ಏಕೆ ಓದಬೇಕು?

0

ತಮ್ಮದೇ ನುಡಿಗಳನು ಕೇಳಿ ನಲಿವರಿಗರೂ*
ಪರರ ಕವಿತೆಗಳನೂ ಓದಿ ಸಂತೋಷಿಪರು
ಹೂಗಳಲೆ ಜೇನು ತುಂಬಿರುವ ಮಾವಿನ ಮರವು
ಕೊಡತುಂಬ ನೀರುಣಿಸ ಬಯಸದೇನು?

ಸಂಸ್ಕೃತ ಮೂಲ:

ಅಪಿ ಮುದಮುಪಯಾಂತೋ ವಾಗ್ವಿಲಾಸೈಃ ಸ್ವಕೀಯೈಃ
ಪರಭಣಿತಿಷು ತೋಷಂ ಯಾಂತಿ ಸಂತಃ ಕಿಯಂತಃ
ನಿಜಘನಮಕರಂದಸ್ಯಂದಪೂರ್ಣಾಲವಾಲಃ
ಕಲಶಸಲಿಲಸೇಕಂ ನೇಹತೇ ಕಿಂ ರಸಾಲಃ

*ಅರಿಗ = ಅರಿತವ, ತಿಳಿದವ,ವಿದ್ವಾಂಸ   (ಶಂಕರಭಟ್ಟರು ಈ ಪದವನ್ನು ಬಳಸಿದ್ದನ್ನು ನೋಡಿದೆ - ಹಿಡಿಸಿತು - ಅದಕ್ಕೇ ಉಪಯೋಗಿಸಿದೆ)
ನೀರುಣಿಸ = ನೀರಿನ ಉಣಿಸನ್ನು

-ಹಂಸಾನಂದಿ

ಕೊ.ಕೊ:  ಓದಬೇಕೇಕೆ? ಅಂತ ಒಬ್ಬರು ಸಂಪದಿಗರು ಕೇಳಿದ್ದನನ್ನ ಈಗ ತಾನೇ ನೋಡಿದೆ. ಅದರ ಫಲವೇ ಈ ಅನುವಾದ :)

 

 

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಅನುವಾದ ಓದಿ ಖುಷಿಯಾಯ್ತು ಸರ್. ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.