ಹೆಸರುವಾಸಿ ಆಗೋದು ಹೇಗೆ?

4.5

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ! 

ಸಂಸ್ಕೃತ ಮೂಲ:

ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾಸಭಾರೋಹಣಮ್|
ಯೇನಕೇನ ಪ್ರಕಾರೇಣ  ಪ್ರಸಿದ್ಧ ಪುರುಷೋ ಭವೇತ್ ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ. :)

ನಿಮ್ಮ ಸುಭಾಷಿತ ಓದಿ ತುಂಬಾ ದಿನಗಳಾಗಿತ್ತು.

-ಸ್ವಾಮಿ ಶರಣಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಒಳ್ಳೇ ಮಾತಿಗೆ ಆಭಾರಿ :)

ಹೀಗೇ ಒಳ್ಳೇ ಮಾತು ನೆನಪಾದಾಗ ಬರೆಯೋದಷ್ಟೇ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ

ನಿಮ್ಮ ಹೆಸರು ಹಾಳಾಗಿದ್ರೆ ಸ್ವಲ್ಪ ಮುಲಾಮು ಹಚ್ಚಿ (Amruthanajan) ವಾಸಿ ಆಗುತ್ತೆ

ಆಗ ನಿಮ್ಮ ಹೆಸರು ವಾಸಿ ಆಗುತ್ತೆ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯದ ಸಂಗತಿಗಳನ್ನೆ ಹೇಳಿದ್ದೀರಾ ಹಂಸಾನಂದಿಯವರೇ

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ :) ಚೆನ್ನಾಗಿದೆ ಅರವಿಂದ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನಾ ಕರ್ನಾಟಕದಲ್ಲಿ ನಡೆಯುತ್ತಿರುವ ಸದ್ದುಗದ್ಲ -ಈ ಸುಭಾಷಿತದ ಪರಿಣಾಮ ಅಲ್ಲವೇ?
ಹಂಸಾನಂದಿಯವರಿಗೆ ನನ್ನಿ,
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮವಾದ ಸುಭಾಷಿತಕ್ಕೆ ಧನ್ಯವಾದಗಳು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರಿಗೆ ನಮಸ್ಕಾರ.

ಒಳ್ಳೆಯ ಸುಭಾಷಿತವನ್ನೇ (redundancy?) ವಿವರಿಸಿದ್ದೀರಿ, ಅನುವಾದಿಸಿದ್ದೀರಿ. ಧನ್ಯವಾದಗಳು.

ಆದರೆ ನೀವು ನಮೂದಿಸಿದ ಸಂಸ್ಕೃತ ಆವೃತ್ತಿಯಲ್ಲಿ "ಕುರ್ಯಾತ್ ರಾಸಭಾರೋಹಣಮ್" ಸಾಲು ಅನುಷ್ಟುಪ್ ಛಂದಸ್ಸನ್ನು ಪಾಲಿಸುತ್ತಿಲ್ಲವಲ್ಲ?

ಅನುಷ್ಟುಪ್ ಲಕ್ಷಣವೆಂದರೆ
ಪಂಚಮಂ ಲಘು ಸರ್ವತ್ರ ಸಪ್ತಮಂ ದ್ವಿಚತುರ್ಥಯೋಃ |
ಗುರು ಷಷ್ಟಂ ಚ ಪಾದಾನಾಂ ಚತುರ್ಣಾಮ್ ಸ್ಯಾದನುಷ್ಟುಭಿಃ||

ಆದರೆ ಇಲ್ಲಿ ಐದನೇ ಅಕ್ಷರ ’ಭಾ’ ಗುರು ಆಗಿರುವುದರಿಂದ (ಕು, ರ್ಯಾ, ರಾ, ಸ ಇವು ಕ್ರಮವಾಗಿ ಒಂದು, ಎರಡು, ಮೂರು, ನಾಲ್ಕನೇ ಅಕ್ಷರಗಳು. ತ್ ಅರ್ಧಾಕ್ಷರವಾಗಿರುವುದರಿಂದ ಗಣನೆಗೆ ಇಲ್ಲ. ಭಾ ಐದನೇ ಅಕ್ಷರ ಆಗುತ್ತದೆ) ಛಂದಸ್ಸಿನ ಪಾಲನೆಯಾಗಿಲ್ಲ.

ನನ್ನ ಬಳಿ ಇರುವ ’ಸುಭಾಷಿತ ರತ್ನಭಾಂಡಾಗಾರಮ್’ ಪುಸ್ತಕದಲ್ಲಿ ಈ ಸುಭಾಷಿತ ಹೀಗಿದೆ:

ಘಟಂ ಭಿಂದ್ಯಾತ್ಪಟಂ ಛಿಂದ್ಯಾತ್ಕುರ್ಯಾದ್ರಾಸಭ ನಿಃಸ್ವನಮ್‌ ।
ಯೇನ ಕೇನ ಪ್ರಕಾರೇಣ ಪ್ರಸಿದ್ಧಃ ಪುರುಷೋ ಭವೇತ್‌ ।।

ಅರ್ಥ, ನೀವು ವಿವರಿಸಿದ್ದು ಸರಿಯೇ ಇದೆ. ಮತ್ತೊಮ್ಮೆ ಧನ್ಯವಾದಗಳೊಂದಿಗೆ.

ಈ ಸುಭಾಷಿತವನ್ನಾಧರಿಸಿದ ವಿಚಿತ್ರಾನ್ನ ಲೇಖನ ಇಲ್ಲಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೋಶಿಯವರೇ,

ನಾನೂ ನೆನಪಿನಿಂದ ಬರೆದದ್ದು ಹಾಗಾಗಿ ತಪ್ಪಿರುವ ಸಾಧ್ಯತೆ ಇದ್ದೇ ಇದೆ. ಸರಿಯಾದ ಪಾಠಕ್ಕಾಗಿ ಧನ್ಯವಾದಗಳು.

ಇದೊಂದೇ ಅಲ್ಲದೆ, ಕುರ್ಯಾತ್ ಮರ್ಕಟ ಕೌತುಕಮ್ ಅನ್ನೋ ಒಂದು ರೂಪವೂ ನೆನಪಾಗ್ತಾ ಇದೆ :) ಅದು ಛಂದಸ್ಸಿಗೂ ಹೊಂದಬಹುದೇನೋ.

ಮತ್ತೆ ಕತ್ತೆ ಹತ್ತಿದರೇನು, ಕೋತಿಹಾಗೆ ಚೇಷ್ಟೆ ಮಾಡಿದರೇನು - ಒಟ್ಟಲ್ಲಿ ಹೆಸರುವಾಸಿಯಾದರಾಯ್ತಲ್ಲ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಪ, ವಾಟಾಳ್‌ ನಾಗರಾಜ್‌ಗೆ ಈ ಪರಿ ಅವಮಾನ ಮಾಡಬಾರದಿತ್ತು ರಾಮಪ್ರಸಾದ್‌ ಅವರೇ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲ ಪ್ಯಾರ ಓದಿ, ವಾಟಾಳ್ ನಾಗರಾಜ್ ಬಗ್ಗೆ ಬರೆದಿದ್ದಾರೆ ಅಂತ ಅಂದ್ಕೊಂಡಿದ್ದೆ! :)
ವಿಚಿತ್ರಾನದಲ್ಲೂ ಇದನ್ನು ಓದಿದ ನೆನಪಿದೆ.

ವಾಟಾಳ್ ಅವರಿಗೆ ಐಡಿಯಾಗಳು ಎಲ್ಲಿಂದ ಸಿಗುತ್ತವೆ ಈಗ ಗೊತ್ತಾಯ್ತು. ;)
ವಾಟಾಳ್ ಅವರು ಇತ್ತೀಚೆಗೆ ರಾಜಭವನದಲ್ಲಿ ಮಾಡಬೇಕೆಂದಿದ್ದ (ಮಾಡಿದರೊ ಇಲ್ಲವೊ ತಿಳಿಯಲಿಲ್ಲ) ಪ್ರತಿಭಟನೆ ಬಗ್ಗೆ ಏನಾದರೂ ಸುಭಾಷಿತಗಳಿವೆಯೋ ಅಂತ ಸಂಶಯ ಶುರುವಾಗಿದೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>"ವಾಟಾಳ್ ಅವರಿಗೆ ಐಡಿಯಾಗಳು ಎಲ್ಲಿಂದ ಸಿಗುತ್ತವೆ..."

What all ideas Vatal gets!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಜೋಶಿ,
ಇನ್ತಹ ಪನ್ನುಗಳು ಎಲ್ಲಿ ಅಡಗಿರುತ್ತವೆ...
ನನಗೆ ಕೊಡಿ ತಮ್ಮ ಪೆನ್ನ , ನಾನೂ ಬರೆಯುವೆನು ಪನ್ನ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ವಾಟಾಳ್ ಅವರು ಇತ್ತೀಚೆಗೆ ರಾಜಭವನದಲ್ಲಿ ಮಾಡಬೇಕೆಂದಿದ್ದ (ಮಾಡಿದರೊ ಇಲ್ಲವೊ ತಿಳಿಯಲಿಲ್ಲ) ಪ್ರತಿಭಟನೆ ಬಗ್ಗೆ ಏನಾದರೂ ಸುಭಾಷಿತಗಳಿವೆಯೋ ಅಂತ ಸಂಶಯ ಶುರುವಾಗಿದೆ >>

ಅವರ ಒಡನಾಟ ಸದಾ ಕೋಣ, ಕತ್ತೆ ಮುಂತಾದ ಪ್ರಾಣಿಗಳ ಜೊತೆಗಲ್ಲವೆ? ಅದಕ್ಕೆಂದೇ ಅವರಿಗೆ ಇಂಥ ಐಡಿಯಾಗಳು ಸುಲಭವಾಗಿ ಸಿಗುತ್ತವೆ. ರಾಜಭವನದಲ್ಲಿ ಒಂದಾ ಮಾಡಲು ಮಂದಿ ಜೊತೆಗೆ ಹೋಗಿದ್ದರು. ಆದರೆ, ಪೊಲೀಸರು ಲಾಠಿ ಹಿಡಿದು ನಿಂತಿದ್ದು ನೋಡಿ, ಉಟ್ಟ ಬಟ್ಟೆಯಲ್ಲೇ ಮಾಡಿಕೊಂಡೇನು ಎಂದು ಬೆದರಿ ವಾಪಸ್‌ ಹೋದರು.

ಪಾಪ, ಪತ್ರಿಕಾ ಛಾಯಾಗ್ರಾಹಕರಿಗೆ ಅವಕಾಶ ಮಿಸ್ಸಾಯ್ತು. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಗ್ರಹಯೋಗ್ಯ ಸುಭಾಷಿತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಸರು ಗಳಿಕೆಯ ಚಟ ಎನ್ನುವ ವ್ಯಾಧಿ ವಾಸಿ ಆಗ್ಬೇಕು.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ,

ಸುಭಾಷಿತದ ಅನುವಾದ ತುಂಬಾ ಚೆನ್ನಾಗಿದೆ! ನನಗೂ ಈ ಸುಭಾಷಿತ ನೋಡಿ ಜೋಷಿಯವರ ಲೇಖನ ನೆನಪಿಗೆ ಬಂದಿತ್ತು!

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.