ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ...

0

ಹೋದ ಭಾನುವಾರ, ಮೀಟರ್ ಅವ್ನ ಫ್ರೆಂಡ್ ಮನೆಗೆ ಹೋಗಿದ್ದ. ನಾನು, ಬಾಬು, ವೆಂಕ, ಶಾಮ ತಿಂಡಿಗೆ ನಳಪಾಕಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಮೀಟರ್ಗೆ ಕಾಲ್ ಮಾಡಿ ಅಲ್ಲಿಗ ಬಾ ಅಂತ ಅಂದ್ವಿ. ನಾವು ನಳಪಾಕಕ್ಕೆ ಹೋಗಿದ್ವಿ, ಆಗ ಮೀಟರ್ ನಮ್ಮ ಮನೆಗೆ ಹೋಗಾದ ಮೇಲೆ ನಂಗೆ ಕಾಲ್ ಮಾಡಿದ, ಎಲ್ಲಿದೀರಪ್ಪಾ ಅಂದ ನಳಪಾಕಕ್ಕೆ ಬಾ ಅಂದ್ವಿ. 2 ನಿಮಿಷದಲ್ಲಿ ಬಂದ, ಬಂದವನೇ ಕೈ ತೊಳೆಯೋದಕ್ಕೆ ಹೋದ.

ನಾನು, ವೆಂಕ ಸುಮ್ನೆ ಅವ್ನ ಕಾಲು ಎಳೆಯೋಣ ಅಂದ್ಕೊಂಡು ಅವ್ನು ಬಂದಾದ ಮೇಲೆ, ಏನು ಮೀಟರ್ ನಿನ್ನ ಫ್ರೆಂಡ್ ಮನೆನಲ್ಲೂ ಬ್ರಷ್ ಮಾಡಿಲ್ಲ, ನಮ್ಮ ಮನೆಯಿಂದ ಬೇರೆ ಬೇಗ ಬಂದೆ, ಇಲ್ಲಿ ಕೈ ತೊಳೆಯೋದಕ್ಕೆ ಹೋದವನು ಬೇಗ ಬಂದೆ, ಕೊನೇ ಪಕ್ಷ ಇಲ್ಲಾದ್ರೂ ಬಾಯಿ ಮುಕ್ಕಳಿಸಿಕೊಂಡು ಬರಬಹುದಿತ್ತಲ್ವ ಅಂತ ಅಂದ್ವಿ.

ಅದ್ಕೆ ಮೀಟರ್, ಹುಲಿ ಸಿಂಹಗಳು ಬ್ರಷ್ ಮಾಡಲ್ಲ ನಿಮ್ಗೆ ಗೊತ್ತಾ ಅಂದ.

ನಾನು, ವೆಂಕ ಅದ್ಯಾಕೆ ಆ ಪ್ರಾಣಿಗಳನ್ನೇ ಹೇಳ್ತೀಯಾ, ಹಂದಿ ಕತ್ತೆಗಳನ್ನು ಹೇಳಬಹುದಿತ್ತಲ್ಲ ಅಂದ್ವಿ (ಮುಂದಿನ‌ ಡೈಲಾಗ್ ಬರತ್ತೆ ಅಂತ ಗೊತ್ತಿತ್ತು, ಅಷ್ಟರೊಳಗೆ ನಮ್ಮ ಬಾಯಿಯಿಂದ ಈ ಮಾತುಗಳು ಹೊರಟಾಗಿತ್ತು).

ಅದ್ಕೆ ಮೀಟರ್, ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ ಅಂತ ಅನ್ನೋದಾ.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಯಾರು ಅಂತ ಗೊತ್ತಾಯ್ತು ಬಿಡಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮಾಲತಿಯವರೇ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಾಚಾತನವನ್ನು ಮೆಚ್ಚಿದೆ, ಚೇತನ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹೆಗಡೆಯವರೇ, ಸತ್ಯ ಅದೇ ಅಲ್ವ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:())) :((( ಚೇತನ್ ಅವ್ರೆ- ಶೀರ್ಷಿಕೆ ಓದಿ ಇದು ಗಣೇಶ್ ಅಣ್ಣ ಅವ್ರದ್ ಬರಹ ಇರ್ಬಹುದಾ? ಅಂತ ಕ್ಲಿಕ್ಕಿಸಿ ಓದಿ, ಇದು ನಿಮ್ಮದು ಅಂತ ಗೊತ್ತಾಗಿ :()) :(( ಆಯ್ತು... ಪ್ರತಿಕ್ರಿಯೆಗಳು ಓದಿದೆ..:())))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.