ಅಪ್ಪನೇ ಕನ್ನಡ ಮಾತಾಡಲ್ಲ ಇನ್ನು ಮಗ....

0

ಇವತ್ತು ಬೆಳಗ್ಗೆ, ನಾನು ನನ್ನ ಗೆಳೆಯನಿಗೆ ಶಟಲ್ ಆಡಲಿಕ್ಕೆ ಪಾರ್ಕ್ ಹೊರಗಡೆ ಕಾಯ್ತಿದ್ದೆ. ಒಬ್ಬ ವ್ಯಕ್ತಿ, ಸುಮಾರು 35 ವರ್ಷ ಇರಬಹುದು ಅವ್ರು ಜಾಗಿಂಗ್ ಮಾಡ್ತಿದ್ರು ಅವರ ಮಗ ಬೈಸಿಕಲ್ ಹೊಡಿತಿದ್ದ. ಆ ವ್ಯಕ್ತಿ ಮಗನಿಗೆ, ಡೋಂಟ್ ಗೋ ಲೆಫ್ಟ್, ಟೇಕ್ ರೈಟ್ ಅಂತ ಅಂದ್ರು. ಮಗನೂ ಸಹ ಐ ವಿಲ್ ಗೋ ಲೆಫ್ಟ್ ಓನ್ಲಿ ಅಂದ, ಅದಕ್ಕೆ ಮತ್ತೆ ಅವ್ರಪ್ಪ ನೋ ಅಂದ್ರು. ಸ್ವಲ್ಪ ಹೊತ್ತಾದ ಮೇಲೆ, ಹುಡುಗ ನಾನು ಹಾಗೇ ಬರ್ತೀನಿ ಅಪ್ಪ ಅಂತ ಕನ್ನಡದಲ್ಲಿ ಅಂದ.

ಇನ್ನು ಆ ಹುಡುಗ ಅವನ ಮಕ್ಕಳಿಗೆ ಏನು ಕನ್ನಡ ಕಲಿಸ್ತಾನೋ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯು ನೋ ವಾಟ್ ! !! ವೀ ನೀಡ ಟು ಪ್ರೊಟೆಕ್ಟ್ ಅಂಡ್ ಡೆವೆಲಪ್ ಕನ್ನಡ ಕಲ್ಚರ್ ಅಂಡ್ ಹೆರಿಟೇಜ್. ವೀ ನೀಡ್ ಟು ಟೆಕ್ ಇಂಟರ್ ನ್ಯಾಷನಲ್ ಸಪೋರ್ಟ್ ಫಾರ್ ಅಪ್ ಲಿಫ್ಟ್ ಮೆಂಟ್ ಆಫ್ ಅವರ್ ಲಾಂಗ್ವೇಜ್ !!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್,

>>ನಾನು ಹಾಗೇ ಬರ್ತೀನಿ ಅಪ್ಪ ಅಂತ ಕನ್ನಡದಲ್ಲಿ ಅಂದ.<<
ಆ ಮಗನಿಗೆ ಕನ್ನಡಾನೂ ಬರ್ತಿದೆ ಅಂತ ಗೊತ್ತಾಗ್ತಿದೆ. ಹಾಗಿರುವಾಗ ಆ ಅಪ್ಪ ತನ್ನ ಮಗನಿಗೆ ಆಂಗ್ಲ ಭಾಷೆಯಲ್ಲಿ ಮಾತಾಡೋದನ್ನು ಕಲಿಸಿದರೆ ತಪ್ಪಾ...?

ಇಲ್ಲಿ ಸಮಸ್ಯೆ ಏನು ಅಂತ ಬಿಡಿಸಿ ಹೇಳ್ತೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೆ, ನಮ್ಮಲ್ಲಿ ತುಂಬಾ ಜನ ಇಂಗ್ಲೀಷ್ ಕಲಿತದ್ದು ಪದವಿಪೂರ್ವದಲ್ಲಿ....ನಾನೂ ಸಹ.

ಅಲ್ಲದೆ ಈಗಿನ ಹುಡುಗರು ಶಾಲೆಯಲ್ಲಿ ಯಾವಾಗಲೂ ಇಂಗ್ಲೀಷ್ ಬಳಕೆ ಮಾಡ್ತಿರ್ತಾರೆ. ನಮ್ಮ ಕುಟುಂಬದವರಲ್ಲೇ ಮಾತೃಭಾಷೆಯಲ್ಲಿ ಮಾತಾಡದಿದ್ದರೆ ಹೇಗೆ ಅಂತ. ಅಲ್ಲದೆ ನೀವೂ ತುಂಬಾ ಅಪ್ಪ ಅಮ್ಮಂದಿರನ್ನು ನೋಡಿರಬಹುದು ಅವರಿಗೆ ಇಂಗ್ಲೀಷ್ ಬರೋದಿಲ್ಲ ಆದರೂ ಮಕ್ಕಳು ಚೆನ್ನಾಗಿ ಮಾತನಾಡುತ್ತಾರೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್,
ಒಂದು ನಿಸ್ವಾರ್ಥ ಸಲಹೆ, ಸ್ವೀಕರಿಸಿ ಇಲ್ಲಾ ತಿರಸ್ಕರಿಸಿ.
ಅದೇ ಕೂಡಲೇ ನೀವು ಆ ಅಪ್ಪನನ್ನು ಮಾತಾಡಿಸಿ ಈ ಬಗ್ಗೆ ಜ್ಞಾನೋದಯ ಮಾಡಿಸಿದ್ದರೆ ಕನ್ನಡಮ್ಮನ ಸೇವೆ ಆಗ್ತಿತ್ತು.
ಸಂಪದದಲ್ಲಿ ಹೇಳ್ಕೊಂಡು ಏನು ಪ್ರಯೋಜನ ಹೇಳಿ. ಯಾಕಂದ್ರೆ ಇಲ್ಲಿ ಎಲ್ಲರೂ ಕನ್ನಡಾಭಿಮಾನಿಗಳೇ ಸ್ವಾಮೀ.
ಇನ್ನೊಮ್ಮೆ ಇಂತಹ ಪ್ರಸಂಗ ನಡೆದರೆ ನನ್ನ ಸಲಹೆಯನ್ನು ಕಾರ್ಯರೂಪಕ್ಕೆ ತನ್ನಿ. ಆಮೇಲೆ ನಿಮ್ಮ ಅನುಭವವನ್ನು ತಿಳಿಸಿ.
ಬೆಕ್ಕಿಗೆ ಘಂಟೆ ನಾನೇ ಕಟ್ಟಬೇಕು ಚೇತನ್, ನನ್ನ ಜೊತೆಗಿರುವವರಲ್ಲ.
ನಮ್ಮ ಉದ್ದೇಶ, ಮಾತು, ಕೃತಿ, ಎಲ್ಲವೂ ಒಂದಕ್ಕೊಂದು ಹೊಂಡಿಕೊಂಡಿದ್ದರೆ ಯಾವಾಗಲೂ ಚೆನ್ನ.
ಏನಂತೀರಾ ಇನ್ನಿತರ ಸಂಪದಿಗರೇ ಮತ್ತು ಸಂಪದಿಗಿತ್ತಿಯರೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹೆಗಡೆಯವರೇ ,
ಈಗತಾನೆ ಒಂದು ಕಟ್ಬಂದಿದೀನಿ , ಸಂಪದದಲ್ಲೇ!
ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಸಲಹೆ ಹೆಗ್ಡೆಯವರೆ, ನಿಮ್ಮ ಮೊದಲ ಪ್ರತಿಕ್ರಿಯೆಗಿಂತ ಈಗಿನ ಪ್ರತಿಕ್ರಿಯೆ ಮೊದಲೇ ಬಂದಿದ್ದರೆ ಆಗ ಇನ್ನೂ ತೂಕವಿರುತ್ತಿತ್ತು, ನಿಮ್ಮ ಪ್ರತಿಕ್ರಿಯೆಗೆ ನಾನು ಉತ್ತರಿಸಿದ್ದೇನೆ ಅದಕ್ಕೆ ಪ್ರತಿಯಾಗಿ ಇನ್ನೇನೋ ಹೇಳಿದ್ದೀರಾ. ಇರಲಿ ನಿಮ್ಮ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ.

ಶಾಮಲರವರೇ ಅಭಿನಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲರವರ ಉದಾಹರಣೆಯನ್ನೇ ತೆಗೆದುಕೊಳ್ಳಿ ಹೆಗ್ಡೆಯವರೆ...

<ಸಂಪದದಲ್ಲಿ ಹೇಳ್ಕೊಂಡು ಏನು ಪ್ರಯೋಜನ ಹೇಳಿ. ಯಾಕಂದ್ರೆ ಇಲ್ಲಿ ಎಲ್ಲರೂ ಕನ್ನಡಾಭಿಮಾನಿಗಳೇ ಸ್ವಾಮೀ>
<ಈಗತಾನೆ ಒಂದು ಕಟ್ಬಂದಿದೀನಿ , ಸಂಪದದಲ್ಲೇ!>

ಮೇಲಿನದಕ್ಕೆ ಏನ‌ಂತೀರಾ,

ಬೇರೆಯ‌ವ‌ರು ಹೇಳುವುದ‌ಕ್ಕಿಂತ‌ ನ‌ಮ್ಮವ‌ರು ತಿಳಿದುಕೊಂಡ‌ರೆ ಬಾರೀ ಚೆನ್ನ. ಅವ‌ರು ಮಾಡಿದ್ದು ತ‌ಪ್ಪಲ್ಲ ಬ‌ದ‌ಲು ಅಭಿಮಾನ‌ ಇಲ್ಲದಿರುವುದು, ಅಂತ‌ವ‌ರಿಗೆ ತಿಳುವಳಿಕೆ ಹೇಳುವುದ‌ರಿಂದ‌ ಬ‌ದ‌ಲಾವ‌ಣೆಯಾಗುವುದಿಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್,

ನನ್ನ ಮೊದಲ ಪ್ರತಿಕ್ರಿಯೆಗೂ ಎರಡನೇ ಪ್ರತಿಕ್ರಿಯೆಗೂ ನಡುವೆ ತೂಕದ ವ್ಯತ್ಯಾಸ ಇದೆಯೋ ಇಲ್ಲವೋ ಗೊತ್ತಿಲ್ಲ.
ನನಗೆ ತೂಕದ ಚಿಂತೆ ಇಲ್ಲ. ನಾನು ತೂಕಕ್ಕಾಗಿ ಬರೆಯುವುದಿಲ್ಲ.
:-)
ನನ್ನ ಮೊದಲ ಪ್ರತಿಕ್ರಿಯೆ ಸಮಸ್ಯೆಯನ್ನು ಅರಿತುಕೊಳ್ಳುವತ್ತ ಇತ್ತು.
ಆ ನಂತರದ ಪ್ರತಿಕ್ರಿಯೆಯಲ್ಲಿ ಸಲಹೆ ಇತ್ತು.
ನಾನು, ಸಮಸ್ಯೆ ಏನು ಅಂತ ನಿಮ್ಮಿಂದಲೇ ತಿಳಿದುಕೊಂಡು ಸಲಹೆ ನೀಡಿದ್ದು.
ನನ್ನ ಮಾತಿಗೂ ಕೃತಿಗೂ ಇಲ್ಲಿ ವ್ಯತ್ಯಾಸ ಆಗದಂತೆ ನಡೆದುಕೊಂಡಿದ್ದೇನೆ.
ಸಮಸ್ಯೆಯ ಅರಿವು ನನಗಿರದೇ ಸಲಹೆ ಹೇಗೆ ಕೊಡಲಿ?
ಶಾಮಲಾರವರ ಉದಾಹರಣೆಗೂ ಇಲ್ಲಿನ ಸಮಸ್ಯೆಗೂ ಸಂಬಂಧ ಕಂಡು ಬರುತ್ತಿಲ್ಲ ನನಗೆ.
ಇಲ್ಲಿ ನಿಮ್ಮ ಸಮಸ್ಯೆ ಕನ್ನಡ ಗೊತ್ತಿದ್ದವರು ಆಂಗ್ಲ ಭಾಷೆಯಲ್ಲಿ ಮಾತಾಡುವುದು ಯಾಕೆ ಅಂತ.
ಕನ್ನಡ ಗೊತ್ತಿದ್ದವರು ತಮ್ಮ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಿದರೆ ತಪ್ಪೇನಿಲ್ಲ. ಆ ಮಗು ಕನ್ನಡದಲ್ಲಿ ಕೂಡ ಮಾತಾಡುತ್ತಿತ್ತು ಅಂತ ನೀವೇ ಹೇಳಿದ್ದೀರಿ. ಎರಡು ಭಾಷೆಗಳ ಉಪಯೋಗ ಮಾಡಿದರೆ ಏನ್ರೀ ತಪ್ಪು?
ಶಾಮಲಾರವರ ಉದಾಹರಣೆ ಸಿದ್ಧರಾಮರ (ಮಾತು) ಬಗ್ಗೆ. ಆತ ಕನ್ನಡದ ಕೊಲೆ ಮಾಡುತ್ತಿದ್ದುದಲ್ಲದೇ, ಭಾರತೀಯ ನಾರಿಯರ ಬಗ್ಗೆ ಕೆಟ್ಟದಾಗಿ ಬರೆದ್ದಿದ್ದಾರೆ ಕೂಡ. ಎರಡೂ ಭಿನ್ನ ಸಮಸ್ಯೆಗಳು. ಹಾಗಾಗಿ ಒಂದಕ್ಕೊಂದು ಸಂಬಂಧ ಕಲ್ಪಿಸಲು ಆಗುವುದಿಲ್ಲ.
ಇನ್ನೊಂದು ವಿಚಾರ, ಯಾವುದೇ ಸಮಸ್ಯೆಯನ್ನು ಮುಂದಿಡುವಾಗ ಆ ಬಗ್ಗೆ ನಮ್ಮಲ್ಲೇ ಇರುವ ಪರಿಹಾರವನ್ನು ಸೂಚಿಸಬೇಕು.
ಇಲ್ಲವಾದಲ್ಲಿ ಓದುಗರು ಸೂಚಿಸುವ ಪರಿಹಾರವನ್ನು ಗಮನಿಸಬೇಕು. ಸಾಧ್ಯವಿದ್ದರೆ ಕಾರ್ಯರೂಪಕ್ಕೆ ತರಬೇಕು.
ನನ್ನ ಸಲಹೆಗಳನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೆ, ಯಾಕೆ ಇಲ್ಲಿ ಬರೆದೆ ಅಂದ್ರೆ, ಯಾರಾದ್ರೂ ಇದನ್ನ ನೋಡ್ತರೆ (ಸಂಪದವರೇ ಅಂತ ಅಲ್ಲ) ಅವರೂ ಹಾಗೆ ಮಾಡ್ತಿದ್ರೆ ತಿದ್ದ್ದಿಕೊಳ್ಳಬಹುದು ಅನ್ನೋ ಉದ್ದೇಶದಿಂದ...

<ಕನ್ನಡ ಗೊತ್ತಿದ್ದವರು ತಮ್ಮ ಮಕ್ಕಳಿಗೆ ಆಂಗ್ಲ ಭಾಷೆ ಕಲಿಸಿದರೆ ತಪ್ಪೇನಿಲ್ಲ. ಆ ಮಗು ಕನ್ನಡದಲ್ಲಿ ಕೂಡ ಮಾತಾಡುತ್ತಿತ್ತು ಅಂತ ನೀವೇ ಹೇಳಿದ್ದೀರಿ. ಎರಡು ಭಾಷೆಗಳ ಉಪಯೋಗ ಮಾಡಿದರೆ ಏನ್ರೀ ತಪ್ಪು?>

ತ‌ಪ್ಪೇನಿಲ್ಲ ಹ‌ಗ್ಡೆಯ‌ವ‌ರೆ, ಅದು ವ್ಯಾವ‌ಹಾರಿಕ‌ ಭಾಷೆ. ಅಷ್ಟನ್ನು ಶಾಲೆಗ‌ಳ‌ಲ್ಲಿ ಚೆನ್ನಾಗಿ ಕ‌ಲಿಸಿಕೊಡುತ್ತಾರೆ.

ಸ‌ಣ್ಣ ವ‌ಯ‌ಸ್ಸಿನ‌ಲ್ಲಿ ಸ್ವಂತ ಭಾಷೆ ಚೆನ್ನಾಗಿ ಕಲಿಯದ ಮಗು ಮುಂದೆ ಅದ‌ನ್ನು ಹೇಗೆ ಉಪ‌ಯೋಗಿಸ‌ಬ‌ಹುದು ಎಂಬುದ‌ನ್ನು ನೀವೇ ಯೋಚಿಸಿ. 10 ವಾಕ್ಯದ‌ಲ್ಲಿ 1 ಆಂಗ್ಲ ವಾಕ್ಯ ಇದ್ದರೆ ನಿಮ್ಮ ತ‌ರ್ಕ‌ ಸ‌ರಿ ಆದ‌ರೆ ಇಲ್ಲಿ 9 ವಾಕ್ಯ ಆಂಗ್ಲ (ಶಾಲೆಯಲ್ಲಿ ಪೂರ್ತಿ ಆಂಗ್ಲ ನಿಮ್ಮ ನೆನಪಿಗೆ, ಇದು ಆ ಒಂದು ಹುಡುಗನ ಕಥೆಯಲ್ಲ, ಈ ತರದವರು ತುಂಬಾ ಇದ್ದಾರೆ), ಹಾಗಾದ‌ರೆ ಕ‌ನ್ನಡ‌ದ‌ ಗ‌ತಿ???

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಕನ್ನಡವನ್ನು ಉಪಯೋಗಿಸುತ್ತಿರುವ ತನಕ ಕನ್ನಡಕ್ಕೆ ಏನೂ ತೊಂದರೆ ಆಗೋದಿಲ್ಲ ಎನ್ನುವುದು ನನ್ನ ನಂಬಿಕೆ.
ಊರವರ ಉಸಾಬರಿಗೆ ನಾನು ಹೋಗೋದಿಲ್ಲ. ಕಲಿಯುವ ಇಚ್ಛೆಯಿದ್ದವರಿಗೆ ಕಲಿಸುತ್ತೇನೆ. ಅಷ್ಟೆ.
ವಾಸ್ತವದ ಅರಿವಿಲ್ಲದೇ ನಾನು ಆ ಅಪ್ಪ ಮಗುವಿನ ಬಗ್ಗೆ ಮಾತಾಡಲು ಆಗುವುದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ್ಯಕ್ತಿಯಿಂದ ವ್ಯಕ್ತಿಗೆ ನಂಬಿಕೆಗಳು, ವಿಚಾರಗಳು ದೃಷ್ಟಿಕೋನಗಳು ವಿಭಿನ್ನವಾಗಿರುತ್ತವೆ. ನನಗೆ ಕನ್ನಡದವರು ಕನ್ನಡವನ್ನು ಉಪಯೋಗಿಸುತ್ತಿಲ್ಲದಿದ್ದರೆ ಭಾಷೆ ನಶಿಸಿಹೋಗುತ್ತದೆನ್ನುವ ನಂಬಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಇನ್ನು ಇಷ್ಟೆ. :-)

ಯಾಕೆಂದರೆ ಚರ್ಚೆಗಳಿಗೆ ಮತ್ತು ವಾದಗಳಿಗೆ ನನ್ನನ್ನು ನಾನು ಒಡ್ಡುವುದಿಲ್ಲ.
ಸಲಹೆ ನೀಡಿದ್ದು ಸಹಕರಿಸುವ ಉದ್ದೇಶದಿಂದ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ, ಅಪ್ಪ ಅಮ್ಮಂದಿರು ಈ ಕಾಲದಲ್ಲಿ ತಮ್ಮ ಮಕ್ಕಳೊಂದಿಗೆ ಬರೀ ಇಂಗ್ಲಿಷ್ ನಲ್ಲಿ ಮಾತಾಡಿ, ಅದನ್ನೆ ದೊಡ್ಡದು, ಪ್ರೆಸ್ಟೀಜ್ ಅನ್ನೋ ಹಾಗೆ ತೋರಿಸ್ತಾರೆ. ಇನ್ನೂ ಮಕ್ಕಳು ಹಾಗೆ ಮಾಡಿದ್ರೆ ಕನ್ನಡ ಬೆಳೆಯೊದಾದ್ರೂ ಹೇಗೆ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್
ನಿಮ್ಮ ಸಲಹೆ ಸರಿ
ಆದರೆ ಒಂದೊಮ್ಮೆ ನಾನು ಕನ್ನಡ ಎಂದದಕ್ಕೆ(http://sampada.net/blog/roopablrao/28/03/2008/8068)(ಬೆಕ್ಕಿಗೆ ಘಂಟೆ ಕಟ್ಟಲು ಹೋದೆ)
ನನಗಾದ ಅನುಭವ ನೋಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.