Chikku123 ರವರ ಬ್ಲಾಗ್

ಕರಿಮಲೆಯ ಕಗ್ಗತ್ತಲಿನಲಿ

ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ ಮನೆಯವರೇ ಅದಕ್ಕೆ ವಾರಸುದಾರರಾಗಿದ್ದರು, ವಾಡಿಕೆಯಂತೆ ಅದು ಭೀಮೇಗೌಡರಿಗೆ ಒಲಿದಿತ್ತು. ಅವರ ವ್ಯಕ್ತಿತ್ವ ಜೊತೆಗೆ ಶ್ರೀಮಂತಿಕೆಯೂ ಅದು ಸೂಕ್ತವಾಗಿತ್ತು. ರಾಮಾಪುರದ ಪಶ್ಚಿಮಕ್ಕೆ ಇತ್ತು ಕರಿಮಲೆ. ಊರಿನ ಮೇಲ್ಬದಿಯಲ್ಲಿ ಮನೆಗಳಿದ್ದರೆ ಕೆಳಗೆ ಗದ್ದೆಗಳು, ಹಾಗೆ ಇಳಿಜಾರಿನಲ್ಲಿ ಗದ್ದೆಯ ಸಾಲುಗಳು ಕೊನೆಯಾಗುತ್ತಿದ್ದಂತೆ ಹೊಳೆ, ಹೊಳೆಯಾಚೆ ಇದ್ದದ್ದೇ ಕರಿಮಲೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಬೆಂಗಳೂರಲ್ಲೊಂದಿನ - ಮುಕ್ತಾಯ

ಇಲ್ಲಿಯವರೆಗೆ http://sampada.net/%... ..... ಸಂಜೆ ೫ ಗಂಟೆ ಆಗ್ತಾ ಬಂತು. ಈರಣ್ಣ ಹತ್ರ ಬಂದು ಅದೂ ಇದೂ ಮಾತಾಡ್ತಾ ಕೂತ್ರು. 'ಈರಣ್ಣ ಇವತ್ತು ಶುಕ್ರವಾರ, ಸ್ವಲ್ಪ ಜ್ಯೂಸ್ ಬೇಗ ತರ್ಸಿದ್ರೆ ಕುಡ್ಕೊಂಡು ಬೇಗ ಹೊರಡ್ತಿದ್ವಿ'. 'ನಾನು ಅದೇ ಯೋಚನೆ ಮಾಡ್ತಿದ್ದೆ ಕಣ್ರೀ, ನೀವೆಲ್ಲ ಬೇಗ ಹೊರಡ್ತೀರೆನೋ ಅಂತ, ನನಗೆ ಜ್ಯೂಸ್ ತರೋ ಕೆಲಸ ಇರ್ತಿರ್ಲಿಲ್ಲ, ಆದ್ರೆ ಯಾರೂ ಹೊರಡಂಗಿಲ್ಲ ನೋಡ್ರೀ, ನಂಗೂ ಸ್ವಲ್ಪ ಕಾಸು ಮಿಕ್ತಿತ್ತು!!!!' 'ಸರಿಹೋಯ್ತು ಬಿಡಿ, ಈಗ ಬೇಗ ಆರ್ಡರ್ ಮಾಡಿ, ಕುಡಿದು ಹೊರಡ್ತೀವಿ' ಜ್ಯೂಸ್ ಕುಡಿದು ಸೌಜಂಗೆ ಬಾಯ್ ಹೇಳಿ ಮನೆ ಕಡೆ ಹೊರ್ಟೆ. ಬಸ್ ಸ್ಟಾಪಲ್ಲಿ ವಯಸ್ಸಾದವರೊಬ್ರು ಸಿಕ್ಕಿದ್ರು, ಮೆಜೆಸ್ಟಿಕ್ಗೆ ಹೋಗೋ ಬಸ್ ಇಲ್ಲೇ ಬರತ್ತೇನಪ್ಪ? ಹೌದು ಇಲ್ಲೇ ಬರತ್ತೆ ಕಣ್ರೀ. ಒಂದು ೫ ನಿಮ್ಷ ಆಗಿರ್ಬೇಕು,ಮೆಜೆಸ್ಟಿಕ್ಗೆ ಖಾಲಿ ಬಸ್ ಸಿಕ್ತು. ಅವ್ರೂ ಹತ್ತಿದ್ರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಇಂಟರ್ವಲ್

ಆ ಸಿನೆಮಾ ಶುಕ್ರವಾರ ಬಿಡುಗಡೆಯಾಗಿತ್ತು. ಶನಿವಾರವೂ ಥಿಯೇಟರ್ ತುಂಬಿತ್ತು. ಲಾಸ್ಟ್ ಷೋ ಶುರುವಾಗುವುದರಲ್ಲಿತ್ತು. ಇ ಸಾಲಿನ ಎಲ್ಲಾ ಸೀಟುಗಳೂ ಬುಕ್ ಆಗಿದ್ದವು. ಸಿನೆಮಾ ಶುರುವಾಗಿ ೫ ನಿಮಿಷವಾಗಿತ್ತು. ಟಾರ್ಚ್ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ, ಅವನ ಹಿಂದೆಯೇ ಒಂದು ಜೋಡಿ ಬಂತು. ಇ ಸಾಲಿನ ಕೊನೆಯ ಸೀಟಿನಲ್ಲಿದ್ದ ಇಬ್ಬರು ಹುಡುಗರನ್ನು ಎಬ್ಬಿಸಿ ೨ ಟಿಕೆಟ್ ಕೊಟ್ಟು ಹುಡುಗರಿಗೆ ಬೇರೆ ಕಡೆ ಕೂರಲು ಹೇಳಿ ಇವರಿಬ್ಬರನ್ನು ಕೊನೆಯ ಸೀಟುಗಳಲ್ಲಿ ಕೂರಿಸಿದನು. ಸಿನೆಮಾ ನಡೆಯುತ್ತಿತ್ತು. ಇಂಟರ್ವಲ್ ಬಂತು. . . . . . . . . . . . . . . . . . ಇಬ್ಬರೂ ಎದ್ದುಹೋದರು. ಆಮೇಲೆ ವಾಪಸ್ ಬರಲಿಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸ್ವಲ್ಪ ಕಿಕ್!

ಕಿಂಗ್ಫಿಶರ್ ಕುಡಿದು ಕಿಕ್ಕಾದ ಮಬ್ಬಲ್ಲೇ ಮೈಯಲ್ಲಾಡಿಸುತ್ತಾ ಮನೆಗ್ಹೋದ ಹೆಂಡತಿಯ ಹೊಡೆತಕ್ಕೆ ಹಿಟ್ಟಾದ ........ ಅವರಿಬ್ಬರೂ ಜೊತೆಗೂಡಿ ಓಡಿಹೋದರು ಅದ ಕೇಳಿ ಅಪ್ಪ ಅಮ್ಮ ಬಾವಿಗೆ ಬಿದ್ದರು ......... ಅವಳ ಅಂದಕೆ ಅದುರಿದನವನು ಅವನ ಆನಂದಕೆ ಅಲುಗಾದಳವಳು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಚಲೋ ಮಲ್ಲೇಶ್ವರ - ೧೧

ಅತ್ತ, ಪಾರ್ಥವ್ರು ಸಿ.ಇ.ಟಿ ಸೆಲ್ ಹತ್ರ ಹೋದಾಗ ಅವರ ಮನೆಯವರು ಮಗಳ ಸಮೇತ ಗೇಟಿನ ಬಳಿ ನಿಂತಿದ್ದರು. ಅವರ ಲುಕ್ ನೋಡಿ ಪಾರ್ಥವ್ರು ಬಾರಿಮುತ್ತೇ ಪರ್ವಾಗಿಲ್ಲ ಅಂದ್ಕೊಂಡ್ರು. ಏನೂ ಮಾತಾಡದೇ ನಡೀರಿ ನಡೀರಿ ಒಳಗೆ ಹೋಗೋಣ ಇಲ್ಯಾಕೆ ಗೇಟ್ ಹತ್ರ ನಿಂತಿದೀರಿ ಅಂದ್ಕೊಂಡು ಮಗಳ ಕೈ ಹಿಡ್ಕೊಂಡು ಮನೆಯವರ ಮುಖ ನೋಡದೆ ಒಳಗೆ ಹೆಜ್ಜೆ ಹಾಕಿದ್ರು. ಇತ್ತ ರಾಮಮೋಹನ್ 'ನಾನು ಆರ್ ಟಿ ನಗರದ ಹತ್ರ ಹೋಗ್ಬೇಕು ಆಮೇಲೆ ಸಿಗ್ತೀನಿ' ಅಂದಾಗ ಗೋಪಾಲವ್ರು 'ನನಗೂ ಆ ಕಡೆ ಸ್ವಲ್ಪ ಕೆಲಸ ಇದೆ ಬರ್ತೀನಿ ನಾನೂ' ಅಂದು ಹೊರಟ್ರು. ರಾಮಮೋಹನವ್ರು ಕಾರು ಸ್ಟಾರ್ಟ್ ಮಾಡೋಕೆ ಶುರು ಮಾಡಿದ್ರು, ಆ ಶಬ್ಧಕ್ಕೆ ಅಲ್ಲಿದ್ದ ೫-೬ ಬೀದಿನಾಯಿಗಳು ನಮ್ಮನ್ನ, ಕಾರನ್ನ ನೋಡಿ ಬೊಗಳೋಕೆ ಶುರು ಮಾಡಿದ್ವು ಗಣೇಶಣ್ಣ ಯಾಕೋ ಎಡವಟ್ಟು ಆಗ್ತಿದೆಯಲ್ಲ ಅಂದು 'ಎಲ್ರೂ ಓಡೋಣ ಬನ್ನಿ' ಅಂದ್ರು. ಜಯಂತ್ ಅಲ್ಲಿವರೆಗೆ ಪ್ರದಕ್ಷಿಣೆ ಹಾಕಿದ ಮಲ್ಲೇಶ್ವರಂ ದೇವ್ರನ್ನೆಲ್ಲಾ ನೆನೆಸ್ಕೊಂಡು ಕಣ್ಮುಚ್ಕೊಂಡಿದ್ರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್