gopaljsr ರವರ ಬ್ಲಾಗ್

ಸುಬ್ಬನ ಲಕ್ಷ್ಮಣ ರೇಖೆ....

ಸುಬ್ಬ ಫೋನ್ ಮಾಡಿ ಮನೆಗೆ ಕಾಫಿಗೆ ಆಹ್ವಾನಿಸಿದ. ನಾನು, ಮಂಜನಿಗೂ ಹೇಳು, ಇಲ್ಲೇ ಇದ್ದಾನೆ ಎ೦ದೆ. ಮಂಜ ಫೋನ್ ಎತ್ತಲು ಹಿಂದೆ ಮುಂದೆ ನೋಡಿದ. ಏಕೆಂದರೆ ಸುಬ್ಬನ ಹೆಂಡತಿಯ ಭಯ. ಮಂಜ ಅವನ ಮದುವೆಯಲ್ಲಿ ಮಾಡಿದ ಅವಾಂತರಕ್ಕೆ, ಸರಿಯಾಗಿ ಸುಬ್ಬನ ಹೆಂಡತಿಯಿಂದ ಉಗಿಸಿಕೊಂಡಿದ್ದ. ಸುಬ್ಬನ ಮದುವೆಯಲ್ಲಿ ಮಂಜ  ಚೆನ್ನಾಗಿರುವ ಮದುವೆಯ ಹಾಡು ಹಾಕೆಂದರೆ, "ಅಹಾ ನನ್ನ ಮದುವೆಯಂತೆ ... ಓಹೋ ನನ್ನ ಮದುವೆಯಂತೆ... ನಂದು ನಿಂದು ಜೋಡಿಯಂತೆ ... ಪಂ ಪಂ ", "ಮದುವೆ... ಮದುವೆ... ಮದುವೆ... ಮಧುರ ಭಯಂಕರ ಮದುವೆ...",   ಎಂಬ  ತಮಾಷೆಯ ಹಾಡಗಳನ್ನೇ ಆಯ್ದು ಹಾಕಿದ್ದ. ಮತ್ತೆ ಮದುವೆ ಗಂಡು ಸುಬ್ಬನನ್ನೇ ಶ್ರೀ ಬಿ ಆರ್ ಲಕ್ಷ್ಮಣರಾವ್ ಅವರ "ಸುಬ್ಬಾ ಭಟರ ಮಗಳೇ ... ಇದೆಲ್ಲಾ ನಿಂದೆ ತೊಗೊಳೆ " ಎ೦ಬ ಹಾಡಿಗೆ ಡಾನ್ಸ್ ಮಾಡಿಸಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ನಗು ಎಂದಿದೆ ಮಂಜನ ಬಂಧು....

ತುಂಬಾ ದಿನಗಳಿಂದ ನಾನು ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕು ಎಂದು ಮಂಜನಿಗೆ ಹೇಳುತ್ತಾ ಬಂದಿದ್ದೆ. ಮಂಜ ದಿನಾಲೂ ನಾನು ತಲೆ ತಿನ್ನುವುದು ನೋಡಿ, ಒಮ್ಮೆ ನನ್ನ ಮಿತ್ರ ಒಬ್ಬರು ಪ್ರಕಾಶಕರು ಇರುವರು. ಅವರ ಹತ್ತಿರ ನಿನ್ನನ್ನು ಮಾತನಾಡಿಸುತ್ತೇನೆ ಎಂದು ಅಭಯ ನೀಡಿದ. ಅಂದು ರವಿವಾರ ಮುಂಜಾನೆ ಮಂಜ ಫೋನ್ ಮಾಡಿ ನನ್ನ ಮನೆಗೆ ಬೇಗನೆ ಬಾ ಒಬ್ಬರು ಪ್ರಕಾಶಕರು ಬಂದಿದ್ದಾರೆ ಎಂದು ಕರೆದ. ನಾನು ಶರವೇಗದಲ್ಲಿ ಅವನ ಮನೆ ತಲುಪಿದೆ. 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಾಳಿದವನು ಬಾಳಿಯಾನು....

ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ.  ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದು ಇದೆ ಕತೆ ಆಯಿತು ಎಂದಳು. ಹೌದು ನನಗೆ ಯಾವುದೇ ಕೆಲಸವಾಗಲಿ ಕಡೆವರೆಗೂ ಅದನ್ನು ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ. ಅಷ್ಟರಲ್ಲಿ ಮಡದಿ ರೀ.. ಸ್ವಲ್ಪ ಕಣ್ಣು ಮುಚ್ಚಿ ಬಾಯಿ ತೆಗೆಯಿರಿ ಎಂದಳು.  ಚೆಕ್ ಬುಕ್ ಏನಾದರು ಬಂತಾ ಎಂದು ಯೋಚಿಸಿದೆ. ಆದರು ಬಾಯಿ ಬೇರೆ ತೆಗೆಯಿರಿ ಎಂದಿದ್ದಾಳೆ, ಸುಮ್ಮನೆ ಕಣ್ಣು ಮುಚ್ಚಿದ ಹಾಗೆ ಮಾಡಿ ಬಾಯಿ ತೆಗೆದೆ. ಬಾಯಿಯಲ್ಲಿ ತಂದು ಸಿಹಿ ತಿಂಡಿ ಹಾಕಿದಳು. ಏನೇ ಇದು ಬೆಲ್ಲದ ಪುಡಿ ಹಾಗೆ ಇದೆ ಎಂದೆ. ಕೋಪದಿಂದ ರೀ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.9 (14 votes)
To prevent automated spam submissions leave this field empty.

ದುಡ್ಡೇ ದೊಡ್ಡಪ್ಪ....

ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ,  ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು ಆರ್ಕಿಮೆಡಿಸ್ ಪ್ರಿನ್ಸಿಪಲ್  ಅನ್ನು ಹೇಳಲು ಬರುತ್ತಿರಲಿಲ್ಲ ಅರುಣನಿಗೆ. ಪ್ರಿನ್ಸಿಪಾಲರು ಅರುಣನಿಗೆ ಹಿರಿಯರನ್ನು ಕರೆದುಕೊಂಡು ಬನ್ನಿ ಎಂದು ತಾಕಿತ್ ಮಾಡಿದ್ದರು. ಅದಕ್ಕೆ ಅರುಣ ಪೂರ್ತಿ ಮಂಕಾಗಿದ್ದ. ಕಡೆಗೆ ಅರುಣ ಯೋಚಿಸಿ ತಲೆ ಕೆರೆದುಕೊಂಡು, ಮಂಜನ ಅಣ್ಣನನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿ ಹೀಗೆ ಮಾಡಿದ್ದ.  ಬಾತ್ ರೂಮಿನಲ್ಲಿಯ ನಲ್ಲಿ ಹಾಗೆ ಬಿಟ್ಟು ಬಂದು, ಮನೆಯಲ್ಲಿರುವ ಪೂರ್ತಿ ನೀರು ಖಾಲಿ ಆಗಿ ಎಲ್ಲರಿಗೂ ಫಜೀತಿ ಬೇರೆ ಮಾಡಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ....

ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ.  ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ ಪುಸ್ತಕ ಮೊದಲು ಓದಿ ಮುಗಿಸಿ ಎಂದು ಬೈಯುತ್ತಾಳೆ. ಆಗ ಹಾಸ್ಯ ಸಾಹಿತಿಗಳ ಭಾವ ಚಿತ್ರ,  ನನ್ನ ನೋಡಿ ನಕ್ಕ ಹಾಗೆ ಅನ್ನಿಸುತ್ತೆ. ಆದರೂ ಹೊಸ ಹೊಸ ಪುಸ್ತಕಗಳನ್ನು ಕೊಳ್ಳುವುದನ್ನು ಬಿಟ್ಟಿಲ್ಲ. ಮೊನ್ನೆ ಮುಂಜಾನೆ ಪೇಪರ್ ನಲ್ಲಿ ಕಾರ್ಯಕ್ರಮ ಪಟ್ಟಿ  ಓದುತ್ತಾ ಕುಳಿತ್ತಿದ್ದೆ. ಅಲ್ಲಿ ಶ್ರೀ ಜೋಗಿ ಅವರ "ಗುರುವಾಯನಕೆರೆ" ಮತ್ತು "ಹಲಗೆ ಬಳಪ" (ಹೊಸ ಬರಹಗಾರರಿಗೆ ಉಪಯೋಗವಾಗುವ) ಪುಸ್ತಕಗಳ ಬಿಡುಗಡೆ ಇತ್ತು. ಪುಸ್ತಕ ಬಿಡುಗಡೆಗೆ ಹೋದರೆ ತುಂಬಾ ಫಾಯಿದೆ ಇರುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

Pages

Subscribe to RSS - gopaljsr ರವರ ಬ್ಲಾಗ್