ನೀರು ಹರಿಯುವುದು ಕಡಲಿನ ಕಡೆಗೆ

0

ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ಬೆಟ್ಟದ ಮೇಲೆ ಬೀಳುತ್ತಿರುವ ಮಂಜಿನಿಂದಲೋ? ಯಾಕೋ ಬಗೆಹರಿಯದು. ಬಿಡಿ. ಒಂದು ಒಳ್ಳೇ ಮಾತು ಹೇಳಲು ಪೀಠಿಕೆ ಬೇರೆ ಬೇಕಾ?


ಬಾನಿಂದ ಬೀಳುವ ಮಳೆಯ ನೀರೆಲ್ಲ ಕಡೆಗೆ ಹರಿವುದು ಕಡಲ ಕಡೆಗೆ
ನೀನಾವ ದೇವನಿಗೆ ಮಣಿವಾಗಲೂ ಅದು ತಲುಪುವುದು ಹರಿಯ ಕಡೆಗೆ!

 

ಸಂಸ್ಕೃತ ಮೂಲ:

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||

(* ಮೂಲದ ಕೇಶವ ಅನ್ನುವ ಪದವನ್ನು  ಕನ್ನಡದಲ್ಲಿ ಹರಿ ಎಂದು ಬದಲಾಯಿಸಿದ್ದೇನೆ. ಹರಿ, ಮತ್ತು ಕಡೆ ಎರಡೂ ಪದಗಳಲ್ಲಿ ಶ್ಲೇಷೆ ಮಾಡುವಾಸೆಯಿಂದಷ್ಟೆ! ಕ್ಷಮೆ ಇರಲಿ.) 

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ.

ಈ ಮಂತ್ರವನ್ನು ದಿನ ಸಂಧ್ಯಾವಂದನೆ ಮಾಡುವಾಗ ಹೇಳ್ಕೊಳ್ತೀನಿ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೇ, ನಿಮ್ಮ ಅನುವಾದದಲ್ಲಿ ಎರಡನೆ ಸಾಲಿನ ಬಗ್ಗೆ ನನ್ನ ಪ್ರತಿಕ್ರಿಯೆ ಇದು.

"ಹರಿಗೆ ತಲುಪು", ಅಥವಾ "ಹರಿಯನ್ನು ತಲುಪು" ಎಂದಾಗ ಬರುವ ಸರಿಯಾದ ಅರ್ಥ "ಹರಿಯ ಕಡೆಗೆ ತಲುಪು" ಎನ್ನುವಾಗ ಬರುವುದಿಲ್ಲ. ’ತಲುಪುವುದು’ ಒಂದು ಪ್ರಕ್ರಿಯೆ ಮುಗಿಯುವುದನ್ನು ಸೂಚಿಸುತ್ತದೆ. ಆದ್ದರಿಂದ ಅದಕ್ಕೆ ’ಹರಿಯ ಕಡೆಗೆ’ ಎನ್ನುವಂಥ ದಿಕ್ಸೂಚಿ ವಿಶೇಷಣ ಸರಿಹೋಗುವುದಿಲ್ಲ.

ಅದೇ ಒಂದುವೇಳೆ ನಡೆ, ಓಡು, ಸಾಗು, ತೆವಳು ಮುಂತಾದ ಕ್ರಿಯಾಸೂಚಿ/ಚಲನಸೂಚಿ ಪದಗಳಾದರೆ "ಹರಿಯ ಕಡೆಗೆ ಓಡು", "ಹರಿಯ ಕಡೆಗೆ ನಡೆ","ಹರಿಯ ಕಡೆಗೆ ತೆವಳು" ಸರಿಹೋಗುತ್ತವೆ.

ಉದಾಹರಣೆಗೆ, ನಿಮ್ಮ ಅನುವಾದದ ಎರಡನೇ ಸಾಲನ್ನೇ ಸಂದರ್ಭೋಚಿತವಾಗಿ ಮತ್ತು ತಮಾಷೆಗಾಗಿ ಹೀಗೆ ಬರೆದಿದ್ದೇನೆ-

"ಸಂಪದದಲ್ಲಿ ಏನನ್ನು ಪೋಸ್ಟ್‌ಮಾಡಿದರೂ ಅದು ಸಾಗುವುದು ಹರಿಯ ಕಡೆಗೆ"
(ಹರಿಪ್ರಸಾದ್ ನಾಡಿಗ್ ಸಂಪದದ super-user ಮೇರುಬಳಕೆದಾರ ಎಂದುಕೊಳ್ಳೋಣ)

ಕೊನೆಗೆ ಇನ್ನೊಂಚೂರು ಹಾಸ್ಯ.

ತಮಿಳಿನಲ್ಲಿ ಸ ಮತ್ತು ಚ ಅದಲುಬದಲಾಗುವುದರಿಂದ, "... ಯಥಾ ಗಚ್ಛತಿ ಚಾ ಗರಂ"!
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

-ರಸಿಕತೆ
ಹೀಗೂ ಕನ್ನಡದಲ್ಲಿ ಬರಿಯಬಹುದೇನೋ?
(ಶ್ರೀವತ್ಸ ಜೋಶಿಯವರ ಅನ್ನಿಸಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಹರಿಯಕಡೆಗೆ ಬದಲು ಹರಿಗೆ ಎಂದು ಮಾಡಿ....)
(ಹಾಗೇ ಮಹೇಶರ ಅನ್ನಿಸಿಕೆಯಂತೆ ಬಿದ್ದದ್ದು ಬಳಸಿ....)

ಆಕಾಶದಿಂದ ಬಿದ್ದ ನೀರೆಲ್ಲ ಕಡೆಗೆ ಹರಿವುದು ಕಡಲಿಗೆ
ಆವ ದೇವರಿಗೆ ನಮಿಸಿದರೂ ಕಡೆಗೆ ತಲುಪುವುದು ಹರಿಗೆ

ಢನ್ಯವಾದಗಳು!
ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ವದೇವನಮಸ್ಕಾರಃ ಎಂದು ಸಮಸ್ತಪದ ಮಾಡಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಕಂದರೆ, ತಿದ್ದಿರುವೆ.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.