Chikku123 ರವರ ಬ್ಲಾಗ್

ಫಿಲ್ಟರ್ ಕಾಫೀ!

ಸುರಿಯುತ್ತಿರುವ ಮಳೆಯಲ್ಲಿ (ಬೆಂಗಳೂರಲ್ಲಿ ಮಳೆ ಬರುತ್ತಿಲ್ಲ ಬಿಡಿ ಆದರೂ ಇರುವ ಸ್ವಲ್ಪ ಚಳಿಗೆ) ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ಒಂದು ಲೋಟ ಕಾಫೀ ಬೇಕೆನ್ನಿಸುವುದು ಸಹಜ. ಅಮ್ಮ ಇಲ್ಲೇ ಇದ್ದರೆ ನಿಮ್ಮ ಪುಣ್ಯ, ಕಾಫೀ ಕುಡಿಯುವ ಭಾಗ್ಯ ನಿಮಗೆ, ಅಮ್ಮ ಕಾಫೀ ಅಂದರೆ ಸಾಕು ಸ್ವಲ್ಪ ಹೊತ್ತಿಗೆ ನಿಮ್ಮೆದುರಿಗೆ ಬಿಸಿ ಬಿಸಿಯಾದ ಕಾಫೀ ಬಂದುಬಿಡುತ್ತದೆ. ಆದರೆ ಅಮ್ಮ ಊರಿನಲ್ಲಿದ್ದರೆ ಕಾಫೀ ಮಾಡುವುದು ನಮ್ಮ ಕರ್ಮ. ಹೆಂಡತಿಗೆ ಕಾಫೀ ಮಾಡಲು ಬಂದರೆ ಸ್ವಲ್ಪ ಪುಣ್ಯ ಮಾಡಿರಬಹುದು ನೀವು, ಅಕಸ್ಮಾತ್ ಬಾರದಿದ್ದರೆ ನೀವೇ ಅಡಿಗೆ ಮನೆಗೆ ಪ್ರವೇಶ ಮಾಡಬೇಕಾಗುವುದು.

ಕಾಫೀ ಫಿಲ್ಟರ್ ಇಲ್ಲದಿದ್ದರೆ ಮೊದಲು ಒಂದು ಫಿಲ್ಟರ್ ಖರೀದಿಸಬೇಕು! ಒಂದು ಕಪ್ಪಿನಷ್ಟು ನೀರನ್ನು ಕುದಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ದೇವರೂ ವಿಫಲನಾಗಿದ್ದಾನೆ

ದೇವಸ್ಥಾನದಲ್ಲಿ ಸರ್ಕಾರ ಆದೇಶಿಸಿದ್ದ ಪೂಜೆ ಶುರುವಾಗುವ ಮುನ್ನವೇ ದಕ್ಷಿಣ ಕನ್ನಡದಲ್ಲಿ ಹಾಗೂ ಮಲೆನಾಡಿನಲ್ಲಿ ಮಳೆ ಶುರುವಾಗಿ ಬಿಟ್ಟಿದೆ. ಆದರೆ ರಾಜಧಾನಿಯಲ್ಲಿ ಪೂಜೆ ಶುರುವಾದ ನಂತರ ಮಳೆ ಬಂದಿದೆ. ದೇವರೂ ಬಿ ಜೆ ಪಿ ಸರ್ಕಾರದಂತೆ ಒಂದು ದೃಢ ನಿರ್ಧಾರಕ್ಕೆ ಬರುವಲ್ಲಿ ವಿಫಲನಾಗಿದ್ದಾನೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಲೆದಾಟ

ಭಾವನೆಗಳ ಹೂದೋಟದಲ್ಲಿ ಬಯಕೆಯ
ಬೇಲಿಯೊಳಗೆ ವಿಹರಿಸುತಿರುವೆ ನಾನು

ಮಕರಂದ ಹೀರಲು ಬರುವ ದುಂಬಿಯಂತೆ
ಅಲೆಯುತಿರುವೆ ನೀನು

ಕಡಲ ಕಿನಾರೆಯಲಿ ಹೆಜ್ಜೆಗಳನಿಡುತಾ
ಸಾಗುತಿರುವೆ ನಾನು

ನೆನಪುಗಳ ಕಡಲಿನಲಿ
ಅಲೆಗಳಂತೆ ಅಪ್ಪಳಿಸುತಿರುವೆ  ನೀನು

ಪಯಣದ ಹಾದಿಯಲಿ ಸಂಚಾರಿಯಂತೆ
ಸಾಗುತಿರುವೆ ನಾನು

ದಾರಿಯಲಿ ಸಿಗುವ ಝರಿಯಂತೆ
ಬಂದು ಹೋಗುತಿರುವೆ ನೀನು

ಎಲೆಯ ಮೇಲಿರುವ
ಇಬ್ಬನಿಯಾಗಿರುವೆ ನಾನು

ಜಾರಿ ಬೀಳುವ ಆ ಹನಿಗೆ
ಕೈಯಾಗು ನೀನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಬಿಗ್ ಬಜಾರಿನಲ್ಲಿ ಕನ್ನಡ ಹಾಡನ್ನು ಅರಸುತ್ತಾ...

ನೆನ್ನೆ ಎಂ ಜಿ ರೋಡ್ ಹತ್ತಿರದಲ್ಲಿರುವ ಬಿಗ್ ಬಜಾರಿಗೆ (ಲಿಡೋ ಥಿಯೇಟರ್ ಬಳಿ) ಹೋಗಿದ್ದೆವು. ಒಳಗೆ ನಿಧಾನಕ್ಕೆ ಸಂಗೀತ ತೇಲಿ ಬರುತ್ತಿತ್ತು, ಹಿಂದಿ ಹಾಡನ್ನು ಹಾಕಿದ್ದರು. ನನ್ನಾಕೆ ಏನನ್ನೋ ಹುಡುಕುತ್ತಿದ್ದಳು. ನಾನು ಅವಳನ್ನು ಅಲ್ಲೇ ಬಿಟ್ಟು  ತಿರುಗಾಡುತ್ತಿದ್ದೆ. ಆ ಹಾಡು ಮುಗಿದ ತಕ್ಷಣ ತೆಲುಗು ಹಾಡೊಂದು ಬಂತು ಅದಾದ ನಂತರ ಮತ್ತೊಂದು ತೆಲುಗು ಹಾಡು, ಅದು ಮುಗಿದ ತಕ್ಷಣ ತಮಿಳಿನ ಹಾಡು. ಅಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕ ಮಂದಿ ಕನ್ನಡ ಮಾತನಾಡುತ್ತಿದ್ದರು. ಸುಮಾರು ಅರ್ಧ ಘಂಟೆಗಳ ಅವಧಿಯವರೆಗೆ ಬೇರೆ ಭಾಷೆಯ ಹಾಡುಗಳೇ ಬರುತ್ತಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್