ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!

0

ಕಲಿಕೆಯೂ ಮರೆಯುವುದು ಕಾಲ ಕಳೆದಂತೆ
ಬೇರೂರಿಹ ಹೆಮ್ಮರಗಳೂ ಬೀಳಬಹುದಂತೆ
ಕೆರೆ ನದಿ ಕಡಲುಗಳೂ ಒಣಗಬಹುದಂತೆ
ಕೊಟ್ಟದ್ದು ಬಿಟ್ಟದ್ದು ಕೊನೆಗೂ ನಿಲುವುದಂತೆ 

 

ಸಂಸ್ಕೃತ ಮೂಲ (ಭಾಸನ ಕರ್ಣಭಾರ ನಾಟಕದಿಂದ):

ಶಿಕ್ಷಾ ಕ್ಷಯಂ ಗಚ್ಛತಿ ಕಾಲ ಪರ್ಯಯಾತ್
ಸುಬದ್ಧಮೂಲಾಃ ನಿಪತಂತಿ ಪಾದಪಾಃ |
ಜಲಂ ಜಲಸ್ಥಾನಗತಂ ಚ ಶುಷ್ಯತಿ
ಹುತಂ ಚ ದತ್ತಂ ಚ ತಥೈವ ತಿಷ್ಟತಿ ||

ಕೊಸರು: ಮೂಲದಲ್ಲಿ ಇರುವ ’ಈಗಿನ’ಕಾಲದ ಕ್ರಿಯಾಪದಗಳನ್ನು ನಾನು ನೇರವಾಗಿ ಕನ್ನಡಿಸಿಲ್ಲ

ಕೊ.ಕೊ: ಹುತಂ = ಹೋಮ ಮಾಡಿದ್ದು ಎಂಬ ಸಾಮಾನ್ಯ ಅರ್ಥವಾದರೂ, ಅದಕ್ಕೆ ಲೋಕಹಿತಕ್ಕಾಗಿ ಬಿಟ್ಟದ್ದು ಎನ್ನುವ ಅರ್ಥವೂ ಇದೆ. ನಾನು ಬಿಟ್ಟದ್ದು ಎಂದು ಉಪಯೋಗಿಸಿರುವುದು ಅದನ್ನೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂಸಾನಂದಿಯವರೇ,
ಹೀಗೆಯೇ ಪ್ರೇರಣಾದಾಯಕ ಪ್ರಸಂಗಗಳನ್ನು ಕನ್ನಡೀಕರಿಸಿ, ನನ್ನಂತಹ ಸಂಸ್ಕೃತ ಬಾರದವರಿಗೆ ಅನುಕೂಲವಾಗಲಿ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಅವರೆ,
ನಿಮ್ಮಂತ ಹಿರಿಯರ ಪ್ರೋತ್ಸಾಹ ನಿಜವಾಗಲೂ ಹುಮ್ಮಸ್ಸನ್ನು ಹೆಚ್ಚಿಸುತ್ತೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ,
ಬೆಳ್ ಬೆಳಿಗ್ಗೆ ;) ಒಳ್ಳೇ ಸುಭಾಷಿತ ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದ.

ತಲೆಬರಹ ಓದಿ,
’||ಗುಟ್ಟೊಂದು ಹೇಳುವೆ, ಪುಟಾಣಿ ಮಕ್ಕಳೇ|
||ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ!||’
ಚಿತ್ರಗೀತೆ ನೆನಪಾಯ್ತು.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.