Chikku123 ರವರ ಬ್ಲಾಗ್

ನನ್ನೂರಲ್ಲೊಂದಿನ - ೨

 ಡಿಸೆಂಬರ್ ತಿಂಗಳಲ್ಲಿ ಒಂದು ದಿನ ನನ್ನ ಕ್ಯಾಮೆರಾ ಕಣ್ಣೊಳಗೆ!!

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಅ(ಇ)ವಳ(ಲ್ಲ)

ಹುಡುಕುತ್ತಿದ್ದೆ ಅವಳನ್ನು ಹಳ್ಳಿಯ ಹರಿಣಿಯರ ನಡುವೆ ಪುಸ್ತಕವನ್ನ ಎದೆಗಾನಿಸಿಕೊಂಡು ಹೋಗುತ್ತಿರುವ ಹದಿಹರೆಯದ ಹುಡುಗಿಯರ ಹಿಂಡಲ್ಲಿ ಹೂದೋಟದಲ್ಲಿ ಆಗತಾನೇ ಅರಳುತ್ತಿರುವ ಹೂಗಳನ್ನ ಹೆಕ್ಕುತ್ತಿರುವ ಲಲನೆಯರ ಗುಂಪಲ್ಲಿ ನೇಸರ ಸವಿಯುತ್ತಾ ಸಾಗುತ್ತಿರುವ ಸುಂದರಿಯರ ಸಾಲಲ್ಲಿ ಬಿಂದಿಗೆಯನ್ನ ಸೊಂಟಕ್ಕೆ ಸಿಕ್ಕಿಸಿ ನೀರ ತರಲು ಹೋಗುತ್ತಿರುವ ಮಂಜು ಮುಸುಕಿದ ಹಾದಿಯಲ್ಲಿ ಇಲ್ಲ, ಎಲ್ಲೂ ಕಾಣಿಸಲಿಲ್ಲ, ಎಲ್ಲಿ ಹೋದಳು?? ಇವಳೇ?!! ಹೌದು ಇವಳೇ!! ಮಂತ್ರಿ ಮಾಲಲ್ಲಿ ಅವನ ಜೊತೆಗೆ ಮೈಗೆ ಮೈ ತಾಕಿಸಿ ಹೋಗುತ್ತಿರುವವಳೇ ಕಾಫೀ ಡೇಯಲ್ಲಿ ಕಾಸ್ಟ್ಲೀ ಕಾಫಿಯನ್ನ ಹೀರುತ್ತಿರುವವಳೇ ಪಬ್ಬಿನ ಕತ್ತಲ ಕೂಪದಲ್ಲಿ ಅವನನ್ನ ಹಿಡಿದುಕೊಂಡು ನರ್ತಿಸುತ್ತಿರುವವಳೇ ಅಲ್ಲವೇ ಅಲ್ಲ ಇವಳು ಅವಳಲ್ಲ ಇವಳು ಅವಳಾಗಿರಲಿಕ್ಕಿಲ್ಲ ಎಲ್ಲಿಯ ಲಂಗ ದಾವಣಿ, ಎಲ್ಲಿಯ ತುಂಡು ಲಂಗ ಆ ಮುಗ್ಧ ಮುಗುಳ್ನಗೆ, ಈ ಕೃತಕ ನಗೆ ಆ ಸರಳ ಸೌಂದರ್ಯ, ಈ ಸರ್ಪ ಸೌಂದರ್ಯ ಆ ಸಹಜ ಪ್ರೀತಿ, ಈ ತೋರಿಕೆ ಪ್ರೀತಿ ಆದರೂ ಬಳಿಹೋಗಿ ಮಾತನಾಡಿಸಲೇ?? ಬೇಡ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಮೋತಿ, ಕಾಫೀ, ಮೋಹನನ ಸೆಟ್ ಹಾಗೂ ಮೋತಿಯ ಸ್ನಾನ

ಸಂಕ್ರಾಂತಿಗೆ ಊರಿಗೆ ಹೋಗಿದ್ದೆ. ಶುಕ್ರವಾರ ಮಧ್ಯಾಹ್ನ ಹೊರತು ಬೆಂಗಳೂರಿಂದ ಪ್ರಯಾಣ ಮಾಡಿ ರಾತ್ರಿ ಮನೆ ತಲುಪಿ ಊಟ ಮಾಡಿ ಗಡಗಡನೆ ನಡುಗುವ ಚಳಿಯಲ್ಲಿ ಮೈಮೇಲೆ ರಗ್ಗನ್ನೆಳೆದುಕೊಂಡು ನಿದ್ರೆ ಮಾಡಿ ಮುಂಜಾನೆ ಎದ್ದು ಬೆಳಗಿನ ಕಾರ್ಯಗಳನ್ನ ಮುಗಿಸಿ ಚಾವಡಿಗೆ ಬಂದು ಪೇಪರ್ ಓದುತ್ತಾ ಕುಳಿತೆ. ಮೋತಿ ನನ್ನನ್ನ ನೋಡಿ ಓಡಿಬಂದು ಹತ್ತಿರ ಡ್ಯಾನ್ಸ್ ಮಾಡಲಾರಂಭಿಸಿತು. ನಾನು ಸಾಕು ಹೋಗು ಆಚೆಗೆ ಎಂದು ಗದರಿದ ಮೇಲೆ ಬಹುಶ ಕೋಪ ಬಂದು ಮೂಲೆಗೆ ಹೋಗಿ ತನ್ನ ಬಾಡಿಯನ್ನ ೫ ರೌಂಡ್ ಸುತ್ತು ಹೊಡೆದು ಮಲ್ಕೊಳ್ತು. ಅಮ್ಮ ಬಂದು ನಂಗೆ ಕಾಫೀ ಕೊಟ್ರು, ಮೋತಿನ ನೋಡಿ ಅದ್ಕೆ ಸ್ನಾನ ಮಾಡ್ಸಿ ತುಂಬಾ ದಿನ ಆಯ್ತು ಕಣೋ ಅಂದ್ಕೊಂಡು ಒಳಗೆ ಹೋದ್ರು. ಮೋತಿ ಮಲ್ಕೊಂಡು ನನ್ನ ಕಡೆಯೇ ನೋಡ್ತಿತ್ತು. ಅದಕ್ಕೂ ಚಳಿಗೆ ಕಾಫೀ ಬೇಕು ಅನ್ಸಿ ಕಾಲು ಲೋಟ ಉಳ್ಸಿ ಅದು ಮಲಗಿದ್ದಲ್ಲಿಗೆ ಹೋದೆ, ಅದಕ್ಕೆ ಗೊತ್ತಾಯ್ತು ಅನ್ಸತ್ತೆ ಖುಷಿಯಿಂದ ಎದ್ದು ನಿಂತಲ್ಲೇ ರೌಂಡ್ ಹಾಕೋಕೆ ಶುರು ಮಾಡ್ತು, ಅಲ್ಲೇ ಕಾಫಿಯನ್ನ ಹಾಕ್ದೆ, ಸಡನ್ನಾಗಿ ಬಾಯಿ ಹಾಕ್ತು ಅಷ್ಟೇ ಫಾಸ್ಟಾಗಿ ಬೆಚ್ಚಿ ಹಿಂದೆ ಬಂದು ನಾಲಗೆನ ಹಿಂದಕ್ಕೆ ಮಾಡ್ಕೊಳ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆ ಮತ್ತು ಮಳೆಹನಿ - ೩

ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್