ಚೆಲುವು ಇರುವುದೆಲ್ಲಿ?

3

ಎಲ್ಲಿಹುದು ಸಾಜದಲಿ
ಚೆಲುವಾದ್ದು ಅಲ್ಲದುದು?
ಒಲುಮೆ ಎಲ್ಲಿಹುದದುವೆ
ಚೆಲುವೆಂದು ತೋರುವುದು!

ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ):

ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಿಯ ಹಂಸಾನಂದಿಯವರೇ,
ಈ ಶ್ಲೋಕದ ಅರ್ಥ ಎಷ್ಟು ಸತ್ಯವಾಗಿದೆ! ಹೌದು ಪ್ರಿತಿಯ ಕಣ್ಣುಗಳಿಗೆ ಎಲ್ಲವೂ ಚೆಲುವಾಗಿಯೇ ಕಾಣುತ್ತವೆ. ಅದಕ್ಕೆ ಅಲ್ಲವೇ ಹೇಳುವುದು "ಚೆಲುವು ಎಂಬುದು ವಸ್ತುವಿನಲ್ಲಿ ಇಲ್ಲ, ನೋಡುಗರ ಕಣ್ಣುಗಳಲ್ಲಿದೆ," ಎಂದು.
ಶೈಲಾಸ್ವಾಮಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೇ,

ಶ್ಲೋಕ, ಭಾವಾನುವಾದ ಎರಡೂ ಸೊಗಸಾಗಿದೆ.

--
PaLa

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ.

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಒಳ್ಳೇ ಮಾತಿಗೆ ಧನ್ಯವಾದಗಳು :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

-ರಸಿಕತೆ
ಹಂಸಾನಂದಿಯವರೆ,

ನೀವು "ಚೆಲುವಿನ" ಬಗ್ಗೆ "ಚ" ಕಾರ ಎತ್ತಿರುವುದು ಚೆನ್ನಾಗಿದೆ. ಹಾಗೆ ಅದರಲ್ಲಿ "ಚೆಲುವೂ" ಕಾಣಿಸುತ್ತಿದೆ.
ವಿಶ್ವಾಸದಿಂದ,
ಮೀನಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆಲುವನ್ನು ನೋಡಲು ಚೆಲುವಿನ ಕಣ್ಣುಗಳು ಬೇಕು.

ಚೆಲುವನ್ನು ಆಸ್ವಾದಿಸಲು ಬಂಗಾರದ ಹೃದಯಬೇಕು.

ಚೆಲುವನ್ನು ನೆನೆಯಲು. ಚೆಲುವಿನ ನೆನೆಪುಗಳಲ್ಲದೆ ಬೇರೆಬರಲುಸಾಧ್ಯವೇ ?

ಸೃಷ್ಟಿಯ ಸಕಲ ಚರಾಚರವಸ್ತುಗಳಲ್ಲಿ ಚೆಲುವನ್ನು ಕಾಣಬಲ್ಲ ವ್ಯಕ್ತಿ, ಒಬ್ಬ ಅಸಮಾನ್ಯವ್ಯಕ್ತಿ. ಅವನ (ಳ) ಚಿಂತನೆ, ಮಾತು, ಹಾಗೂ ಕೆಲಸ ಎರಡೂ ಒಂದೆ. ಪ್ರತಿಕ್ಷಣದಲ್ಲೂ ಆತ (ಆಕೆ )ತನ್ನ ಚೆಲುವಾದ ವ್ಯಾಪಾರಗಳಿಂದ, ವ್ಯವಹಾರಗಳಿಂದ ಚೆಲುವನ್ನು ಪಡೆದು ಆಸ್ವಾದಿಸಿ, ಬೇರೆಯವರಿಗೆ ಹಂಚುತ್ತಾನೆ (ಳೆ) ಸಹಿತ !

ಹಂಸಾನಂದಿಯವರು ಒಬ್ಬ ಚೆಲುವಿನ ಆರಾಧಕರಲ್ಲದೆ ಮತ್ತೇನು !

ನಾವೆಲ್ಲಾ ನಿಮ್ಮ ಫ್ಯಾನ್ (ನು)ಗಳು !!!!

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಲುಮೆ ಎಲ್ಲಿಹುದದುವೆ ಚೆಲುವೆಂದು ತೋರುವುದು! ----------------------------- ಹಂಸ ನ0ದಿ ಅವ್ರೆ.. ತುಂಬಾ ಚೆನ್ನಾಗಿದೆ.. ಎರಡು ಸಾಲುಗಳಲ್ಲಿ ಇರ್ವದು ಅಪ್ಪಟ ನಿಜ... ಪ್ರತಿಕ್ರಿಯೆಗಳು ಮುದ ನೀಡಿದವು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.