ಒಳ್ಳೆಯ ಆಸರೆ

0

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರು

 

ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ)

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

ಕೊಸರು: ಇದು ಸುಭಾಷಿತಕಾರನ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯ ಎಂದು ಎಣಿಸುವ ಅಗತ್ಯವಿಲ್ಲ

ಕೊನೆಯ ಕೊಸರು: ಇದೇ ಸುಭಾಷಿತಕ್ಕೆ  "ಅನಾಶ್ರಯಾ ನ ಶೋಭಂತೇ ಕವಿತಾ ವನಿತಾ ಲತಾಃ" ಎನ್ನುವ ಪಾಠಾಂತರವೂ ಇದೆ ಎಂದು ಕಾಣುತ್ತದೆ. 

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

-ರಸಿಕತೆ
ಹಂಸಾನಂದಿಯವರೆ,

ಪಂಡಿತರು, ಮಲ್ಲಿಗೆ ಮತ್ತು ಇತರ ಸುಗಂಧ ಪರಿಮಳ ಲತೆಗಳು ನಮ್ಮ ಗುಂಪಿಗೆ (ವನಿತೆಯರ) ಸೇರಿರುವುದು ಹೆಮ್ಮೆಯ, ಸಂತೋಷದ ಸಂಗತಿ-(ಆಸರೆಯಲ್ಲಾದರೂ ಚಿಂತೆಯಿಲ್ಲ)

ಧನ್ಯವಾದ!

ಮೀನಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.