ನಾನು ಯಾರು....?

3.8

ಹುಟ್ಟೋವಾಗ
ಬರೀ ಮೈಲಿ
ಖಾಲೀ ಕೈಲಿ
ಕಿರುಚಿಕೊ೦ಡೇ
ಕಾಲಿಟ್ಟೆ ಈ ಜಗತ್ತಿಗೆ

ಕಾಲಿಟ್ಟ ಮರುಕ್ಷಣದಿ೦ದಲೇ
ಒ೦ದೊ೦ದೇ ಲೇಬಲ್ಲು
ಒ೦ದೊ೦ದೇ ಚಿಹ್ನೆ
ನಾಮ, ಲಿ೦ಗ, ಜನಿವಾರ,
ಗಡ್ಡ ಮು೦ಜಿ, ಶಿಲುಬೆ
ಎಲ್ಲವೂ ನನ್ನ ಸು೦ದರ ಬೆತ್ತಲೆ
ಮೈಯ ಅಲ೦ಕರಿಸಿದವು
ಅ೦ಟಿಕೊ೦ಡವು
ಮತ್ತೆ೦ದೂ ಅವು ಕಳಚದ೦ತೆ
ಒಳಗಿನ ಕತ್ತಲು(?) ಬೆಳಕಾಗಿಸಲು
ಎಲ್ಲ ಧರ್ಮ ಮತ ಸಿದ್ಧಾ೦ತಗಳ
ಪೋಷಾಕುಗಳನು
ನನ್ನ ಮತಿಗೆ ಧರಿಸಿದರು
ಊರಿಗೇ, ಲೋಕಕೇ
ಧನಿಕ, ಮ೦ತ್ರಿ, ವಿದ್ವಾ೦ಸ,
ವಿಜ್ಞಾನಿ, ತ್ಯಾಗಿಯಾಗಿ
ಪರಿಚಿತನಾದೆ

ಆದರೆ ಒಳಗಿನ 'ನಾನು' ವಿಗೆ
ನಾನೇ ಅಪರಿಚಿತನಾದೆ
ಈ ಎಲ್ಲ ಲೇಬಲ್ಲುಗಳ ಎಲ್ಲ ಪದವಿ
ಎಲ್ಲ ನಾಮಗಳ
ಹೊರೆ ಹೊತ್ತಿರುವ
ಒಳಗಿರುವ ಈ ನಾನು
ಯಾರು?
ಕಗ್ಗ೦ಟಾಗಿಯೇ ಉಳಿಯಿತು

ಬಹಿರ೦ಗದ ಹುಡುಕಾಟ
ತಡಕಾಟ, ತೆವಲು
ತಲ್ಲಣಗಳಲ್ಲೇ
ಅ೦ತರ೦ಗದ ನಾನು
ಅಪರಿಚಿತ, ಅನಾಮಿಕ
ಅಸ್ಪೃಶ್ಯನಾಗಿಯೇ
ಶೇಷನಾದ.
ಸುಡುಗಾಡಿಗೆ ನನ್ನ ಹೆಣ ಒಯ್ದು
ಕೊಳ್ಳಿ ಇಡುವಾಗಲೂ
ಈ ಮನುಷ್ಯ! ಇ೦ಥಾ ಒಳ್ಳೇ ಮನುಷ್ಯ
ಅಯ್ಯೋ ಹೋಗಿಬಿಟ್ಟನಲ್ಲಾ
ಎ೦ದೇ ಕೊರಗಿದರು ಈ ಜನ

ಚಿತೆಯ ಮೇಲೆ ಉರಿಯುವಾಗಲೂ
ನನಗದೇ ಚಿ೦ತೆ, ಒ೦ದೇ ಚಿ೦ತೆ
ಹುಟ್ಟಿ ಬರುವಾಗ ಕಿರುಚಿದ೦ತೆ
ಈಗ ಒಳಗಿನ ಧ್ವನಿ
ಚೀರುತ್ತಲೇ ಇದೆ
ಕೊನೆತನಕ ಸ೦ಗಾತಿಯಾಗಿ
ಅನುಸರಿಸಿರುವ
ಒಳಗಿರುವ ನಾನು ಯಾರು?
ನಾನು ಯಾರು....?

ಚಿತೆಯ ಹೊಗೆ
ಒಳಗಿನ ಚಿ೦ತನೆಯ ಧಗೆಯ
ಮಣಿಸಲಾರದೇ ಬತ್ತಿತು!...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಅನ್ನೋದು ಒಂದು ಡಾಟಾ ಅಷ್ಟೇ. ಭೂಮಿಯಲ್ಲಿರೋ ಮಿಕ್ಕಿರೋ ಸಿಮಿಲರ್ 600 ಕೋಟಿ ಡಾಟಾ (ನಾನು) ಗಳಂತೆ. ಮನುಷ್ಯಂಗೆ ಆದರೆ ಹಾಗೆ ಅಂದುಕೊಂಡರೆ ಏನ್ ಮಜಾ ಬರೋದೇ ಇಲ್ಲ. ಅದಿಕ್ಕೆ 'ನಾನು', 'ಆತ್ಮ' ಇತ್ಯಾದಿ ಗಹನ ಅನ್ನಿಸೋ ಫೀಲ್ ಕೊಟ್ಕೊಳೋದು ನಮಗೆ ನಾವು. ಆಗ, ಉದಾಹರಣೆಗೆ, ಇವತ್ತಿನ ನಿಜವಾದ ನಾನು ಗಬ್ಬು/ಡಬ್ಬ ಆಗಿದ್ರೂ ಅದಕ್ಕೆಲ್ಲ ಬೇರೆ ಬೇರೆ ಕಾರಣ ಕೊಟ್ಟು, ಒಳಗಿನ ನಾನು ಶುದ್ಧ- ಪರಿಶುದ್ಧವಾಗಿದೆ ಅಂದ್ಕೊಂಡು ಬಿಟ್ರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ತಾನೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾನು ಅನ್ನೋದು ಒಂದು ಡಾಟಾ ಅಷ್ಟೇ.>>
"ನಾನು" ಬರೀ ಡಾಟಾ ಆಗಿದ್ದಲ್ಲಿ ಇಷ್ಟೆಲ್ಲ ವಿವೇಚನೆ, ಬುದ್ಧಿಯ ಅಗತ್ಯವಿದ್ದಿಲ್ಲ. ಯಾವುದಾದರೂ ಒ೦ದು ಜಾತಿಯ ಪ್ರಾಣಿಯಾಗಿರಬಹುದಿತ್ತು. I could have been as well any other worm. ಇಲ್ಲಿ ಒ೦ದು ಹುಡುಕಾಟದ ಪ್ರಕ್ರಿಯೆ ಇದೆ. ಎಲ್ಲ ಸ೦ಸ್ಕಾರಗಳು, ಸ೦ಶೋಧನೆಗೆಳು ಹುಡುಕಾಟದ ಪ್ರಕ್ರಿಯೆಗಳಿ೦ದಲೇ. ನಾನು ಗಬ್ಬಾಗಿದ್ದರೆ ನನ್ನ ಒಳಗೆ ಗಬ್ಬಿನ ಆಲೋಚನೆಯಿದೆ. ಇಷ್ಟೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮಗೆ ಬೇಕಾದಷ್ಟೇ ಭಾಗ ಕಟ್ ಕಾಪಿ ಪೇಸ್ಟ್ ಮಾಡಿ ಬಿಟ್ರೆ! ಮೇಲಿನ ಕಮೆಂಟಿನಲ್ಲಿ ಏನಿದೆ ?

"ನಾನು ಅನ್ನೋದು ಒಂದು ಡಾಟಾ ಅಷ್ಟೇ. ಭೂಮಿಯಲ್ಲಿರೋ ಮಿಕ್ಕಿರೋ ಸಿಮಿಲರ್ 600 ಕೋಟಿ ಡಾಟಾ (ನಾನು) ಗಳಂತೆ". ಎಂದು.

ಅಂದರೆ, ನಿಮ್ಮ 'ನಾನು' ವನ್ನೂ, ನನ್ನ 'ನಾನು' ವನ್ನೂ ಮಿಕ್ಕ 600 ಕೋಟಿ 'ನಾನು' ವಿನ ವಿಷಯ ಹೇಳಲಾಗಿದೆಯೇ ಹೊರತು ಹುಳುವಿನ 'ನಾನು' ಡಾಟಾ ಕ್ಕೆ ಮನುಷ್ಯರ 'ನಾನು' ಡಾಟಾ ಯಾರು ಹೋಲಿಸಿದ್ದಾರೆ?

ನನ್ನ ಅಭಿಪ್ರಾಯದಲ್ಲಿ ಈ 'ನಾನು' ಅಧ್ಯಾತ್ಮ ಇವೆಲ್ಲ ದೊಡ್ಡ ವೋಳು. ಪ್ರತಿ ಒಂದು ಪ್ರಾಣಿಯ evolution ಸಂಧರ್ಭಕ್ಕೆ, ಅದರ ಅವಶ್ಯಕತೆಗೆ ತಕ್ಕಂತೆ ಆಯಿತು. ಬುದ್ಧಿ ಉಪಯೋಗಿಸುವವನ ಬ್ರೈನ್ ಬೆಳೆಯಿತು. ಶಕ್ತಿವಂತನ ಮೈ ಬೆಳೆಯಿತು. ಸಿಂಪಲ್ ಆಗಿ ಒಂದೇ ವಾಕ್ಯದಲ್ಲಿ ಹೇಳಬೇಕು ಅಂದರೆ.

ಅಂದ ಹಾಗೆ, ಆಫ್ ದಿ ಟಾಪಿಕ್, ಹಿಂದೆಲ್ಲೋ, ಪ್ರಾಣಿಗಳ ಬಗ್ಗೆ ಬರೆದವರು ತಾವೇ ಅಲ್ಲವೇ? ಈಗೇಕೆ, 'ಹುಳು' ವನ್ನು ಕ್ಷುಲ್ಲಕವಾಗಿ ಕಾಣುತ್ತ ಇದ್ದೀರೋ? ಈ ನಿಮ್ಮ 'ನಾನು' ಗಳು ಆಧ್ಯಾತ್ಮದ 'ನಾನು' ಗಳಾಗಿದ್ದಲ್ಲಿ , ಅವು ಹುಳುವಿನ 'ನಾನು' ಗಿಂತ ಹೇಗೆ ಭಿನ್ನ ಎಂದು ತಿಳಿಸಿ ಹೇಳುತ್ತೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ಮನುಶ್ಯನ 'ನಾನು' ಹುಳದ 'ನಾನು'ಗಿಂತ ಉತ್ತಮ ಎಂದರೆ ನಾವು ಹುಳ/ಪ್ರಾಣಿಗಳನ್ನು ಧಾರಾಳವಾಗಿ ತಿನ್ನಬಹುದು ಎಂದಾಯಿತು.
ಮನುಶ್ಯನ 'ನಾನು' ಹುಳದ 'ನಾನು'ಕ್ಕೆ ಸಮ ಎಂದರೆ ಎಲ್ಲ ಪ್ರಾಣಿ ಪಕ್ಷಿಗಳಂತೆ ಮನುಶ್ಯನೂ, ಆತನಿಗೆ/ಆಕೆಗೆ ಯಾವುದೇ ವಿಶೇಷ ಸ್ಥಾನವಿಲ್ಲ ಎಂದಾಯಿತು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮ್ಮರ್, ಚೆಕ್ ಮೇಟ್! ಅಲ್ವಾ ;)
ಮಾಯ್ಸಣ್ಣ: ನಿಮ್ಮ 'ನಾನು' ನಾನು ನನ್ನ 'ನಾನು' ಕಿಂತ ಕೆಳ ಮಟ್ಟದ್ದಾದರೆ ಥಿಯರಟಿಕಲಿ ನನ್ನ 'ನಾನು' ನಿಮ್ಮ 'ನಾನು' ವನ್ನು ತಿಂದರೆ ಆಧ್ಯಾತ್ಮದ ಪ್ರಕಾರ ಯಾವುದೇ ಪಾಪವಿಲ್ಲ :D
ಪಾಲ: ಎಂಥ ಮಾತು, ಎಂಥ ಮಾತು! ಅದಿಕ್ಕೆ ಆತ್ಮವಿಲ್ಲದ ಕ್ಷುಲ್ಲಕ ಜೀವಿಗಳು ಜನಿವಾರ ಹಾಕೋ ಹಾಗಿಲ್ಲ!
ಸಮ್ಮರ್: ಟೈಮ್ ಮಷಿನ್ ನಲ್ಲಿ ಹಿಂದಕ್ಕೆ ಹೋಗಿ, ಮನು ತನ್ನ ಮನುಸ್ಮ್ರತಿನ ಎಡಿಟ್ ಮಾಡೋ ಟೈಮ್ ಲ್ಲಿ ಅವನಿಗೆ ಸಡನ್ ಆಗಿ ತಲೆ ಬರೋ ಹಂಗೆ ಮಾಡಿ ಬಿಡ್ಬೇಕು. ಆ ಕ್ಷಣದಿಂದ ಹೆಣ್ಣುಮಕ್ಕಳ ದೇಹದಲ್ಲಿ ಆತ್ಮ ಪ್ರವೇಶ ಆಗಿ ಬಿಡುತ್ತೆ! Hopefully ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಪ್ರತಿ ಒಂದು ಪ್ರಾಣಿಯ evolution ಸಂಧರ್ಭಕ್ಕೆ, ಅದರ ಅವಶ್ಯಕತೆಗೆ ತಕ್ಕಂತೆ ಆಯಿತು.
ಹಾಗೆಯೇ ಮನುಷ್ಯನ ಆತ್ಮ ಕೂಡ.. ಅದು ಸುಮಾರು ೩೦೦೦ ವರ್ಷಗಳಿಂದೀಚೆಗೆ ಮಾನವನ ದೇಹ ಸೇರಿಕೊಂಡಿರಬಹುದು. ಅಲ್ಲದೇ ಹೆಣ್ ಮಕ್ಕಳ ಮೆದುಳು ಹುಟ್ಟುವಾಗ ಗಂಡ್ ಮಕ್ಕಳ ಮೆದುಳಿಗಿಂತ ಚಿಕ್ಕದಾದ್ದರಿಂದ evolutionನಲ್ಲಿ ಅವರು ತುಂಬಾ ಹಿಂದುಳಿದಿದ್ದು, ಅವರಿಗೆ ಆತ್ಮವಿಲ್ಲದಿರುವುದನ್ನು ಸಾಬೀತುಪಡಿಸಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅದು ಸುಮಾರು ೩೦೦೦ ವರ್ಷಗಳಿಂದೀಚೆಗೆ ಮಾನವನ ದೇಹ ಸೇರಿಕೊಂಡಿರಬಹುದು
ಆತ್ಮದ ಇರುವನ್ನು ಸಾಬೀತು ಮಾಡ್ತೀರ? ಗ್ರೇಟ್ :)

>>ಅಲ್ಲದೇ ಹೆಣ್ ಮಕ್ಕಳ ಮೆದುಳು ಹುಟ್ಟುವಾಗ ಗಂಡ್ ಮಕ್ಕಳ ಮೆದುಳಿಗಿಂತ ಚಿಕ್ಕದಾದ್ದರಿಂದ evolutionನಲ್ಲಿ ಅವರು ತುಂಬಾ ಹಿಂದುಳಿದಿದ್ದು, ಅವರಿಗೆ ಆತ್ಮವಿಲ್ಲದಿರುವುದನ್ನು ಸಾಬೀತುಪಡಿಸಬಹುದು.
ಇದಕ್ಕೊ೦ದು ಸ್ವಲ್ಪ ಪೂರಕ ಮಾಹಿತಿ ಕೊಡ್ತೀರ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಅವರು ಬರೆದಿದ್ದು ಅರ್ಥವಾದಂತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋಗ್ಲಿ ಬಿಡಿ, ಅಡ್ಡಿಯಿಲ್ಲ, ನಮ್ದಿನ್ನೂ evolution under progress :) (ನಾನು ಬರೆದದ್ದೂ ಅರ್ಥವಾದ೦ತಿಲ್ಲ!)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಕ್ಕ: ಚಿಕ್ಕ ತಲೆ ಇರೋವರ ವಿಷ್ಯ ಮಾತಾಡಿದರೆ ನೀವ್ಯಾಕೆ ಹೆಗಲು ಮುಟ್ ಕೊಳ್ಳೋದು?

ನಂದು ಒಂದು ಥಿಯರಿ ಇದೆ. ಥಿಯರಿ ಅಷ್ಟೇ. ಏನೆಂದರೆ, ನೂರರಲ್ಲಿ ೨೦-೩೦ ಗಂಡು ತಲೆಗಳು ದೊಡ್ದವಾಗಿದ್ರೆ, ೪-೫ ಹೆಣ್ಣು ದೊಡ್ಡ ತಲೆಗಳು ಇರುತ್ತವೆ ಅಷ್ಟೇ. ಅಲ್ಲಿಗೆ ೬೦೦ ಕೋಟಿ ಲ್ಲಿ ದೊಡ್ಡ ತಲೆಗಳು ಎಷ್ಟು ಒಟ್ಟು ಎಂದು ಲೆಕ್ಕ ಹಾಕಿ. ಅದರಲ್ಲಿ ಗಂಡು ಮತ್ತು ಹೆಣ್ಣು ದೊಡ್ಡ ತಲೆಗಳ ಸಂಖ್ಯೆ ನೋಡಿ.

ಆಮೇಲೆ ಸಣ್ಣ ತಲೆಗಳಲ್ಲಿ ಇರೋ ಗಂಡು ತಲೆಯ ಪರ್ ಸೆಂಟ್ಏಜ್ ಬಗ್ಗೆ ಸ್ವಲ್ಪ ಗಮನ ಕೊಡಿ. ೭೦ ರಿಂದ ೮೦. ಸಣ್ಣ ಹೆಣ್ಣು ತಲೆಗಳು ೯೫-೯೬%. ದೊಡ್ಡ ಸಂಖ್ಯೆ, ನಿಜ ಆದರೆ ಗಂಡು ತಲೆಗಳೆಲ್ಲ ದೊಡ್ಡ ತಲೆಗಳಲ್ಲ ಅನ್ನುವುದು ಗಮನದಲ್ಲಿ ಇರಲಿ. ದೊಡ್ಡ ತಲೆಗಳು ಅಲ್ಲಿಯೂ ಕಡಿಮೆ ಅನ್ನುವುದು ಗಮನದಲ್ಲಿ ಇರಲಿ.

ಇಲ್ಲಿ ದೊಡ್ಡ- ಮತ್ತು ಸಣ್ಣ- ತಲೆಗಳನ್ನು ಕಾಮನ್ ಸೆನ್ಸ್ ನ ಸ್ಕೇಲ್ ಆಗಿ ಬಳಸಲಾಗಿದೆ :)

P.S: ಈ statistics ಅಷ್ಟೇ! ಬೇಸಿಕಲಿ ಏನೂ ಹೇಳಲ್ಲ, individual case ವಿಷಯದಲ್ಲಿ. ಆದ್ದರಿಂದ , ಜನರಲೈಸ್ ಮಾಡುವುದು ಒಳ್ಳೆಯದಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Minni (ತಮ್ಮ/ತ೦ಗಿ - ಯಾವುದು ಸರಿಯೋ ಅದು)
ಇರ್ಲಿ ಬಿಡಿ. ನಿಮ್ಮ ಥಿಯರಿ ತಾನೇ :)
ಅದೇ ದೊಡ್ಡ- ಮತ್ತು ಸಣ್ಣ- ತಲೆಗಳನ್ನು usage ಗೆ inversly proportional ಆಗಿ ನ೦ದೊ೦ದು ಥಿಯರಿ ಮಾಡ್ಕೋತೀನಿ.
ಹೇಗಿದ್ರೂ ಪ್ರೂಫ್ ತೋರಿಸೋ ಅಗತ್ಯ ಇಲ್ವಲ್ಲ!! Individual ವಿಷಯದಲ್ಲೂ ಏನೂ ಹೇಳಲ್ಲ, generalise ಕೂಡ ಮಾಡಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅದೇ ದೊಡ್ಡ- ಮತ್ತು ಸಣ್ಣ- ತಲೆಗಳನ್ನು usage ಗೆ inversly proportional ಆಗಿ ನ೦ದೊ೦ದು ಥಿಯರಿ ಮಾಡ್ಕೋತೀನಿ
ಮಂಗ>ಹುಡ್ಗಿ>ಹುಡ್ಗಾ ಅಂತ್ಲಾ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Inversly proportional ರೀ..
ಇಲ್ಲಿ generalise ಬೇರೆ ಮಾಡೋಹಾಗಿಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇಲ್ಲಿ generalise ಬೇರೆ ಮಾಡೋಹಾಗಿಲ್ಲ
ಇದನ್ನ ಬಿಟ್ರೆ, ಇದು
>>Inversly proportional
ಅಂದ್ರೆ
ಮೆದುಳಿನ ಸೈಜು = ವಿ*/ಉಪಯೋಗ
ವಿ*=ವಿನುತ ಕಾಂಸ್ಟೆಂಟ್

ಮೆದುಳಿನ ಸೈಜು ದೊಡ್ಡದಾದ್ರೆ ಉಪಯೋಗ ಕಡಿಮೆ ಆಗಬೇಕು, ಇನ್ನೊಂದ್ ಮಾತಲ್ಲಿ ಮೆದುಳಿನ ಸೈಜು ಚಿಕ್ಕದಾದ್ರೆ ಉಪಯೋಗ ಜಾಸ್ತಿ.
ಮೆದುಳಿನ ಸೈಜಿನ ಹೋಲಿಕೆ: ಮಂಗ<ಹುಡುಗಿ<ಹುಡುಗ
ಆದ್ದರಿಂದ ಮೆದುಳಿನ ಉಪಯೋಗ: ಮಂಗ>ಹುಡುಗಿ>ಹುಡುಗ

ಹೆಂಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಲೆಕ್ಕ ಯಾರ್ ಶ್ರೀಕಾಂತ ಹೇರ್ಳೆರ್ ಹೇಳ್ಕೊಟ್ಟಿದ್ದ, ವಣದ್ರಾಕ್ಷಿ ಮೇಡಂಅ?? ನಂಗ್ಯಾರು ಹೀಂಗಿದ್ ಹೇಳಿಕೊಡ್ಲೆ ಇಲ್ಲೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಬ್ರೂ ಅಲ್ದೆ, ನಮ್ ಜಗದೀಶ್ ನಾವ್ಡ್ರು ಹೇಳಿಕೊಟ್ಟದ್, ಬಯಾಲಜಿ ಅಲ್ದಾ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ವಾಯ್, ನಿಮ್ದ್ ಕೋಟ ವಿ.ಜೆ.ಸಿ-ಯಾ,

ವಣದ್ರಾಕ್ಷಿ ಮೇಡಂ ನಮ್ಗೂ ಇದ್ದಿರ್ ಅದ್ಕೇ ಕೇಣ್ತಿದ್ದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಂದೂ ವೀಜೆಸಿಯೇ ಕಾಣಿ ನನ್ನನ್ ವಿಚಾರ್ಸ್ಲಾ ನೀವ್,, ಸಿಕ್ಕಾಪಟಿ ಬೇಜಾರಾಯ್ತ್
(ಚರ್ಚೆ ಟಾಪಿಕಿಂದ ಹೊರ್ಕಡಿ ಹೋತಿತ್, ಎಲ್ಲಾ ಬೈಕಂಬುಕಿದ್ದೋ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ವಾಯ್ ಸ್ವಲ್ಪ ಸೋಮಯಾಜ್ರಿಗೆ ಬರ್ದ್ ಪ್ರತಿಕ್ರಿಯೆಯಂಗೆ ಒಂದ್ ವಿಶ್ಯ ಕೇಂಡಿದೆ, ಸ್ವಲ್ಪ ಕಾಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹವ್ದೆ.. ಪಾಲ ನಮ್ಗ್ ಒಂದ್ ವರ್ಷ ಸಿನಿಯರ್ ಆಯಿದಿದ...
ವನಜಾಕ್ಷಿ ಮೇಡಂ ಹತ್ರ "ನಾಗೇಂದ್ರ.. ಓದುದಿಲ್ಲ.. ಹೀಗೆ ಮಾಡಿದ್ರೆ.. ಉದ್ದಾರ ಆಗುದಿಲ್ಲಾ....." ಅಂತ ಬೈಸ್ಕಂಡ್.. ಬೈಸ್ಕಂಡ್.. ಅಂತು ಇಂತು ಒಳ್ಳೆ ಮಾರ್ಕ್ ಬಂತ್ ಅಂದೇಳಿ ಆಯ್ತ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ, ಸೋಮ್ಯಾಜ್ರೇ, ವಿ.ಜೆ.ಸಿ ದೋಸ್ತಿಗಳ್ ಸಿಕ್ ಹಾಂಗಾಯ್ತಲ ಅದೇ ಖುಶಿ :)
ಪಾಲಣ್ಣ ಬೇಜಾರ್ ಬೇಡ ನಾನ್ ೯೦ ಬೇಚ್, ನಿಮ್ದೆಲ್ಲ ಹ್ಯಾಂಗೆ. ಮತ್ ನೀವ್ ಮೈಸೂರ್ ಎನ್.ಐ ಯಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಗ್ ಹೋಲ್ಸಿರೆ ನಾ ಶಣ್ಣವ್ನೆ.. ನಂದು 2001.. ಅಂಬೇಡ್ಕರೆಂಗ್ ಬಿ.ಇ ಮಾಡದ್..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೯೦ ರ ಪಿಯು ಬ್ಯಾಚಾ, ನಂದ್ ೨೦೦೦ದ ಪಿಯು ಬ್ಯಾಚ್.. ಮೈಸೂರಂಗಲ್ಲ ಓದಿದ್,, ಚಿಕ್ಕಮಗಳೂರಂಗೆ,, ನಾ ನಿಮ್ಗೆ ಪಿ.ಎಂ. ಮಾಡ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಾಯ್ಕ್ ಆಯ್ತ್ ಕಾಣಿ ಈ ಶಣ್ ಮಕ್ಳೊಟ್ಟಿಗ್ ಮಾತಾಡ್ಕಂಬುದ್. ಆದ್ರ್ ನಿಂ ಮಾತೆಲ್ಲ ಜೋರಿತ್ತೆ.

ಆಯ್ಲಿ ಪಿ.ಎಂ ಅಂಗ್ ಮಾತಾಡ್ಲಕ್ ಮುಂದಕ್. ಮತ್ ಸಿಕ್ಕುವ, ಮತ್ ಎಲ್ಲ ಜಾಗ್ರತಿ ಅಕಾ :) (ಜಾಸ್ತಿ ಮಾತಾಡ್ರೆ ಬೆರ್ಸಿ ಹಾಕುವ್ರ್ ಕಡಿಗ್ ಈ ಬ್ಲಾಗಿಂದ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೈ ನೋವು ಜಾಸ್ತಿ ಬರೆಯೋಕೆ ಆಗ್ತಾ ಇಲ್ಲ:
"Almost all studies show that at birth, a boy's brain is bigger than a girl's brain. At birth, the average brain of boys is between 12-20% larger than that of girls. The head circumference of boys is also larger (2%) than that of girls. However, when the size of the brain is compared to body weight at this age, there is almost no difference between boys and girls. So, a girl baby and a boy baby who weigh the same will have similar brain sizes."

ಇಲ್ಲಿಂದ ಕಾಪಿ ಮಾಡಿದ್ದು: http://faculty.washington.edu/chudler/heshe.html

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೀ emotional reactions/responses ಮೇಲೆ ವ್ಯತ್ಯಾಸಗಳನ್ನು ಹೇಳಿರುವ ಲೇಖನಗಳನ್ನು ಓದಿದ್ದೆ.
structural differences ಕಡೆ ಗಮನ ಸೆಳೆದಿರಿ.
ನನ್ನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಹೊತ್ತಿಗೆ ಓದಿ, ಮೆದುಳಿನ/ಮಾನವನ ವಿಕಾಸದ ಬಗ್ಗೆ ಒಳ್ಳೆಯ ಬರಹ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮ್ಮಾ ವಿನುತಾ ಅವರೇ,
>>ಇದಕ್ಕೊ೦ದು ಸ್ವಲ್ಪ ಪೂರಕ ಮಾಹಿತಿ ಕೊಡ್ತೀರ?
ಅನ್ನೋ ನಿಮ್ಮ ಪ್ರಶ್ನೆಗೆ ಮುನ್ನವೇ ಮಿನ್ನಿಯವರು ಉತ್ತರ ಹೇಳಿದ್ದಾರೆ.

"ಟೈಮ್ ಮಷಿನ್ ನಲ್ಲಿ ಹಿಂದಕ್ಕೆ ಹೋಗಿ, ಮನು ತನ್ನ ಮನುಸ್ಮ್ರತಿನ ಎಡಿಟ್ ಮಾಡೋ ಟೈಮ್ ಲ್ಲಿ ಅವನಿಗೆ ಸಡನ್ ಆಗಿ ತಲೆ ಬರೋ ಹಂಗೆ ಮಾಡಿ ಬಿಡ್ಬೇಕು. ಆ ಕ್ಷಣದಿಂದ ಹೆಣ್ಣುಮಕ್ಕಳ ದೇಹದಲ್ಲಿ ಆತ್ಮ ಪ್ರವೇಶ ಆಗಿ ಬಿಡುತ್ತೆ! Hopefully"

ಈಗ ಅರ್ಥವಾಯಿತೇ?

ಪ್ರೀತಿಯಿಂದ
ಸಿ ಮರಿಜೋಸೆಫ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರಶ್ನೆಗೆ ಪಾಲಚ೦ದ್ರ ಉತ್ತರಿಸಿದ್ದಾರೆ ಮರಿಜೋಸೆಫ್ ಅವರೇ.
ಪ್ರಶ್ನೆಯಲ್ಲಿ ಕೆಲಪದಗಳು ಹೆಚ್ಚಾಗಿ ಸೇರಿಕೊ೦ಡು ಗೊ೦ದಲವಾಗಿರಬಹುದು.
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ಸೂಪರ್!
ಆತ್ಮ ಮನುಶ್ಯನ ದೇಹವನ್ನು ಕೆಲವು ಸಾವಿರ ವರ್ಶಗಳ ಹಿಂದೆ ಮಾತ್ರ ಸೇರಿರುವುದು ನಿಜ. ಅದಕ್ಕೂ ಹಿಂದೆ ಆತ್ಮ ಇರುವ ದಾಖಲೆಗಳು ಇಲ್ಲ.
ಹೆಣ್ ಮಕ್ಕಳಿಗೆ ಆತ್ಮ ಸಂಪೂರ್ಣವಾಗಿ ಬರಲು ಎಷ್ಟು ವರ್ಶ ಬೇಕೋ ಇನ್ನೂ? :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಡಾ||ಜ್ಞಾನದೇವ್,
ಈ ಹುಡುಕಾಟ ನಡೆಯುತ್ತಿತ್ತು, ನಡೆಯುತ್ತಿದೆ, ಮುಂದೆಯೂ ನಡೆಯಲಿದೆ. ನಾನಾರೆಂದು ತಿಳಿಯುವ ಪ್ರಯತ್ನದಲ್ಲಿದ್ದಾಗ ಕನಿಷ್ಟಪಕ್ಷ ಹೊರಗಿನ ನಾನುವಿನ ಅಹಂಕಾರವಾದರೂ ಒಂದಿಷ್ಟು ಕಮ್ಮಿಯಾದೀತು, ಬಹುಷ: ಇದೇ ಅಧ್ಯಾತ್ಮ.ಇದರಲ್ಲಿ ಸಾಗಬೇಕಾದರೂ ಗಟ್ಟಿ ಪ್ರಯತ್ನವಂತೂ ಬೇಕಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಹುಡುಕಾಟ ಅನಿವಾರ್ಯವೂ ಅನಿಸುತ್ತದೆ ಶ್ರೀಧರ್. ಇದೊ೦ದು ಬಗೆಯ ಆತ್ಮಾವಲೋಕನ. ನಮ್ಮನ್ನು ನಾವು ಸುಧಾರಿಸಿಕೊಳ್ಳಲು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ನಾ ಎಂಬುದು ನಾನಲ್ಲಾ ....!
ಈ ಮಾನುಷ ಜನ್ಮವು ನಾನಲ್ಲಾ ...... ?
:D

( ಹಾಡನ್ನು ಇಲ್ಲಿ ಕೇಳಿ http://www.kannadaaudio.com/Songs/Bhaavageethe/TeraneleyutaareTangi/NaaN...)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್,
ಅ೦ತರ೦ಗದ ಹುಡುಕಾಟ, ನಿಜವಾದ 'ನಾನು"ವಿನ ಶೋಧನೆಯ ತುಡಿತದ ಅ೦ತರ್ ಯಾತ್ರೆಯ ಭಾವನೆಗಳು ಕವನದಲ್ಲಿ ಸು೦ದರವಾಗಿ ಮೂಡಿವೆ. ಕವನ ಚಿ೦ತನೆಗೆ ಹಚ್ಚುತ್ತದೆ. ಧನ್ಯವಾದಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ಕೊನೆತನಕ ಸ೦ಗಾತಿಯಾಗಿ
ಅನುಸರಿಸಿರುವ
ಒಳಗಿರುವ ನಾನು ಯಾರು?
ನಾನು ಯಾರು....?"<<

ಡಾಕ್ಟ್ರೇ ನನ್ನ ಸಂದೇಹಗಳು:

ಈ ಪ್ರಶ್ನೆ ಕೇಳುತ್ತಿರುವವನು ಯಾರು?
ಕೊನೆತನಕ ಸಂಗಾತಿಯಾಗಿ ಅನುಸರಿಸಿದ್ದು ಯಾರನ್ನು?
ದೇಹವನ್ನು ಅನ್ನುವುದಾದರೆ, ಚಿತೆಯೇರುವಾಗ ಚೀರಿದ್ದು ಯಾರು?
ದೇಹವೋ...? ಅಲ್ಲ ಒಳಗಿನ ನಾನೋ..?
ದೇಹ ಚೀರುವ ಸ್ಥಿತಿಯಲ್ಲಿತ್ತಾದರೆ ಚಿತೆಯೇರಿಸಿದ್ದು ಯಾಕೆ?
ಚೀರಿದ್ದು ದೇಹವಲ್ಲ ಒಳಗಿನ ನಾನು ಅಂತಾದರೆ, ಅಲ್ಲಿ ದ್ವೈತ ಎಲ್ಲಿಂದ ಬಂತು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯ ಸ೦ಪೂರ್ಣ ವ್ಯಕ್ತಿಗತ. ಇದು ಸಾಮೂಹಿಕ ಕಸರತ್ತಲ್ಲ. ಅಥವಾ ಪರರ ಅಣತಿಯ ಮೇರೆಗೆ ಬರೆದದ್ದಲ್ಲ. ಕಾವ್ಯವೆ೦ಬುದು ಕಲ್ಪನೆಯ ಸಾಮ್ರಾಜ್ಯ. ಅಲ್ಲಿ ಎಲ್ಲವೂ ಸಾಧ್ಯ. ಆಗಸದಲ್ಲಿ ಅರಮನೆಯನ್ನು ಕಟ್ಟಬಹುದು ಚ೦ದ್ರನಲ್ಲಿ ಮಧುಚ೦ದ್ರ ಮುಗಿಸಿಕೊ೦ಡುಬರಬಹುದು. ದ ರಾ ಬೇ೦ದ್ರೆ ಹೇಳಿದ೦ತೆ 'ಕಾವ್ಯವೆ೦ಬುದು ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆ'
ಹಾಗೆಯೇ ಟಿ ಎಸ್ ಎಲಿಯಟ್ ಹೇಳಿದ ಮಾತೂ ಇಲ್ಲಿ ಸೂಕ್ತಎನಿಸುತ್ತದೆ.
The bad poet is usually unconscious where he ought to be conscious, and conscious where he ought to be unconscious. Both errors tend to make him "personal." Poetry is not a turning loose of emotion, but an escape from emotion; it is not the expression of personality, but an escape from personality. But, of course, only those who have personality and emotions know what it means to want to escape from these things.
-T. S. Eliot

ಇಲ್ಲಿ ಈ ಕವನದಲ್ಲಿ ನನ್ನ ಮಟ್ಟಿನ ಆಧ್ಯಾತ್ಮಿಕದ ಅರಸುವಿಕೆಯ ಅಭಿವ್ಯಕ್ತಿಯ ಅನಾವರಣವಿದೆ. ಅದು ನಿಮಗೆ ವಿಧವಿಧದ ಚಿ೦ತನೆಗೆ, ಆಣಕಕ್ಕೆ ಎಡೆ ಮಾಡಿದರೆ ಅದೂ ಸ್ವಾಗತ. ಮಗುವನ್ನು ಹೆತ್ತಾಗಿದೆ. ಮತ್ತೆ ಅದನ್ನು ಗರ್ಭದಲ್ಲಿ ಎಳೆದುಕೊಳ್ಳುವ ಮಾತು ಕಾವ್ಯಕ್ಕೆ ಎಸಗುವ ಅಪಚಾರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

< -T. S. Eliot>>
ಟಿ ಎಸ್ ಎಲಿಯಟ್ ಹೇಳಿದ ಈ ಮಾತೂ ಅಮೆರಿಕಾದ ಕವಿ ಎಮಿಲಿ ಡಿಕಿನ್ಸನ್ ಹೇಳಿದ್ದಾನೆ೦ದೂ ಕೆಲವು ಕಡೆ ಉಲ್ಲೇಖಿಸಲಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ,

ನಿಮ್ಮ ಕವನ ಓದಿದಾಗ ನನ್ನ ಮನದಲ್ಲಿ ಮೂಡಿದ ಸಂದೇಹಗಳಿಗೆ ನಿಮ್ಮಿಂದ ಸೂಕ್ತ ಉತ್ತರ ಸಿಗಬಹುದೆನ್ನುವ ನಿರೀಕ್ಷೆಯಿಂದ ಅವುಗಳನ್ನು ನಿಮ್ಮ ಮುಂದಿಡುವ ಅಪರಾಧ ಮಾಡಿದೆ. ಅದು ನಿಮಗೆ ಅಣಕವೆಂದು ಅನಿಸಿದ್ದು, ನನ್ನ ಆ ಪ್ರತಿಕ್ರಿಯೆಯ ವೈಫಲ್ಯ ಇರಬಹುದು. ನನ್ನ ನಗುಮುಖದ ಭಾವಚಿತ್ರ ಕೂಡ ನಾನು ಅಣಕಿಸುತ್ತಿದ್ದೇನೆ ಅಂತ ಭಾವಿಸುವಂತೆ ಮಾಡಿರಬಹುದೇನೋ.

ನಿಮ್ಮ ಮನಸ್ಸಿಗೆ ಘಾಸಿ ಉಂಟಾಗಿದೆಯಾದರೆ, ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಕ್ಷಮಿಸಿ ಹಾಗೂ ಕ್ಷಮಿಸಿದ್ದೇನೆ ಅಂತ ಹೇಳಿ ಬಿಡಿ.

ನನಗೆ ನಿಮ್ಮ ಮೇಲಾಗಲೀ ನಿಮ್ಮ ಬರಹದ ಮೇಲಾಗಲೀ ಪೂರ್ವಗ್ರಹ ಏನೇನೂ ಇಲ್ಲ.

ವಾಸ್ತವ ಎಂದರೆ ನಾನು ನಿಮ್ಮೆಲ್ಲಾ ಬರಹಗಳನ್ನು ಓದಿ ಮೆಚ್ಚುವವರಲ್ಲಿ ಒಬ್ಬ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ಸುರೇಶ್
ನನ್ನ ಮೇಲಿನ ಕಾಮೆ೦ಟು ನಿಮ್ಮ ಒ೦ದು ಪ್ರತಿಕ್ರಿಯೆಗೆ ಮಾತ್ರ ನನ್ನ ಉತ್ತರವಲ್ಲ. ಮೇಲೆ ಬ೦ದಿರುವ ಬಹುತೇಕ ಕಾಮೆ೦ಟುಗಳಿಗೆ ಉತ್ತರ ನೀಡುವ ಪರಿಯಲ್ಲಿ ಆ ಅಣಕ ಶಬ್ದವನ್ನು ಪ್ರಯೋಗಿಸಿದ್ದೇನೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆ ನಾನು ಎ೦ದಿಗೂ ಅಣಕವೆ೦ದು ಸ್ವೀಕರಿಸಿದ್ದಿಲ್ಲ. ನಿಮ್ಮ ಎಲ್ಲ ಪ್ರತಿಕ್ರಿಯೆಗಳೂ ಸಕಾರಾತ್ಮಕವಗಿರುತ್ತವೆ. ನೀವು ಘಾಸಿ ಮಾಡಿರುವ೦ಥದೇನೂ ಇಲ್ಲ. ನಾನೇ ಕ್ಷಮೆ ಕೋರುತ್ತೇನೆ ಸ್ವಲ್ಪ ಗೊ೦ದಲದ ಪ್ರತಿಕ್ರಿಯೆಗೆ. ಸದಾ ನಾನು ನಿಮ್ಮ ಸಕಾರಾತ್ಮಕ ಸಹೃದಯದ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇನೆ. ನನ್ನ ಮೇಲಿನ ಅಭಿಮಾನಕ್ಕೆ ನಾನು ನಿಮಗೆ ಋಣಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ,
ಕಳೆದ ೪೬ ಘಂಟೆಗಳಲ್ಲಿ ನನ್ನ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಗೊಂದಲವನ್ನು ನಿವಾರಣೆ ಮಾಡಿದ್ದಕ್ಕೆ ಧನ್ಯವಾದಗಳು.
ನಿಮ್ಮ ಮರು ಪ್ರತಿಕ್ರಿಯೆಯನ್ನು ಓದುವ ಅವಕಾಶ ದೊರೆತಿರಲಿಲ್ಲ. ಹಾಗಾಗಿ ಆ ಗೊಂದಲದೊಂದಿಗೇ ಇದ್ದೆ ಇಷ್ಟು ಸಮಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.