Chikku123 ರವರ ಬ್ಲಾಗ್

ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ

ಅತಿಥಿಗಳು ಮನೆಗೆ ಬಂದಾಗ ಸಾಮಾನ್ಯವಾಗಿ ಸ್ವಲ್ಪ ದಿನ ಇದ್ದು ಹೊರಡುತ್ತಾರೆ, ಮನೆ ಬಿಟ್ಟು ಹೊರಡುವಾಗ ಇನ್ನೊಮ್ಮೆ ಬನ್ನಿ ಎಂದು ಹೇಳುವುದುಂಟು. ಆದರಿಲ್ಲಿ ಹೊರಟು ನಿಂತವರನ್ನು ಮೂರೂ ದಿನದಿಂದ ಹೋಗಲೇಬೇಡಿ ಇಲ್ಲೇ ಇರಿ ಎಂದು ಸರ್ಕಾರದ ನಾಯಕರು ಗೋಗರೆಯುತ್ತಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಸ್ವಾತಂತ್ರ್ಯ ಅಂದು ಇಂದು

ನೆಲ ಜಲ ಗಾಳಿಯನ್ನ ಕಸಿದುಕೊಂಡಿದ್ದ
ಪರಕೀಯರ ಆಕ್ರಮಣಕ್ಕೆ ನಲುಗಿದ್ದರವರು

ಬಂಧು ಬಾಂಧವ್ಯದ ಕೊಂಡಿಯ ಕಳಚಿ
ದೇಶಸೇವೆಗೆ ಪ್ರಾಣವನ್ನ ಮುಡಿಪಾಗಿಟ್ಟಿದ್ದರವರು 

ಜಾತಿ ಮತ ಭಾಷೆಯ ಹಂಗಿಲ್ಲದೆ
ಒಂದಾಗಿ ಹೋರಾಡಿದ್ದರವರು

ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ
ಧಾರೆಯೆರೆದಿದ್ದರವರು

ಅನ್ನ ನೀರು ಬಿಟ್ಟು
ಮಾತೃಭೂಮಿಗೆ ಮಡಿದಿದ್ದರವರು

ನರ ನಾಡಿ ನೆತ್ತರನು ಹೀರಿ
ನಂಬಿಕೆಯನ್ನ ಕಿತ್ತುಕೊಂಡಿದ್ದಾರಿವರು

ಭೂರಮೆಯ ಒಡಲನ್ನು ಬಕಾಸುರನಂತೆ ಬಗೆದು
ತಿನ್ನುತ್ತಿದ್ದಾರಿವರು

ಬಾರು ಪಬ್ಬುಗಳ ಮಬ್ಬುಗತ್ತಲಿನಲಿ
ತೇಲಿಹೋಗಿದ್ದಾರಿವರು

ಸಂಸ್ಕಾರ-ಸಂಸ್ಕೃತಿಗಳನ್ನ
ಬೀದಿಗೆಸೆದಿದ್ದಾರಿವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಸ್ಕರ್ಟ್ - ಸಂಸ್ಕೃತಿ

ಹೈಸ್ಕೂಲಿನಲ್ಲಿದ್ದಾಗ ಅವಳು ಶಾಲೆಯ ಕಾರ್ಯಕ್ರಮದಲ್ಲಿ ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡನ್ನು ಹಾಡುತ್ತಿದ್ದಳು, ಹತ್ತು ವರ್ಷಗಳ ನಂತರ ಹೊರಗೆ ಅವಳು ಮಿನಿಸ್ಕರ್ಟ್ ಮತ್ತು ಸ್ಟ್ರ್ಯಾಪ್ಲೆಸ್ ಟಾಪನ್ನು ಹಾಕಿಕೊಂಡು ತಿರುಗಾಡುತ್ತಿದ್ದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (5 votes)
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್