ಬಲು ವಿಚಿತ್ರ ಈ ಬದುಕಿನ ದಾರಿ

5ಬದುಕಿನ ದಾರಿಯಲಿ
ನಾ ನಡೆದ ಹಾದಿಯಲಿ
ಜರಗಿದ್ದೆಲ್ಲವು
ಬಲು ವಿಚಿತ್ರ ಸತ್ಯ

ನಾನು ಎದೆ ಉಬ್ಬಿಸಿ ತಲೆ ಎತ್ತಿ
ವಿಶ್ವಾಸದೆ ಬೀಗಿ ನಡೆವಾಗ
ಕಾಲು ಜಾರಿ ಮುಖವಡಿ ಬಿದ್ದಿದ್ದೆ
ದಾರಿ ಕಾಣದೇ ಗಮ್ಯ ಸಿಗದೇ
ತಡವರಿಸುವಾಗ ಗಮ್ಯವೇ
ದೊರಕಿತ್ತು
ಅನಾಯಾಸವಾಗಿ

ನನ್ನವರು, ಬಲು ಆತ್ಮೀಯರು
ನೋವೇ  ತಿನ್ನಿಸಿದರು
ಕಣ್ಣೀರ ಕೋಡಿ ಹರಿಸಿದರು
ಆದರೆ ನನ್ನ ಸಂತೈಸಿ
ಮೈದಡವಿ ಕೈಹಿಡಿದು
ನಡೆಸಿ ಆಸರೆಯಾದವರು
ಬರೇ ಅಪರಿಚಿತರು

ಬಲು ವಿಚಿತ್ರ
ಈ ಬದುಕಿನ ದಾರಿ
ಇಲ್ಲಿ ಅನಿರೀಕ್ಷಿತಗಳೇ
ಸಲೀಸಾಗಿ ನಡೆದವು
ನಿರೀಕ್ಷೆಯಂತೆ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ ಗೋಪೀನಾಥ್, ನಮ್ಮವರೆಂದರಿತರೆ ಇಲ್ಲಿ ನಮ್ಮವರೇ ಎಲ್ಲೆಲ್ಲಾ ಇಲ್ಲವಾದರೆ ಕೇಳಿ ಇಲ್ಲಿ ಯಾರಿಗೆ ಯಾರೂ ಇಲ್ಲ ಮೇಲ್ನೋಟಕ್ಕೆ ಅಪರಿಚಿತರು ನಾವವರಿಗೆ ಮತ್ತು ನಮಗವರು ಅಷ್ಟೇ ಆದರೆ ಅವರಾತ್ಮಕ್ಕೆ ಪರಿಚಿತ ನಮ್ಮೊಳಗಿನ ಆ ಪರಮಾತ್ಮನಷ್ಟೇ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೇರೇ ನುಡಿ ಮುತ್ತಿನ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಗೊಪಿನಾಥರೇ ನಮಗೆ ನಿಜವಾಗಿ ಆಸರೆಯಾಗುವವರು ಸ್ನೇಹಿತರು,ಅಪರಿಚಿತರು. ನೆ೦ಟರು-ಬ೦ಧುಗಳು ನಮ್ಮ ಏಳಿಗೆಯನ್ನು ಎ೦ದಿಗೂ ಸಹಿಸುವುದಿಲ್ಲ.. ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂರ್ತಿಗಳೇ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚೆನ್ನಾದ ಕವನ ಬದುಕಿನ ದಾರಿಯಲ್ಲಿ ಬರುವ ಅಪರಿಚಿತರು ಬದುಕ ಪರಿಚಯಿಸುವ ಪರಿಣಿತರು ನಾವ೦ದುಕೊ೦ಡ ನಮ್ಮ ಪರಿಚಿತರು ನಮ್ಮನ್ನು ಹಣ್ಣಾಗಿಸುವ ಕಲೆಗಾರರು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಹರೀಶ್ ಕವನಕ್ಕೆ ಕವನ ಸೇರಿಸುವ ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಮತ್ತೊ೦ದು ಉತ್ತಮ ಕವನ. ನಮ್ಮವರಾರು ನಮಗಿಲ್ಲ ಎ೦ಬ ಡಾ|| ರಾಜ್ ಹಾಡಿದ ಶ್ರೀ ರಾಘವೇ೦ದ್ರರ ಭಕ್ತಿಗೀತೆಯ ನೆನಪಾಯಿತು ತಮ್ಮ ಕವನನ್ನೋದಿ. ನಮಸ್ಕಾರ, ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕಿನ ಕಟು ಸತ್ಯವನ್ನು ತೀರಾ ಹತ್ತಿರದಿ೦ದ ನೋಡಿ ಬರೆದ್ದಿದ್ದೀರೆನೋ ಅನ್ನಿಸಿಬಿಡ್ತು. ಹೌದು ಗೋಪಿನಾಥ್, ದಾರಿ ಕಾಣದೆ ತಡವರಿಸುವಾಗ "ನಮ್ಮವರೆ೦ದುಕೊ೦ಡವರು "ನೀಡಿದ ನೋವು ಬಹಳ ಹತಾಶೆಯನ್ನು ತರುತ್ತದೆ. ನಿಜ,,, ಆಗ ಅಪರಿಚಿತರು ನೀಡುವ ಸಾ೦ತ್ವನ, ಅವರೇ ನಮ್ಮವರಾಗುವುದು, ಜೀವನಕ್ಕೆ ಆಸರೆಯಾಗುವುದು, ಹೌದು ಬಲು ವಿಚಿತ್ರ ಸತ್ಯವೇ ಸರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಗೋಪಿನಾಥ್, ನೀವು ಅನ್ನಿಸಿದ್ದನ್ನು ಸಮರ್ಥವಾಗಿ ಬರಹದಲ್ಲಿಳಿಸಿದ್ದೀರಿ. ನಿಜ, ನಿರೀಕ್ಷೆ ಇರುವಲ್ಲಿ ನಿರಾಶೆ, ಇಲ್ಲದಲ್ಲಿ ಅನಿರೀಕ್ಷಿತ ನೆರವಿಗೆ ಸಂತೋಷ ಎಲ್ಲರ ಬಾಳಿನಲ್ಲಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಷ್ಟಗಳು ಅಪ್ಪಳಿಸಿದಾಗ ಕಾಣದ ದೇವರಂತೆ ಬಂದು ಬಂಧುಗಳಿಗೂ ಮಿಗಿಲಾಗುವವರು ಅಪರಿಚಿತರೇ..ಇದು ಜೀವನದ ಒಂದು ಕಹಿ ಸತ್ಯ ಇದನ್ನು ತುಂಬಾ ನವಿರಾಗಿ ಬರೆದಿದಿದ್ದೀರಿ ಗೋಪಿಯವರೇ.. ಚೆನ್ನಾಗಿದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ಕವಿನಾಗರಾಜ್, ಶ್ರೀಕಾಂತ್,ಸಂಧ್ಯಾ ವೆಂಕಟೇಶ್, ಚೇತೂ ಮತ್ತು ನಲ್ಮೆಯ ರಾಯರೇ ನಿಮ್ಮೆಲ್ಲಾ ಚೇತೋಹಾರೀ ಪ್ರತಿಕ್ರಿಯೆಗೆ ಧನ್ಯವಾದಗಳು. ಇವೇ ನನ್ನ ಬರಹಗಳಿಗೆ ಪ್ರೇರಣೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.