ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

4.285715

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.

ಸಂಸ್ಕೃತ ಮೂಲ:

ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ |
ಪರಸ್ಪರಂ ಮರ್ಮಸು ತೇ ಪತಂತಿ
ತಾನ್ ಪಂಡಿತೋ ನಾಪಸೃಜೇತ್ಪರೇಷು ||

-ಹಂಸಾನಂದಿ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನುಡಿ ಮುತ್ತು ಚೆನ್ನಾಗಿದೆ ನಮ್ಮ ,ಬಾಯಿಂದ ಬರುವ ಕೆಟ್ಟ ಮಾತುಗಳು ನಮ್ಮ ನಡೆ ಮತ್ತು ನುಡಿಯನ್ನು ತಿಳಿಸುತ್ತದ್ವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನುಡಿ ಮುತ್ತು ಚೆನ್ನಾಗಿದೆ ನಮ್ಮ ,ಬಾಯಿಂದ ಬರುವ ಕೆಟ್ಟ ಮಾತುಗಳು ನಮ್ಮ ನಡೆ ಮತ್ತು ನುಡಿಯನ್ನು ತಿಳಿಸುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸ ನ0ದಿ ಅವ್ರೆ- ತುಂಬಾ ಚೆನ್ನಾಗಿದೆ. ಅರ್ಥಪೂರ್ಣವಾಗಿದ್ದು ಅಪಾರ ಅರ್ಥವನ್ಣ ಹೊಂದಿದೆ.. ಇದನ್ನೇ ಮಾತು ಆಡಿದರೆ ಹೊಯು ಮುತ್ತು ಒಡೆದರೆ ಹೋಯ್ತು ಮತ್ತು ಮಾತು ಬೆಳ್ಳಿ ಮೌನ ಬಂಗಾರ ಎಂಬ ನುಡಿಗಟ್ತಿಗೂ ಅನ್ವಯಿಸಬಹುದು ... ಶುಭವಾಗಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.