ಈ ಟೀವಿ ವಾರ್ತೆ ಸರ್ಕಾರ್ ಸೀರೀಸ್!

0

ಈ ಟೀವಿ ನ್ಯೂಸ್ ಚಾನಲ್ ನಲ್ಲಿ ಹಲವು ಯುವ ವರದಿಗಾರರಿದ್ದಾರೆ. ಅವರಲ್ಲಿ ನನಗೆ ಇಷ್ಟವಾಗುವವರೆಂದರೆ ಸುಘೋಷ್, ನಡುಬೆಟ್ಟ (ಸಾಹಿತ್ಯ ವಿಚಾರ), ಜ್ಯೋತಿ ಇರ್ವತ್ತೂರು (ಸಾಹಿತ್ಯ ಮತ್ತು ರಾಜಕೀಯ) ಮತ್ತಿತರರು. ಟೀವಿ ೯ ನಲ್ಲಿ ಕೂಡ ಚೇತನ್, ವಿಜಯಲಕ್ಷ್ಮಿ ಮತ್ತಿರರು ಚೆನ್ನಾಗಿ ವರದಿ ಮಾಡ್ತಾ ಇದ್ದಾರೆ.

ಈ ಟೀವಿ ವರದಿಗಾರರಲ್ಲಿ ಯಾರು ಈ "ಸರ್ಕಾರ್ ಸೀರೀಸ್" ಮಾಡ್ತಾ ಇದ್ದಾರೋ ನಂಗಂತು ಗೊತ್ತಿಲ್ಲ. ಆದ್ರೆ ಇಡೀ ಕರ್ನಾಟಕದ ಜನತೆ ದಿನಾಲೊ ನ್ಯೂಸ್ ನೋಡ್ದೆ ಇದ್ದ್ರೂನು ಈ ಸರ್ಕಾರ್ ನೋಡಲು ಕೂತು ಬಿಡ್ತಾರೆ. ಈ ಸರ್ಕಾರ್ ಸೀರೀಸ್ ಪ್ರಾರಂವಾಗಿದ್ದು ಸುಮಾರು ೨ ತಿಂಗಳ ಹಿಂದೆ ಅನ್ಸುತ್ತೆ. ಆಗಿನ್ನು ಅಧಿಕಾರ ಹಸ್ತಾಂತರಕ್ಕೆ ಒಂದು ತಿಂಗಳು ಕಾಲ ಉಳಿದಿತ್ತು. ಅಧಿಕಾರ ಹಸ್ತಾಂತರ ಕೌಂಟ್-ಡೌನ್ ಕೂಡ ಬರ್ತಾ ಇತ್ತು.

ನಾನು ನೋಡಿದ ಅತಿ ರಂಜನೀಯ ಸರ್ಕಾರ ಎಂದರೆ:
೧. ಜೊತೆಯಲಿ ಜೊತೆ ಜೊತೆಯಲಿ (ಚಿತ್ರ:ಗೀತ): ಈ ಹಾಡನ್ನು ಹಾಕಿ, ಕುಮಾರ ಸ್ವಾಮಿ ಮತ್ತು ಯಡಿಯೂರಪ್ಪ ಅವರನ್ನು ತೋರಿಸ್ತಾ ಇದ್ದರು.

೨. ಈ ಜನರ ನಡುವೆ ನಾನು ಹೇಗೆ ಬಾಳಲಿ?: ಈ ಹಾಡನ್ನು ಹಾಕಿ ದಂಗು ಬಡಿದಂತೆ ಕೂತ ಸಿದ್ಧರಾಮಯ್ಯ ಅವರನ್ನು ತೋರಿಸ್ತಾ ಇದ್ದರು. ಈ ಜನರು ಎನ್ನುವಾಗ ಧರಮ್ ಸಿಂಗ್ ಮತ್ತಿತರರನ್ನು ತೋರಿಸ್ತಾ ಇದ್ದರು.

೩. ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ: ಕುಮಾರ ಸ್ವಾಮಿಗೆ ದೇವೇಗೌಡರು ಸಿಹಿ ತಿನ್ನಿಸುವ ದೃಶ್ಯ ತೋರಿಸ್ತಾ ಇದ್ದರು.

೪. ಯಾರೆ ಕೂಗಾಡಲಿ ಊರೆ ಹೋರಾಡಲಿ ಎಮ್ಮೆ ನಿನಗೆ ಸಾತಿ ಇಲ್ಲ: ಈ ಹಾಡನ್ನು ಹಾಕಿ ವಾಟಾಳ್ ನಾಗರಾಜ್ ಎಮ್ಮೆಯ ಮೇಲೆ ಸವಾರಿ ಮಾಡುವ ದೃಶ್ಯ ತೋರಿಸುತ್ತಿದ್ದರು.

೫. ಆನೆಗೊಂದು ಎಲ್ಲೆ ಎಲ್ಲಿದೆ? (ಪ್ರೇಮದ ಕಾಣಿಕೆ): ಈ ಹಾಡನ್ನು ಹಾಕಿ ಯಡಿಯೂರಪ್ಪ ಅವರನ್ನು ತೋರಿಸುತ್ತಿದ್ದರು.

೬. ಒಂದೇ ಒಂದು ಸಾರಿ ಕಣ್ ಮುಂದೆ ಬಾರೆ (ಮುಂಗಾರು ಮಳೆ) ಈ ಹಾಡನ್ನು ಹಾಕು ಯಡಿಯೂರಪ್ಪನವರ ಮುಂದೆ ಗ್ರಾಫಿಕ್ಸ್ ನಲ್ಲಿ ಮಾಡಿ ಕುರ್ಚಿಯನ್ನು ತೋರಿಸ್ತಾ ಇದ್ದರು.

೭. ಕಣ್ಣಲ್ಲು ನೀನೇನೆ (ಪಲ್ಲಕ್ಕಿ) : ಈ ಹಾಡಿಗೆ ಯಡಿಯೂರಪ್ಪನವರ ದೃಶ್ಯ.

೮. ಬಿಡಬೇಡ (ಹೆಚ್ ಟು ಓ): ಡಿ.ಟಿ. ಜಯಕುಮಾರ್ ಮತ್ತು ಇಕ್ಬಾಲ್ ಅನ್ಸಾರಿ ಅವರ ದೃಶ್ಯಗಳು.

೯. ಈ ಟಚ್ಚಲಿ ಏನೊ ಇದೆ (ಧಮ್): ಖರ್ಗೆ ಅವರಿಗೆ ದೇವೇಗೌಡರು sweet ತಿನ್ನಿಸೋ ದೃಶ್ಯ.

೧೦. ಇದು ಮಾಯ ಬಜಾರು ಕುಣಿವಾಗ ಹುಷಾರು: ಈ ಹಾಡಿಗೆ ಕಾಂಗ್ರೆಸ್ ಮುಖಂಡರ ದೃಶ್ಯ.

೧೧. ಅಲ್ಲಿ ಇಲ್ಲಿ ನೋಡುವೆ ಏಕೆ: ಶಾಸಕಿ ತೇಜಸ್ವಿನಿ ಅವರು ಮೆಳ್ಳಗಣ್ಣಿನಲ್ಲಿ ನೋಡಿಕೊಂಡು ಬರುವ ದೃಶ್ಯ.

೧೨. ಮೋಸಗಾರನ ಹೃದಯ ಶೂನ್ಯನಾ (ಪ್ರೇಮ ಲೋಕ) : ಅಧಿಕಾರ ಹಸ್ತಾಂತರ್ ಮಾಡದೆ ಕುಮಾರ ಸ್ವಾಮಿ ರಾಜೀನಾಮೆ ನೀಡಿದ ದಿನ ಹಾಕಿದ ಹಾಡು.

೧೩. ದೇವರ ಆಟ ಬಲ್ಲವರಾರು: ಈ ಹಾಡಿಗೆ ದೇವೇಗೌಡರ ಧೃಶ್ಯ!

ಈ ರೀತಿ ಇಲ್ಲಿಯವರೆಗೆ ಸುಮಾರು ೧೪ ಸರ್ಕಾರ್ ಗಳನ್ನು ಈಟೀವಿ ನ್ಯೂಸ್ ತಂಡ ಮಾಡಿದೆ. ಒಂದೇ ದಿನ ಇವೆಲ್ಲಾ ಸರ್ಕಾರ್ ಗಳನ್ನು ಹಾಕಿದರೆ ನೋಡಲು ಹಬ್ಬವೇ ಸರಿ!!

ಒಂದು ದಿನ ದೇವೇಗೌಡರು ಈಟೀವಿ ಪ್ರತಿನಿಧಿ ಮೇಲೆ ಕೆಂಡ ಕಾರಿದರು.. ಮೈಕ್ ಹಿಡಿದಿದ್ದಕ್ಕೆ: "ನಿನ್ನ ಆಚೆ ಹಾಕ್ತೀನಿ ನೋಡು... ಆಚೆ ಹಾಕ್ತೀನಿ" ಈ ದೃಶ್ಯವನ್ನು ಈ ಟೀ ವಿ ಮತ್ತೆ ಮತ್ತೆ ಬಿತ್ತರಿಸಿತು. ಇನ್ನೊಂದು ದಿನ: "ಏನಯ್ಯ ಇಶ್ಟು ಉದ್ದ ಇದ್ದೀಯ.. ನನ್ ಮೇಲೆ ಸವಾರಿ ಮಾಡ್ತೀಯ" ಅಂಟ ಹರಿಹಾಯ್ದಿದ್ದರು.

ಸರ್ಕಾರ್ ನ ಕೆಲವು ವೀಡಿಯೋ ಗಳು ಇಲ್ಲಿವೆ:
http://www.youtube.com/sarkarman

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.