ರಾಗ ಅಭೇರಿ - ಮೊದಲ ಕಂತು

0

ಯಾವುದೇ ರಾಗಗಳ ಬಗ್ಗೆ ಬರೆದು ಬಹಳ ದಿನಗಳಾಯಿತು ಅನ್ನಿಸಿತು. ಅದಕ್ಕೇ ಇರಲಿ ಅಂತ ಅಭೇರಿ ರಾಗದ ಬಗ್ಗೆ ಶುರು ಮಾಡ್ತಿದ್ದೇನೆ.

ಕರ್ನಾಟಕ ಸಂಗೀತದಲ್ಲಿ ಅಭೇರಿ, ಆಭೇರಿ ಅನ್ನುವ ಎರಡು ಹೆಸರುಗಳಿಂದಲೂ ಕರೆಯಲ್ಪಡುವ ಈ ರಾಗಕ್ಕೆ ಹಿಂದೂಸ್ತಾನಿ ರಾಗದಲ್ಲಿ ಒಂದು ಅವಳಿ ಜವಳಿ ರಾಗವಿದೆ. ಅಲ್ಲಿ ಅದನ್ನ ಭೀಮ್‍ಪಲಾಸ್, ಅಥವಾ ಭೀಮ್‍ಪಲಾಸೀ ಅಂತ ಕರೀತಾರೆ. ಕರ್ನಾಟಕ ಸಂಗೀತದಲ್ಲಿ ಇದು ಬಹಳ ಹಳೇ ರಾಗದಂತೆ ಕಾಣೋದಿಲ್ಲ. ೧೭ನೇ ಶತಮಾನದ ನಂತರ ಕಂಡುಬರೋ ಹೆಸರಿದು. ಆದರೆ, ಅದಕ್ಕೂ ಮೊದಲು ದೇವಗಾಂಧಾರ ಅಂತ ಪ್ರಸಿದ್ಧವಾದ ರಾಗವೊಂದಿತ್ತು, ಅದು ಹೆಚ್ಚು ಕಡಿಮೆ ಈಗ ನಾವು ಯಾವುದನ್ನ ಅಭೇರಿ ಅಂತ ಕರೀತೀವೋ ಅದೇ ತರಹ ಇರ್ತಿತ್ತು. ಈಗ ಕರ್ನಾಟಕ ಸಂಗೀತದಲ್ಲಿ ದೇವಗಾಂಧಾರಿ ಅಂತ ಬೇರೊಂದು ಪ್ರಸಿದ್ಧ ರಾಗ ಇರೋದ್ರಿಂದ, ೨೦ ನೇ ಶತಮಾನದಲ್ಲಿ ಹಳೆಯ ದೇವಗಾಂಧಾರಕ್ಕೆ ಕರ್ನಾಟಕ ದೇವಗಾಂಧಾರಿ ಅಂತ ಕರೆಯೋ ಪದ್ಧತಿ ಶುರುವಾಗಿದೆ.

ಇಷ್ಟು ಸಾಲದು ಅಂತ ಅಭೇರಿ ರಾಗದಲ್ಲೇ ತ್ಯಾಗರಾಜರ ಪದ್ಧತಿ ದೀಕ್ಷಿತರ ಪದ್ಧತಿ ಅಂತ ಎರಡು ಬೇರೆಬೇರೆ ರಾಗಗಳಿವೆ. ಸದ್ಯಕ್ಕೆ ನಾನು ತ್ಯಾಗರಾಜರ ಪದ್ಧತಿಯ ಅಭೇರಿ ರಾಗದ ಬಗ್ಗೆ ಮಾತಾಡುವೆ. ಇದಕ್ಕೂ (ಕರ್ನಾಟಕ) ದೇವಗಾಂಧಾರಕ್ಕೂ ವ್ಯತ್ಯಾಸ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ.

ಇನ್ನು ಮಾಮೂಲಿನ ಹಾಗೆ, ಈ ರಾಗದ ಸ್ವರಗಳ ಬಗ್ಗೆ ಮಾತಾಡೋ ಮೊದಲು, ಕೆಲವು ಚಿತ್ರಗೀತೆಗಳನ್ನ ಕೇಳಿಬಿಡೋಣ ಅಲ್ವೇ? ಅಂದಹಾಗೆ, ಈ ರಾಗ ಚಿತ್ರಸಂಗೀತಗಾರರಿಗೆ ಒಳ್ಳೇ ಪ್ರಿಯವಾದ ರಾಗ ಅಂದ್ರೆ ತಪ್ಪಿಲ್ಲ. ಕನ್ನಡ ಚಿತ್ರಗಳಲ್ಲಂತೂ ಒಳ್ಳೊಳ್ಳೇ ಹಾಡುಗಳು ಈ ರಾಗದಲ್ಲಿ ಬಂದಿವೆ.

ಮೊದಲಿಗೆ:
ಕನ್ನಡಕ್ಕೆ ಒಬ್ಬರೇ ರಾಜ್ ಕುಮಾರ್ ಹಾಡಿರುವ ಚೆಲುವೆಯೇ ನಿನ್ನ ನೋಡಲು - ಹೊಸಬೆಳಕು ಚಿತ್ರದಿಂದ:

ಇನ್ನೊಂದು ಇನ್ನೂ ಹಳೆಯ, ಆದರೆ ಬಲು ಸೊಗಸಾದ ಗೀತೆ - ನಿನ್ನ ನೀನು ಮರೆತರೇನು - ದೇವರ ಕಣ್ಣು ಚಿತ್ರದ್ದು - ಎಸ್ಪಿ ಬಾಲಸುಬ್ರಮಣ್ಯಂ ಕೊರಲಲ್ಲಿ:

ಮೂರನೆಯದು ಮತ್ತಿನ್ನಷ್ಟು ಹಳೆಯ, ಆದರೆ,  ಮತ್ತಿನ್ನಷ್ಟು ಚೆನ್ನಾಗಿರುವ ಗೀತೆ - ಹೂವು ಚೆಲುವೆಲ್ಲ ತಂದೆಂದಿತು - ಚಿತ್ರ ಹಣ್ಣೆಲೆ ಚಿಗುರಿದಾಗ - ಹಾಡಿರುವುದು ಪಿ.ಸುಶೀಲಾ

ಸದ್ಯಕ್ಕೆ ಮೂರಕ್ಕೆ ಮುಕ್ತಾಯವಾಗಿರಲಿ. ಮತ್ತೆ ಇನ್ನೊಂದು ಸಲ ನೋಡಬಹುದು. ಅಲ್ವಾ?

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿತ್ತು ಹಾಡುಗಳು ಹಂಸಾನಂದಿಯವರೆ,

ಆದರೆ, ಒಂದು ಪ್ರಶ್ನೆ, ಈ ಹಾಡುಗಳು ಒಂದಕ್ಕೊಂದು ಸ್ವಲ್ಪ್ ಬೇರೆ ಕೇಳಿಸುತ್ತಲ್ಲಾ, (ಅಂದರೆ ರಾಗದ ಧಾಟಿಯಲ್ಲಿ) ಅದು ಜುಸ್ತ್ ನಾರ್ಮ ವೇರಿಏಶನ್ ತರನಾ?

~ಮೀನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು - ಒಂದು ರಾಗದಲ್ಲಿರೋ ಎಲ್ಲ ರಚನೆಗಳೂ ಒಂದೇ ತರಹ ಇರಬೇಕಿಲ್ಲ, ಆದ್ರೆ ಅದದೇ ಸ್ವರಗಳನ್ನ, ಸಂಚಾರಗಳನ್ನ ಬಳಸ್ತಿರತ್ವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೀಗೆಯೇ ರಾಗಗಳನ್ನು ಪರಿಚಯುಸುತ್ತಿರಿ ಸರ್. ಹಾಗೆ ಅಭೇರಿ ಮತ್ತು ಕರ್ನಾಟಕ ದೇವಗಾಂಧರದ ವ್ಯತ್ಯಾಸ ಆದಷ್ಟು ಬೇಗ ತಿಳಿಯುವಂತಾಗಲಿ. ಹಾಗೆ ಹಿಂದೂಸ್ತಾನಿ ಸಮಾನಂತರ ರಾಗಗಳ ನೀಡಿದ್ದಕ್ಕೆ ಧನ್ಯವಾದಗಳು.

ಇವಳೇ ವೀಣಾ ಪಾಣಿ ವಾಣಿ.... ಇದು ಯಾವ ಚಿತ್ರದ್ದು ತಿಳಿದಿಲ್ಲ. ಇದು ಕೂಡ ಅಭೇರಿ ಅಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು - ಇವಳೇ ವೀಣಾ ಪಾಣಿ ಕೂಡಾ ಅಭೇರಿಯೇ

ಆ ಹಾಡಿಗೆ ಇಲ್ಲಿಂದ ಒಂದು ಕೊಂಡಿ ಇದೆ.

http://wanderingmindz.wordpress.com/2008/06/16/ivale-veenapani/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿ,
ತುಂಬ ಧನ್ಯವಾದಗಳು. ಈ ಕೆಲಸ ನಿಲ್ಲದಿರಲಿ.
ಕೇಶವ (www.kannada-nudi.blogspot.com)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್
ಅಭೇರಿಯಲ್ಲಿ ಇನ್ನೂ ಕೆಲವು ಚಿತ್ರ ಗೀತೆಗಳು, ನನಗೆ ತಿಳಿದವು, ಸುಮ್ಮನೆ ಇರಲೀ೦ತ ಸೇರಿಸಿದ್ದೇನೆ :
೧) ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ....
೨) ಗಗನವು ಎಲ್ಲೋ ಭೂಮಿಯು ಎಲ್ಲೋ.......
೩) ವಿರಹಾ ನೂರು ನೂರು ತರಹಾ............
೪) ಬಣ್ಣಾ ಒಲವಿನ ಬಣ್ಣಾ
೫) ಆಸೆಯ ಭಾವ.....
೬) ಒಲುಮೆಯ ಹೂವೇ ನೀ ಹೋದೆ ಎಲ್ಲಿಗೇ......
೭) ಗೊರಿ ತೆರಾ ಗಾವ್ ಬಡಾ ಪ್ಯಾರಾ....
೮) ಓ ಎ೦ಥ ಸೌ೦ದರ್ಯ ಕ೦ಡೇ....
೯) ತುಮ್ ಮಿಲೇ ದಿಲ್ ಖಿಲೇ...
೧೦) ಓ ಪ್ರಿಯತಮಾ ಕರುನೆಯಾ ತೊರೆಯಾ......
೧೧) ತೂ ಚೀಜ್ ಬಡೀ ಹೈ ಮಸ್ತ್ ಮಸ್ತ್....
೧೨)ಆಕಾಶವೆ ಬೀಳಲಿ ಮೇಲೇ ನಾನಿನ್ನ ಕೈ ಬಿಡೆನೂ.......

ಇನ್ನೂ ಸುಮಾರು ಇವೆ, ಆದರೆ ಬರೆಯಲು ಸ್ವಲ್ಪ ಬೋರ್ ಆಗ್ತಿದೆ. ಆಭೇರಿಯ ಮು೦ದಿನ ಕ್೦ತಿಗಾಗಿ ಕಾಯುತ್ತಿದ್ದೇವೆ.........!!!!!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.