ಬಸ್ಸಿನಲ್ಲಿ ತನ್ನದಲ್ಲದ್ದು

4.333335

ತ್ಯಾಂಪ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ  ದಂಡ
ಕತ್ತರಿ,
ಉಗುರ  ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
 ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ತ್ಯಾ೦ಪನನ್ನು ಹೀಗೆಲ್ಲಾ ಗೋಳು ಹೊಯಿದುಕೊಳ್ಳುತ್ತಿದ್ದರೆ, ಅವನ ಪರವಾಗಿ ನಾನು ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹಾಕಬೇಕಾದೀತು! ಎಚ್ಚರ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೋಮಲ್ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಅವನ ಹಣೇಬರಹವೇ ಅಷ್ಟು ಎನು ಮಾಡಲಾದೀತು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಿಪ್ ‘ಸ್ಟಿಕ್ಕ’ನ್ನು ಅಧರ ವರ್ಣ ದಂಡ ಎಂದಿದ್ದೀರಿ ಎನ್ನುವುದ ಅರಿಯದ ನಮ್ಮ ಸಾಮ್ರಾಜ್ಞಿ ಅಧರ ವರ್ಣ ಉಪಯುಕ್ತವೋ ದಂಡವೋ ಎಂದು ದನಿ ಎತ್ತರಿಸಿ ಕೇಳಿದಳು. ನಾವು ಪ್ರಿಯೆ ಕೋಲ್ಮಿಂಚು ಹೊಮ್ಮಿಸುವ ನಿನ್ನ ತುಟಿಗಳಿಗೆ ಅದು ಅಧರ ಡಾಂಬಾರು ಎಂದು ಬಿಟ್ಟು ಡೇಂಜರಿಗೆ ಸಿಕ್ಕಿಕೊಂಡಿರುವೆವು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಷ್ಟ ಕಷ್ಟ ಸಾಮ್ರಾಟರೇ ಅದೆಲ್ಲಾ ಉತ್ತರದವರ ಕಾರು ಬಾರಿನ ಮಾಲಲ್ಲವೆ ನಾವೆಲ್ಲಾ ತ್ಯಾಂಪನ ಕಷ್ಟವನ್ನೂ ಅರೆಗಳಿಗೆ ಮರೆತು ನಿಮ್ಮ ಗಲಿಬಿಲಿಯ ವರ್ಣನೆಯಲ್ಲಿ ನಕ್ಕೇ ಸುಸ್ತಾದೆವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ್ಯಾಯ ಮಾಡಿಕೊಂಡು ಬಿಟ್ರಿ ನಗೆನಗಾರಿಯವರೇ! ನಿನ್ನ ಅಧರದ ವರ್ಣದ ಮುಂದೆ ’ಅದರ ವರ್ಣ ದಂಡ’ ಅಂತ ರಾಯರು ಹೇಳಿದ್ದು ಅಂದಿದ್ದರೇ, ಸಂಜೆ ಊಟಕ್ಕೆ ಪಾಯಸ ದೊರಕುತ್ತಿತ್ತು. ಯಾರೋ ಇಂದು ಮಿಂಚಂಚೆ ಕಳಿಸಿದ್ದರು .. ಇಂದು 'husband appreciation week' ಅಂತೆ .. ನಿಮ್ಮ ಸಾಮ್ರಾಜ್ಞ್ನಿಯಿಂದ ಒಲ್ಲೇ 'appreciation' ತಪ್ಪಿ ಹೋಯ್ತು !! ರಾಯರೇ, ಸೊಗಸಾಗಿದೆ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹೌದು ನನಗಿನ್ನೂ ಅವರ ಕವಿವಿಸಿಯ ಘಟನೆಯಿಂದ ಹೊರ ಬರಲೇ ಆಗಲಿಲ್ಲ , ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯ ಭಲ್ಲೆಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಹ್, ಎ೦ಥಾ ಕವನ! ವ್ಯ೦ಗ್ಯ, ವಿನೋದ, ಹಾಸ್ಯ,... ಯಾಕೆ ಪೆಟ್ಟು ಬಿತ್ತೆನ್ನುವ ರಹಸ್ಯ... आपका कोइ जवाब नहीं! Hats off! ನಿಜ್ವಾಗೂ ನಕ್ಕು ಹೊಟ್ಟೆ ...ಹುಣ್ಣಾಗ್ಲಿಲ್ಲ; ನೋವಾಯ್ತು ಅ೦ತ೦ದ್ರೆ ಸತ್ಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಭು ಅವರೇ ನಿಮ್ಮ ಮೆಚ್ಚುಗೆಯ ಮಾತಿಗೆ ನಾನೇ ಧನ್ಯ ನಿಮಗೆ ಈ ತರಹದ ಕವನ ಇಷ್ಟ ಆದರೆ ಇಗೋ ಇಲ್ಲೆರಡು ಅಂತಹವೇ http://sampada.net/a... http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಚನ್ನಾಗಿದೆ. ಫೋಟೋ ಕೂಡ... ಬಸ್ಸಿನ ಆ ರಶ್ಶಿನಲ್ಲಿ ಅವಳ ಹಿಂದೆ ನಿಂತು ಭುಜದ ಮೇಲೆ ಕೈಯಿಟ್ಟಾಗಲೂ ಸುಮ್ಮನಿದ್ಲು ಕೆಳಗಿಳಿದು ನೋಡಿದರೆ ನನ್ನ ಹೆಂಡತಿಯೇ ಆಗಿದ್ಲು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಟ್ಟರೇ ಕಥಿ ಹೈಲ್ ಅಯ್ತಲ್ಲೆ ಮರಾಯರೇ ಚೆನ್ನಾಗಿದೆ ನಿಮ್ಮ ಕವಿತೆಮತ್ತು ಹಾಸ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಶು, ಬಸ್ಸು, ತ್ಯಾಂಪ ಪಾಪ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಕವಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.