ಮುತ್ಸದ್ದಿಗಳು

3.5

ಮುತ್ಸದ್ದಿಗಳು

೧.
ಒಂದು ಮುಷ್ಟಿ ಯುದ್ಧದ ಕಣ
ಇಬ್ಬರೂ ಮಲ್ಲರೂ ಜೋರಾಗಿ ಗುದ್ದಿಕೊಳ್ಳುತ್ತಿದ್ದರು
ಒಬ್ಬ ಕೆಳಗೆ ಬಿದ್ದ. ಇದಿರಲ್ಲಿ ಕುಳಿತವ ಪ್ರೋತ್ಸಾಹಿಸುತ್ತಿದ್ದ
"ಹಾಗೇ ಗುದ್ದು ಇನ್ನೂ ಜೋರಾಗಿ, ಬೀಳಿಸು, ಆತನ ಹಲ್ಲು ಮುರಿ"
ಅಷ್ಟರಲ್ಲೇ ಬಿದ್ದವನ  ಮೇಲುಗೈಯಾಯ್ತು, ಇನ್ನೊಬ್ಬ  ಕೆಳಗೆಬಿದ್ದ
ಪುನಹ ಶುರುವಾಯ್ತು ಈತನ ಪ್ರೋತ್ಸಾಹ ಭರಿತ ಮಾತುಗಳು
"ಹಾಗೇ ಗುದ್ದು ಇನ್ನೂ ಜೋರಾಗಿ, ಬೀಳಿಸು, ಆತನ ಹಲ್ಲು ಮುರಿ"
ಪಕ್ಕದಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದವ ಕೇಳಿದ
"ನೀವು ಯಾರ ಪಾರ್ಟಿಸಾರ್?"
ಈತನೆಂದ "ನಾನು ಯಾರ ಪಾರ್ಟಿಯೂ ಅಲ್ಲ,ನಾನೊಬ್ಬ ಹಲ್ಲಿನ ವೈದ್ಯ"೨.
ನವ್ಯ ಚಿತ್ರ ಕಲಾ ಪ್ರದರ್ಶಿನಿ ನಡೆಯುತ್ತಿತ್ತು.
ಒಬ್ಬ ಎಲ್ಲಾ ಕಲಾಕೃತಿಯ ಹತ್ತಿರವೂ ನಿಂತು ಪರಾಂಬರಿಸುತ್ತಿದ್ದ.
ಎಲ್ಲಾ ಕಲಾಕೃತಿಯನ್ನೂ ಕೂಲಂಕುಶವಾಗಿ ಆತ ವೀಕ್ಷಿಸುವುದನ್ನು ನೋಡಿದ ಇನ್ನೊಬ್ಬ ಚಿತ್ರಕಾರ ಆತನ ಬಳಿಬಂದು ನಿಂತ.
ಈತ ನುಡಿದ " ನೋಡಿ ಈ ಚಿಕ್ಕ ಚಿಕ್ಕ ಚೌಕಟ್ಟಿನ ಚಿತ್ರಗಳು ಚೆನ್ನಾಗಿಲ್ಲ, ಆ ದೊಡ್ಡ ದೊಡ್ಡ ಚೌಕಟ್ಟಿನವುಗಳು ಉತ್ತಮ" ಎಂದ
"ನೀವು ಚಿತ್ರಕಾರರೇ?" ಕೇಳಿದ ಚಿತ್ರಕಾರ
"ಅಲ್ಲ"
"ಮತ್ತೆ ವಿಮರ್ಶಕರೇ"
"ಅಲ್ಲ"
"ಹಾಗಿದ್ದಲ್ಲಿ ನೀವು ಯಾರು"
"ನಾನೊಬ್ಬ ಚೌಕಟ್ಟು ಮಾಡುವವ" ಎಂದ ಈತ.

೩.
ನವ್ಯ ಕಲಾಕೃತಿಯ ಪ್ರದರ್ಶನದಲ್ಲಿ.
ಪ್ರತಿ ವಿಗ್ರಹಳನ್ನೂ ತುಂಬಾ ಆಸಕ್ತಿಯಿಂದ ನೋಡುತ್ತಿದ್ದ ಹೊಸಕಲಾಕಾರನೊಬ್ಬ.
ತದೇಕ ಚಿತ್ತದಿಂದ ಪ್ರತೀ ವಿಗ್ರಹಗಳನ್ನೂ ಆತ ನೋಡುತ್ತಿದ್ದುದನ್ನು ಇನ್ನೊಬ್ಬ ಆತನನ್ನು ಹಿಂಬಾಲಿಸುತ್ತಿದ್ದ.
ನೋಡಿ ನೋಡಿ ಕೊನೆಯಲ್ಲಿ ಒಂದು ಕಲಾಕ್ರತಿ ಆತನ ಗಮನ ಸೆಳೆಯಿತು.
ಅದೊಂದು ಬಿಳಿ ಚೌಕಟ್ಟು ಮಧ್ಯದಲ್ಲಿ ಎರಡು ವ್ರತ್ತಾಕಾರದ ಕಪ್ಪು ವಸ್ತುಗಳಿದ್ದವು.
ಎಷ್ಟು ಹೊತ್ತು ನೋಡಿದರೂ ಅರ್ಥವಾಗದೇ ಪಕ್ಕದವನನ್ನು ಕೇಳಿದ" ಇದರ  ಅರ್ಥವೇನು ಗೊತ್ತೇ?"
ಪಕ್ಕದಲ್ಲಿದ್ದ ಪಹರೆಯವ  ಮುಗುಮ್ಮಾಗಿ ನುಡಿದ " ಯಾಕಿಲ್ಲ, ಅದೊಂದು ಸ್ವಿಚ್ ಬೋರ್ಡ್"
೪.
ಒಬ್ಬ  ಚಿತ್ರಕಾರ ಮತ್ತು ವೈದ್ಯ ಇಬ್ಬರೂ ಗಳಸ್ಯ ಕಂಠಸ್ಯ.
ವೈದ್ಯ ತನ್ನ  ಗೆಳೆಯನ ಮನೆಗೆ ಹೋದಾಗ ಚಿತ್ರಕಾರ
 ಒಂದು ಹಣ್ಣು ಹಣ್ಣು ಮುದುಕನ ಚಿತ್ರ ಬಿಡಿಸುತ್ತಿದ್ದ,
ವೈದ್ಯ ತದೇಕಚಿತ್ತನಾಗಿ ತನ್ನ ಚಿತ್ರವನ್ನೇ ನೋಡುತ್ತಿರುವುದನ್ನು ಕಂಡು ಈತ ಖುಷ್!!!
"ಹೇಗಿದೆ?" ಕೇಳಿದ ಚಿತ್ರಕಾರ
" Gone case!!! "
"ಏನು ಹಾಗೆಂದ್ರೆ?"
"ಕ್ಯಾನ್ಸರ್ ನ ಕೊನೇ ಹಂತದಲ್ಲಿದ್ದಾನೆ, ಹೆಚ್ಚೆಂದರೆ ಐದೇ ದಿನ" ಎಂದ ಮುತ್ಸದ್ದೀ ವೈದ್ಯ.

ಯಾರಾದರೂ ಪರಾಂಬರಿಸಿದ್ದೀರಾ ?
ಸಂಪದದ ನಿನ್ನೆಯ  ಬ್ಲಾಗ್ ನ ತಲೆಬರಹ ಮತ್ತು ಅವುಗಳದ್ದೇ ಪ್ರಶ್ನೋತ್ತರಗಳು?

ಮದುವೆ ಯಾವಾಗ ಮಾಡ್ಕೋತೀಯ ???  
ಪ್ರೀತಿ ಸಿಕ್ಕ ಕ್ಷಣ -
ಕಾಡುವ ಪ್ರಶ್ನೆಗಳು!  
ಚುನಾವಣ ಪಲಿತಾಂಶ

(ಹೆಕ್ಕಿದ್ದು ಅಲ್ಲಲ್ಲಿಂದ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಲ್ಲವೂ ಚೆನ್ನಾಗಿದೆ. ಒಂದಕ್ಕಿಂತ ಇನ್ನೊಂದು ನಗೆಯುಕ್ಕಿಸುತ್ತದೆ. ಸ್ವಿಚ್ ವೃತ್ತಾಕಾರವಾಗಿರುವುದಿಲ್ಲ, ಆಯತಾಕಾರವಾಗಿರುತ್ತದೆ ಅಲ್ವಾ? :-) -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರೇ ಮೊದ ಮೊದಲು ಬರುತ್ತಿದ್ದ ಪಿಂಗಾಣಿಯ ಸ್ವಿಚ್ ವ್ರತ್ತಾಕಾರವಾಗಿರುತ್ತಿದ್ದವು(cylindrical.) ಮೆಚ್ಚುಗೆಯ ಮಾತಿಗೆ ಶರಣು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಪಿಂಗಾಣಿ ಸ್ವಿಚ್ ತೀರಾ ಇತ್ತೀಚಿನವರೆಗೂ ನಮ್ಮನೆಯಲ್ಲಿಯೂ ಇತ್ತು. ಅದರ ಬಗ್ಗೆ ಮರೆತೇ ಬಿಟ್ಟಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲವು ಬಾಳ ಚೆಂದ್ ಅದಾವ , ಕೆಳಗಿನ ನಿಮ್ಮ ದೃಷ್ಟಿ , ಕವಿ ದೃಷ್ಟಿಯೇ <<ಮದುವೆ ಯಾವಾಗ ಮಾಡ್ಕೋತೀಯ ??? ಪ್ರೀತಿ ಸಿಕ್ಕ ಕ್ಷಣ - ಕಾಡುವ ಪ್ರಶ್ನೆಗಳು! ಚುನಾವಣ ಪಲಿತಾಂಶ>>
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಘು ಅವರೇ ನಿಮ್ಮ ಮೆಚ್ಚುಗೆಯಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಶರಣು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುತ್ಸದ್ದಿಗಳನ್ನು ಗುರುತಿಸಿದ ಮುತ್ಸದ್ದಿ ನೀವೇ, ಗೋಪಿನಾಥರೇ. ಚೆನ್ನಾಗಿದೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳೇ ವಂದನೆಗಳು ಮೆಚ್ಚುಗೆಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.