ಪರಿಸರ ಪ್ರೇಮಿ ಸೀನ ಹಾಗೂ ಗಿಳಿ

4


" ಬ್ಯಾಡ ಅಂದ್ರೆ ಬ್ಯಾಡ"  ಗಂಡ ಹೆಂಡತಿ ಯರ ಮಧ್ಯೆ ಏನೋ ಜಗಳ ಅಂತ ಕಾಣತ್ತ್
"ಒಳಗೆ ಬರಲಕ್ಕಾ?" ಕೇಳಿದೆ.
"ಬನ್ನಿ ಬನ್ನಿ ಅಣ್ಣ " ಕರೆದಳು ಸೀನನ ಅರ್ಧಾಂಗಿ.
"ಏನಾ ಗಲಾಟೆ" ಕೇಳಿದೆ ಸೀನನ್ನ.
"ಎಂತದಿಲ್ಯಾ, ಮೊಬಾಯಿಲ್ ಬೇಕಂಬ್ರ್ .....ಈ ಹಳ್ಳಿಯಲ್ ನಮ್ಮ ಮನಿಯಗೇ ಗುಬ್ಬಚ್ಚಿ ಸಂಸಾರ ಇಪ್ಪದ್, ಮತ್ತೆಲ್ಲೂ ಇಲ್ಲೆ ಗೊತ್ತಾ ಮತ್ತೆಲ್ಲಾರೂ ನಾವ ಮೊಬಾಯಿಲ್ ತಕಂಡ್ರೆ ಅಷ್ಟೇ ಅದೂ ಓಡಿ ಹೋತ್ ಅಷ್ಟೇ"
"ಹಂಗಾರೆ ಒಂದ್ ಗಿಳಿ ತಕಂಡ್ ಬನ್ನಿ"

"ಅಲ್ಲ ,ಅದಕ್ಕೂ ಇದಕ್ಕೂ ಏನಾ ಸಂಭಂಧ..?" ಸೀನ
"ಅದಲ್ದಿದ್ರೆ ಇದ್, ಯಾವ್ದಾದ್ರೂ ಒಂದ್ ವರ್ಲ್ತಾ ಇರತ್ವಲ್ಲೆ" ಅವನ ಅರ್ಧಾಂಗಿ.


ಗಿಳಿಯಾ..? ಈ ಜನ್ಮದಲ್ಲಿ ಬ್ಯಾಡ ಅಂದ ಸೀನ.
ಅಲ್ಲ ಅದೇನೋ ಹೇಳತ್ತಲ್ಲೆ, ನೀವು ಹೀಂಗಂದ್ರ ಹ್ಯಾಂಗೆ ಹೇಳಿ, ಅಲ್ಲ ಅಣ್ಣ ನೀವೇ ಹೇಳಿ ಕಾಂಬೋ"
ನಾನೇನಮ್ಮ ಹೇಳ್ಲಿ..?

ನಂಗೂ ಸೀನಂಗೂ  ಒಂದು ಅಲಿಖಿತ ಒಪ್ಪಂದವಿತ್ತು ನನ್ನ ಗುಟ್ಟು ಅವ್ನು ಯಾರಿಗೂ ಹೇಳಬಾರದು, ನಾನು ಅವನದನ್ನ.
ಇಲ್ಲಿಯವರೆಗೆ ನವಿಬ್ಬರೂ ಅದನ್ನ ಜತನದಿಂದ ಕಾಪಾಡಿಕೊಂಡು ಬಂದಿದ್ದೆವು.
ಇವತ್ತು ನಾನು ಮರೆತು ಆಡಿದ ಮಾತೊಂದು ಈ ಒಪ್ಪಂದವನ್ನು ಮುರಿಯುತ್ತಾ..? ಅದನ್ನ ಕಾಲವೇ ಹೇಳಬೇಕು.


ಯಾಕೆ ಆತ ಗಿಳೀ ಬೇಡ ಅಂತಾನೆ ಅಂತ ನನಗೆ ಗೊತ್ತು, ನಾನು ಹೇಗೆ ಹೇಳಲಿ?... ಹೇಳಿದರೆ ನಮ್ಮ ನಡುವಿನ ಒಪ್ಪಂದ...?
ಅದನ್ನ ನಿಮ್ಗೆ ಮಾತ್ರ ಹೇಳೋ ಕಾಲ ಬಂತಾ ಅಂದೇಳಿ.

ಮಹಾ ಪರಿಸರ ಪ್ರೇಮಿ ಸೈಕಲ್ ತಂದು ಕಾಲ್ಮುರ್ಕಂಡ್.. ಅದಾಗದೇ ಪಿಣಿಯನ( ಸೀನನ ಅಣ್ಣ) ಮಗನಿಗೆ ದಾನ ಕೊಟ್ಟಿದ್ದ ಸಮಯವದು.
ಏನು ಮಾಡಬೇಕು ಎಂತಲೂ ಗೊತ್ತಾಗದೇ ಈ ಮಹಾ  ಪರಿಸರ ಪ್ರೇಮಿ ಅಡ್ಡಾಡುವ ಸಮಯದಲ್ಲೇ ಆತನಿಗೊಮ್ಮೆ             ...ಊರಿನ ಯಾವುದೋ ಹೆಸರಿಲ್ಲದ ಗಲ್ಲಿಯಲ್ಲಿ ಇನ್ನೊಬ್ಬ ಮಹಾಪ್ರೇಮಿ(?)  ಗಂಟುಬಿದ್ದ.
ಕುರುಚಲು ಗಡ್ಡ ಕೆನ್ನೆಯಲೊಂದು ಗೀರು .ಸೀನನ ಹಿಂದೆಯೇ ಬಂದನಾತ.
" ಗಿಳಿ ಬೇಕಾ..?" ಎಂದು ಕೇಳಿದ.
"ಸಣ್ಣದಾ ದೊಡ್ಡದಾ?" ಸೀನ
ನಿಮಗೆ ಯಾವ ಸೈಜ್ ಗಿಳಿ ಬೇಕೋ ಆ ಸೈಜ್ ಕೊಡಿಸ್ತೀನಿ ಬನ್ನಿ " ಎಂದ
"ಸರಿ ಹಂಗಾರೆ ಹೋಪ ಕಾಂಬೋ"ಆತ ಮುಂದೆ ಸೀನ ಅವನ ಹಿಂದೆ ,
ಗಲ್ಲಿಯ ಸಂದು ಗೊಂದಿಯಲ್ಲೆಲ್ಲಾ ತಿರುಗಾಡಿಸಿದ ಆತ ಒಂದು ಹಳೆ ವಿಶಾಲ ಮನೆಯೊಳಕ್ಕೆ ಕೊಂಡು ಹೋದ.
ಮನೆಯೊಳಕ್ಕೆ ಹೊಕ್ಕ ಸೀನನಿಗೆ ಗಿಳಿಯ ಕುರುಹೇ ಕಾಣಲಿಲ್ಲ.
ಪಡಸಾಲೆಯಲ್ಲಿ ಸಿಂಗರಿಸಿದ ಪತ್ತಾಸು..(ದಿವಾನ?)
"ಎಲ್ಲಿತ್ತಪ್ಪಾ ಗಿಳಿ?"
"ಒಸಿ ತಡ್ಕಳಿ ಸ್ವಾಮೀ ಎಲ್ಲಾ ಬತ್ತವೆ"  ಬಂದಬಾಗಿಲು ಮುಚ್ಚಿಕೊಂಡಿತು, ಜತೆಯಲ್ಲಿ ಬಂದವ ನಾಪತ್ತೆ.!!
ಪಕ್ಕದಲ್ಲಿ ದನಿ ಬಂದ ಕಡೆ ದೃಷ್ಟಿ ಹಾಯಿಸಿದ,ಬೀಸಿ ಬಂದ ಸುಗಂಧ ದೃವ್ಯದ ಕಂಪು.  ರೇಷ್ಮೆ ಸೀರೆಯುಟ್ಟ  ದಢೂತಿ ಹೆಂಗಸು, ಹಣೆತುಂಬಾ ಕೆಂಪು ಕುಂಕುಮ.
"ತಮ್ಮದು ಯಾವೂರು...?" ಕುಳಿತುಕೊಳ್ಳಲು ಹೋದವನನ್ನು ತಡೆದಿತ್ತು  ದಪ್ಪಸ್ವರ ಯಾರೀಕೆ..?
ನಮಸ್ತೆ ದೊಡ್ಡಮ್ಮ"  ಕೈಮುಗಿದ ಸೀನ.
"ಇವರಿಗೆ ಗಿಳಿ ಬೇಕಂತೆ!! ಯಾವ ಸೈಜಿದೆ ಅಂತ  ಕೇಳ್ತಾ ಇದ್ದಾರೆ!!" ಗೀರು ಗಾಯ ಪುನಹ ಪ್ರತ್ಯಕ್ಷ!!
ದೊಡ್ಡಮ್ಮ ಕೈತಟ್ಟಿದ ತಕ್ಷಣ ೮-೧೦ ತರಹೇವಾರಿ ಬಟ್ಟೆ ತೊಟ್ಟ ಲಲನೆಯರು ಕಿಲ ಕಿಲ ನಗುತ್ತಾ ಅದೆಲ್ಲಿಂದಲೋ ಪ್ರತ್ಯಕ್ಷರಾಗಿ ಸೀನನ ಸುತ್ತುವರಿದರು.
"ಆರಿಸ್ಕೊಳ್ಳಿ ಸ್ವಾಮಿ" ಎಂದಳು ದೊಡ್ಡಮ್ಮ.
"ನಾನ್ ಕೇಳಿದ್ದು ಗಿಳಿಗಳಲ್ವಾ..?"ಸೀನ
ಇನ್ನು ಯಾವ ಗಿಳಿಗಳು ಬೇಕು ತಮಗೆ..?   ಏರು ದನಿಯಲ್ಲಿ ಗದರುವಿಕೆಯಿತ್ತೇ...?
ಗಾಬರಿಯಾದ ಸೀನ.." ನಾನು ಸರೀಸೃಪ..ಅಲ್ಲಲ್ಲ ಪರಿಸರ ಪ್ರೇಮಿ, ಗಿಳಿ ಬೇಕಂದಿದ್ದೆ,... ನಾನ್ ಹೋತೆ.... "
"ಇಲ್ಲ ಸ್ವಾಮೀ...
ಇಲ್ಲಿಗೆ ಬಂದವರ್ಯಾರೂ ಕಾಣಿಕೆ ಕೊಡದೇ ಹೋಗೋ ಹಂಗಿಲ್ಲ, ನೀವೂ ಕೊಡಲೇ ಬೇಕು."
ಸಿನನ ಹತ್ತಿರ ಅಕ್ಕಿ ತರಲೆಂದು ಸಂಕ ಕೊಟ್ಟ ನೂರು ರೂಪಾಯಿ ಮಾತ್ರವಿತ್ತು. ಅಳುತ್ತಳುತ್ತ ಅದನ್ನ ಕೊಡಲೇ ಬೇಕಾಯ್ತು.
ಆ ದಿನ ಸಂಜೆ ಸಂಕನಿಂದ ಸೀನನ ಬೆನ್ನಿಗೆ ಬಾಸುಂಡೆಯೇ, ಹಾಳೆ ಕಟ್ಕಂಡ್ರೂ ಬಿಡ್ಲಿಲ್ಲ!!!

ಅದಿನದಿಂದ ಸೀನ ಗಿಳಿಎಂಬ ಶಬ್ದ ಕಿವಿಗೆ ಬಿದ್ದರೆ ಬೆಂಕಿಯಾಗ್ತಾನೆ.

"ಅದೇನಾಯ್ತ್ ಅಂದ್ರೆ....... "
ಅಕಾಸ್ಮಾತ್ತಾಗಿ  ನೆನ್ಪಾಯ್ತ್!!! ಇಲ್ದಿದ್ರೆ ದೇವ್ರೇ ಗತಿ.....

 

ಲಚುಮಿಗೆ ಹೇಳೋ ಸುದ್ದಿಯಾ ಇದು..?


ಇನ್ನೂ  ಏನನ್ನೋ ಹೇಳ ಹೊರಟವ ಸೀನನ್ನ ನೋಡಿ ದುರ್ದಾನ ತಕಂಡವ್ರ್ ಹಾಂಗೇ ಸುಮ್ಮನಾದೆ

 


"ಹೋಗ್ಲಿ ಬಿಡಾ, ಗಿಣಿ ಕಚ್ಚದ್ರೆ ಅದೇನೋ ಇಂಜೆಕ್ಷನ್ ತಕಣ್ಕಲೆ, ಅದಕ್ಕೇ ಬ್ಯಾಡ ಅಂದ ಕಾಣ್ಕ್.......

 

 

http://sampada.net/blog/gopinatha/15/06/2010/26090

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹ್ವಾಯ್ , ಸೀನನ ಕಥೆ ಐಲ್ ಆಯ್ತಲ್ದೇ! ಪಾಪ. ಒಳ್ಳೇ ಗಿಳಿಗಳ ಕಥೆ. ಚೆನ್ನಾಗಿದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ್ ಅತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು ಮಂಜು ಅವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತೂ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸೀನ ಬರೀ ಪರಿಸರ ಪ್ರೇಮಿ... ಪರಿಸರದಲ್ಲಿರುವವರೆಲ್ಲರ ಪ್ರೇಮಿ ಅಲ್ಲ... ಇಲ್ಲಾಂದ್ರೆ ಇಷ್ಟರಲ್ಲೇ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಿಸರ ಪ್ರೇಮಿ ಸೀನ ಗಿಳಿ ಬೇಡವೆಂದದ್ದೇಕೆಂದು ಅವನ ಹೆಂಡತಿಗೆ ಗೊತ್ತಾಗಲಿಲ್ಲವಲ್ಲ! ಚೆನ್ನಾಗಿದೆ, ಚೆನ್ನಾಗಿದೆ, ಗೋಪಿನಾಥರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕವಿನಾಗರಾಜರೇ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ರಾಮಾ ಸಲ್ಪು ಯಾಮಾರಿದ್ರೆ ಕತೆ ಉಲ್ಟಾ ಆತಿತ್ತಲೆ. ಪಾಪ ಬಚಾವಾದ. ಮಸ್ತ್ ಇತ್ ಕಾಣಿ ಕುಂದಾಪು ಬಾಸಿ ಗಿಳಿ ಕತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೆ ಪ್ರತಿಕ್ರಿಯೆಗೆ ಧನ್ಯವಾದಗಳು ಅವನು ಸ್ವಲ್ಪದರಲ್ಲಿ ಬಚಾವಾದ ಸರಿ ಆದರೆ ಕಳೆದ ಸಾರಿ ಓದಿದ್ದೀರಾ? http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.