ಒಲವ ರಂಗವಲ್ಲಿ...

0

ಒಲವೆಂಬ ರಂಗವಲ್ಲಿ ಹಾಕಿದೆ ಇಲ್ಲಿ;

ಆಸೆಯ ಕಾಮನಬಿಲ್ಲನು ಚೆಲ್ಲಿ ;

ಹೂ ನಗೆಯ ಕವಿತೆ

ಬರೆದ ನಲ್ಲೆ ;

ಮುದ್ದು ಮಲ್ಲೆ.

ಸೌಂದರ್ಯ ಜಗದ ನಾರಿ ;

ಸವಿ ಮಾತಿನ ಪರಿಮಳ ಬೀರಿ;

ಸಗ್ಗದ ಸಿರಿ ಎಡೆಗೆ ಬರೆದೆ ದಾರಿ;

ಕುಡಿ ನೋಟದಿ ಮಾಡಿ

ಮೋಹ ಮಾಯೆ..!

ನಾರಿ ನೀ ಚೆಲುವಿನ, ನಲಿವಿನ

ನೆನಪಿನ, ನವಿಲು ಗರಿ.

- ಸುರೇಶ್ ಬಾಬು ( ಗೋಸುಬಾ )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.