Chikku123 ರವರ ಬ್ಲಾಗ್

ಸ್ವಲ್ಪ ತಮಾಷೆಗೆ

ವಿಧಾನಸೌಧ - ನಿಧಾನಸೌಧ. ಕ ರಾ ರ ಸಾ ಸಂ - ಕರ್ನಾಟಕ ರಾಜ್ಯ ರಸ್ತೆ ಸಾಯಿಸುವ ಸಂಸ್ಥೆ. ಬೃ ಬೆಂ ಮ ಪಾ - ಬೃಹತ್ತಾಗಿ ಬೆಂಗಳೂರನ್ನ ಮಜಾಮಾಡುವ ಪಾಲಿಕೆ. ಬಿ ಎಂ ಟಿ ಸಿ - ಬೆಂಗಳೂರಿನ ಮಾನವರನ್ನ ತಿನ್ನುವ ಸಂಸ್ಥೆ. ಕ ವಿ ಪ್ರ ಸ ನಿ ನಿ - ಕರ್ನಾಟಕ ವಿದ್ಯುತ್ ಪ್ರಸರಣ ನಿಲ್ಲಿಸುವ ನಿಗಮ. ಕೆ ಎಸ್ ಟಿ ಡಿ ಸಿ - ಕರ್ನಾಟಕ ಸ್ಟೇಟ್ ಟೂರಿಸಂ ಡೆಸ್ಟ್ರಾಯಿಂಗ್ ಕಾರ್ಪೋರೇಶನ್.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಯಾಕ್ಮಗಾ?? ಯಾವ್ದಾದ್ರೂ ಹುಡುಗಿ ಆಗಿದ್ರೆ ಹಂಗೆ ಕಣ್ಬಿಟ್ಕೊಂಡು ನೋಡ್ತಿದ್ದೆ

ಎಂದಿನಂತೆ ಅವನು ಬಿ ಎಂ ಟಿ ಸಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತನು, ಅವನ ಮುಂದಿನ ಸೀಟಿನಲ್ಲಿ ಒಂದು ಅಜ್ಜಿ ಬಂದು ಕುಳಿತುಕೊಂಡಿತು. ಬಸ್ಸು ಹೊರಟಿತು, ಕಿಟಕಿಯ ಹತ್ತಿರ ಕುಳಿತಿದ್ದ ಅಜ್ಜಿ ಸ್ವಲ್ಪ ಸಮಯದ ನಂತರ ಹಾಗೇ ಸಿಕ್ಕಿಸಿಕೊಂಡ ಜುಟ್ಟಿನ ಗಂಟನ್ನು ಬಿಚ್ಚಿ ಹೊರಗಡೆಯಿಂದ ಬಂದ ಗಾಳಿಗೆ ತನ್ನ ಕೂದಲನ್ನು ಒಡ್ಡುತ್ತಿತ್ತು. ಎಲ್ಲ ನೋಡಿ ಸುಮ್ಮನಿದ್ದ ಅವನು, ಯಾವಾಗ ಅಜ್ಜಿ ಕೂದಲನ್ನು ತುಂಬಾ ಸಮಯ ತನ್ನ ಕೈನಿಂದ ಅತ್ತ ಇತ್ತ ಆಡಿಕೊಳ್ಳುತ್ತಿತ್ತೋ ಇವನು ತಡೆಯಲಾರದೆ 'ಅಜ್ಜಿ, ಆಗ್ಲಿಂದ ನೋಡ್ತಿದ್ದೇನೆ, ಜುಟ್ಟು ಕಟ್ಕೊಳದಲ್ವ ನಮಗೆ ತೊಂದ್ರೆ ಆಗ್ತಿದೆ'. ಅಜ್ಜಿ ತಿರುಗಿ ಇವನನ್ನೊಮ್ಮೆ ನೋಡಿ.. . . . . . . . . . . . . . .
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಚುರ್ಮುರಿ - ೧೬

೫೮) ಅಂದು ರಜೆಯಿತ್ತು ಹಬ್ಬವಾಗಿದ್ದರಿಂದ. ಅವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡ ಬಿದ್ದು ತೀರ್ಥ ಕೊಡಲು ಬರುತ್ತಿದ್ದ ಭಟ್ಟರನ್ನು ನೋಡದೆ ಅಲ್ಲಿಂದ ಬೇಗಬೇಗನೆ ಹೊರಟು ಬಾರಿನ ಕಡೆ ತೀರ್ಥಸೇವನೆಗೆ ಹೆಜ್ಜೆ ಹಾಕಿದನು. ೫೯) ೧೫ ವರ್ಷಗಳ ನಂತರ ಒಳ್ಳೆಯ ಲಾಭ ತೆಗೆಯಬಹುದೆಂದು ತನ್ನ ತೋಟದ ತುಂಬಾ ಅವನು ಶ್ರೀಗಂಧದ ಗಿಡಗಳನ್ನು ಹಾಕಿಸಿದನು, ೧೫ ವರ್ಷವಾದ ಮೇಲೆ ಬರಿಯ ಬೇರನ್ನು ನೋಡುವ ಸೌಭಾಗ್ಯ ಅವನದಾಗಿತ್ತು. ೬೦) ಮೊದಲನೆಯದು ಗಂಡಾಗಿದ್ದುದರಿಂದ ಎರಡನೆಯದು ಹೆಣ್ಣಾಗಲಿ ಎಂದು ಆ ದಂಪತಿಗಳು ಆಶಿಸಿದ್ದರು. ಆದರೆ ಆಗಿದ್ದು ಅವಳಿ ಜವಳಿ ಗಂಡು ಮಕ್ಕಳು. ೬೧) ತನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬಾರದಿದ್ದುದರಿಂದ ಅವನು ಚೈನೀಸ್ ಒಬ್ಬಳನ್ನು ಅಸಿಸ್ಟೆನ್ಟಾಗಿ ನೇಮಕ ಮಾಡಿಕೊಂಡಿದ್ದನು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಮುಸ್ಸಂಜೆಯಲಿ ಮೇಘಗಳು

ನೆನ್ನೆ ಸಂಜೆ ನನ್ನ ಆಫೀಸಿನ ಬಳಿ ಕಂಡು ಬಂದ ದೃಶ್ಯ  

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - Chikku123 ರವರ ಬ್ಲಾಗ್