Chikku123 ರವರ ಬ್ಲಾಗ್

ಆ ಒಂದು ರೂಪಾಯಿ!

ಫೆಬ್ರವರಿಯ ಎಲ್ ಐ ಸಿ ಪೇಮೆಂಟ್ ಬಾಕಿ ಇತ್ತು. ಆ ತಿಂಗಳು ರಜೆ ತೆಗೆದುಕೊಂಡಿದ್ದರಿಂದ ಜೊತೆಗೆ ಮಾರ್ಚ್ನಲ್ಲಿ ಮದ್ವೆ ಇದ್ದುದ್ದರಿಂದ ಏಪ್ರಿಲ್ನಲ್ಲಿ ಅದನ್ನ ಬಡ್ಡಿ ಸಮೇತ ಕಟ್ಟಬೇಕಾದ ಭಾಗ್ಯ ನನಗೊಲಿದಿತ್ತು. ಈ ಉರಿಬಿಸಿಲಿನಲ್ಲಿ ಮಧ್ಯಾಹ್ನ ೧:೩೦ರ ಸುಮಾರಿಗೆ ಆಫೀಸಿನಿಂದ ಸ್ವಲ್ಪ ದೂರದಲ್ಲಿರುವ ಎಲ್ ಐ ಸಿ ಆಫೀಸಿಗೆ ಹೋದೆ, ಆದರೆ ಊಟದ ಸಮಯವಾದ್ದರಿಂದ ವಾಪಸ್ ಬಂದೆ. ಮತ್ತೆ ೨:೩೦ಕ್ಕೆ ಹೋಗಿ ೩ನೇ ಮಹಡಿಗೆ (ಲಿಫ್ಟಲ್ಲಿ!) ಹೋಗಿ ಕ್ಯೂನಲ್ಲಿ ನಿಂತು ನನ್ನ ಸರದಿ ಬಂದಾಗ, ಪಾಲಿಸಿ ನಂಬರ್ ಹೇಳಿದೆ. ಅಲ್ಲಿರುವ ಚೀಟಿಯಲ್ಲಿ ಬರೆದುಕೊಡು ಅಂದ್ರು, ಪೆನ್ ಇರಲಿಲ್ಲ. ಹಿಂದೆ ಇದ್ದವರ ಬಳಿ ತೆಗೆದುಕೊಂಡು ಬರೆದು ಕೊಟ್ಟೆ. ೩೦೨೧ ರೂಪಾಯಿ ಕೊಡಿ ಅಂದಾಗ ೩೦೩೦ ಕೊಟ್ಟೆ. ಚೇಂಜ್ ಇಲ್ಲ ೧ ರೂ ಚೇಂಜ್ ಕೊಡು ಅಂದ್ರು. ಇಲ್ಲ ಅಂದೆ. ೯ ರೂ ನಾನೆಲ್ಲಿಂದ ತರಲಿ ಈಗ, ಇಲ್ಲಿ ಬರೆದು ಕೊಂಡಿರ್ತೀನಿ ೪ ಘಂಟೆ ಒಳಗೆ ಬಂದ್ರೆ ಕೊಡ್ತೀನಿ. ಕೊಡಿ ರಶೀದಿ ಅಂದು ಅದ್ನ ಇಸ್ಕೊಂಡು ನೋಡಿದ್ರೆ ೩೦೨೦.೧೦ ಅಂತಿತ್ತು. ಇಲ್ಲಿ ೧೦ ಪೈಸೆ ಇದೆ ನೀವು ೧ ರೂ ಕೇಳ್ತಿದೀರಾ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಭೂ + ಕಂಪನಿ

ಇವತ್ತು ಭೂಕಂಪ ಆದಾಗ ನನಗೆ ಆ ಅನುಭವವಾಗಲಿಲ್ಲ ನಾನು ಆ ಸಮಯಕ್ಕೆ ಊಟಕ್ಕೆ ಮನೆಕಡೆ ಹೋಗುತ್ತಿದ್ದುದರಿಂದ, ಆದರೆ ನಮ್ಮ ಆಫೀಸಿನಲ್ಲಿದ್ದವರಿಗೆ ಆ ಅನುಭವವಾಗಿತ್ತು, ಇದರಿಂದ ನನಗನಿಸಿದ್ದು "ಭೂಕಂಪದಿಂದ ಕಡಿಮೆ ಹಾನಿಯಾಗಿದ್ದರೂ ಹೆಚ್ಚಿನ ಲಾಭವಾಗಿರುವುದು ಸೆಲ್ ಫೋನ್ ಕಂಪನಿಯವರಿಗೆ!"
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚುರ್ಮುರಿ - ೧೭

೬೩) ಬೆಂಗಳೂರು ಟ್ರಾಫಿಕ್ ಪೋಲಿಸ್ ಸ್ಲೋಗನ್ 'Follow traffic rules' ಅದನ್ನ ಬೆಂಗಳೂರಿನವರು ಅರ್ಥ ಮಾಡಿಕೊಂಡಿರುವುದು 'Follow terrific rules'. ೬೪) ಸಿನೆಮಾ ಥಿಯೇಟರ್ ಬಳಿ ಅವನು ಪಾರ್ಕಿಂಗ್ ಮಾಡಲು ಜಾಗ ಹುಡುಕುತ್ತಾ ಕೊನೆಗೆ ಒಂದು ತೆಂಗಿನಮರದ ಬಳಿ ಕಾರನ್ನು ನಿಲ್ಲಿಸಿ ಅಲ್ಲಿದ್ದ ಕಾವಲುಗಾರನಿಗೆ ತೆಂಗಿನಕಾಯಿ ಬಿದ್ದರೆ ನೋಡಿ ಎಂದಾಗ ಅವನು ಆಗಲಿ ಎಂದನು!. ೬೫) ಅರೇನ್ಜಡ್ ರೇಡಿಯೋ ಬಟನ್, ಲವ್ ಚೆಕ್ ಬಾಕ್ಸ್. ೬೬) ಅವನು ಜೆರಾಕ್ಸ್ ಅಂಗಡಿಗೆ ಹೋಗಿ ೭೫ ಪುಟಗಳನ್ನು ಜೆರಾಕ್ಸ್ ಮಾಡಲು ಹೇಳಿದನು, ಅಂಗಡಿಯವನು ೧೦೦ ಪುಟದ ಒಳಗೆ ಮಾಡಿದರೆ ೧ ರೂ ೧೦೦ರ ಮೇಲೆ ಮಾಡಿಸಿದರೆ ೭೫ ಪೈಸೆ ಅಂದಾಗ ಅವನು ಹಾಗಿದ್ದರೆ ಮೊದಲ ೨೫ ಕಾಪಿಗಳನ್ನು ಮತ್ತೊಮ್ಮೆ ಜೆರಾಕ್ಸ್ ಮಾಡಿ ಎಂದನು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (3 votes)
To prevent automated spam submissions leave this field empty.

ಐಸ್ಪೈಸಾ

ಐಸ್ಪೈಸಾ ಆಡೋಣ ಬನ್ನಿ ಸಾ ಸ್ಕೂಲ್ ಯಾಕ್ ಸಾ ಬೆಲ್ ಹೊಡ್ಸಿ ಸಾ ಹೆಡ್ ಮಿಸ್ಸಾ ಪರ್ಮಿಶನ್ ತನ್ನಿ ಸಾ ಕಾಲಿಕೂತಿದ್ರೆ ಸಾ ಜಾಯ್ನ್ ಆಗಕ್ಹೇಳಿ ಸಾ ಒಂದ್ನೆ ಕ್ಲಾಸಾ ಎಲ್ಡ್ನೆ ಕ್ಲಾಸಾ ಮೂರ್ನೆ ಕ್ಲಾಸಾ ಎಲ್ಲಾ ಕ್ಲಾಸಾ ಬರಕ್ಹೇಳಿ ಸಾ ಐಸ್ಪೈಸಾ ಆಡೋಣ ಬನ್ನಿ ಸಾ|| ಸೈನ್ಸ್ ಮಿಸ್ಸಾ ಸೋಷ್ಯಲ್ ಮಿಸ್ಸಾ ಎಲ್ಲಾ ಮಿಸ್ಸಾ ಕರ್ಕಂಬನ್ನಿ ಸಾ ರಮೇಸಾ ಗಣೇಸಾ ನಿಮ್ ಟೀಮ್ ಸಾ ದಿವ್ಯಾ ಭವ್ಯಾ ನಮ್ ಟೀಮ್ ಸಾ ಐಸ್ಪೈಸಾ ಆಡೋಣ ಬನ್ನಿ ಸಾ|| ಕಣ್ಮುಚ್ಚಿ ಸಾ ಕದ್ಕೂತ್ಕೋತೀವಿ ಸಾ ೧ ೨ ಎಣಿಸಿ ಸಾ ಜೂಟ್ ಹೇಳಿ ಸಾ ನಮ್ನ ಹಿಡಿರಿ ಸಾ ಮಿಸ್ಗಳ್ನಲ್ಲ ಸಾ ಬರಿ ಮೋಸ ಸಾ ಸಾಕ್ಬನ್ನಿ ಸಾ ಐಸ್ಪೈಸಾ ಸ್ಟಾಪ್ ಮಾಡಿ ಸಾ ನಾವೇ ಆಡ್ತೀವಿ ಸಾ ಮನೆಗ್ಹೋಗಿ ಸಾ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್