ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

0

ಕುದುರೆಯು ಬೇಡ ಆನೆಯೂ ಬೇಡ
ಹುಲಿಯಂತೂ ಮೊದಲೇ ಬೇಡ
ಕೊಡಬೇಕು ಬಲಿ ಆಡಿನ ಮರಿಯನು
ಮೆದುಗರ ದೇವರೂ ಕೊಲ್ಲುವನು

ಸಂಸ್ಕೃತ ಮೂಲ:

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ|
ಅಜಾಪುತ್ರಂ  ಬಲಿಂ ದಧ್ಯಾತ್ ದೇವೋ ದುರ್ಬಲಘಾತಕಃ||

ಕೊ.ಕೊ: ಇವತ್ತು ಸಂಪದದಲ್ಲೇ ಇನ್ನೊಂದು ಬರಹವನ್ನು ಓದಿದಾಗ, ನೆನಪಾದ ಸುಭಾಷಿತ ಇದು.

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಂಸಾನಂದಿ,

ಚೆಂದ ಉಂಟು. :)
ಇನ್ನಷ್ಟು ಸುಭಾಷಿತಗಳು ನಿಮ್ಮಿಂದ ಬರಲಿ.

ಧನ್ಯವಾದ.

-ಸ್ವಾಮಿ ಶರಣಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಅರ್ಥವಾಗಲಿಲ್ಲ ಸ್ವಲ್ಪ ಬಿಡಿಸಿ ಹೇಳಿ ಅನಿಲ್ :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಹಂಸಾನಂದಿಯವರೇ,
ಈ ಸುಭಾಷಿತ ಪರಿಚಯದ್ದೇ ಆದರೂ ಓದುವಾಗಲೆಲ್ಲಾ ಮನಸ್ಸಿನೊಳಗೆ ಏನೋ ಸಂಕಟ ಕೊಡುತ್ತದೆ. ಹೌದು, ದುರ್ಬಲರನ್ನು ಆ ದೇವರೂ ರಕ್ಷಿಸುವುದಿಲ್ಲವೆಂದರೆ ದುರ್ಬಲರೆಲ್ಲಾ ಇನ್ನಾರ ಮೊರೆ ಹೋಗಬೇಕೋ! ನಿಮ್ಮ ಸುಭಾಷಿತಗಳು ಎಲ್ಲರನ್ನೂ ಚಿಂತಿಸುವಂತೆ ಮಾಡುತ್ತವೆ.
ಶೈಲಾಸ್ವಾಮಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಾಣಿಗಳು ಕೂಡ ದುರ್ಬಲ ವಾಗಿರುವ ತನ್ನ ಮರಿಗಳನ್ನೇ ತಿಂದು ಬಿಡುತ್ತದೆ. (ಓದಿದ್ದು)
ಸುಭಾಷಿತ ಚನ್ನಾಗಿದೆ.
ಸೀತ ಆರ್.ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ. ನಮ್ಮ ಒಬ್ರು ಪ್ರೊಫೆಸರ್ ಯಾವಾಗಲೂ ಹೇಳ್ತಿರ್ತಾರೆ "god will help only those who help themselves". ಈ ಮಾತು ನಿಜವಲ್ಲವೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಕತಾಳೀಯವೇನೋ ಎಂಬಂತೆ ಇವತ್ತು ತಾನೆ ಮ್ಯಾಲ್ಕೋಲ್ಮ್ ಗ್ಲ್ಯಾಡ್‍ವೆಲ್ (Malcolm Gladwell) ಬರೆದ ಪುಸ್ತಕ "OUTLIERS" ಓದುತ್ತಾ ಇದ್ದೆ. ಯಶಸ್ಸು ಮತ್ತು ಯಶಸ್ವಿ ಸಾಧಕರನ್ನು ಸಮಾಜ ಪರಿಗಣಿಸುವ ಪರಿಯನ್ನು ಚರ್ಚಿಸುವ ಈ ಪುಸ್ತಕದ ಮೊದಲ ಅಧ್ಯಾಯದ ಶೀರ್ಷಿಕೆ " The Matthew Effect"

New Testament ನ Gospel of Matthew ನ 25:29ನೇ ಶ್ಲೋಕ ಕೆಳಕಂಡಂತಿದೆ.
" FOR UNTO EVERYONE THAT HATH SHALL BE GIVEN, AND HE SHALL HAVE ABUNDANCE. BUT FROM HIM THAT HATH NOT SHALL BE TAKEN AWAY EVEN THAT WHICH HE HATH "

ಮೇಲಿನ ಶ್ಲೋಕ ಉದ್ಗರಿಸುತ್ತ ಗ್ಲ್ಗ್ಲ್ಯಾಡ್‍ವೆಲ್ ಸಮಾಜದ ಪರಿಕಲ್ಲ್ಪನೆ ಎಲ್ಲಾ ಸೌಲಭ್ಯಗಳೂ, ಸವಲತ್ತುಗಳೂ ಶ್ರೀಮಂತರಿಗೆ, ಯಶಸ್ವಿಗಳಿಗೆ ಹೆಚ್ಚು ಹೆಚ್ಚಾಗಿ ದೊರಕಿ, ಬಡವರು ಮತ್ತು ಅಶಕ್ತರು ಇನ್ನೂ ಅಧೋಗತಿಗೆ ಇಳಿಯುವಂಥ ಪರಿಸ್ಥಿತಿ ಉತ್ಪನ್ನವಾಗಲೆಂದೇ ಆಗಿದೆಯೇನೋ ಎಂದು ಶಂಕಿಸುತ್ತಾರೆ.

"ಕೆಳಗೆ ಬಿದ್ದವರನ್ನ ಎಲ್ಲರೂ ಒದೆಯೋದು" ನೈಸರ್ಗಿಕ ನಿಯಮವೇನೋ ಅಂತ ಕಾಣುತ್ತೆ.

- ನವರತ್ನ ಸುಧೀರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.