರ ಬೞಕೆಯಾಗುವುದು. ಇನ್ನುೞಿದ "-ಒನ್ದಿಗೆ", "-ಒಡನೆ" ಗ್ರಾಂಥಿಕವೆನಿಸಿಕೊಣ್ಡು ಮಱೆಯಾಗಿಬಿಟ್ಟಿವೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[ಡಾ| ಹಂಪ ನಾಗರಾಜಯ್ಯ, 'ದ್ರಾವಿಡ ಭಾಷಾವಿಜ್ಞಾನ'] -ತೃತೀಯಾ ವಿಭಕ್ತಿ- ಹೞಗನ್ನಡ ವ್ಯಾಕರಣಗಳಲ್ಲಿ ತೃತೀಯೆಯ ಪ್ರತ್ಯಯವಾಗಿ ಇಮ್ ಎನ್ದು ಹೇೞಿದ್ದರೂ ಅದು ನಕಾರಾನ್ತವೆನ್ದೇ ತಿಳಿಯಬೇಕು. ಒಳ್ಪಿನ್, ನೆಗರ್ಪ್ಪಿನ್, ವರ್ಪ್ಪಿನ್, ಗುಣದಿನ್, ಸುಖದಿನ್ - ಎಂಬ ಶಾಸನದಲ್ಲಿ ಸಿಕ್ಕುವ ಪದಗಳು ಈ ಹೇೞಿಕೆಯನ್ನು ಸ್ಥಿರಪಡಿಸುತ್ತವೆ. ದ್ವಿತೀಯೆಯ ಪ್ರತ್ಯಯ ಅನ್ (-ಆನ್), ತೃತೀಯೆಯ ಪ್ರತ್ಯಯ ಇನ್. ಇದಱ ಜೊತೆಗೆ ಇಮ್/ಇಂ ಇನ್ದಂ, ಇನ್ದೆ ಮತ್ತು /ಎ/, /ಇ/, /ಇನ್ದ/ ಎಂಬ ಪ್ರತ್ಯಯಗಳೂ ತೃತೀಯೆಯ ಪ್ರತ್ಯಯಗಳೆನ್ದು ಹೇೞಿದೆ. ವ್ಯಾವಹಾರಿಕ ಕನ್ನಡದಲ್ಲಿ -ಇನ್ದ ಎಂಬುದುಣ್ಟು. ಇದನ್ನೇ ಸಪ್ತಮಿಯ ಪ್ರತ್ಯಯದಿನ್ದಲೂ ಹೇೞಬಹುದು. ಪೆನ್ನಿನಿನ್ದ ಬರೆ : ಪೆನ್ನಿನಲ್ಲಿ ಬರೆ ಕೇಶಿರಾಜನ ಹೇೞಿಕೆ: ಸಮನಿಸಿ ತೋರಿಸುಗುಮಿಮಿಂ ದಮಿಂದೆಯೆಂಬಿವು ತೃತೀಯೆಯೊಳ್ ಮತ್ತಮೆಕಾ ರಮದೊಂದೆ ಮೇಣ್ ತೃತೀಯೆಗೆ ಸಮುಚಿತಮಾದೇಶಮಱಿದುಕೊಳ್ಗೀ ಕ್ರಮದಿಂ | ಇವುಗಳಲ್ಲಿ ಮೊದಲು ಕಾಲವನ್ನು ಸೂಚಿಸುವ ಕ್ರಿಯಾವಿಶೇಷಣವಾಗಿದ್ದ -ಇಂ, -ಇನ್ (ಎನ್ದರೆ ಆ ಕಾಲದಿನ್ದ ಎಮ್ಬ ಅರ್ಥದಲ್ಲಿ) ಪ್ರತ್ಯಯಗಳು ಮುನ್ದೆ ಅದಱಿನ್ದ, ಅಲ್ಲಿನ್ದ ಎಂಬ ಅರ್ಥದ ತೃತೀಯಾ ವಿಭಕ್ತಿಯ ಪ್ರತ್ಯಯಗಳಾದುವೆಂಬ ಹೇೞಿಕೆಯೂ ಇದೆ. ತೃತೀಯಾ ವಿಭಕ್ತಿಯ ಪ್ರತ್ಯಯಗಳಲ್ಲಿ ಎ ಎಂಬುದು ತೃತೀಯೆಯ ಪ್ರತ್ಯಯವಾಗಿರದೆ ಸಪ್ತಮೀ ವಿಭಕ್ತಿಯ ಪ್ರತ್ಯಯವೆನ್ದು ಹೇೞಬಹುದು. ಕೈಪಿಡಿಕಾಱರೂ ಈ -ಎ ಎಂಬ ಪ್ರತ್ಯಯದ ವಿಚಾರವಾಗಿ ಇದು ತೃತೀಯಾ ವಿಭಕ್ತಿಪ್ರತ್ಯಯವೆನ್ದು ವ್ಯಾಕರಣಗಳಲ್ಲಿ ಹೇೞಿದ್ದರೂ ಸಪ್ತಮೀ ವಿಭಕ್ತಿಪ್ರತ್ಯಯವೆನ್ದು ತೋಱುವುದು; ಒಳಗು + ಎ = ಒಳಗೆ ಎಂಬುದಱೊಡನೆ ಹೋಲಿಸಿ ಎನ್ದು ಹೇೞಿದ್ದಾರೆ. ಅಲ್ಲದೆ ಶಾಸನಗಳಲ್ಲಿ ಎಲ್ಲಿಯೂ -ಎ ಎಂಬುದು ತೃತೀಯೆಯ ಪ್ರತ್ಯಯವಾಗಿ ಬೞಕೆಯಾಗಿರುವನ್ತೆ ತೋಱುವುದಿಲ್ಲ. ತೃತೀಯಾ ವಿಭಕ್ತಿಯ ಪ್ರತ್ಯಯಗಳಾಗಿ ಶಾಸನಗಳಲ್ಲಿ ಸಿಕ್ಕುವ ರೂಪಗಳು ಇನ್ತಿವೆ: ಏೞನೆಯ ಶತಮಾನದಲ್ಲಿ --- -ಇಮ್, -ಇಂ, -ಇನ್, -ಇನ್ದ, -ಇನ್ದು ಎಣ್ಟನೆಯ ಶತಮಾನದಲ್ಲಿ --- -ಇಮ್, -ಇನ್ದೆ ಒಂಬತ್ತನೆಯ ಶತಮಾನದಲ್ಲಿ - -ಇಂ, -ಇನ್, -ಇನ್ದ ಹತ್ತನೆಯ ಶತಮಾನದಲ್ಲಿ - -ಇಮ್, -ಇಂ, -ಇನ್, -ಇನ್ದ, -ಇನ್ದೆ, -ಇನ್ದಂ, -ಇನ್ದಮ್ ಮುನ್ದುವರಿಯುತ್ತ--- ಪ್ರಾಚೀನ ಹೞಗನ್ನಡ ಮತ್ತು ತಮಿೞು ಭಾಷೆಗಳಲ್ಲಿ -ಓಡು, -ಉಡನ್, -ಒಡನೆ, ತೋ[ತೆಲುಗು ಮತ್ತು ತೋಡ] ಬೞಕೆಯಾಗಿವೆ ಎನ್ನುತ್ತಾರೆ. [ನನ್ನ ಟಿಪ್ಪಣಿ:] ಹಂಸಾನನ್ದಿಗಳೇ, ಸೇಡಿಯಾಪು ಕೃಷ್ಣಭಟ್ಟರ ವಿಚಾರಗಳನ್ನು ಎಲ್ಲರೂ ಓದಬೇಕಾಗಿದೆ. ತೃತೀಯೆಯು ಕರ್ತೃತ್ವವನ್ನು ಹೇಳುವಾಗ ಇಂಗ್ಲೀಷಿನ by ಎಂಬುದಕ್ಕೆ ಸಮಾನಾನ್ತರವಾಗಿ -ಇನ್ದಲಾಗಿ ಎನ್ನಬಹುದು ಉದಾಹರಣೆಗೆ: ನಿಮ್ಮಿನ್ದಲಾಗಿ, ರಾಮನಿನ್ದಲಾಗಿ - ಈ ರೀತಿಯಲ್ಲಿ. ರಾಮನಿನ್ದಲಾಗಿ ರಾವಣನು ಕೊಲ್ಲಲ್ಪಟ್ಟನು - ಹೀಗೆ ಹೇೞಿದರೆ ನನಗೆ ತಪ್ಪೆನಿಸದು. [ಇನ್ತಹ ಬೞಕೆಗಳು ಯಕ್ಷಗಾನದಲ್ಲಿ ಹೇರಳ.] "ಪೆನ್ನಿನಿನ್ದ ಬರೆ : ಪೆನ್ನಿನಲ್ಲಿ ಬರೆ" ಸಪ್ತಮೀ ವಿಭಕ್ತಿ ಸ್ಥಾನಸೂಚಕವಾದುದಱಿನ್ದ ಪೆನ್ನಿನ ಮೇಲೆ ಇನ್ನೊನ್ದು ಸಾಧನವನ್ನು ಬೞಸಿಕೊಣ್ಡು ಬರೆಯುವುದಾದರೆ ಮಾತ್ರ '-ಅಲ್ಲಿ' ಸಪ್ತಮಿಯಾಗುತ್ತದೆ, ಪೆನ್ನನ್ನು ಬೞಸಿಕೊಣ್ಡು ಬರೆಯುವುದಾದರೆ ಅದು ತೃತೀಯಾ ವಿಭಕ್ತಿಯೆಂಬ ಹೊಳಹು ನಾಗರಾಜಯ್ಯನವರ ಈ ಬರೆಹದಿನ್ದ ವ್ಯಕ್ತವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ಉ’ ಪ್ರಥಮಾ ವಿಭಕ್ತಿಪ್ರತ್ಯಯವೇ ಅಲ್ಲ. ಕನ್ನಡದಲ್ಲಿ ಅಕಾರಾಂತ ಶಬ್ದಗಳು ’ನ್’ ಯಿಂದ ಅಥವಾ ಮೂಲತಃ ಸಂಸ್ಕೃತದಿಂದ ತೆಗೆದುಕೊಂಡಿದ್ದರೆ ’ಮ್’ ಯಿಂದ ಹೞಗನ್ನಡದಲ್ಲಿ ಕೊನೆಗೊಳ್ಳುತ್ತವೆ. ಉದಾ: ರಾಮಂ(ನ್), ಅಕ್ಕಂ(ನ್), ಮರನ್, ಪೊಲನ್, ನೆಲನ್, ಕಡನ್=ಸಾಲ ಇತ್ಯಾದಿ. ಫಲಂ(ಮ್), ರಸಂ(ಮ್) ಹೊಸಗನ್ನಡದಲ್ಲಿ ಶಬ್ದದ ಕೊನೆಯಲ್ಲಿ ವ್ಯಂಜನವಿಟ್ಟುಕೊಳ್ಳದೇ ಇರುವುದಱಿಂದ ಇವು ಕ್ರಮವಾಗಿ ರಾಮ/ರಾಮನು ಮರ, ಅಕ್ಕ, ಹೊಲ, ನೆಲ ಇತ್ಯಾದಿಯಾಗಿ. ಹೞಗನ್ನಡದಲ್ಲಿರುವ ಮಕಾರ ವ್ಯಾಪಕವಾಗಿ ವಕಾರವಾದಾಗ ಶಬ್ದದ ಕೊನೆಯಲ್ಲಿ ನ್, ಣ್, ಯ್,ರ್, ಱ್, ಳ್, ೞ್ ಗಳನ್ನು ಬಿಟ್ಟು ಉೞಿದವನ್ನು ಉ ಸಹಿತ ಉಚ್ಚಾರ ಮಾಡಬೇಕು. ಹಾಗಾಗಿ ಫಲಂ(ಮ್)->ಫಲವ್->ಫಲವು ಆಗುತ್ತದೆ. ಅಕಾರಾಂತವಲ್ಲದ ಗಿರಿ, ಗುರು, ಪಿತೃ, ಇತ್ಯಾದಿ ಶಬ್ದಗಳಿಗೆ ಹೞಗನ್ನಡದಲ್ಲಿ ಹೊಸಗನ್ನಡದಲ್ಲಿ ಹೇೞುವಂತೆ ಗಿರಿಯು, ಗುರುವು, ಪಿತೃವು ಎಂಬ ಶಬ್ದಪ್ರಯೋಗಗಳನ್ನು ಕಾಣಲು ಸಾಧ್ಯವಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯ ಅನಂತ ಕ್ರಷ್ಣ ರಿಗೆ ಪ್ರಣಾಮಗಳು. ನನ್ನ ಅಜ್ನಾನವನ್ನು ಮನ್ನಿಸಿ. ಱ್, ೞ್, ೞ, ೞು ಈ ಮೇಲಿನ ಅಕ್ಷರಗಳು ನಾನು ಕಲಿತ ಕನ್ನಡದಲ್ಲಿ ಇಲ್ಲ. ಇವುಗಳ ಮಹತ್ತ್ವ ಏನು ಎಂದು ಕೇಳಬಹುದೇ? ನನ್ನಿ. ವ್ಯಾಕರಣ ಸಂಬಂಧಿ ಎತ್ತರದ ಮಟ್ಟದ ಚರ್ಚೆ ಆಗುತ್ತಿರುವಾಗ ವಿಷಯಾಂತರ ಮಾಡುತ್ತಿದ್ದೇನೆ ಎಂದಾದರೆ ದಯವಿಟ್ಟು ಕ್ಷಮಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂಲವಾಗಿ ಱ ಮತ್ತು ರಗಳ ಉಚ್ಚಾರ ಬೇಱೆ ಬೇಱೆ. ಱಕಾರ ಬಂಡಿ ರ. ಇದನ್ನುಚ್ಚರಿಸುವಾಗ ನಾಲಿಗೆಯ ತುದಿ ಹಲ್ಲಿನ ಬುಡದಲ್ಲಿ ಕಂಪಿಸಬೇಕು. ದಂತಮೂಲೀಯ ಕಂಪಿತ. ರ ದಂತಮೂಲೀಯ ತಾಡಿತ ಆಂದರೆ ರ ಉಚ್ಚರಿಸುವಾಗ ನಾಲಿಗೆ ಹಲ್ಲಿನ ಬುಡಕ್ಕೆ ಹೊಡೆಯಬೇಕು. ಆದರೆ ನಡುಗಬಾರದು. ಹೞಗನ್ನಡದಲ್ಲಿ ಇವೆರಡಱ ಬೞಕೆಯಲ್ಲಿ ವ್ಯತ್ಯಾಸವಿದೆ. ರ ಬೞಸುವಲ್ಲಿ ಱ ಬೞಸುವಂತಿಲ್ಲ. ಉದಾಹರೆಣೆಗೆ: ಮೈಮುರಿದು ದುಡಿಯಬೇಕು (ಮುರಿ=ಬಾಗು, ಬಗ್ಗಿಸು). ಕೋಲು ಮುಱಿಯಿತು (ಮುಱಿ=ತುಂಡಾಗು). ಹಾಗೆಯೇ ಳ ಹಾಗೂ ೞ ಕೂಡ. ೞಕಾರದ ಉಚ್ಚಾರ ಲ ಮತ್ತು ಳ ನಡುವಿನ ಅಂಗುಳಿನ ಜಾಗದಲ್ಲಿ. ಬಾೞ್ ಎಂದರೆ ಬದುಕು ಜೀವಿಸು, ಬಾಳ್ ಎಂದರೆ ಕತ್ತಿ. ಹಾಗೆಯೇ ಬಾೞೆ=ಹಣ್ಣು (Banaನ) ಬಾಳೆ=ಮೀನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.