ಬಾಯ್ಬಿಟ್ಟು ನುಡಿಯಬೇಕೇ?

0

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು

*ಎಣಿಸು= ಊಹೆ ಮಾಡು, ತರ್ಕಿಸು

ಸಂಸ್ಕೃತ ಮೂಲ (ಹಿತೋಪದೇಶದ ಸುಹೃದ್ಭೇದ ದಿಂದ):

ಉದೀರಿತೋSರ್ಥಃ ಪಶುನಾಪಿ ಗೃಹ್ಯತೇ
ಹಯಾಶ್ಚ ನಾಗಾಶ್ಚ ವಹಂತಿ ದೇಶಿತಾಃ
ಅನುಕ್ತಮಪ್ಯೂಹತಿ ಪಂಡಿತೋ ಜನಃ
ಪರೇಂಗಿತ ಜ್ಞಾನಫಲಾ ಹಿ ಬುದ್ಧಯಃ

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮುಂಬೈನಲ್ಲಿ ಬಹುತೇಕ ವ್ಯವಹಾರಗಳು ಬಾಯಿಬಿಟ್ಟು ನುಡಿಯದೇ ನಡೆಯುವವು ! ಹಾಗಾಗಿ ಇಲ್ಲಿನ ಜನರೆಲ್ಲ ಪಂಡಿತರೇ !! ಪರೇಂಗಿತ ಜ್ಞಾನ ಬಹಳ ಇಲ್ಲಿನ ಜನಕ್ಕೆ , ( ಇಲ್ಲಿನ ನಾಯಿ ಬೆಕ್ಕುಗಳಿಗೂ ಇದೆ ಅಂತ ನನ್ನ ಗುಮಾನಿ)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೇ ರೀ ಮುಂಬಯಿ ತರಹ ಊರು ಮತ್ತೊಂದಿಲ್ಲ :) ನಿಜವಾಗಲೂ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೇ,

ಹೇಳದುದನ್ನೂ ಅರ್ಥ ಮಾಡಿಕೊಳ್ಳುವ ಜನರು ಮಾತ್ರ ಪಂಡಿತರು ಅಂತ ಅರ್ಥವೇ?
ಅಥವಾ
ಪ್ರಾಣಿಗಳಿಂದ ಭಿನ್ನರಾಗಿ ಮಾನವರು ಹೇಳದುದನ್ನೂ ಅರ್ಥೈಸಿಕೊಳ್ಳುತ್ತರೆ, ಹಾಗಾಗಿ ಮಾನವರೆಲ್ಲ ಪಂಡಿತರು ಅಂತ ಅರ್ಥವಾಗುತ್ತೋ?
ಏನೇ ಆದರೂ ಅರ್ಥ ಆಗಿ, ಅಪಾರ್ಥ ಆಗದಿದ್ದರೆ ಚೆನ್ನ.

- ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಹೇಳದುದನ್ನೂ ಅರ್ಥ ಮಾಡಿಕೊಳ್ಳುವ ಜನರು ಮಾತ್ರ ಪಂಡಿತರು ಅಂತ ಅರ್ಥವೇ?

ಹೌದು ಸ್ವಾಮಿ!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅನುಕ್ತಮಪ್ಯೂಹತಿ ಪಂಡಿತೋ ಜನಃ

ಯಾವುದು ಉಕ್ತಿಯಲ್ಲವೋ ಅದನ್ನೂ ಊಹಿಸಿಕೊಳ್ಳುವ ಯೋಗ್ಯತೆ ಹೊಂದಿರುತ್ತಾರೋ ಆ ಜನರು ಪಂಡಿತರು ಎಂದಿರಬಹುದು.
ಸಂಸ್ಕೃತ ಜ್ಞಾನ ಇಲ್ಲ. (ಕಲಿಯ ಬೇಕು ಅನ್ನಿಸುತ್ತಿದೆ). ಆದರೆ ಉಪಯೋಗಿಸಿರುವ ಪದ ವಿಂಗಡಣೆ ಮಾಡಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ, ಅಷ್ಟೆ.

-ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.