Chikku123 ರವರ ಬ್ಲಾಗ್

ಜೀವನವೆಂದರೆ ಅಲ್ಪವಿರಾಮಗಳ ಸಂತೆ, ಕೊನೆಗೊಂದು ಪೂರ್ಣವಿರಾಮ - ೩

ಒಬ್ಬನೇ ಮಗು ಸಾಕು, ಅವನೇ ಇರುವ ೨೦ ಎಕರೆ ತೋಟವನ್ನ ನೋಡಿಕೊಂಡು ಹೋದರಾಯಿತು ಎಂದುಕೊಂಡಿದ್ದರು, ತಮ್ಮ ಸ್ವಪ್ರಯತ್ನದಿಂದ ಕಡಿಮೆ ಇದ್ದ ಭೂಮಿಯಲ್ಲೇ ಚೆನ್ನಾಗಿ ದುಡಿದು ಸ್ವಲ್ಪ ಸ್ವಲ್ಪ ಖರೀದಿಸಿ ಚೆನ್ನಾಗಿ ತೋಟ ಮಾಡಿ ವ್ಯವಹಾರ ಮಾಡಿಕೊಂಡು ಹೋಗುತ್ತಿದ್ದರು ಆ ದಂಪತಿಗಳು, ಊರಲ್ಲಿದ್ದ ಎಲ್ಲರಿಗೂ ಇವರ ಸಂಪದ್ಭರಿತವಾದ ತೋಟದ ಮೇಲೆಯೇ ಕಣ್ಣು, ಸ್ವಲ್ಪ ವರ್ಷಗಳು ಉರುಳಿದವು, ಒಂದು ಹೆಣ್ಣು ಮಗುವಾಗಲಿ ಎಂದು ದಂಪತಿಗೆ ಬಯಕೆಯಾಯಿತು, ಆದರೆ ಆಗಿದ್ದು ಮತ್ತೊಂದು ಗಂಡು, ಪವನ್ ಮೊದಲನೆಯವನು, ಜೀವನ್ ಎರಡನೆಯವನು, ಇಬ್ಬರಿಗೂ ಒಂದು ಡಿಗ್ರಿ ಮಾಡಿಸಿ ತೋಟ ಹಂಚಿ ಅವರು ಅದನ್ನು ನೋಡಿಕೊಳ್ಳಲಿ ಎಂದು ಆಶಿಸಿದ್ದರು, ಅದರಂತೆ ಇಬ್ಬರೂ ಚೆನ್ನಾಗೇ ಓದಿದರು, ಅಣ್ಣ ತಮ್ಮ ಇಬ್ಬರೂ ಅನ್ಯೋನ್ಯವಾಗಿದ್ದರು, ಎಸ್ ಎಸ್ ಎಲ್ ಸಿ ಆದ ಬಳಿಕ ಊರಲ್ಲೇ ಇದ್ದು ಓದಿದರ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.

ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ

ಇಲ್ಲಿಯವರೆಗೆ: http://sampada.net/b... ಕಾಲ್ ಕಟ್ ಮಾಡಿ ನಾವಡವ್ರಿಗೆ ಕಾಲ್ ಮಾಡಿದೆ. ಅವ್ರು ಇಲ್ಲಿ ತುಂಬಾ ಮಳೆ ಚಿಕ್ಕು, ನೇತ್ರಾವತಿ ಬ್ರಿಡ್ಜ್ ದಾಟಿ ಮೇಲೆ ಹತ್ತಿದ್ದಾಳೆ, ಅವ್ಳು ಇಳ್ಯೋತಂಕ ನಾವಿಲ್ಲಂದ ಕದ್ಲಂಗಿಲ್ಲ. ಸರಿ ಬಿಡಿ ಮುಂದಿನ ಮ್ಯಾಚಿಗೆ ಸಿಗ್ತೀರಾ ನೋಡೋಣ ಅಂದು ಕಾಲ್ ಕಟ್ ಮಾಡಿ ಶ್ರೀಧರವ್ರಿಗೆ ಕಾಲ್ ಮಾಡಿದೆ. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಶ್ರೀ: ಬಹುಶ ಆಗಲ್ಲ ಚಿಕ್ಕು, ಹೈದರಾಬಾದಲ್ಲಿದೀನಿ. ನಾ: ನೋಡಿ ಪ್ರಯತ್ನ ಮಾಡಿ. ಶ್ರೀ: ಆಗ್ಲಿ ಚಿಕ್ಕು, ಮತ್ತೆ ಎಷ್ಟು ಕುರಿಗಳು (ಸಂಪದಿಗರು) ಬರ್ತಿವೆ? ನಾ: ಕುರಿ?? ಓಹೋ ಹಾಗೆ, ಎಲ್ಲಾ ಕುರಿಗಳಿಗೂ ಕಾಲ್ ಮಾಡಿದೀನಿ, ಕೆಲವು ಬರ್ತಿವೆ. ಶ್ರೀ: ಸರಿ, ಆದ್ರೆ ಕುರಿ ಕಾಲ್ ಕಟ್ ಮಾಡ್ಬೇಡಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೩

ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ http://sampada.net/b... ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಮ: ಇಲ್ಲ ಚಿಕ್ಕು. ನಾ: ಯಾಕೆ ಮಂಜಣ್ಣ. ಮ: ನಾನು ದುಬೈನಲ್ಲಿದೀನಿ, ನಾಳೆ ಬರ್ತೀನಿ ಬೆಂಗಳೂರಿಗೆ ಆದ್ರೆ ಮ್ಯಾಚಿಗೆ ಬರಕಾಗಲ್ಲ. ನಾ: ಅದೇನು ಹಂಗೆ? ಮ: ಅಯ್ಯೋ ಚಿಕ್ಕು, ಒಂದಾ ಎರಡಾ ಪ್ರಾಬ್ಲಂ. ನಾ: ಯಾಕೆ ಮಂಜಣ್ಣ, ನಾವೆಲ್ಲಾ ಇರೋದು ಏನಕ್ಕೆ ಹೇಳಿ (ಬರೀ ಕೇಳೋದಕ್ಕೆ, ಇನ್ನೇನು ಕಡಿದು ದಬ್ಹಾಕ್ತೀವಿ!!!!) ಅದೇನು ಅಂತ. ಮ: ದುಬೈನಲ್ಲಿರೋ ಮನೆ ಎದ್ರಿಗೆ ಯಾರೋ ಮಾಟ ಮಂತ್ರ ಮಾಡ್ಸಿದ್ದಾರೆ ಅದ್ಕೆ ಪರಿಹಾರ ಮಾಡ್ಬೇಕು, ಒಳ್ಳೆ ಭಟ್ರನ್ನ ಕರ್ಕೊಂಡು ಬಂದು ಪರಿಹಾರ ಮಾಡ್ಸ್ಬೇಕು ಅದ್ಕೆ ಹೊರಟಿದೀನಿ ಅಲ್ಲಿಗೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೨

ಮನೆಯವರಿಗೆ ಒಂದು ಲೋಟ ಕಾಫಿ ಕೊಡು ಅಂತ ಹೇಳಿ ಸಾವರಿಸಿಕೊಳ್ಳಲು ಸೋಫಾ ಮೇಲೆ ಕುಳಿತೆ. ಕಾಫಿ ಕುಡಿದು ಮುಂದಿನ ಕಾಲ್ ಕವಿ ಸರ್ http://sampada.net/b... ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಕ: ಆಯ್ತು ಚಿಕ್ಕು ಬರ್ತೀನಿ. ನಾ: ಒಳ್ಳೇದು, ಹಾಗಾದ್ರೆ ನಾಳೆ ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ ಸಿಗೋಣ. ಕ: ಆಗಲಿ, ಮತ್ತೊಂದು ವಿಷಯ. ನಾ: ಹೇಳಿ. ಕ: ಬರುವಾಗ ಖಡ್ಗವನ್ನ ತಗೆದುಕೊಂಡು ಬರುತ್ತೇನೆ. ನಾ: ಅದೇನಕ್ಕೆ. ಕ: ಅಯ್ಯೋ ಚಿಕ್ಕು, ಈ ನಡ್ವೆ ದೆವ್ವ ಭೂತಗಳು ನಮ್ಮ ಸೋ ಕಾಲ್ಡ್ ಐ ಟಿ ಸಿಟಿಯಲ್ಲೂ ಬಂದಿವೆ, ಅದಕ್ಕೆ ಆ ಖಡ್ಗವನ್ನ ತರ್ತೀನಿ ಅಂದಿದ್ದು. ನಾ: ಮೊದಲು ಆ ಕೆಲ್ಸಾ ಮಾಡಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಐ ಪಿ ಎಲ್ ಮತ್ತೂ ಸಂಪದ ಟೀಮೂ - ೧

ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ. ಮೊದಲು ಪಾರ್ಥವ್ರಿಗೆ. ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ, ಬರ್ತೀರಾ? ಪಾ: ಓ ಚಿಕ್ಕು, ಎಂಥ ಕೆಲಸ ಆಯ್ತು. ನಾನು ಆಗ್ಲೇ ಅಣ್ಣಿಗೇರಿಗೆ ಟ್ರೈನ್ ಬುಕ್ ಮಾಡಿದೀನಿ. ನೋಡೋಣ ಇನ್ನೊಂದ್ಸಲ ಹೋಗೋಕಾಗತ್ತಾ ಅಂತ ಯೋಚನೆ ಮಾಡಿ ಕ್ಯಾನ್ಸಲ್ ಮಾಡಿ ಬರೋದಕ್ಕೆ ಪ್ರಯತ್ನ ಮಾಡ್ತೀನಿ ನಾ: !@#$%&*()... (ಅಯ್ಯೋ ಪುಣ್ಯಾತ್ಮ, ನಮ್ಗೆ ಬುರುಡೆ ಬ್ಲಾಗ್ ನೋಡೇ ಒಂದು, ಎರಡು ಆಗೋ ಹಾಗೆ ಮಾಡಿದ್ದೀರಾ, ಈ ವಯಸ್ಸಲ್ಲಿ ಇದೆಂಥಾ ಹುಚ್ಚಪ್ಪಾ). ಅಲ್ಲಿಗೆ ಮತ್ತೆ ಏನಕ್ಕೆ ಹೋಗ್ತಿದೀರಾ? ೨ನೇ ವರ್ಶನ್ ತಲೆ ಬುರುಡೆಗಳು ಬಂದಿದಾವಾ? ಪಾ: ಹೂನಪ್ಪಾ, ಅದ್ಕೆ ಮತ್ತೆ ಹೋಗ್ತಿರೋದು. ನಂಗಂತೂ ಕುತೂಹಲ ತಡೆಯೋಕಾಗ್ತಿಲ್ಲ. ಯಾವಾಗ ಹೋಗ್ತೀನೋ ಅನ್ನೋ ಹಾಗೆ ಆಗಿದೆ. ಇಲ್ಲಿ ನೀನು ನೋಡಿದ್ರೆ ಮ್ಯಾಚಿಗೆ ಕರಿತಿದೀಯಾ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್