ಭೇತಾಳದ ಪ್ರಶ್ನೆಗಳು?

2

ಅಧೂರ ಕನಸುಗಳ
ಆವಿಯಾಗದ ಆತ೦ಕಗಳ
ಬೆನ್ನು ಬಿಡದ
ಭೇತಾಳದ ಚಿ೦ತೆಗಳ
ಚಾದರವ ಹೊದ್ದು
ಹೊಸ ಕನಸ ಕಾಣಲು
ಅಣಿಯಾದೆ

ಕನಸಿನೊಳಗೆ ನುಸುಳಿ
ಆನ೦ದದ ಸುಳಿಯಲ್ಲಿ
ಮುಳುಗಿ
ಎದ್ದಾಗ

ಮತ್ತೆ ಅದೇ
ಭೇತಾಳ
ನನ್ನ ಹೆಗಲೇರಿ
ತಲೆ ಸಾವಿರ
ಹೋಳಾಗುವ ಪ್ರಶ್ನೆಗಳನ್ನು
ಹಾಕಲು
ಹೊ೦ಚು ಹಾಕಿತು!...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

'ಅಧೂರ' ಅಂದ್ರೇನು?
ಹಿಂದಿ ನುಡಿಯಲ್ಲಿ 'ಅಧೂರಿ' ಅಂದ್ರೆ ಅರ್ಧಂಭರ್ಧ ಅಂತ..ಅದೇ ಬಳಕೆಯಾ?

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.
ಅಧೂರ ಅ೦ದ್ರೆ ಅಪೂರ್ಣ ಎ೦ಬ ಅರ್ಥ. ಇದು ಹಿ೦ದಿಯಿ೦ದ ಬ೦ದದ್ದು. ಅನೇಕ ಸಾಹಿತಿಗಳು ಇದರ ಬಳಕೆ ಮಾಡಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[ಬೆನ್ನು ಬಿಡದ
ಭೇತಾಳದ ಚಿ೦ತೆಗಳ
ಚಾದರವ ಹೊದ್ದು
ಹೊಸ ಕನಸ ಕಾಣಲು
ಅಣಿಯಾದೆ]

ಎಲ್ಲರೂ ಮಾಡುತ್ತಿರುವ ತಪ್ಪು ಅದೇ, ಅಲ್ಲಿಂದಲ್ಲಿಗೇ ಬಿಟ್ಟರೆ ಮಾತ್ರ, ಬೇತಾಳಗಳಿಗೂ ಬೇಸರವಾಗಿ ದೂರ ಹೋದಾವು. ಬೈಕ್ನಲ್ಲಿ ಬರುತ್ತಿದ್ದೆ. ನಾಯಿಯೊಂದು ಜೋರಾಗಿ ಅಟ್ಟಿಸಿಕೊಂಡು ಬಂತು. ಹಿಂಬದಿಯಲ್ಲಿ ಕುಳಿತಿದ್ದ ನನ್ನಣ್ಣ ಹೇಳಿದ-" ಗಾಡಿ ನಿಲ್ಲಿಸು" . ನಿಲ್ಲಿಸಿದೆ, ಅಟ್ಟಿಸಿಕೊಂಡುಬರುತ್ತಿದ್ದ ನಾಯಿ ನಿಂತಿತು. ಪಾಪ! ಅದಕ್ಕೇನೂ ತೋಚಲಿಲ್ಲವೇನೋ, ಬಂದ ದಾರಿಗೆ ಸುಂಕವಿಲ್ಲ ವೆನ್ನುವಹಾಗೆ ಬಾಲಮುದುರಿಕೊಂಡು ಹಿಂದಿರುಗಿ ಓಡಿ ಹೋಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.