ಬೆತ್ತಲೆ ಜಗತ್ತಿನ ಲೇಖಕರಿಗೆ....

3

ಪ್ರತಾಪ್ ಸಿಂಹರವರೆ ನಮಸ್ಕಾರ,

ಚೆನ್ನಾಗಿದ್ದೀರಾ. ಫೆಬ್ರವರಿ 21ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ‌ ನಿಮ್ಮ ಕುರುಡು ಕಾಂಚಾಣ ಲೇಖನ ಓದಿದೆ, ಚೆನ್ನಾಗಿ ಬರೆದಿದ್ದೀರಿ ಆದರೆ ಜನರಲೈಸಾಗಿ ಬರೆದಿದ್ದೀರಾ, ಬಾರೀ ಬೇಜಾರಾಯ್ತು. ನಿಮ್ಮ ಲೇಖನದಲ್ಲಿ ಬರೋ ವಿಚಾರಗಳನ್ನೆ ತೆಗೆದುಕೊಂಡು ಮಾತಾಡುವ...

1) ಅಪ್ಪ ನಿವ್ಱ್ಱತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನ ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ. ‍

ಸತ್ಯ, ಅಪ್ಪ (ಕೆಲವು ಅಪ್ಪಂದ್ರು ಎಲ್ಲರೂ ಅಲ್ಲ...) ಬಿ.ಎ, ಬಿ.ಕಾಂ, ಬಿ.ಎಸ್ಸಿ ಓದಿದ ಸರ್ಕಾರಿ ಕೆಲಸಕ್ಕೆ ಸೇರಿದ, 10ಕ್ಕೆ ಮನೆ ಬಿಟ್ಟು ಆಫೀಸಿಗೆ ಹೋಗ್ತನೆ 5 ಗಂಟೆಗೆ ವಾಪಸ್ ಮನೆಗೆ ಹೊರಡ್ತನೆ, ಮಧ್ಯದಲ್ಲಿ ಕಾಫಿ, ಟೀ, ಊಟಕ್ಕೆ 2 ಗಂಟೆ ಗುಳುಂ ಮಾಡಿರ್ತಾನೆ, ಅಂದ್ರೆ ಒಟ್ಟು 5 ಗಂಟೆ ಕೆಲಸ ಮಾಡ್ತನೆ,

ಅದೇ ನೀವು ಹೇಳಿದ ಸಾಫ್ಟ್ವೇರ್ ಇಂಜಿನಿಯರ್, ಬೆಳಗ್ಗೆ 8ಕ್ಕೆ ಮನೆ ಬಿಡ್ತಾನೆ (ಇನ್ನು ಕೆಲವರು ಅದಕ್ಕಿಂತ ಬೇಗ) ರಾತ್ರಿ ಎಷ್ಟೊತ್ತಿಗೆ ವಾಪಸ್ ಬರ್ತನೆ ಗೊತ್ತಿರಲ್ಲ, ಏನಿಲ್ಲ ಅಂದ್ರು 9 ಅಥವಾ 10ಕ್ಕೆ ಮನೆಗೆ ಬರ್ತನೆ , ಅಂದ್ರೆ 11ರಿಂದ 12 ಗಂಟೆ ಆಫೀಸಿನಲ್ಲೇ ಇರ್ತಾನೆ, ಊಟಕ್ಕೆ 30 ನಿಮಿಷ, ಕಾಫಿ, ಟೀ ಅವನ ಡೆಸ್ಕ್ಗೆ ತಂದಿಟ್ಕೊಂಡು ಕುಡೀತಾ ಕೆಲಸ ಮಾಡ್ತಾನೆ, ಹಾಗಾಗಿ ಏನಿಲ್ಲ ಅಂದ್ರು 10ರಿಂದ 11 ಗಂಟೆಗಳ ಕಾಲ ಕೆಲಸ ಮಾಡ್ತನೆ.

ಹಾಗಾಗಿ ಅಪ್ಪಂಗೆ 100ರೂ ಬಂದು ಮಗನಿಗೆ 200ರಿಂದ 250ರೂ ಬರೋದ್ರಲ್ಲಿ ಯಾವ ಅತಿಶಯೋಕ್ತಿಯಿಲ್ಲ.

2) ಇಪ್ಪತ್ತ್ಮೂರು ವರ್ಷಕ್ಕೆ ಕೈ ತುಂಬಾ ದುಡ್ಡೇನೋ ಬಂತು, ದುಡ್ಡಿನ‌ ಬೆಲೆ ಅರ್ಥ‌ ಮಾಡಿಕೊಳ್ಳುವ‌ ವ‌ಯ‌ಸ್ಸು ಅದಾಗಿರ‌ಲಿಲ್ಲ.

ನಮಗೆ 5 ಪೈಸೆಗೆ ಎಷ್ಟು ಗೋಲಿ ಬರ್ತಿತ್ತು ಅಂತನೂ ಗೊತ್ತು, ಈಗ 5 ಪೈಸೆ ಬೆಲೆ ಏನು ಅಂತನೂ ಗೊತ್ತು. ನಮ್ಮಪ್ಪ ಅಮ್ಮ ಪ್ರತಿ ಸೆಮೆಸ್ಟರ್ನಲ್ಲಿ ಫ್ರೀ/ಪೇಮೆಂಟ್ ಸೀಟ್ ದುಡ್ಡು ಕಟ್ಟೋವಾಗ ನಮಗೆ ಅನ್ನಿಸ್ತಾ ಇದ್ದದ್ದು ಏನು ಗೊತ್ತ, ಇಷ್ಟು ಖರ್ಚು ಮಾಡ್ತಾ ಇದ್ದಾರಲ್ಲ ನಾನು ಅವರು ಖರ್ಚು ಮಾಡಿರೋ ಅಷ್ಟು ದುಡ್ಡನ್ನ ಹೇಗಪ್ಪ ದುಡಿಯೋದು ಪ್ರತಿಯೊಬ್ಬ ಇಂಜಿನಿಯರ್ ಸಹ ಯೋಚಿಸಿರ್ತಾನೆ, ಊರಿಗ ಹೋದ್ರೆ ಪ್ರಯಾಣಕ್ಕೆ ದುಡ್ಡು ಖರ್ಚು ಮಾಡ್ಬೇಕಲ್ಲ ಅಂತ ಎಷ್ಟೋ ಹುಡುಗ್ರು ಹಾಸ್ಟೆಲ್ನಲ್ಲೇ ಇದ್ದು ಓದ್ತಿದ್ರು. ಪುಸ್ತಕಗಳ ಬೆಲೆ ಜಾಸ್ತಿ ಅಂತ ಬಹಳ ಜನ ಜೆರಾಕ್ಸ್ ಮಾಡಿಸ್ತಿದ್ರು.

ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಕೆಲಸ ಹುಡುಕಲು ಬಂದಾಗ, ಬಿ.ಎಂ.ಟಿ.ಸಿ ಬಸ್ ಪಾಸ್ ತೆಗೆದುಕೊಂಡು ಎಲ್ಲೆಲ್ಲಿ ಕಂಪನಿಗಳಿದ್ವು ಅಲ್ಲೆಲ್ಲಾ ರೆಸ್ಯೂಮ್ ಕೊಟ್ಟು ಬರ್ತಿದ್ವಿ, ಈಗ್ಲೂ ಸಹ ತುಂಬಾ ಜನ ಸಾಫ್ಟ್ವೇರ್ ಇಂಜಿನಿಯರ್ಸ್ ಬಿ.ಎಂ.ಟಿ.ಸಿ ಬಸ್ನಲ್ಲೇ ಓಡಾಡ್ತಿರ್ತಾರೆ (ಅದ್ರಲ್ಲಿ ನಾನೂ ಸಹ ಒಬ್ಬ).

ಸ‌ಂಬಳ ಬಂದ್ರೆ ನಮ್ಮ ಜೀವನಕ್ಕೆ ಸಾಕಾಗುವಷ್ಟು ಇಟ್ಕೊಂಡು ಮಿಕ್ಕಿದ್ದು ಅಪ್ಪಂಗೋ ಇಲ್ಲ ಉಳಿತಾಯ ಖಾತೆನಲ್ಲಿ ಹಾಕ್ತೀವಿ.

ನಮಗೆ ದುಡ್ಡಿನ ಬೆಲೆ ಗೊತ್ತಿಲ್ಲ ಅಂತೀರಲ್ಲ ನೀವು.

3) ಐ.ಟಿಯ‌ವ‌ರು ಏನು ಮಾಡ್ತಾ ಇದ್ದಾರೆ ಅಂತ‌ ಸಾಮಾನ್ಯ‌ ವ್ಯಕ್ತಿಗೆ ಇನ್ನೂ ಅರ್ಥ‌ ಆಗಿಲ್ಲ.

ನಾನು ಸಾಫ್ಟ್ವೇರ್ ಇಂಜಿನಿಯರ್, ನಾನು ಇದ‌ನ್ನ ಮಾಡ್ತಿದ್ದೀನಿ ಅಂತ‌ ಯಾರಿಗಾದ್ರು ಹೇಳಿದ್ರೆ ಇವ‌ನ್ಯಾರೋ ತ‌ಲೆಹಿಡುಕ‌ ಅಂತಾರೆ.
ಹಾಗಾಗಿ ತಿಳಿದುಕೊಳ್ಳೋ ಪ್ರಯ‌ತ್ನ ಮಾಡ್ಕೋಬೇಕು ಸಾರ್, ನ‌ಮ್ಮ ಮಾವ‌ 60 ವ‌ರ್ಷ‌ದ‌ವ‌ರು ಅವ್ರು, ನೀವೇನು ಮಾಡ್ತೀರಾ ಅಂತ‌ ಕೇಳಿ ತಿಳಿದುಕೊಂಡ್ರು. ಗುರು, ಸಿಪಾಯಿ ಬ‌ಗ್ಗೆ ಹೇಗೆ ಗೊತ್ತಾಯ್ತು ಹೇಳಿ, ಹೀಗೆ ಒಬ್ಬರಿಗೊಬ್ಬರು ಮಾತಾಡೋದ್ರಿಂದ‌ ಅಥ‌ವ‌ ಅನುಭ‌ವ‌ದಿಂದ‌. ಐ.ಟಿ ಅಂದ್ರೆ ದುಡ್ಡು ಅನ್ನೋದು ನಿಮ‌ಗೆ ಯಾರೋ ಹೇಳಿರ್ತಾನೆ ನೀವು ಇನ್ನ್ಯಾರಿಗೋ ಹೇಳ್ತೀರಾ.

ಇನ್ನೊಂದು ವಿಷ‌ಯ‌ ಏನು ಗೊತ್ತಾ, ದುಡ್ಡಿನ‌ ವಿಷ‌ಯ‌ ಬ‌ಂದಾಗ‌ ತುಂಬಾ ಜ‌ನ‌ರ‌ ಕಿವಿ ನೆಟ್ಟಗಾಗೋದು ಸ‌ಹ‌ಜ‌. ಯಾವುದೇ ವ್ಯವ‌ಹಾರ‌ ತೆಗೆದುಕೊಳ್ಳಿ, ಭ‌ತ್ತ, ರಾಗಿ, ಅಡ‌ಕೆ, ಕಾಫಿ. ತುಂಬಾ ಜ‌ನ‌ ಕ‌ಡಿಮೆ ದುಡ್ಡಿಗೆ ಮಾರಿ ಇನ್ನು ಕೆಲ‌ವ‌ರು ಜಾಸ್ತಿ ದುಡ್ಡಿಗೆ ಮಾರಿದ್ರೆ ಎಲ್ಲರೂ ಕೇಳೋದೇನ‌ಂದ್ರೆ ಅವ್ನಿಗೆ ಎಷ್ಟು ದುಡ್ಡು ಬ‌ಂತ್ರೀ ಅಂತ‌.

4) ಅವ‌ರ‌ ನಿಷ್ಟೆ ಏನಿದ್ದರೂ ದುಡ್ಡಿಗೆ.

ಯಾರು ಹೇಳಿದ್ದು ಹಾಗ‌ಂತ‌, ತುಂಬಾ ಜ‌ನ‌ ಕೆಲ‌ಸ‌ ಬಿಟ್ಟು ಬೇರೆ ಕ‌ಂಪ‌ನಿಗ‌ಳಿಗೆ ಯಾಕೆ ಹೋಗ್ತಾರೆ ಅಂದ್ರೆ, ಅವ‌ರಿಗೆ ತ‌ಕ್ಕನಾದ‌ ಕೆಲ‌ಸ‌ಕ್ಕೆ ಹಾಕಿರೋದಿಲ್ಲ ಇಲ್ಲಂದ್ರೆ ಅವ‌ರ‌ ಮ್ಯಾನೇಜ‌ರ್ ಸ‌ರಿ ಇರ‌ಲ್ಲ, ಬಾರೀ ಕ‌ಡಿಮೆ ಜ‌ನ‌ ದುಡ್ಡು ಅಂತ‌ ಹೋಗೋದು, ನ‌ಮ್ಮ ಗೆಳೆಯ‌ರ‌ಲ್ಲೇ ಎಷ್ಟೋ ಜ‌ನ‌ ಇವ‌ತ್ತಿಗೂ ಒಂದೇ ಕ‌ಂಪ‌ನೆಯ‌ಲ್ಲೇ ತುಂಬಾ ವರ್ಷದಿಂದ‌ ಕೆಲ‌ಸ‌ ಮಾಡ್ತಿದ್ದಾರೆ.

5) ಸೆಲ್ ಫೋನ್ ಸ‌ಂಖ್ಯೆ ಹೆಚ್ಚಳ‌ ಪ್ರಗ‌ತಿಯ‌ ಸ‌ಂಕೇತ‌ವೇ?

ಐ.ಟಿಯ‌ವ‌ರ‌ ಕೈಲಿ ದುಡ್ಡಿದೆ ಕಾರ್ಮಿಕ‌ರ‌ ಕೈಲಿಲ್ಲ, ಆದ್ರೂ ಯಾಕ್ರೀ ಸೆಲ್ ಫೋನ್ ತ‌ಗೋಳ್ತಾರೆ ಅವ್ರು, ನೀವು ಹೇಳೋದು ಐ.ಟಿಯ‌ವ‌ರಿಗೆ ದುಡ್ಡಿನ‌ ಬೆಲೆ ಗೊತ್ತಿಲ್ಲ, ಕಾರ್ಮಿಕ‌ರು????. ಅವ್ರಿಗೆ ದುಡ್ಡಿನ‌ ಬೆಲೆ ಗೊತ್ತು ಆದ್ರೂ ಸೆಲ್ ಫೋನ್ ತ‌ಗೋಳ್ತಾರೆ, 120ರೂ ಕೂಲಿಯ‌ಲ್ಲಿ 50ರೂ ಸೆಲ್ ಫೋನಿಗೆ ಖ‌ರ್ಚು ಮಾಡ್ತಾರೆ, ಛೆ, ದುಡ್ಡಿನ‌ ಬೆಲೆ ಗೊತ್ತಿರೋರು ಹೀಗೆಲ್ಲ ಮಾಡ‌ಬಾರ‌ದು, ನೀವಾದ್ರೂ ಅವ್ರಿಗೆ ಹೇಳ‌ಬಾರ‌ದ‌??

6) ಇವ‌ತ್ತು ಒಬ್ಬ ಐ.ಟಿಯ‌ವ‌ನು ಕೆಲ‌ಸ‌ ಕ‌ಳೆದುಕೊಂಡ‌ರೆ ಪ್ಯಾನಿಕ್ ಆಗುತ್ತಾನೆ, ಅವ‌ನಿಗೆ ಬೇರೆ ಕೆಲ‌ಸ‌ವೂ ಗೊತ್ತಿಲ್ಲ

ಬೇರೆ ಕ‌ಡೆ ಏನು ಆಗೇ ಇಲ್ವೇನ್ರಿ? ಆರ್ಥಿಕ ಹಿಂಜರಿತದಿಂದ ಗಾರ್ಮೆಂಟ್ಗಳ‌ಲ್ಲಿ ಕೆಲ‌ಸ‌ ಮಾಡೋರು ಆತ್ಮಹ‌ತ್ಯೆ ಮಾಡಿಕೊಂಡಿದ್ದಾರೆ, ಐ.ಟಿಯ‌ಲ್ಲಿ ಹಾಗೆ ಮಾಡಿಕೊಂಡಿರೋದ‌ನ್ನ ಇಲ್ಲಿವ‌ರೆಗೆ ಕೇಳಿಲ್ಲ. ಯಾಕ‌ಂದ್ರೆ ಮುಂದೆ ಸಿಕ್ಕತ್ತೆ ಅನ್ನೋ ಭ‌ರ‌ವ‌ಸೆ ಅವ್ನಿಗೆ ಇರ‌ತ್ತೆ, ಅದೂ ಅಲ್ದಲೆ ಅವ್ನು ಅಷ್ಟು ಸುಲ‌ಭ‌ವಾಗಿ ಇಂಜಿನಿಯ‌ರಿಂಗ್ ಪಾಸಾಗಿ ಬ‌ಂದಿರೊಲ್ಲ, ಅಲ್ಲಿವ‌ರೆಗೆ ಅವ‌ನು ಎಷ್ಟು ಕ‌ಷ್ಟಪ‌ಟ್ಟಿರ್ತಾನೆ ಅಂದ್ರೆ ಏನೇ ಕ‌ಷ್ಟ ಬ‌ಂದ್ರೂ ಎದುರಿಸೋದ‌ಕ್ಕೆ ಸೈ ಅನ್ನೋ ಮ‌ನೋಭಾವ‌ ಬ‌ಂದಿರ‌ತ್ತೆ, ಅಷ್ಟೊಂದು ಸುಲ‌ಭ‌ವಾಗಿ ಸೋಲೊಲ್ಲ.

ಸ್ವಲ್ಪ ಕಾಯೋಣ‌ ನ‌ಮ್ಮ ಫ್ಹೀಲ್ಡ್ನಲ್ಲೇ ಸಿಗ‌ಬ‌ಹುದು ಅನ್ನೋ ಭ‌ರ‌ವ‌ಸೆ ಇಟ್ಕೊಂಡಿರ್ತಾನೆ ಹೊರತು ಬೇರೆ ಕೆಲ‌ಸ‌ದ‌ ಬ‌ಗ್ಗೆ ಅಷ್ಟಾಗಿ ಯೋಚ‌ನೆ ಮಾಡಿರುವುದಿಲ್ಲ. ಅನ್ನ ಬೇಕು ಅಂದ್ರೆ ಹೆಂಗೋ ಜೀವ‌ನ‌ ಮಾಡ್ತಾರೆ, ಅದ‌ಕ್ಕೆ ಬೇರೆಯ‌ವ‌ರು ವ್ಯಂಗ್ಯವಾಗಿ ಮ‌ರುಕ‌ಪ‌ಡೋ ಅವ‌ಶ್ಯಕ‌ತೆಯಿಲ್ಲ.

7) ಐ.ಟಿಯಿಂದಾಗಿ ಸಾವಿರಾರು ಕುಟುಂಬ‌ಗ‌ಳು ಉದ್ಧಾರ‌ವಾದ‌ವು ಎನ್ನುವುದು ಎಷ್ಟು ಸ‌ತ್ಯವೋ ಐ.ಟಿಯ‌ವ‌ರ‌ ಹ‌ಣ‌ದ‌ ಮ‌ದ‌ದಿಂದಾಗಿ ಹ‌ತ್ತು ಪ‌ಟ್ಟು ಹೆಚ್ಚು ಕುಟುಂಬ‌ಗ‌ಳು ಸ‌ಂಕ‌ಷ್ಟಕ್ಕೂ ಸಿಲುಕಿದ‌ವು.

ಸಾಫ್ಟ್ವೇರ್ ಇಂಜಿನಿಯರ್ ಕುಟುಂಬ‌ ಉದ್ಧಾರ‌, ರಿಯ‌ಲ್ ಎಸ್ಟೇಟ್ ಉದ್ಧಾರ‌, ಗಾರ್ಮೆಂಟ್ಸ್ ಉದ್ಧಾರ‌, ಪ್ರವಾಸೋದ್ಯಮ‌ ಉದ್ಧಾರ‌, ಹಾಂ, ನಿಮ್ಮ ಪ‌ತ್ರಿಕೆಗ‌ಳ‌ ಸಂಖ್ಯೆಯ‌ಲ್ಲಿ ಉದ್ಧಾರ‌!!!!!

ಯಾರೋ ಸ್ವಲ್ಪ ಜ‌ನ‌ ಮಾಡೋದ‌ಕ್ಕೆ ಎಲ್ಲರ‌ನ್ನೂ ದೂಷಿಸ‌ಬೇಡಿ, ಅಪ್ಪನ‌ ಹ‌ತ್ರ ದುಡ್ಡು ಇರ‌ತ್ತೆ, ಮ‌ಗನೂ/ಮಗಳೂ ದುಡೀತಿರ್ತಾನೆ/ಳೆ, ಅಪ್ಪ ಮ‌ಗನ‌ನ್ನ/ಮಗಳನ್ನ ದುಡ್ಡು ಏನು ಮಾಡಿದೆ ಅಂತ‌ ಕೇಳೊಲ್ಲ, ಸ‌ಹ‌ಜ‌ವಾಗಿ ಅವ್ರು ಯಾರ ಅಂಕೆಯಿಲ್ಲದೆ ಖ‌ರ್ಚು ಮಾಡ್ತರೆ.

ಕೊನೆಯದಾಗಿ ,ನೀವು ನೋಡೋವಾಗ‌ ಕೆರೆಯ‌ಲ್ಲಿರೋ ತಾವ‌ರೆ ಹೂಗ‌ಳ‌ಲ್ಲಿ ಕೆಲ‌ವೊಂದು ಕ‌ರ‌ಗಿ ಹೋಗಿರ್ತ‌ವೆ ಕೆಲ‌ವು ಚೆನ್ನಾಗಿರ್ತ‌ವೆ,ಕ‌ರ‌ಗಿ ಹೋಗಿರೋ ತಾವ‌ರೆ ಹೂಗ‌ಳ‌ನ್ನು ಮಾತ್ರ ನೋಡಿ ಎಲ್ಲಾ ತಾವ‌ರೆ ಹೂಗ‌ಳು ಹಾಗೆ ಆಗಿವೆ ಅಂತ‌ ತಿಳಿದುಕೊಳ್ಳುವುದು ಅಥ‌ವಾ ಯಾರೋ ಹಾಗೆ ಹೇಳಿದ್ರು ಅಂತ‌ ಇನ್ನೊಬ್ಬರಿಗೆ ಹೇಳುವುದು ಬುದ್ಧಿವ‌ಂತ‌ರ‌ ಲ‌ಕ್ಷಣ‌ವ‌ಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅವ್ರು ಹೇಳೋದ ನೋಡಿದ್ರೆ ಇವತ್ತಿನ recession ದಿಂದ ಇವರಿಗೂ ಖುಷಿ ಆಗಿರೋ ಹಾಗಿದೆ ... ಅವ್ರು ತಮ್ಮ ಲೇಖನಕ್ಕೆ ಆಧಾರ ಕೊಡ್ಲಿ ಆಮೇಲೆ ಅದರ ಕದ್ದೆ ಲಕ್ಷ್ಯ ಕೊಟ್ರಾಯ್ತು ....

ಅಂದ ಹಾಗೆ ನಿಮ್ಮ ಲೇಖನವನ್ನು ಅವರಿಗೂ ಕಳ್ಸಿ ... ಓದಲಿ ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ನಿಮಗೆ ಅನಿಸಿದ್ದನ್ನು ನೇರವಾಗಿ ಹೇಳಿದ್ದಿರಿ ನಿಜ ಆದರೂ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ.
ನಿಜ ನಿಮ್ಮ ಐಟಿ ದೇಶಕ್ಕೆ ಹೆಸರು ತಂದಿರಬಹುದು ಹಾಗೆಯೇ income inequality ಬೆಳೆಯುವುದಕ್ಕೂ ಕಾರಣ
ವಾಗಿದೆ. ಹಾಗೆಯೇ ಐಟಿ ಅಂದರೆ ಹೊರಗುತ್ತಿಗೆ ಆಥವಾ ಆ ಅಮೇರಿಕಾದ ಗುಲಾಮತನ ಮಾತ್ರ
ನೀವೇ ಹೇಳಿ ಭಾರತದಿಂದ ಹೊಸ ಕಂಪ್ಯೂಟರ್ ಭಾಷೆ ಏನಾದರೂ ಡೆವಲಪ್ ಆಗಿದೆಯಾ?
ಆ ಪ್ರತಾಪ್ ಸಿಂಹ ನಿಮ್ಮನ್ನು ಉದ್ದೇಶಿಸಿ ಕೇಳಿದ ಪ್ರಶ್ನೆ ಅದರ ಹಿಂದಿನ ಕಳಕಳಿ ನಿಮಗೆ ಅರ್ಠ ವಾದರೆ ಸಾಕು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ನೀವೇ ಹೇಳಿ ಭಾರತದಿಂದ ಹೊಸ ಕಂಪ್ಯೂಟರ್ ಭಾಷೆ ಏನಾದರೂ ಡೆವಲಪ್ ಆಗಿದೆಯಾ?
ಆಗಿಲ್ಲ ನಿಜ, ಆದರೆ ಕಂಪ್ಯೂಟರ್ ಬಳಕೆ ಹೆಚ್ಚಿದೆ. ಎಷ್ಟೋ ಜನಕ್ಕೆ ಉಪಯೋಗ ಆಗಿದೆ. ಸ್ಕೂಲು, ಕಾಲೇಜು, ಅಂಗಡಿ ಇತ್ಯಾದಿ ಕಡೆ ಐಟಿಯ ಉಪಯೋಗ ಆಗಿದೆ, ಆಗುತ್ತನೂ ಇದೆ.

ನೀವೂ ಒಮ್ಮೆ ಯೋಚನೆ ಮಾಡಿ ನೋಡಿ. ನೀವು ಕೆಲಸ ಮಾಡುತ್ತಿರುವ ವಿಷಯದಲ್ಲಿ ಭಾರತದಿಂದ ಎಷ್ಟು ಸಂಶೋಧನೆಗಳಾಗಿವೆ ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗನಿಸಿದ್ದನ್ನು ಪ್ರತಾಪ್ ರಿಗೆ ಇಲ್ಲಿ ಬರೆಯಬಹುದು ನೋಡಿ, ಈಗಾಗಲೇ ತುಂಬಾ ಜನ ಬರೆದೂ ಇದ್ದಾರೆ.
http://pratapsimha.com/bettale-jagattu/it-2/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳುಅವ್ರಿಗೆ ಮೈಲ್ ಸಹ ಮಾಡಿದೀನಿ, ಆಮೇಲೆ ನೀವು ಹೇಳಿರೋದ್ರಲ್ಲೂ ಹಾಕಿದೀನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<< ನೀವು ನೋಡೋವಾಗ‌ ಕೆರೆಯ‌ಲ್ಲಿರೋ ತಾವ‌ರೆ ಹೂಗ‌ಳ‌ಲ್ಲಿ ಕೆಲ‌ವೊಂದು ಕ‌ರ‌ಗಿ ಹೋಗಿರ್ತ‌ವೆ ಕೆಲ‌ವು ಚೆನ್ನಾಗಿರ್ತ‌ವೆ,ಕ‌ರ‌ಗಿ ಹೋಗಿರೋ ತಾವ‌ರೆ ಹೂಗ‌ಳ‌ನ್ನು ಮಾತ್ರ ನೋಡಿ ಎಲ್ಲಾ ತಾವ‌ರೆ ಹೂಗ‌ಳು ಹಾಗೆ ಆಗಿವೆ ಅಂತ‌ << ತಿಳಿದುಕೊಳ್ಳುವುದು ಅಥ‌ವಾ ಯಾರೋ ಹಾಗೆ ಹೇಳಿದ್ರು ಅಂತ‌ ಇನ್ನೊಬ್ಬರಿಗೆ ಹೇಳುವುದು ಬುದ್ಧಿವ‌ಂತ‌ರ‌ ಲ‌ಕ್ಷಣ‌ವ‌ಲ್ಲ.

ನಿಮ್ಮ ಕೆಲವು ವಿಚಾರಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಸಾಫ್ಟ್ವೇರ್ ಇಂಜಿನಿಯರ್ ಕುಟುಂಬ‌ ಉದ್ಧಾರ‌, ರಿಯ‌ಲ್ ಎಸ್ಟೇಟ್ ಉದ್ಧಾರ‌, ಗಾರ್ಮೆಂಟ್ಸ್ ಉದ್ಧಾರ‌, ಪ್ರವಾಸೋದ್ಯಮ‌ ಉದ್ಧಾರ‌, ಹಾಂ, ನಿಮ್ಮ ಪ‌ತ್ರಿಕೆಗ‌ಳ‌ ಸಂಖ್ಯೆಯ‌ಲ್ಲಿ ಉದ್ಧಾರ‌!!!!!"

ಸ್ವಲ್ಪ ಬಿಡಿಸಿ ಹೇಳಿ ಪತ್ರಿಕೆ ಸಂಖ್ಯೆ ಹೆಗೆ ಉದ್ದಾರ ಅಂತ?

>>ಸಾಫ್ಟ್ ವೇರ್ ಕಂಪನಿಗಳಲ್ಲಿ ೧೦% ಕನ್ನಡಿಗರು ಇರಬಹುದು.. ಅದರಲ್ಲಿ ಎಷ್ಟು ಜನ ಕನ್ನಡ ಪತ್ರಿಕೆ ಓದುತ್ತಾರೆ? ನಿಮ್ಮ ಪ್ರಕಾರ ಹೋದರೆ ಪ್ರತೀ ಕನ್ನಡ ಪತ್ರಿಕೆ ಕಡೇ ಪಕ್ಷ ೫-೬ ಲಕ್ಷ ಪ್ರತಿ ಕರ್ಚಾಗಬೇಕಲ್ಲವೇ?
ಎಷ್ಟು ಕಂಪನಿಗಳಲ್ಲಿ ಕನ್ನಡ ಪತ್ರಿಕೆ ಬರುತ್ತೆ? ಅದನ್ನ ಒಮ್ಮೆ ಪರಿಶೀಲಿಸಿ....

>>ರಿಯಲ್ ಎಸ್ಟೆಟ್ ಉದ್ದಾರ? ಯಾವ ರೀತಿ? ಎಷ್ಟು ಜನ ಮನೆ / ಸೈಟು ಖರೀದಿಸಲು ಸಾಧ್ಯ? ಗಾರ್ಮೆಂಟ್ ನಲ್ಲಿ ಕೆಲಸ ಮಾಡುವ ಎಷ್ಟು ಜನ ಸೈಟ್ ಖರೀದಿಸಲು ಸಾಧ್ಯ ಇಂದು? ಸರ್ಕಾರಿ ನೌಕರರು.. ಕಾರ್ಖಾನೆಗಳ ಕಾರ್ಮಿಕರು, ಬ್ಯಾಂಕ್ ಗುಮಾಸ್ತರು.. ಇವರೆಲ್ಲ ಎಷ್ಟು ಉದ್ದಾರ ಆಗಿದ್ದಾರೆ? ಬ್ಯಾಂಕ್ ಉದ್ಯಮ ಉದ್ದಾರ ಆಗಿರಬಹುದು.. ಆದರೆ ಉದ್ಯೋಗಿಗಳು ಅದೇ ಮಟ್ಟಕ್ಕೆ ಉದ್ದಾರ ಆಗಿಲ್ಲ ಅನ್ನೋದು ಸಹಜ ಸತ್ಯ.

ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಕೆಲಸ ಹುಡುಕಲು ಬಂದಾಗ, ಬಿ.ಎಂ.ಟಿ.ಸಿ ಬಸ್ ಪಾಸ್ ತೆಗೆದುಕೊಂಡು ಎಲ್ಲೆಲ್ಲಿ ಕಂಪನಿಗಳಿದ್ವು ಅಲ್ಲೆಲ್ಲಾ ರೆಸ್ಯೂಮ್ ಕೊಟ್ಟು ಬರ್ತಿದ್ವಿ, ಈಗ್ಲೂ ಸಹ ತುಂಬಾ ಜನ ಸಾಫ್ಟ್ವೇರ್ ಇಂಜಿನಿಯರ್ಸ್ ಬಿ.ಎಂ.ಟಿ.ಸಿ ಬಸ್ನಲ್ಲೇ ಓಡಾಡ್ತಿರ್ತಾರೆ (ಅದ್ರಲ್ಲಿ ನಾನೂ ಸಹ ಒಬ್ಬ).

>>ನನ್ನ ಕೆಲವು ಸ್ನೇಹಿತರು ನಡೆದು ಓಡಾಡುತ್ತ ಇದ್ರು ಕೋರಮಂಗಲದಲ್ಲಿ ಕಂಪನಿ ಹುಡೂಕುತ್ತಾ... ಬಸ್ ನಲ್ಲಿ ಓಡಾಡುವ ನಿಮ್ಮಂಥವರನ್ನು ಬಿಟ್ಟು ನೋಡಿ... ನಾನು ೯ ವರ್ಷದಿಂದ ನೋಡುತ್ತಾ ಇದ್ದೇನೆ.. ಬಹಳ ಕಡಿಮೆ ಮಂದಿ ಬಸ್ ನಲ್ಲಿ ಓಡಾಡುವುದು. ರಾತ್ರಿ ೧೧-೧೨ ತನಕ ಕೆಲ್ಸ ಮಾಡಿ ಬಸ್ ಗೆ ಎಲ್ಲ್ಲಿ ಕಾಯಲು ಸಾಧ್ಯ?

"ಅವ‌ರ‌ ನಿಷ್ಟೆ ಏನಿದ್ದರೂ ದುಡ್ಡಿಗೆ.

ಯಾರು ಹೇಳಿದ್ದು ಹಾಗ‌ಂತ‌, ತುಂಬಾ ಜ‌ನ‌ ಕೆಲ‌ಸ‌ ಬಿಟ್ಟು ಬೇರೆ ಕ‌ಂಪ‌ನಿಗ‌ಳಿಗೆ ಯಾಕೆ ಹೋಗ್ತಾರೆ ಅಂದ್ರೆ, ಅವ‌ರಿಗೆ ತ‌ಕ್ಕನಾದ‌ ಕೆಲ‌ಸ‌ಕ್ಕೆ ಹಾಕಿರೋದಿಲ್ಲ ಇಲ್ಲಂದ್ರೆ ಅವ‌ರ‌ ಮ್ಯಾನೇಜ‌ರ್ ಸ‌ರಿ ಇರ‌ಲ್ಲ, ಬಾರೀ ಕ‌ಡಿಮೆ ಜ‌ನ‌ ದುಡ್ಡು ಅಂತ‌ ಹೋಗೋದು, ನ‌ಮ್ಮ ಗೆಳೆಯ‌ರ‌ಲ್ಲೇ ಎಷ್ಟೋ ಜ‌ನ‌ ಇವ‌ತ್ತಿಗೂ ಒಂದೇ ಕ‌ಂಪ‌ನೆಯ‌ಲ್ಲೇ ತುಂಬಾ ವರ್ಷದಿಂದ‌ ಕೆಲ‌ಸ‌ ಮಾಡ್ತಿದ್ದಾರೆ."

>>ಸಾಮನ್ಯವಾಗಿ ಐಟಿ ಕಂಪನಿಗಳಲ್ಲಿ ಕೆಲಸ ಬದಲಿಸುವುದು common. ಇಲ್ಲಿ ಎರಡು factors ಕೆಲ್ಸ ಮಾಡುತ್ತೆ.. ಒಂದು ದುಡ್ಡು, ಎರಡನೆಯದು ಒಳ್ಳೆ ಕೆಲಸ. ಇದರ ಮೇಲೆ ಕೆಲಸ ಬದಲಿಸುವುದು ಸಾಮನ್ಯ. ಹಲವಾರು ಸಲ ಹೆಚ್ಚ್ಚಿನ ಸಂಬಳಕ್ಕೆ ಬದಲಿಸುವರ ಸಂಖ್ಯೆ ಹೆಚ್ಚಗಿರುತ್ತೆ.. appraisal ಆದ ಮೇಲೆ ಕಂಪನಿ ಬದಲಿಸುವರ ಸಂಖ್ಯೆ ಹೆಚ್ಚು... ಇದು ಯಾಕೆ ಅಂತ ಐಟಿ ಉದ್ಯಮದಲ್ಲಿ ಇರುವ ನಿಮಗೆ ಹೇಳುವ ಅವಶ್ಯಕತೆ ಇಲ್ಲ ಅನ್ನಿಸುತ್ತೆ.

ನನ್ನ ಪ್ರಕಾರ ನೀವು ನಿಮ್ಮನ್ನ ಅಥವಾ ಕೆಲವು ಜನರನ್ನ ಮಾತ್ರ ಹೋಲಿಸಿಕೊಂಡು ಈ ಲೇಖನ ಬರೆದಿದ್ದೀರ. ಪ್ರತಾಪಸಿಂಹ ಒಟ್ಟಾರೆ ಚಿತ್ರಣ ಮುಂದಿಟ್ಟುಕೊಂಡು ಬರೆದಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್, 100 ಜನಗಳಲ್ಲಿ 10 ರಿಂದ 20 ಜನಗಳು ಮಾಡೋ ಕೆಲಸ ಕ್ಕೆ'ಒಟ್ಟಾರೆ ಚಿತ್ರಣ' ಅನ್ನೋದು ಸರಿ ಅಲ್ಲ.

ಕಂಪನಿಗಳಲ್ಲಿ ಪತ್ರಿಕೆ ಯಾಕೆ ನೋಡ್ತೀರಾ?

ಮನೆನಲ್ಲಿ ಓದೋರನ್ನ ನೋಡಿ...

ಆನ್ಲೈನ್ ಓದೋರನ್ನ ನೋಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

100 ಜನರಲ್ಲಿ ೧೦ ಜನ ಸಿಟಿಬಸ್ ನಲ್ಲಿ ಓಡಾಡೋರು ಇದ್ದ್ದಾರ?
೧೦೦ ಜನರಲ್ಲಿ ಎಷ್ಟು ಜನ ಹಣ ಉಳಿಸಿ ಮನೆಗೆ ಕಳಿಸುತ್ತಿದ್ದಾರೆ? ೧೦೦ ಜನರಲ್ಲಿ ಎಷ್ಟು ಮಂದಿ ಹಣಕಲ್ಲದೆ ಬೇರೆ ಕಾರಣಕ್ಕೆ ದುಡೀಯುತ್ತಿದ್ದಾರೆ? ಅಥವಾ ಕಂಪನಿ ಬದಲಿಸದೆ ಅಲ್ಲೇ ಉಳಿದು ಕೊಂಡಿದ್ದಾರೆ?
ಐಟಿ ಉದ್ಯಮದ ಅಗ್ಗೆ ಇನ್ನೂ ಪೂರ್ಣ ಮಾಹಿತಿ ಕಲೆ ಹಾಕಿ.. ನನ್ನ ೯ ವರ್ಷದ ಅನುಭವದಿಂದ ನಾನು ಹಾಗೆ ಹೇಳಿದೆ ಆಷ್ಟೆ...

ಐಟಿ ಉದ್ಯಮದಲ್ಲಿ ಇರೋರು ಮುಂಚೆ ಮನೆಲಿ ಕನ್ನಡ ಪತ್ರಿಕೆ ತರಿಸುತ್ತ ಇರಲಿಲ್ಲವೇ? ನಮ್ಮ ಮನೆಯಲ್ಲಿ ನಾನು ಹುಟ್ಟುವುದಕ್ಕೆ ಮುಂಚೆಯೇ ಪ್ರಜಾವಾಣಿ ಪತ್ರಿಕೆ ಬರುತಿತ್ತು.. [ನಿಮಗೆ ಹೇಗೆ ಗೊತ್ತು ಅಂತ ಪ್ರಶ್ನೆ ಬೇಡ.... ನಮ್ಮ ತಂದೆ ತಮಗೆ ೪೦-೪೫ ವರ್ಷದಿಂದ ಪ್ರಜವಾಣಿ ಓದುವ ಅಭ್ಯಾಸ ಇದೆ, ಅಂತ ಹೇಳುತ್ತ ಇರುತ್ತಾರೆ] . ಹೀಗೆ ಕನ್ನಡ ಪತ್ರಿಕೆ ಓದುವವರು ಮುಂಚೆಯೂ ಓದುತ್ತಿದ್ದರು.. ಆದರೆ ಐಟಿ ಇಂದ ಹೆಚ್ಚಾಯಿತು ಅನ್ನುವ ತರ್ಕ ನನಗೆ ಒಪ್ಪಲಗುತ್ತಿಲ್ಲ. online ನಿಂದ ಪತ್ರಿಕೆಗೆ ಹಣಕಾಸು ಲಾಭ ಯಾವ ರೀತಿ ಹೆಚ್ಚುವುದೋ ನನಗೆ ತಿಳಿಯದು. ಜಾಹಿರತುಗಳು ಮುದ್ರಿತ ಹಾಗು online ಎರಡರಲ್ಲೂ ಒಂದೆ....
ಕಡೇ ಪಕ್ಷ ಕಂಪನಿಗಳಲ್ಲಿ ತರಿಸಿದರೆ ಪ್ರ್ಸಸಾರ ಹೆಚ್ಚು ಅನ್ನಬಹುದು. ಆದರೆ ಎಷ್ಟು ಕಂಪನಿಗಳು ಕನ್ನಡ ಪತ್ರಿಕೆ ತರಿಸುತ್ತಾರೆ? ಅದು ಮುಖ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

1) ೧೦೦ ಜನರಲ್ಲಿ ಎಷ್ಟು ಮಂದಿ ಹಣಕಲ್ಲದೆ ಬೇರೆ ಕಾರಣಕ್ಕೆ ದುಡೀಯುತ್ತಿದ್ದಾರೆ?

ಐ.ಟಿ ಇಂಡಸ್ಟ್ರಿ ಒಂದ್ರಲ್ಲೇ ಹೀಗೇನ್ರಿ????

2) ಆದರೆ ಐಟಿ ಇಂದ ಹೆಚ್ಚಾಯಿತು ಅನ್ನುವ ತರ್ಕ ನನಗೆ ಒಪ್ಪಲಗುತ್ತಿಲ್ಲ.

ಸಾರ್, ಒಂದು ಲೆಕ್ಕ ಹಾಕಿ.

ನೀವು ನಿಮ್ಮ ಊರಿನಲ್ಲಿದೀರ ಅಂದ್ಕೊಳ್ಳಿ, ನಿಮ್ಮಪ್ಪನ ಆಸ್ತಿಯನ್ನ ನೋಡಿಕೊಂಡು ಹೋಗ್ತಿದೀರಾ ಅಂದ್ಕೊಳ್ಳಿ, ನಿಮ್ಮ ಮನೆಯಲ್ಲಿ ಒಂದು ಪ್ರಜಾವಾಣಿ ಬರತ್ತೆ ಎಲ್ಲರೂ ಓದ್ತೀರಿ.

ಇನ್ನೊಂದು

ನೀವು ಬೆಂಗಳೂರಿಗೆ ಬಂದು ಸಾಫ್ಟ್ವೇರ್ ಇಂಜಿನಿಯರ್ ಆಗ್ತೀರಾ, ನೀವು ಒಂದು ಪ್ರಜಾವಾಣಿ ಪೇಪ‌ರ್ ತ‌ಗೋತೀರಾ...

ಅಲ್ಲಿಗೆ ಒಂದು ಪ್ರಜಾವಾಣಿ ಬ‌ದ‌ಲು ಎರ‌ಡಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಾಸರೇ ಹೇಳಿಲ್ವೇ 'ಎಲ್ಲಾರೂ ಮಾಡೋದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಅಂತ .... ಐಟಿ ಇಂದ ಸುಮಾರು ಮಧ್ಯಮ ವರ್ಗದವರ ಬದುಕು ಚೆನ್ನಾಗಿ ಆಗಿದೆ ... ನಿಜ ದುಡ್ದೊಂದು ಇದ್ರೆ ಎಲ್ಲ ಸಿಕ್ಕಂತಲ್ಲ ಹಾಗಂತ ದುಡ್ಡಿಲ್ದೆ ಎಲ್ಲವನ್ನು ಮಾಡಕ್ಕೂ ಆಗಲ್ಲ .....

ಪತ್ರಿಕೆ ಅಂದ್ರೆ ಬರಿ ಕನ್ನಡ ಅಂತ ಮಾತ್ರ ಯಾಕೆ ತಿಳ್ಕೊತೀರ ? ಎಷ್ಟೊಂದ್ ಜನ ಪೇಪರ್ ಓದದೆ ಇರೋರು ಈಗ ಓದ್ತಿದಾರೆ ( ಸುಮಾರು auto/bus drivers)....

ಇನ್ನು ಹೊಸ ಸಂಶೋಧನೆ ವಿಚಾರ .. ಆಗ್ಬೇಕ್ಕಿತ್ತು .... ಆದ್ರೆ ಆ ನಿಟ್ಟಿನಲ್ಲಿ ಏನೂ ಆಗಿಲ್ಲ, ಆಗುವ ಭರವಸೆನೂ ಇಲ್ಲ .....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಿದು ಚೇತನ್ , ಪ್ರತಾಪ್ ಸಿಂಹರ ಮೇಲೆ ಸಮರ ಸಾರಿರುವಂತಿದೆ? ಪ್ರತಾಪ್ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಬರೆಯುವ ಒಬ್ಬ ಲೇಖಕರು.... ಜನರಲೈಸ್ ಮಾಡಿದ್ದಾರೆ ಅನ್ನೋದು ನಿಮ್ಮ ವಾದ. ಆದರೆ ಅವರು ಹೇಳಿರುವುದು ನಿಮಗಲ್ಲ ಅಂದುಕೊಂಡರೆ ಆಯ್ತು. ಯಾಕಂದರೆ ಅವ್ರು ಉಲ್ಲೇಖಿಸಿರುವ ರೀತಿಯ ಜನರಿಗಾಗಿ ಅವರು ಹೇಳಿದ್ದಿರಬಹುದಲ್ಲವೇ ? ಯೋಚಿಸಿ ನೋಡಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಮೇಡಮ್ ಸಮರ ಏನು ಇಲ್ಲ, ನಾನೂ ಕೂಡ ಅವರ ಅಭಿಮಾನಿಗಳಲ್ಲಿ ಒಬ್ಬ. ಅವರು ಎಲ್ಲರನ್ನೂ ಒಂದೇ ರೀತಿಯಲ್ಲಿ ಉಲ್ಲೇಖಿಸಿರುವ ಜನರು ಕೆಲವರು ಅಂತ ಅಂದಿದ್ರೆ ಸರಿ ಮೇಡಮ್ ಆದರೆ ಎಲ್ಲರನ್ನೂ ಒಂದೇ ಅನ್ನುವ ರೀತಿಯಲ್ಲಿ ಹೇಳಿದ್ದಾರೆ ಹಾಗಾಗಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯವರೆ, ಏನಂದ್ರೀ, ಸಾಮಾಜಿಕ ಕಳಕಳಿಯಿರುವ ಮನುಷ್ಯ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ನೋಡುವುದು ಅವರ ಆ ಕಳಕಳಿಗೆ ಅವಮಾನ, ಯಾಕೆ ಮೇಡಮ್ ನೀವು ಅಥವಾ ಅವ್ರು ಹೇಳುವ ಪ್ರಕಾರ ಹೋದ್ರೆ ಸಾಫ್ಟ್ವೇರ್ ಇಂಜಿನಿಯರ್ ಯಾರಿಗೂ ಸಾಮಾಜಿಕ ಕಳಕಳಿ ಇಲ್ಲ ಅಂದ ಹಾಗಾಗತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಚೇತನ್ , ನಾನು ಹಾಗೆ ಹೇಳುತ್ತಿಲ್ಲ. ಅವರು ಹೇಳಿದ್ದೆಲ್ಲ ನಮಗೆ ಅಂತ ತಿಳಿಯಬೇಡಿ ಅಂದೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಮ್, ನಿಮ್ಮ ತಮ್ಮನಿಗೋ, ಅಣ್ಣನಿಗೋ, ನಿಮ್ಮ ಯಜಮಾನ್ರಿಗೋ ನಿಮ್ಮೆದುರಿಗೆ ಅವ್ರೇನೇ ತಪ್ಪು ಮಾಡಿಲ್ಲದಿದ್ರೂ ಯಾರಾದ್ರೂ ಬೈದ್ರೆ ನೀವು ಸುಮ್ನಿರ್ತೀರಾ ಹೇಳಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆತ್ತಲೆ ಜಗತ್ತಿನ ಲೇಖಕರನ್ನು ಈ ರೀತಿ ಬೆತ್ತಲೆ ಮಾಡದಿರಿ.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸಾರ್...ನಮ್ಮನ್ನು ಬೆತ್ತಲೆ ಮಾಡಿ ಚಾಟಿ ಏಟು ಕೊಡುತ್ತಿರುವಾಗ ನಾವು ಅಷ್ಟಾದರೂ ಮಾಡದಿದ್ದರೆ ನಮಗೆ ಅವಮಾನ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ ಮಾಡಿದ್ದನ್ನು ನಾವೂ ಮಾಡಿದ್ರೆ, ನಮಗೂ ಆತನಿಗೂ ಏನ್ರೀ ವ್ಯತ್ಯಾಸ?
ಪ್ರತಾಪನ ಲೇಖನಗಳನ್ನು ನಾನೂ ಓದುತ್ತೇನೆ. ಬೇಡಾದ್ದನ್ನು ಸ್ವೀಕರಿಸುವುದಿಲ್ಲ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಹೆಗ್ಡೆಯವರೆ, ಕೆಲವರಿಗೆ ಇಂಥ ಕಡೆ ಏನಾಗ್ತಿದೆ ಅಂತ ಅರ್ಧಂಬರ್ಧ ತಿಳಿದುಕೊಂಡು ಬೇರೆಯವರಿಗೆ ಅದನ್ನೇ ಹೇಳ್ತಾರೆ, ಅದಕ್ಕೆ ಸಂಪೂರ್ಣವಾಗಿ ತಿಳಿದುಕೊಳ್ಳೋ ತರ ಹೇಳಿದ್ರೆ ಅವರಿಗೆ ಅರ್ಥ ಆಗದೆ ಇದ್ರೂ ಬೇರೆಯವರಿಗೆ ಅರ್ಥ ಆದ್ರೆ ಅಷ್ಟೆ ಸಮಾಧಾನ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಕ ದಲ್ಲಿ ಅವರ ಲೇಖನ ಓದಿದವರು (ಅದರ ಮೇಲೆ ಕಣ್ಣಾಡಿಸಿದವರು) ಸಾವಿರಾರು (ಅಥವಾ ಲಕ್ಷಕ್ಕೆ ಹತ್ತಿರವಾಗುವಷ್ಟು) ಮಂದಿ.
ಇಲ್ಲಿ...?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ, ಅದಕ್ಕೆ ಅವ್ರಿಗೆ ಮೈಲ್ ಮಾಡಿದೀನಿ, ಆತನ ಬ್ಲಾಗ್ನಲ್ಲಿ ಸಹ ಹಾಕಿದೀನಿ
http://pratapsimha.com/bettale-jagattu/it-2/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕುರುಡು ಕಾಂಚಾಣ.." ಲೇಖನವನ್ನು ಈಗ ಓದಿದೆ.
ಹುರುಳಿರಲಾರದು ಅಂತ ಮೇಲ್ನೋಟಕ್ಕೆ ಅನ್ನಿಸಿತ್ತಾದ್ದರಿಂದ ಅಂದು ಓದಿರಲಿಲ್ಲ.
ಇಂದು ನಿಮ್ಮಿಂದಾಗಿ ಓದ ಬೇಕಾಯ್ತು.
ಈಗ ಎರಡೆರಡು ಬಾರಿ ಒದಿದೆ.
"ಆತ ಬರೆದದ್ದು ನೂರಕ್ಕೆ ನೂರು ಸುಳ್ಳೂ ಅಲ್ಲ.
ನೂರಕ್ಕೆ ನೂರು ಸತ್ಯವೂ ಅಲ್ಲ.
ಲೇಖನ ಚೆನ್ನಾಗಿದೆ.
ಆದರೆ ಪ್ರಭಾವ ಬೀರುವಷ್ಟು ಹುರುಳು ಉಳ್ಳದ್ದಾಗಿಲ್ಲ.
ಯಾವುದೇ ನಿಖರವಾದ ಅಂಕಿ ಅಂಶಗಳು ಅಲ್ಲಿಲ್ಲ.
ಅದನ್ನು ನಿರ್ಲಕ್ಷಿಸಿದರೆ ಯಾರಿಗೂ ಏನೂ ನಷ್ಟ ಇಲ್ಲ.
ಇನ್ನು ಅದರ ಬಗ್ಗೆ ಮಾತನಾಡುವುದು ಅಪ್ರಯೋಜಕ, ಸಮಯದ ದುರ್ವ್ಯಯ ಮಾಡಿದಂತೆಯೇ ಸರಿ."
ಇವು ನನ್ನ ಅನಿಸಿಕೆಗಳು.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗ್ಲಿ ಹಾಗೆ ಆಗ್ಲಿ, ಈಗಲೇ ಆ ವಿಷಯಕ್ಕೆ ಅವರಿಗೆ ತುಂಬಾ ಪೆಟ್ಟು ಬಿದ್ದಿದೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಪ್ರತಾಪನಿಗೆ ಸಲಹೆ ನೀಡಿದ್ದೇನೆ, ಆತನ ಬ್ಲಾಗಿನಲ್ಲಿ.
ಮಕ್ಕಳನ್ನು ತಿದ್ದಬೇಕು ಅಷ್ಟೆ. ಸುಧಾರಿಸ್ಕೊಂಡರೆ ಒಳ್ಳೇದು.

"ಪ್ರತಾಪ ಸಿಂಹ,
ಮೋದಿ ಬಗ್ಗೆನೋ, ಆಡ್ವಾಣಿ ಬಗ್ಗೇನೋ, ಸೋನಿಯಾ ಬಗ್ಗೆನೋ ಅಥವಾ ನಮ್ಮ ಕುಮಾರ, ಯಡ್ಯೂರಪ್ಪ ಇಂತಹ ರಾಜಕಾರಣಿಗಳ ಬಗ್ಗೆ ಬರ್ಕೊಂಡು ಇರೋ ಬದಲು ನಿನಗೆ ಗೊತ್ತಿಲ್ಲದ ವಿಷಯದ ಬಗ್ಗೆ ಯಾಕೆ ಬರೆಯೋಕೆ ಹೊದಿ ಮಾರಾಯಾ?
ಸುಮ್ಮನೇ ಈ ತರಹ ಬೈಸಿಕೊಳ್ಳೋದು ಬೇಕಿತ್ತಾ?
ಇನ್ನಾದರೂ ಒಳ್ಳೋಳ್ಳೆ ವಿಷಯದ ಬಗ್ಗೆ ಬರೆಯೋದನ್ನ ಅಭ್ಯಾಸ ಮಾಡ್ಕೋ.
ಬರೀತೀಯಾ, ಬರೆಯೋ ಕಲೆ ಚೆನ್ನಾಗಿ ಒಗ್ಗಿದೆ ನಿನಗೆ. ಒಪ್ತೀನಿ.
ಆದರೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಅರ್ಧಂಬರ್ಧ ಜ್ಞಾನ ಇಟ್ಕೊಂಡು ಬರೀ ಬೇಡ. ನಮ್ಮನ್ನು ಕೇಳ್ಬಾರ್ದಿತ್ತೇ?
ನಾವೂ ನಿನ್ನ ವಾರದ ಅಂಕಣಕ್ಕೆ ವಿಷಯ ಸಂಗ್ರಹ ಮಾಡಿಕೊಟ್ಟು ನಿನ್ನ ವಾರಾನ್ನದ ವ್ಯವಸ್ಥೆಗೆ ಸಹಾಯ ಆಗ್ತಿದ್ವಲ್ಲಪ್ಪಾ?
ಸರಿ ಬಿಡು. ಸುಧಾರಿಸ್ಕೋ. ದೊಡ್ಡ ತಪ್ಪೇನೂ ಆಗಿಲ್ಲ ಬಿಡು.
ಜಾಸ್ತಿ ತಲೆ ಕೆಡಿಸ್ಕೋ ಬೇಡ. ಮುಂದಿನ ವಾರ ಒಳ್ಳೇ ವಿಷಯದ ಬಗ್ಗೆ ಬರೆದು ಇವರ ಮುನಿಸನ್ನೆಲ್ಲ ದೂರ ಮಾಡು ಅಷ್ಟೇ.
ಇವ್ರೆಲ್ಲಾ ನಿನ್ನ ಲೇಖನಗಳನ್ನು ಬಿಡದೇ ಓದೋರೇ ಕಣಪ್ಪಾ.

ಆತ್ರಾಡಿ ಸುರೇಶ್ ಹೆಗ್ಡೆ."

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಾಪ ಸಿಂಹರ ಲೇಖನದ ಬಗ್ಗೆ ನನ್ನ ಅನಿಸಿಕೆಗಳು ಪ್ರತಿಕ್ರಿಯೆಗಳು ಇಲ್ಲಿವೆ.
http://sampada.net/blog/asuhegde/26/02/2009/17348

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟು ದಿನ ಎಲ್ಲರಿಂದ ಬರಿ ಮುದ್ದು, ಪ್ರೀತಿಯಷ್ಟನ್ನೆ ಪಡೆದುಕೊಂಡಿದ್ದವರಿಗೆ ಸಣ್ಣದೊಂದು ಗದರಿಕೆ ಎಷ್ಟು ನೋವು ಆಕ್ರೋಶ ತಂದಿದೆ. ಇದ್ದಿದ್ದ ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರು ಅನ್ನೋ ಹಾಗೆ. ಹೌದು ಎಲ್ಲ ಟೆಕ್ಕಿಗಳು ಹಾಗಿಲ್ಲ. ಹಾಗಂತ ಎಲ್ಲರ ಹೆಸರು ಹಿಡಿದು ಇವರನ್ನು ಬಿಟ್ಟು ಮಿಕ್ಕವರು ಹಾಗೆ ಎಂದು ಲೇಖನ ಬರೆಯುವುದು ಸಾಧ್ಯವೆ?
ಸತ್ಯ ಯಾವಾಗ್ಲೂ ಕಹಿಯಾಗಿರುತ್ತೆ. ಅರಗಿಸಿಕೊಳ್ಳುವ ಶಕ್ತಿ ಬೇಕು. ಟೆಕ್ಕಿಗಳು ಯಾವಾಗ್ಲೂ ಪ್ರೀತಿಯನ್ನೆ ಬಯಸುವುದು ತಪ್ಪಲ್ಲವೇ? ಜೀವನವೆಂದರೆ ಬರಿ ಸುಖವಷ್ಟೆ ಅಲ್ಲ ಕಷ್ಟಗಳು ಬರುತ್ತವೆ, ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ ಕೂಡ. ಟೀಕೆ ನಿಂದನೆಗಳು ಬರುತ್ತವೆ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕಲ್ಲವೆ? ಇಷ್ಟು ದಿನ ಬರಿ ಹೊಗಳಿಕೆಯನ್ನಷ್ಟೆ ಕೇಳಿದವರಿಗೆ ಇಂದು ಒಂದು ಸಣ್ಣ ಟೀಕೆ ಕಿವಿಗೆ ಕಾದೆಣ್ಣೆ ಸುರಿದ ಹಾಗೇಕೆ ಆಡುತ್ತಿದ್ದೀರಿ? ಮತ್ತೊಮ್ಮೆ ತೆರೆದ ಮನದಿಂದ ಲೇಖನ ಓದಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಹುದಹುದು ಸತ್ಯ ಯಾವಾಗಲು ಕಹಿಯಾಗಿರತ್ತೆ.. ಅರ್ಧಸತ್ಯ ಹೇಳುವುದು ಎಷ್ಟು ಸರಿ?
ಬೇರೆಯವರಿಗೆ ಆದಾಗ ಇಂತಹ ಸಮಾಧಾನಗಳು ಹೇಳುವುದು ಸುಲಭ, ತಮ್ಮ ಬುಡಕ್ಕೆ ಬಂದಾಗ ಮಾತ್ರ ಅದರ ಆಳ ಅರಿವಾಗುವುದು.
ಇಂದಿಲ್ಲಿ ಒಂದು ಲೇಖನ ಬರೆದ ಮಾತ್ರಕ್ಕೆ ಅದೇ ಸತ್ಯವಲ್ಲ, ವಿರೋಧಿಸುತ್ತಿರುವುದು ಅದು ಸಾರಾಸಗಟಾಗಿ ಸುಳ್ಳು ಎಂತಲೂ ಅಲ್ಲ. ಅರೆ ಬೆಂದ ಊಟವನ್ನು ನೀಡಿ, ಈಗಾಗಲೇ ಅಧೋಗತಿಯತ್ತ ಸಾಗಿರುವ ಸಮಾಜದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸದಿರಿ ಎಂದಷ್ಟೆ,

http://sampada.net/blog/vinuthamv/27/02/2009/17377

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಈಗಾಗಲೇ ಅಧೋಗತಿಯತ್ತ ಸಾಗಿರುವ ಸಮಾಜದ ಆರೋಗ್ಯವನ್ನು ಇನ್ನಷ್ಟು ಹದಗೆಡಿಸದಿರಿ ಎಂದಷ್ಟೆ[/quote]

ಆತನೂ ಇದನ್ನೆ ಹೇಳಿರುವುದು ಅದನ್ನು ಅರ್ಥಮಾಡಿಕೊಳ್ಳದೆ. ಎತ್ತು ಈಯ್ತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ಆತುರ ನೀವು ತೋರುತ್ತಿದ್ದೀರಿ. ನಿಮ್ಮ ಕ್ಷೇತ್ರವೆಂಬ ಹೆಮ್ಮೆಯನ್ನು ಬಿಟ್ಟು ಸ್ವಲ್ಪ ಸಹಜ ಕಣ್ಣಿನಿಂದ ಆ ಲೇಖನವನ್ನು ಓದಿ. ಟೀಕೆಯನ್ನು ಸಹಿಸಿಕೊಳ್ಳದ ನಿಮ್ಮ ಮನಸ್ಥಿತಿಯಿಂದ ಬರೆದ ನಿಮ್ಮ ಲೇಖನದಲ್ಲಿ ಹೊಸದೇನಿಲ್ಲ. ಕ್ಷಮಿಸಿ ನೇರವಾಗಿ ಹೇಳುತ್ತಿರುವುದಕ್ಕೆ. ಸತ್ಯಕ್ಕೆ ಮಗ್ಗುಲುಗಳಿರುವುದಿಲ್ಲ ನೋಡುವವರಿಗಿರುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತವಾಗಿಯೂ ಸತ್ಯಕ್ಕೆ ಮಗ್ಗಲುಗಳಿರುವುದಿಲ್ಲ. ಸತ್ಯ ಒಂದೇ. ಆದರೆ ನಮಗೆ ಕಂಡದ್ದು ಮಾತ್ರ ಸತ್ಯವಲ್ಲ ಅಲ್ಲವೇ? ನಮ್ಮ ಕ್ಷೇತ್ರ ಎಂಬ ಹೆಮ್ಮೆ ಎಲ್ಲರಿಗೂ ಇರುತ್ತದೆ. ಆದರೆ ಅದು ಕುರುಡು ಹಮ್ಮಾಗಬಾರದಷ್ಟೆ. ಟೀಕೆಯನ್ನು ಸಹಿಸಿಕೊಳ್ಳುವ ಅಥವಾ ತಿರಸ್ಕರಿಸುವ ಪ್ರಶ್ನೆಯಲ್ಲ. ಬರೆದಿರುವುದು ಎಷ್ಟು ಸರಿ ಎಷ್ಟು ತಪ್ಪು ಎನ್ನುವ ವಿಮರ್ಶೆಯಷ್ಟೆ. ಯಾವುದೇ ವೃತ್ತಿಯಾಗಿರಬಹುದು, ಉದಾಹರಣೆಗೆ ಸಂಗೀತ ಲೋಕದ ಬಗ್ಗೆ ಅದರ ಹೊರಗಿರುವವರ ಅರಿವೂ, ಅದರ ಒಳಗಿರುವವರ ಅರಿವೂ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ, ಅದರ ಬಗ್ಗೆ ತಪ್ಪು ಅಭಿಪ್ರಾಯಗಳು ವ್ಯಕ್ತವಾದಾಗ ಅದನ್ನು ತಿದ್ದುವುದು ಅವರ ಹೊಣೆಯಾಗಿರುತ್ತದೆ. ನಾವೂ ಸಹ ಕೊರತೆಯನ್ನು ತುಂಬುತ್ತಿದ್ದೇವೆಯಷ್ಟೆ. ಒಂದು ವಿಷಯದ ಬಗ್ಗೆ ಇನ್ನಷ್ಟು ಸತ್ಯಗಳನ್ನು ತಿಳಿದುಕೊಳ್ಳುವ ವಿಶಾಲ ಮನಸ್ಸು ನಿಮ್ಮದಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಬರೆದಿದ್ದೀರಿ ಚೇತನ್. ಊರೇ ಹತ್ತಿ ಉರಿಯುವಾಗ ದೊರೆಯೊಬ್ಬ ಕುಳಿತುಕೊಂಡು ಪಿಟೀಲು ಬಾರಿಸುತ್ತಿದ್ದನಂತೆ. ಹಾಗಾಯ್ತು ಕಥೆ. ನನ್ನ ಪ್ರತಿಕ್ರಿಯೆಗಳು ಈ ಕೊಂಡಿಯಲ್ಲಿವೆ
http://sampada.net/blog/vinuthamv/27/02/2009/17377

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಊರಿಗೆ ಬೆಂಕಿಬೀಳಲು ಪ್ರತಾಪ್ ಕಾರಣನೆ? ಬೆಂಕಿ ಬಿದ್ದಿದೆ ಅದರಲ್ಲಿ ನಿಮ್ಮ ಪಾಲೂ ಇದೆ ಎಚ್ಚೆತುಕೊಳ್ಳಿ ಎಂದು ಆತ ಹೇಳುತ್ತಿದ್ದಾನೆ. ಇಲ್ಲ ಅಲ್ಲೆ ನಿದ್ದೆಯಲ್ಲೆ ಇರ್ತೀವಿ ಮೈಕೈ ಸುಡ್ಲಿ ಏನೀಗ ಎಂದು ಕೇಳಿದ್ರೆ ಅದು ನಿಮ್ಮ ಹಣೆಬರಹ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಊರಿಗೆ ಬೆಂಕಿಬೀಳಲು ಪ್ರತಾಪ್ ಕಾರಣನೆ? ಬೆಂಕಿ ಬಿದ್ದಿದೆ ಅದರಲ್ಲಿ ನಿಮ್ಮ ಪಾಲೂ ಇದೆ ಎಚ್ಚೆತುಕೊಳ್ಳಿ ಎಂದು ಆತ ಹೇಳುತ್ತಿದ್ದಾನೆ. ಇಲ್ಲ ಅಲ್ಲೆ ನಿದ್ದೆಯಲ್ಲೆ ಇರ್ತೀವಿ ಮಕೈ ಸುಡ್ಲಿ ಏನೀಗ ಎಂದು ಕೇಳಿದ್ರೆ ಅದು ನಿಮ್ಮ ಹಣೆಬರಹ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಊರಿಗೆ ಬೆಂಕಿ ಬೀಳಲು ಪ್ರತಾಪರು ಕಾರಣವೆಂದು ಹೇಳಿಲ್ಲ. ಬೆಂಕಿ ಬಿದ್ದಿದೆ. ಅದರಲ್ಲಿ ನಮ್ಮ ಪಾಲೂ ಇದೆ. ಆದರೆ ಸಂಪೂರ್ಣ ನಾವೇ ಹೊಣೆಯಲ್ಲ. ಎಚ್ಚೆತ್ತುಕೊಳ್ಳದಿದ್ದರೆ ಎಲ್ಲರಿಗೂ ಒಂದೇ ಹಣೆಬರಹ. ಎಲ್ಲರೂ ಅವರ ಹಣೆಬರಹವನ್ನು ಅವರೇ ಅನುಭವಿಸಬೇಕು. ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ನಿಮಗೆ ಸಹಾಯ ಮಾಡಲಾಗದಿದ್ದಲ್ಲಿ, ಎಣ್ಣೆ ಸುರಿಯುವ ಕೆಲಸವನ್ನಂತೂ ಮಾಡಬೇಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಂದನೆ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದವರ ಸಮಸ್ಯೆಯಿದು. ನಾವೇ ದೊಡ್ಡವರು ನಮಗಿಂತ ತಿಳಿದವರಿಲ್ಲ ನಮಗೆ ಹೇಳಲು ನೀವ್ಯಾರು ಎನ್ನುವ ಈ ಮನೋಭಾವನೆಯೆ ಆ ಕ್ಷೇತ್ರದ ಇಂದಿನ ಸ್ಥಿತಿಗೆ ಕಾರಣ ಎಂದು ಲೇಖಕರು ಹೇಳಿದ್ದೆ ತಪ್ಪು ಎಂದು ತಿಳಿದ ನಿಮ್ಮಂತ ಜ್ಙಾನಿಗಳಿಗೆ ನನ್ನಂತ ಅಲ್ಪಮತಿ ತಿಳಿಹೇಳಬಾರದಿತ್ತು ಕ್ಷಮಿಸಿ. ಬರೀ ಹೊಗಳಿಕೆಯಷ್ಟೆ ಬೇಕು. ಟೀಕೆಗಳು ನಮಗೆ ಸ್ವೀಕಾರರ್ಹವಲ್ಲ ಎಂಬ ನಿಮಗೆ ಲೇಖನದ ಉದ್ದೇಶ ನೀವು ತಪ್ಪಾಗಿ ಅರ್ಥೈಸಿದ್ದೀರಿ ಎಂದು ಹೇಳಲು ಪ್ರಯತ್ನಿಸಿದ್ದು ನನ್ನ ತಪ್ಪು. ನಾನು ಮಾಡಬಾರದಿತ್ತು ಕ್ಷಮಿಸಿ. ನಿಮಗೆ ಒಳ್ಳೆಯದಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯವಾದ ಮಾತು prasca ರವರೆ. ನಿಂದನೆ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳದವರ ಸಮಸ್ಯೆಯಿದು. :)
ಬಹುಶ: ನೀವು ನನ್ನ ಹಿಂದಿನ ಪ್ರತಿಕ್ರಿಯೆಯನ್ನು ಓದಿಲ್ಲವೆಂದು ಕಾಣುತ್ತದೆ.
"ಖಂಡಿತವಾಗಿಯೂ ಸತ್ಯಕ್ಕೆ ಮಗ್ಗಲುಗಳಿರುವುದಿಲ್ಲ. ಸತ್ಯ ಒಂದೇ. ಆದರೆ ನಮಗೆ ಕಂಡದ್ದು ಮಾತ್ರ ಸತ್ಯವಲ್ಲ ಅಲ್ಲವೇ? ನಮ್ಮ ಕ್ಷೇತ್ರ ಎಂಬ ಹೆಮ್ಮೆ ಎಲ್ಲರಿಗೂ ಇರುತ್ತದೆ. ಆದರೆ ಅದು ಕುರುಡು ಹಮ್ಮಾಗಬಾರದಷ್ಟೆ. ಟೀಕೆಯನ್ನು ಸಹಿಸಿಕೊಳ್ಳುವ ಅಥವಾ ತಿರಸ್ಕರಿಸುವ ಪ್ರಶ್ನೆಯಲ್ಲ. ಬರೆದಿರುವುದು ಎಷ್ಟು ಸರಿ ಎಷ್ಟು ತಪ್ಪು ಎನ್ನುವ ವಿಮರ್ಶೆಯಷ್ಟೆ. ಯಾವುದೇ ವೃತ್ತಿಯಾಗಿರಬಹುದು, ಉದಾಹರಣೆಗೆ ಸಂಗೀತ ಲೋಕದ ಬಗ್ಗೆ ಅದರ ಹೊರಗಿರುವವರ ಅರಿವೂ, ಅದರ ಒಳಗಿರುವವರ ಅರಿವೂ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ, ಅದರ ಬಗ್ಗೆ ತಪ್ಪು ಅಭಿಪ್ರಾಯಗಳು ವ್ಯಕ್ತವಾದಾಗ ಅದನ್ನು ತಿದ್ದುವುದು ಅವರ ಹೊಣೆಯಾಗಿರುತ್ತದೆ. ನಾವೂ ಸಹ ಕೊರತೆಯನ್ನು ತುಂಬುತ್ತಿದ್ದೇವೆಯಷ್ಟೆ. ಒಂದು ವಿಷಯದ ಬಗ್ಗೆ ಇನ್ನಷ್ಟು ಸತ್ಯಗಳನ್ನು ತಿಳಿದುಕೊಳ್ಳುವ ವಿಶಾಲ ಮನಸ್ಸು ನಿಮ್ಮದಾಗಲಿ."
ಅವರ ಎರಡನೇ ಲೇಖನವನ್ನೊಮ್ಮೆ ಓದಿ. ಆರ್ಥಿಕತೆಯ ಹಿನ್ನೆಲೆಯಲ್ಲಿ ಬರೆದ ಅವರ ಮೊದಲ ಲೇಖನಕ್ಕೂ, ಆಧಾರ ಸಹಿತ, ತಾಂತ್ರಿಕತೆಯ ಹಿನ್ನೆಲೆಯಲ್ಲಿ ಬರೆದ ಎರಡನೆಯ ಲೇಖನಕ್ಕೂ ವ್ಯತ್ಯಾಸ ಕಾಣುತ್ತದೆ. ಆಗಲಾದರೂ ಕೊರತೆ ನಿಮಗೂ ಅರ್ಥವಾದೀತು. ನಿಮಗೂ ಒಳ್ಳೆಯದಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೇಯೆ ISRO & DRDO ಏನು ಮಾಡಿವೆ ಎಂದು ಕೇಳಿದ್ದೀರಲ್ಲ ಅಂತಹ ವಿಶಾಲ ಭಾವನೆ ನಾನು ಬೆಳೆಸಿಕೊಳ್ಳುವುದು ಬೇಡ. ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ತಿಳಿದದ್ದೇ ಸರಿ ನಮಗೆ ಯಾರೂ ಏನೂ ಹೇಳ್ಬಾರ್ದು ನಮಗಿಷ್ಟ ಬಂದಂತೆ ಇರ್ತೀವಿ ಇದೆಲ್ಲ ವಿಶಾಲ ಭಾವನೆಗಳಾದರೆ ಬೇಡ ಅದು ನಿಮ್ಮಲ್ಲೆ ಇರಲಿ ಅಂತಹ ವಿಶಾಲ ವ್ಯಾಪ್ತಿ ನನಗೆ ಬೇಡ. ಮುಗಿಸೊಣ. ನಿಮ್ಮ ವಾದ ಸರಿ ಇದೆಯೆಂದು ಒಪ್ಪಿಕೊಳ್ಳುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಚೇತನ್,

ಪ್ರತಾಪ್ ಸಿಂಹ ಜನರಲೈಸ್ ಮಾಡಿದ್ದಾರೆ ಅಂತ ದೋಷಾರೋಪಣೆ ಮಾಡ್ತಾ ನೀವೂ ಅದನ್ನೇ ಮಾಡಿದ್ದೀರಲ್ರೀ...

ಟೆಕ್ಕಿಗಳು ಕೆಲಸ ಬಿಡೋಕ್ಕೆ ಕಾರಣ ಅವ್ರಿಗೆ ತಕ್ಕನಾದ ಕೆಲಸಕ್ಕೆ ಹಾಕಿರಲ್ಲ ಅಂತ ಅಂತೀರಲ್ಲ... ಹಲವಾರು ಇತರ ಫೀಲ್ಡ್ ಗಳಲ್ಲೂ ರೈಟ್ ಮ್ಯಾನ್ ಎಟ್ ರೈಟ್ ಪ್ಲೇಸ್ ಇರಲ್ಲ, ಆದ್ರೆ ಅವರೆಲ್ಲ ಟೆಕ್ಕಿಗಳಷ್ಟು ಸುಲಭವಾಗಿ ಬೇರೆ ಕೆಲಸಕ್ಕೆ ನೆಗೆಯಲ್ಲ, ಕಾರಣಗಳು ಅದಕ್ಕೆ ಬೇರೆ ಬೇರೆ ಇರಬಹುದು , ಆದ್ರೆ ’ಸಾಫ್ಟಿ’ಗಳು ಅಪ್ರೈಸಲ್ ಆಗೊದನ್ನೇ ಕಾಯ್ತಾ ಇರ್ತಾರೆ ಮತ್ತೆ ಕಾಸ್ಟ್ ಟು ಕಂಪನಿ ಮೊದಲು ನೋಡ್ತಾರೆ ಅಂತ ಅದೇ ಕ್ಷೇತ್ರದಲ್ಲಿರುವ ನಿಮಗೆ ಹೊಸದಾಗಿ ಹೇಳಬೇಕಾಗಿಲ್ಲ ಅಲ್ವ?

ಮತ್ತೊಂದು ವಿಷಯ, ಸಣ್ಣ ವಯಸ್ಸಿನಲ್ಲೇ ಹೆಚ್ಚು ಸಂಬಳ ಬರೋದ್ರಿಂದ ಅವರಿಗೆ ಹಣದ ಬೆಲೆ ಗೊತ್ತಾಗಲ್ಲ ಅನ್ನೋದು ಒಂದು ಸಾರ್ವಕಾಲಿಕ ಸತ್ಯ, ಎಲ್ಲೋ ಕೇವಲ ಬೆರಳೆಣಿಕೆಯಷ್ಟು ನಿಮ್ಮಂಥ ಮಂದಿ ಎಕ್ಸೆಪ್ಷನ್ ಇರಬಹುದು.

ಸರ್ಕಾರಿ ಕೆಲಸಗಾರರು ೨ ತಾಸು ಕಾಫಿ, ತಿಂಡಿ, ಊಟಕ್ಕೆ ಗುಳುಂ ಮಾಡ್ತಾರೆ ಅನ್ನೋದೂ ನಿಮ್ಮ ಒಂದು ಜನರಲೈಸ್ ಸ್ಟೇಟ್ಮೆಂಟ್. ಟೆಕ್ಕಿಗಳು ಜಿಮ್, ಟೇಬಲ್ ಟೆನ್ನಿಸ್, ಗೇಮ್ಸ್ ಅಂತ ಕೆಲಸದ ಮಧ್ಯೆ ಚೇಂಜ್ ಗಾಗಿ ಹೋಗೋಲ್ವ?? ಇದು ಅವರ ಕೆಲ್ಸದಲ್ಲೇ ಸೇರ್ಪಡೆಯಾಗಿರತ್ತಾ?

ಬಿಡ್ರೀ ಈ ವಾಕ್-ಸಮರ ಲೇಖನವನ್ನ ಪರ್ಸನಲ್ ಅಟ್ಯಾಕ್ ಅಂದುಕೊಳ್ಳದೇ ಸಮಾಜದ ಆರೋಗ್ಯ ಸುಧಾರಣೆಗಾಗಿ ಪ್ರತಾಪ್ ಅವರ ಕಾಳಜಿ ಅಂದುಕೊಳ್ಳಿ:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ನಿಮ್ಮ ಲೇಖನದಲ್ಲಿ ಚೆನ್ನಾಗಿ ಉತ್ತರಿಸಿದ್ದಿರಿ, ಒಂದೇ ದೃಷ್ಟಿ ಕೋನದಲ್ಲಿ ಯೋಚಿಸಿದ್ದೀರಾ ಒಬ್ಬರು ಕೆಟ್ಟರೆ ಅವರ ಗುಂಪಿಗೆ ಕೆಟ್ಟಹೆಸರು ಅಲ್ಲವೇ? ನಮ್ಮ ಸಮಾಜದ ಒಳ ಹರಿವು ಇನ್ನು ನಿಮಗೆ ಸರಿಯಾಗಿ ಗೊತ್ತಿಲ್ಲ ವೆನಿಸುತ್ತದೆ.

1) ಅಪ್ಪ ನಿವ್ಱ್ಱತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನ ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ.
ಈದರ ಅರ್ಥ ಚಿಕ್ಕವಯಸ್ಸಿಗೆ ದೊಡ್ಡ ಮೊತ್ತದ ಹಣ ಸಿಕ್ಕಿದರೆ ಮನಸ್ಸು ಹೇಳಿದಂತೆ ಕುಣಿಯುವುದಿಲ್ಲ, ಸ್ವಲ್ಪ ಹಿಡಿತವಿರ ಬೇಕು. ಎಂದು.

೨.ಇಪ್ಪತ್ತ್ಮೂರು ವರ್ಷಕ್ಕೆ ಕೈ ತುಂಬಾ ದುಡ್ಡೇನೋ ಬಂತು, ದುಡ್ಡಿನ‌ ಬೆಲೆ ಅರ್ಥ‌ ಮಾಡಿಕೊಳ್ಳುವ‌ ವ‌ಯ‌ಸ್ಸು ಅದಾಗಿರ‌ಲಿಲ್ಲ
ಎಲ್ಲ ಟೆಕ್ಕಿಗಳು ಹಾಗಿಲ್ಲ ಎಂದ ಮೇಲೆ, ಆ ರೀತಿಯಲ್ಲಿ ನಡೆದ ವರಿಗೆ ಮಾತ್ರ ತಟ್ಟುವುದು...ನೀವು ಈ ರೀತಿ ಇಲ್ಲ ವೆಂದಮೇಲೆ , ಸಂತೋಷವೇ ತಾನೇ?

೩.ಐ.ಟಿಯ‌ವ‌ರು ಏನು ಮಾಡ್ತಾ ಇದ್ದಾರೆ ಅಂತ‌ ಸಾಮಾನ್ಯ್‌ ವ್ಯಕ್ತಿಗೆ ಇನ್ನೂ ಅರ್ಥ‌ ಆಗಿಲ್ಲ.
ಬುದ್ದಿವಂತರಿಗಾಗಿ ಮಾತ್ರ ಅಂತ lable ಅಕ್ತಾರೆ ಈ ಸಮಾಜದಲ್ಲಿ , ಮಿಕ್ಕವರೆಲ್ಲ ದಡ್ಡ ಅಂತ ತೀರ್ಮಾನವೇ ಈ ಸಮಾಜದ ಸೋಜಿಗ.

೪. ಅವ‌ರ‌ ನಿಷ್ಟೆ ಏನಿದ್ದರೂ ದುಡ್ಡಿಗೆ.
ಸಾಮನ್ಯ ಜನರ ಅಭಿಪ್ರಾಯ, ಎಲ್ಲರು ದುಡ್ಡು ಮಾಡುವಾಗ ದೇಶವನ್ನು ಮರೆಯುತ್ತಾರೆ ಎಂಬ ಅವರ ಚಿಂತನೆ ಅಷ್ಟೇ ಮತ್ತು ಈ ವಾರದ ಅವರ ಲೇಖನವೇ ನಿಮಗೆ ಉತ್ತರ

೫.ಸೆಲ್ ಫೋನ್ ಸ‌ಂಖ್ಯೆ ಹೆಚ್ಚಳ‌ ಪ್ರಗ‌ತಿಯ‌ ಸ‌ಂಕೇತ‌ವೇ?
ಯಾವತ್ತು ಬಡವರಿಗೆ ಕನಸು ಜಾಸ್ತಿ, ಕೈಗೆ ಎಟಗುವ ಬೆಲೆಗೆ ಸಿಕ್ಕರೆ ಯಾರು ತಾನೇ ಬೇಡ ವೆನ್ನುತಾನೆ, ಉಳ್ಳವರು ೧೦,೦೦೦ ಕ್ಕೆ ಜಂಗಮ ಗಂಟೆಗೆ ತೆಗೆದು ಕೊಂಡರೆ ಅವರು ೫೦೦ ಬೆಲೆಗೆ ಸಿಗುವ ಜಂಗಮ ಗಂಟೆ ತೆಗೆದು ಕೊಳ್ಳುತಾರೆ. ಇಲ್ಲೇ ಅವರು ನಾವು, ನೀವು ಎಲ್ಲ ಕಳೆದು ಕೊಳ್ಳುತ್ತಿರುವ್ದು, ಕಂಪೆನಿಗಳು ಸಾವಿರಾರು ಕೋಟಿ ದುಡ್ಡು ಮಾಡಿ ನಮ್ಮನ್ನ ಕೊತಿಗಳನ್ನಾಗಿ ಮಾಡಿರುವ ಎಷ್ಟು ಉದಾಹರಣೆ ಗಳಿವೆ

೬.ಇವ‌ತ್ತು ಒಬ್ಬ ಐ.ಟಿಯ‌ವ‌ನು ಕೆಲ‌ಸ‌ ಕ‌ಳೆದುಕೊಂಡ‌ರೆ ಪ್ಯಾನಿಕ್ ಆಗುತ್ತಾನೆ, ಅವ‌ನಿಗೆ ಬೇರೆ ಕೆಲ‌ಸ‌ವೂ ಗೊತ್ತಿಲ್ಲ
ಅಷ್ಟು ನಂಬಿಕೆ ನಿಮ್ಮಲ್ಲಿದ್ದರೆ ಅಂದು ಸಂತೊಷದ ವಿಷಯ, ಆದರೆ ಗಾರ್ಮೆಂಟ್ಗ ಲೊಂದೆ ಅಲ್ಲ, ರೈತರು, ಕೂಲಿ ಕಾರ್ಮಿಕರು ಕೂಡ ಆತ್ಮಹ‌ತ್ಯೆ ಮಾಡಿಕೊಂಡಿದ್ದಾರೆ....ಕಾರಣ ಇಂದಿನ ವ್ಯವಸ್ಥೆ. ಅದನ್ನು ಸರಿಪಡಿಸುವದು ನಮ್ಮ ನಿಮ್ಮ ಕರ್ತವ್ಯ

೭. ಐ.ಟಿಯಿಂದಾಗಿ ಸಾವಿರಾರು ಕುಟುಂಬ‌ಗ‌ಳು ಉದ್ಧಾರ‌ವಾದ‌ವು ಎನ್ನುವುದು ಎಷ್ಟು ಸ‌ತ್ಯವೋ ಐ.ಟಿಯ‌ವ‌ರ‌ ಹ‌ಣ‌ದ‌ ಮ‌ದ‌ದಿಂದಾಗಿ ಹ‌ತ್ತು ಪ‌ಟ್ಟು ಹೆಚ್ಚು ಕುಟುಂಬ‌ಗ‌ಳು ಸ‌ಂಕ‌ಷ್ಟಕ್ಕೂ ಸಿಲುಕಿದ‌ವು
ಒಬ್ಬರಿಗೆ ಒಳ್ಳೆಯಾದಾಗ ಬೇಕಾದರೆ ಇನ್ನೊಬ್ಬರಿಗೆ ಕೆಟ್ಟದ್ದು ಆಗುತ್ತೆ

ಸ್ವಲ್ಪ ನಿಮ್ಮ ಚಿಂತನೆ ಯನ್ನು ಮುಕ್ತವಾಗಿಸಿಕೊಳ್ಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲು ಲೇಖನ ಶುರು ಮಾಡಿದವರಿಗೂ ಚಿಂತನೆಯನ್ನು ಮುಕ್ತವಾಗಿಸಿಕೊಳ್ಳಿ ಅಂತ ಹೇಳಿ ಹರ್ಷರವರೆ...

ಎಲ್ಲ ಟೆಕ್ಕಿಗಳು ಹಾಗಿಲ್ಲ ಎಂದ ಮೇಲೆ, ಆ ರೀತಿಯಲ್ಲಿ ನಡೆದ ವರಿಗೆ ಮಾತ್ರ ತಟ್ಟುವುದು...ನೀವು ಈ ರೀತಿ ಇಲ್ಲ ವೆಂದಮೇಲೆ , ಸಂತೋಷವೇ ತಾನೇ?

ನೀವು ಈ ರೀತಿ ಇಲ್ಲ ವೆಂದಮೇಲೆ... ಆದ‌ರೆ ಅವ‌ರು ಈ ರೀತಿ ಎಲ್ಲೂ ಪ್ರಸ್ತಾಪಿಸಿಲ್ಲ ಅದ‌ಕ್ಕೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರ ಮುಕ್ತವಾದ ಚಿಂತನೆಗೆ ಹೋದ ವಾರದ ಲೇಖನವೇ ಉತ್ತರ....:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ....ಚೆನ್ನಾಗಿ ಓದಿ ನೋಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕೆ, ಸಂಬಂದವಿಲ್ಲ?? ಸಮಾಜಿಕ ಹಿನ್ನಲೆಯೇಲ್ಲಿ ನೋಡಿದಾಗ ಎರಡು ಲೇಖನಗಳು ಒಂದಕ್ಕೆ ಒಂದು ಬೆಸೆದಿದೆ. ಹೆಚ್ಚು ಹಣವಿರುವಾಗ ಒಬ್ಬರಿಗೆ ಆಗುವ ಸಂತೋಷ, ಇನ್ನೊಬ್ಬರಿಗೆ ಹೊಟ್ಟೆಕಿಚ್ಚು...... ವೈಭವದ ಜೀವನ ಶೈಲಿ ಹೇಗೆ ಸಣ್ಣವರ ಮೇಲೆ ಪರಿಣಾಮ , ಸಮಾಜದ ಮೇಲೆ ಆಗುವ ದುಷ್ಪರಿಣಾಮ...ಹಣಮಾಡೋ gambling ನಲ್ಲಿ ಬಲಿಆಗಿರೋ ನಮ್ಮ IT ಮಿತ್ರರೂ....ಯಾವ್ದು ಚೆನ್ನಾಗಿ ದುಡ್ಡು ಮಾಡೋತ್ತೋ ಅದಕ್ಕೆ ಬೆಲೆಕೊಡೋ ಸಮಾಜ. ದೂರದೃಷ್ಟಿ ಯಿಲ್ಲದ ನಮ್ಮ IT ದೊರೆಗಳು...ಕಷ್ಟವನ್ನು ಅನುಭವಿಸುತ್ತ ಇರೋದು ನಾವು, ನೀವು, ಕೆಲಸಕ್ಕೆ ಅಂತ ಹುಡಕಾಟ ಮಾಡ್ತಾ ಇರೋ ಪಧವಿದರರು .

ನಿಮ್ಮದ್ದು ಕೇವಲ ವಯಕ್ತಿಕವಾದ ಚಿಂತನೆ.

"ನೀವು ಈ ರೀತಿ ಇಲ್ಲ ವೆಂದಮೇಲೆ... ಆದ‌ರೆ ಅವ‌ರು ಈ ರೀತಿ ಎಲ್ಲೂ ಪ್ರಸ್ತಾಪಿಸಿಲ್ಲ ಅದ‌ಕ್ಕೆ"....ಚೇತನ್ ನೀವು ತಿಳ್ಕೊತಿರ ಅಂತ ಹೇಳ್ಲಿಲ್ಲ ಅನ್ಸುತ್ತೆ....:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಮೇಲೆ 2 ವಾರದ ಲೇಖನಕ್ಕೂ ಸಂಬಂಧವೇ ಇಲ್ಲ....ಪ್ರೊಫೆಶನ್ ಬಗ್ಗೆ ಆದ್ರೆ ಇನ್ನೊಂದು ಪ್ರೊಫೆಶನಲ್ ಬಗ್ಗೆ...ಇನ್ನೊಂದು ಸಲ ಓದಪ್ಪ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ವಿಸ್ oriented ಗೆ ಕೊಟ್ಟ ಆದ್ಯತೆಯನ್ನು ಪ್ರಾಡಕ್ಟ್ ಡೆವಲಪ್ಮೆಂಟ್ಗೆ ಕೊಡಬೇಕಾಗಿತ್ತು ಎನ್ನುವುದು ವಾದ. ೫ ಲಕ್ಷ IT ಮಿತ್ರರಿಗೆ ಕೆಲಸ, ವರ್ಷದಿಂದ ವರ್ಷದಿಂದ ಹೊರಬರುತ್ತಿರುವ ೫ ಲಕ್ಷ ಪದವಿಧರ ಮಿತ್ರರಿಗೆ ನಿಮ್ಮ ಉತ್ತರವೇನು....ಎಲ್ಲ IT ಗೆ ನುಗ್ಗಿದರೆ ಉಳಿದಿರುವ ಡಿಪಾರ್ಟ್ಮೆನ್ತ್ಗಳ ಗತಿಯೇನು.. ಜಪಾನ್, ಚೀನಾ ಗೆ ಹೋಲಿಸುವ ನೀವು ದೇಶದ ಒಳಗೆ ಕಾಣುವ ವ್ಯವಸ್ಥೆಯ ಬಗ್ಗೆ ಮಾತಾಡಿ...ದೂರದ ಬೆಟ್ಟ ನುಣ್ಣಗೆ....ಸ್ವಾಮೆ.!!!!

profession - An occupation
professional - person following a profession...ಅಂತ ವತ್ಯಾಸ ಇಲ್ಲ
ಒಟ್ಟಿನಲ್ಲಿ ನೀವು ಒಂದೇ ದಿಕ್ಕು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Arun Sarin -Vodofone, Vinod Khosla - McKinsey, Amar Bose -BOSE corporation.

http://www.infosys.com/finacle/customers/customers.asp.

ಲಿಸ್ಟ್ ಮಾಡ್ತಾ ಹೋದ್ರೆ ತುಂಬಾ ಇದೆ..ಇವೆಲ್ಲಾ 2ನೇ ಲೇಖನಕ್ಕೆ ಉತ್ತರ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.