ವಾಸ್ತವ ಹಾಗೂ ಭ್ರಮೆ

4.25

ವಾಸ್ತವ ಜಗತ್ತು
ಬಲು ಕಠೋರ
ಬರೀ ಭ್ರಮ ನಿರಸನ
ಹಾಗೆ೦ದೇ
ಕಾಲ್ಪನಿಕ ಜಗತ್ತು
ನನ್ನ ಕನಸಿನ ಲೋಕವೇ
ನನ್ನೆಲ್ಲ
ಸ೦ಭ್ರಮ
ನೆಮ್ಮದಿಗೆ ಮೂಲ
ಇದೇ ನನ್ನ ವಾಸ್ತವ
ನನ್ನ ಸರ್ವಸ್ವ
ಹಾಗೆಯೇ
ಇದೇ
ನನ್ನ ದುರ೦ತವೂ...

******

ಚಿತ್ರ ಕೃಪೆ:ಗೂಗಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

[ನನ್ನ ಕನಸಿನ ಲೋಕವೇ
ನನ್ನೆಲ್ಲ
ಸ೦ಭ್ರಮ
ನೆಮ್ಮದಿಗೆ ಮೂಲ
ಇದೇ ನನ್ನ ವಾಸ್ತವ
ನನ್ನ ಸರ್ವಸ್ವ
ಹಾಗೆಯೇ
ಇದೇ
ನನ್ನ ದುರ೦ತವೂ...]
ದುರಂತವಾಗುವುದು ಬೇಡ, ನನಸಾಗಲಿ. ನಾನೂ ಅಷ್ಟೇ, ಕಾಲ್ಪನಿಕ ಜಗತ್ತಿನಲ್ಲಿ ಬದುಕುತ್ತಿರುತ್ತೇನೆ. ಕಾಲ್ಪನಿಕ ಜಗತ್ತಿನ ಭ್ರಮೆಯಲ್ಲಿ ಎಲ್ಲಿ ವಾಸ್ತವ ಬದುಕಿಂದ ವಂಚಿತರಾಗುತ್ತೀವೋ ಎಂಬ ಅನುಮಾನವೂ ಇದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕು ನಡೆಯುವುದೇ ಕಾಲ್ಪನಿಕತೆಯ ಜೊತೆಯಲ್ಲಿ ಅಂದ ಮಾತ್ರಕ್ಕೆ ದುರಂತ ಯಾಕೆ ಮಾಡಿಕೊಳ್ಳುತ್ತೀರಿ ನನಸಾಗುವ ದಾರಿಗಳನ್ನು ಹುಡುಕಿ ಸಾರ್,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>
ಹಾಗೆಯೇ
ಇದೇ
ನನ್ನ ದುರ೦ತವೂ...<<

ಇದೂ ನಿಮ್ಮ ಕಾಲ್ಪನಿಕ ಅನಿಸಿಕೆ
ಹಾಗಂತ ಇದೆ ನನ್ನ ಅನಿಸಿಕೆ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್ ನೀವು ಏನು ಹೇಳ ಹೊರಟಿದೀರ ಎಂದು ಅರ್ಥವಾಗಲಿಲ್ಲ...ಆದರೆ ಒಂದಂತು ನಿಜ ನಮ್ಮ ಕಲ್ಪನ ಜಗತ್ತು ಕೆಲವು ಕ್ಷಣಗಳಾದರು ನಮಗೆ ಸಂತೋಷವನ್ನು ಕೊಡುತ್ತದೆ.ಎಂದು ನನ್ನ ಅನಿಸಿಕೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್, ಸುರೇಶ್, ಮ೦ಜು, ಮಾಲತಿ
ಎಲ್ಲರಿಗೂ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ.

ಇಲ್ಲಿ, ನನ್ನ ಕಲ್ಪನಾ ಲೋಕ ನೆಮ್ಮದಿಯನ್ನು ನೀಡಿದರೂ ಅದು ಕ್ಷಣಿಕ ಮತ್ತು ಒ೦ದು ಹ೦ತದವರೆಗೆ ಮಾತ್ರ. ನ೦ತರ ಮತ್ತೆ ಕಠೋರ ವಾಸ್ತವ ರಾಚಿ ಹೊಡೆಯುತ್ತದೆ. ಅದನ್ನು ಹೊರತುಪಡಿಸಿ ಬದುಕಿನ ಚಕ್ರ ತಿರುಗಲಾರದು. ಆದರೆ ಆ ನಿಷ್ಠುರ ವಾಸ್ತವಕ್ಕೆ ನಾವು ಅಣಿಯಾಗಿರುವುದಿಲ್ಲ. ಮತ್ತೆ ಸ೦ಘರ್ಷ ಅದಕ್ಕೇ ಅದು ಒಮ್ಮೊಮ್ಮೆ ದುರ೦ತವೂ ಆಗುವ ಸಾಧ್ಯತೆ ಇದೆಯೆ೦ಬುದೇ ಈ ಕಿರುಕವನದ ಸ೦ದೇಶ. ಕವನ ಎ೦ದಿಗೂ ವೈಯುಕ್ತಿಕ ಭಾವನೆಯನ್ನು, ಅನುಭವವನ್ನು ಬಿ೦ಬಿಸುತ್ತದೆಯೇ ಹೊರತು ಸಾರ್ವತ್ರಿಕವಲ್ಲ ಎ೦ಬುದು ನಾನು ನ೦ಬಿದ ಒ೦ದು Conviction.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಹಾಗಲ್ಲ, ವಾಸ್ತವ ಮತ್ತು ಕಲ್ಪನಾ ಲೋಕಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನೀವು ಕನಸು ಕಂಡರೆ ಮಾತ್ರ ಅದನ್ನು ನನಸಾಗಿಸಲು ಸಾಧ್ಯ. ಕನಸುಗಳು, ಕಲ್ಪನೆಗಳು ಇಲ್ಲದಿದ್ದರೆ ಈ ಬಾಳು ಉಪ್ಪಿಲ್ಲದ ಸಪ್ಪೆ ಊಟ, ಅಲ್ಲವೆ ? ದುರಂತವೆನ್ನುವುದನ್ನು ಬದಿಗಿಕ್ಕಿ ಸುಖದ ಕಲ್ಪನೆಯಲ್ಲಿ ತೇಲಾಡಿ ಜೀವನವನ್ನು ಅನುಭವಿಸಿ ಸಾರ್,,, ಅದೇ ಸಾರ್ಥಕತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆಯೇ ದುರ೦ತವೂ ಸುಖಾ೦ತವೂ ಬದುಕಿನ ನಾಣ್ಯದ ಎರಡು ಮುಖಗಳು ಮ೦ಜುನಾಥ್. ಕಲ್ಪನೆ ಸುಖ ಮತ್ತು ದುರ೦ತ ಎರಡನ್ನೂ ಒಳಗೊ೦ಡಿದೆ ಎ೦ಬ ಸೂಕ್ಷ್ಮ ಒಳನೋಟವನ್ನು ನೀಡುವ ಒ೦ದು ಕಿರು ಪ್ರಯತ್ನ ಈ ಕವನ ...
<<<ದುರಂತವೆನ್ನುವುದನ್ನು ಬದಿಗಿಕ್ಕಿ ಸುಖದ ಕಲ್ಪನೆಯಲ್ಲಿ ತೇಲಾಡಿ ಜೀವನವನ್ನು ಅನುಭವಿಸಿ>>
ಸುಖದ ನೆರಳೇ ದುಃಖ ಯಾವುದನ್ನೂ ಬದಿಗಿಕ್ಕಿ ಒ೦ದನ್ನೇ ಆಯ್ದು ಕೊಳ್ಳುವುದು ಇನ್ನೊ೦ದು ದುರ೦ತವೇ ಸರಿ ಮ೦ಜುನಾಥ್
ಕಲ್ಪನೆಯೇ ಸರ್ವಸ್ವವಾದಾಗ ಒ೦ದು ದುರ೦ತ ಎ೦ಬ ಭಾವನೆ ಈ ಕವನದಲ್ಲಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾಸ್ತವದಿಂದ ಪಲಾಯನ ಬೇಡ .ಕಲ್ಪನೆಯ ಸಾವಿರ ಸಿಹಿತಿನಿಸುಗಳಿಗಿಂತ ವಾಸ್ತವದ ಒಂದು ಹಿಡಿ ಅನ್ನವೇ ಲೇಸು ...........ಕವನ ಚೆನ್ನಾಗಿದೆ ವ್ಯಕ್ತಿಗತ ಮಟ್ಟದಲ್ಲಿ ನಿಮ್ಮ ಭಾವನೆ ಸರಿ .ಹಾಗೆಯೇ ಇದೇ ನನ್ನ ದುರ೦ತವೂ... ಅನ್ನುವ ಮಾತು ಮತ್ತೆ ವಾಸ್ತವದೆಡೆಗೆ ಪಯಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರಭಾಕರ್,
ಕವನವನ್ನು ಸರಿಯಾಗಿ ಗ್ರಹಿಸಿದ್ದೀರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.