"ಕಲ್ಪನೆ ಕಚಗುಳಿ ಇಟ್ಟಾಗ".. :)

5

ಅಂದು ಸೋಮವಾರ ಮಧ್ಯಾಹ್ನ.. ೨ ಗಂಟೆಗೆ ಬೆಂಗಳೂರು ಬಸವೇಶ್ವರ ನಗರದಿಂದ ಹೊರಟವಳು, ಹಾಸನಕ್ಕೆ ಮರಳಬೇಕಿತ್ತಲ್ಲಾ ಅಂತೂ ಬಸ್ ಹತ್ತಿ ಕುಳಿತೆ.. ಮಧ್ಯದಲ್ಲಿ ಒಂದೇ ಸೀಟ್ ಇತ್ತಾ.. ಇನ್ನೇನು ಅಲ್ಲೇ ಕುಳಿತೆ!! ಆಚೆ ಈಚೆ ಎಲ್ಲಾ ಹುಡುಗರೆ!! ಇನ್ನು ದಾರಿಯುದ್ದ ಮೌನವೇ ಗತಿ ಅಂದು ೪ ಗಂಟೆ ಕಳೆಯಬಾಕಲ್ಲಾ, ಎಂಪಿ೩ ಹ್ಯಾನ್ಡ್ಸ್ ಫ್ರೀ ಅನ್ನು ಕಿವಿಗೆ ದಬ್ಬಿ ಕುಳಿತೆ. ಹಾಗೆ ಅರ್ಧ ಗಂಟೆಯ ನಿದ್ದೆ ಬಂತು. ಕಿಟಕಿ ಬಳಿ ಸಿಕ್ಕಿದರೋ ಹೊರಗಾದರೂ ನೋಡಬಹುದಿತ್ತು. ಮುಹು!! ಎದುರೆ ಬಿಟ್ಟರೆ ಬೇರೆಲ್ಲೂ ನೊಡೋಹಾಗಿರಲಿಲ್ಲ. ಎಸ್.ಎಮ್.ಎಸ್ ಮಾಡೋಣ ಎಂದರೆ ಒಬ್ಬರದೂ ಮೆಸ್ಸೇಜ್ಗಳಿಲ್ಲ. ದಿನಕ್ಕೆ ೧೦೦ ಇದ್ದರೂ ನಾನು ಮಾಡಲ್ಲ ಇನ್ನು ಉಳಿದವ್ರು ಯಕ್ ಮಾಡೋ ಮನಸ್ಸು ಮಾಡ್ತಾರೆ ಅಲ್ವಾ.! ;)

ಅಂತೂ ಕುಣಿಗಲ್ ತಲುಪಿದಾಗ ಮೆಲ್ಲನೆ ಕಿಟಕಿಯಿಂದ ತೂರಿ ತಂಗಾಳಿ ಬೀಸಿತು ನೋಡಿ, ಚುರ್ ಅಂತು ಮೈ! ಹಾಗೇ ಕಣ್ಣ ನೋಟ ತಂಗಾಳಿ ಬಂದ ಕಡೆ ಹಾಯಿತು. ಮೋಡ ಕಟ್ಟಿ ಬಾನು ಕಪ್ಪು ಬಣ್ಣಕ್ಕೆ ತಿರುಗತ್ತು. ಕತ್ತಲಾದಂತೆ ಭಾಸವಾಯಿತು. ಟೈಮ್ ನೋಡಿದೆ ಇನ್ನೂ ೩.೩೦ ಅಷ್ಟೆ! ಸುಮ್ಮನೆ ಕಣ್ಮುಚ್ಚಿ ಕುಳಿತೆ! ಆ ರೊಮ್ಯಾಂಟಿಕ್ ಹವೆಗೆ ನನ್ನ ಮನಸ್ಸು ಕಲ್ಪಾನಾ ಲೋಕದಲ್ಲಿ ವಿಹರಿಸಲು ಪ್ರಾರಂಭಿಸಿತು. ಪಲ್ಸರ್ ಕಪ್ಪು ಬಣ್ಣದ ಬೈಕು, ಮುಂದೆ ಅವರು ಹಿಂದೆ ನಾನು! ಇದೇ ವೆದರ್.. ಚುಮು ಚುಮು ಹನಿಯುತ್ತಿದ್ದ ಮಳೆ. ಅದೇ ದಾರಿಯಲ್ಲಿ ಹೋಗುತ್ತಿತ್ತು ಗಾಡಿ..! ಇದಕ್ಕೆ ಸರ್ಯಾಗಿ ನನ್ನ ಎಂಪಿ೩ ಅಲ್ಲಿ ಬಂದ ಹಾಡುಗಳು "ಅಲೆ ಅಲೆ","ಕೈಸೆ ಮುಝೆ ತುಮ್ ಮಿಲ್ಗಯೇ","ಮುಂಗಾರು ಮಳೆಯೇ ಏನು ನಿನ್ನ ಹನಿಗಳಲೀಲೆ" "ಐ ಕ್ಯಾನ್ ಸೀ.. ಯು ಎಂಡ್ ಮಿ ವಾಕಿಂಗ್ ಇನ್ ದಿಸ್ ವಲ್ಡ್ ಟುಗೆಧರ್" "ತನ್ ತಾನೆ ತಾನ್ನಂತಾನೆ" ಈ ಹಾಡುಗಳೋ ನನ್ನ ಕಲ್ಪನೆಗೆ ಒಳ್ಳೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ನಂತಾಗ್ಬೇಕೇ!! ಮನಸ್ಸು ಎಲ್ಲೆಲ್ಲೋ ಹೋಯ್ತು.. ಅಷ್ಟೊತ್ಗೆ ಗಟ್ಟರ್ ವಾಸನೆ ಹೊಡೀತು.. :(
ಆದ್ರೆ ನನ್ನ ಕಲ್ಪನೆಲಿ ಅದು ಹೇಗೆ ತಿರಿಗಿತೆಂದರೆ.. ಅವ್ರನ್ನೊಂಚೂರು ಗಟ್ಟಿಯಾಗೇ ಹಿಡಿದೆ, ಆಗ ಬಡಿದದ್ದು ಆಯ್ಕ್ಸೆ ಡಿಯೋದು ಘಮ್ ಅನ್ನೋ ಪರಿಮಳ :P. ಆಮೇಲೆ ಗಾಡಿ ಅಲ್ಲೇ ಪಕ್ಕದಲ್ಲೇ ಇರೋ ಜುಳು ಜುಳು ಹರಿಯೋ ಫಾಲ್ಸ್ ಕಡೆ ಹೋಗಿ ದಡಕ್ ಅಂತ ಸ್ಟಾಪ್ ಆಯ್ತು.. ಮಳೆ ಜೋರಾಗ್ತಾನೆ ಇತ್ತು. ಸೀನ್ ಸಕತ್ತಾಗೇ ಹೋಗ್ತಿತ್ತು. ಇನ್ನೇನು ಮುಂದುವರಿಯುತ್ತೆ ಅನ್ನೋವಷ್ಟರಲ್ಲಿ ಕಂಡಕ್ಟರ್ "ಹತ್ತು ನಿಮ್ಶ್ಯ ಟೈಮ್ ಇದೆ ನೋಡಿ ಟೀ ಕುಡ್ಕೊಂಡು ಬರಬಹುದು" ಅಂತ ನನ್ನ ಕಲ್ಪನೆಗೆ ಸೆನ್ಸಾರ್ ಮಂಡ್ಳಿ ಅವ್ರತರ ಕತ್ತರಿ ಹಾಕ್ಬಿಟ್ರು :( ಆಮೇಲೆ ಕಲ್ಪನೆ ಮಾಡೋ ಮೂಡೇ ಹೋಯ್ತು!! ಮೌನದಲ್ಲೇ ಹಾಸನ ತಲುಪಿದೆ.. ಕೊನೆಗೂ ಈ "ಅವರು" ಯಾರು ಎಂದು ಗೊತ್ತಾಗಲೇ ಇಲ್ಲ :( !!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರೀ! ನಾನೆನೋ ಯಾರಪ್ಪ ಅವ್ರು ಹೀಗೆ ನಿಮ್ಮನ್ನ ಒಬ್ಬರನ್ನೆ ಕಳ್ಸಿರೋದು ಅನ್ಕೊತಿದ್ದೆ!
ನೀವು ನೋದಿದ್ರೆ ಕಲ್ಪನೆ ಅ೦ತ ತಿರುಚ್ಬಿಟ್ರಲ್ರಿ!
ಒಟ್ನಲ್ಲಿ ಚೆನ್ನಾಗ್ ಸಮಯ ಕಳ್ದಿದೀರ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ ಸಮ್ಯ ಕಳ್ದಿದ್ದೋ..!!! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೀರ್ಷಿಕೆಯಲ್ಲೇ ಸ್ಮೈಲಿ ಇದ್ದರೆ ಓದುವುದೋ ಬಿಡುವುದೋ ತಿಳಿಯದು. ಬಹುಶಃ ಓದಲಿಕ್ಕಿಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿ ಅವ್ರೆ ಏನು ಬೇಕಿದ್ರು ಮಾಡ್ಬಹುದು !! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆ ಹೆ... ಪಕ್ಕದಲ್ಲಿ ಕೂತಿರೋರಿಗೆ ಏನೋ ಗ್ರಹಚಾರ ಕಾದಿದೆ ಅಂತ ಓದ್ತಾ ಹೋದೆ... ಛೇ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದು ಸಾರಿ ಬೆಂಗಳೂರಿಗೆ ಬಂದು ಅದೇ ಥರಾ ಬಸ್ಸಲ್ಲಿ ಕುಂತು ನಿದ್ದೆ ಮಾಡುತ್ತಾ ಹೋಗಿ ಅವರು ಯಾರು ಅಂತ ಗೊತ್ತಾಗತ್ತೆ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗಣ್ಣಾ ನಿದ್ದೆ ಮಾಡಿದ್ರೆ ಕಲ್ಪನೆ ಮಾಡ್ಕೊಳ್ಳೋಕಾಗಲ್ಲಣ್ಣಾ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನಸು ಕಾಣಬಹುದಲ್ವಾ ದಿವ್ಯಾ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದು, ಕನಸನ್ನ ನಾವು ಬೇಕಾದಂಗೆ ತೆಕ್ಕೊಂಡು ಹೋಗೋಕಗಲ್ಲ... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ದೀವ್ಯ ಹಾಗೆರಿ ಕಲ್ಪನೆಗಳು ಭಾವನೆಗಳು ಮನಸ್ಸು ಹುಯ್ದಾಟ ಇದುವೇ ಜೀವನ ಅಲ್ವೇನ್ರಿ, ತುಂಬಾ ಚೆನ್ನಾಗಿ ಬರೆದೀದ್ದಿರಿ.
ಅಂದ ಹಾಗೆ ಈ " ಅವರು " ಅಂದ್ರಲ್ಲ , ಯಾರ್ರ್ರಿ ಅವರು ? ಅಲ್ಲ ಬೈಕಲ್ಲಿ ಕೂತು ನೀವು ಹೀಗೆ ಕನಸು ಕಂಡ್ರೆ ಪಾಪ ಆ " ಅವರು " ಅವರ ಕತೆ ಹೇಗೆ ಅಂತ ., !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಾ ದಿವ್ಯಾ... ನೀವು ಬಸ್ಸಲ್ಲಿ ಕೂತು, ಬೈಕಲ್ಲಿ ಹೋಗೋ ಕನಸು ಕಂಡ್ರೆ ಹೇಗ್ರೀ ? :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ಶ್ಯಾಮಲಕ್ಕ.. ಅದೇ ನಂಗೂ ಗೊತ್ತಾಗ್ಲಿಲ್ಲ..
ಆ ಬೈಕ್ ಕಲ್ಪನೆ ಹೇಗೆ ಮೂಡಿತು ಅನ್ನೋದು..!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಕ್ಕದಲ್ಲಿ ಒಳ್ಳೇ ಸ್ಮಾರ್ಟಾಗಿರೋ ಹುಡುಗರು ಇದ್ರೆ ಹಾಗೆ ಬಿಡಿ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದ್ದಿದ್ರೆ ನಾನು ಕಲ್ಪನೆ ಮಾಡ್ಕೊತಾನೆ ಇರ್ಲಿಲ್ಲ.. :)
ಅಯ್ಯೊ ಸುತ್ತಲಿದ್ದೋರೋ ೧೦ ದಿನ ಸ್ನಾನನೆ ಮಾಡದಿರೋರ್ ತರ ಇದ್ರು.. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅಯ್ಯೊ ಸುತ್ತಲಿದ್ದೋರೋ ೧೦ ದಿನ ಸ್ನಾನನೆ ಮಾಡದಿರೋರ್ ತರ ಇದ್ರು>>
ಇದು ಯಾಕೋ ಸರಿ ಇಲ್ಲ ಅಕ್ಕ , ಯಾರನ್ನು ನೋಡಿ ನಗೋದು ಸರಿಯಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಾ.. ನನೆಲ್ಲಿ ನಕ್ಕಿದು? :(
ಸ್ಯಾಡ್ ಮುಖಾನೆ ಹಾಕಿದೀನಲ್ವಾ... !!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನ್ ಹೇಳಿದ್ದು ನಿಮಗೆ ಗೊತ್ತಾಗಿದೆ ಅನ್ಕೊತಿನಿ .
ಇಲ್ಲಾಂದ್ರೆ ಬಿಡಿ , ಸುಮ್ಮನೆ ವಾದ ಯಾಕೆ ಅಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸ್ಮಾಇಲ್ ರೆ ಅದೆ ನಂಗೂ ಗಿತ್ತಾಗಿಲ್ಲ ಅವ್ರು ಯಾರು ಅಂತ!! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿವ್ಯಾ, ಹೆಣ್ಮಕ್ಳು ಹೀಗೆಲ್ಲ ಗೊತ್ತಿಲ್ದೇರೊ ಹುಡ್ಗರ ಜೊತೆ ಬೈಕಲ್ಲಿ ಸುತ್ಬಾರ್ದಮ್ಮ...
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಗವಂತಾ ಟ್ರಾಕ್ ಚೇಂಜ್ ಆಗ್ತಿದ್ಯಲ್ಲಪ್ಪಾ...
ಅಯ್ಯೋ ಕಲ್ಪನೆ ಮಾಡ್ಕೊಳ್ಳೋದಕ್ಕೂ ಕಡಿವಾಣ ಹಾಕಿದ್ರೆ ಹೇಗೆ!! :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯಯ್ಯೊ, ಅದಕ್ಯಾಕೆ ಬೇಜಾರು!? ಮುಂದಿನ ಸಲ ಕಲ್ಪನೇಲಿ ಬೈಕು ಹತ್ತೋಕ್ ಮುಂಚೆ ಪರಿಚಯ ಮಾಡ್ಕೊಂಡ್ರಾಯ್ತಪ್ಪ..
:) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಐಡಿಯಾ.. ಏನ್ ತಲೇನಣ್ಣಾ ನಿಂದು,,!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕಲ್ಪನೆ ನಿಜವಾಗಲಿ...ಪಲ್ಸರ್ ಬೈಕ್ ಹುಡುಗ ಸಿಗಲಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ .. ನಿಮ್ಮ್ ಅವ್ರು ಯಾರು ಅಂತ ಗೊತ್ತಾದ್ರೆ ನನಗೂ ಸ್ವಲ್ಪ ಹೇಳಿ ಪ್ಲೀಸ್.. ೪೩ ದಿನ ಆಯ್ತು ನನ್ನ ಬ್ಲಾಕ್ ಕಲರ್ ಪಲ್ಸರ್ ಕಳ್ತನ ಆಗಿ.ಇನ್ನೂ ಸಿಕ್ಕಿಲ್ಲಾ.. ಬಹುಶಃ ಅದೇ ಬೈಕಿರಬಹುದೇನೊ ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿವ್ಯ...ನಿನ್ ಬೈಕ್ ಪ್ರಯಾಣದ ಕಲ್ಪನೆ ಚೆನಾಗಿತ್ತು ಕೆಲವೊಂದು ಸಾರಿ ವಾಸ್ತವಕ್ಕಿಂತ ಈ ರೀತಿ ಕಲ್ಪನೆಗಳೆ ಎಷ್ಟು ಸಂತೋಷ ಕೊಡುತ್ತಲ್ವ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮಾಲತಕ್ಕ :)
ಅಲ್ಲ ವಾಸ್ತವ ಹೇಗಿರುತ್ತೆ ಅಂತ ಇನ್ನೂ ಗೊತ್ತಿಲ್ಲ... !! :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.