Chikku123 ರವರ ಬ್ಲಾಗ್

ಮೋತಿ, ಮೋಹನ ಮತ್ತು ಸಾರಾಯಿ ಪುರಾಣ

ಬೆಳಗ್ಗೆ ಎದ್ದು ಹಲ್ಲುಜ್ಜಿ, ಮುಖ ತೊಳೆದು ಚಾವಡಿಯಲ್ಲಿ ಬಂದು ಪೇಪರ್ ಓದುತ್ತಾ ಕುಳಿತೆ. ಭಯಂಕರ ಚಳಿ, ಮಲೆನಾಡಿನ ನವೆಂಬರ್ ಚಳಿಯನ್ನ ಮುಂಜಾನೆ ತಡ್ಕೊಳ್ಳೋದಕ್ಕೂ ಸ್ವಲ್ಪ ಗುಂಡಿಗೆ ಬೇಕು. ಅಡಿಗೆಮನೆಯಲ್ಲಿದ್ದ ಅಮ್ಮನಿಗೆ ಕಾಫೀ ಅಂತ ಕೂಗಿ ಹೇಳಿ ಮತ್ತೆ ಪೇಪರ್ ಹತ್ತಿರ ಕಣ್ಣುಹಾಯಿಸಿದೆ. ಸ್ವಲ್ಪ ಹೊತ್ತಾದ್ಮೇಲೆ ಅಮ್ಮ ಕಾಫೀ ಹಿಡ್ಕೊಂಡು ಬಂದ್ರು ಜೊತೆಗೆ ಕೈನಲ್ಲಿ ೨ ಇಡ್ಲಿ ಇತ್ತು. 'ಇದೇನಮ್ಮ ಒಳಗೆ ತಿಂತಿದ್ದೆ ಒಳ್ಳೆ ಭಿಕ್ಷುಕರಿಗೆ ತಂದ್ಕೊಡೋ ಹಾಗೆ ತರ್ತಿದೀಯಲ್ಲಾ?'. 'ನಿಂಗಲ್ಲ ಕಣೋ ನಾಯಿಗೆ (ಆಹಾ ಬೆಳಗ್ಬೆಳ್ಗೆನೆ ಮುಖಕ್ಕೆ ಮಹಾಮಂಗಳಾರತಿ)' ಅಂದು 'ಮೋತಿ, ಮೋತಿ' ಅಂತ ಕೂಗಿದ್ರು, ಮೂಲೆಯಲ್ಲಿ ಚಳಿಗೆ ಮುದುರಿ ಮಲಗಿದ್ದ ಮೋತಿ ಅಮ್ಮ ಕೂಗಿದ್ದು ಕೇಳಿ ಓಡಿಬಂತು. ನಮ್ಮಮ್ಮ ಕೈಲಿದ್ದ ಇಡ್ಲಿಯನ್ನ ಕಣಕ್ಕೆ ಎಸೆಯಿತು, ಎರಡು ಇಡ್ಲಿ ಬೇರೆ ಬೇರೆ ಕಡೆ ಬಿತ್ತು. ಮೋತಿ ಓಡಿಹೋಗಿ ಎರಡನ್ನೂ ಎತ್ಕೊಂಡು ತಾನು ಮಲಗಿದ್ದಲ್ಲಿಗೆ ಹೋಗಿ ತಿನ್ತಾಕೂರ್ತು. 'ಅಲ್ಲಮ್ಮ ಹಾಗೆ ಹಾಕಿದ್ರೆ ಅದ್ಕೆ ಬೇಜಾರಾಗಲ್ವ?', ಅದ್ಕೆ ಅಂತಾನೇ ಸಣ್ಣ ರೂಂ ಬೇರೆ ಇದೆ, ಅಲ್ಲೇ ಹಾಕಿದ್ರೆ ಆಗ್ತಿತ್ತು'.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (2 votes)
To prevent automated spam submissions leave this field empty.

ಮಳೆ ಮತ್ತು ಮಳೆಹನಿ - ೨

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆ ಮತ್ತು ಮಳೆಹನಿ - ೧

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ  

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚಿನ್ನದ ಮಲ್ಲಿಗೆ ಹೂವೇ

ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್ ಮಾಡಿ ಹಾಡು ಕೇಳುತ್ತಾ ರಸ್ತೆಬದಿಯಲ್ಲಿ ಹೋಗುತ್ತಿದ್ದಳು. ವಾಹನಗಳ ಶಬ್ಧ, ಜನಗಳು ಮಾತಾಡುವ ಶಬ್ಧ ನಿಧಾನಕ್ಕೆ ಕೇಳಿಸುತ್ತಿತ್ತು. ಚಿನ್ನದ ಮಲ್ಲಿಗೆ ಹೂವೇ ಹಾಡು ಎಫ್ ಎಂನಿಂದ ಅವಳ ಕಿವಿಗೆ ಇಯರ್ಫೋನ್ ಮೂಲಕ ರವಾನೆಯಾಗುತ್ತಿತ್ತು. ಅಷ್ಟರಲ್ಲಿ ಯಾರೋ ಹಿಂದಿಂದ ಕೈ ಹಾಕಿ ಸರ ಕಿತ್ತಂತಾಯ್ತು. ತಿರುಗಿ ನೋಡುವಷ್ಟರಲ್ಲಿ ಆಸಾಮಿ ಕಣ್ಮರೆಯಾಗಿದ್ದ.
.
.
.
.
.
.
.
.
.
.
.
.
.
.
.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್