ಈಗೇನು ಲೈಟ್ ಆಫ್ ಮಾಡ್ಲಾ?

4

ಮೊನ್ನೆ ಊರಿಗೆ ಹೋಗಿದ್ದಾಗ ನಾನು, ನಮ್ಮಪ್ಪ ಮತ್ತೆ ನಮ್ಮಮ್ಮ ಅತ್ತೆ ಮನೆಗೆ ಹೋಗಿದ್ವಿ. ಮನೆಗೆ ವಾಪಸ್ ಬರೋವಾಗ ರಾತ್ರಿಯಾಗಿತ್ತು, ನಾನು ಡ್ರೈವ್ ಮಾಡ್ತಿದ್ದೆ, ನಮ್ಮಪ್ಪಂಗೆ ಅವರ ಡ್ರೈವಿಂಗ್ ಮೇಲೆ ಇರುವಷ್ಟು ಭರವಸೆ ನನ್ನ ಡ್ರೈವಿಂಗ್ ಮೇಲೆ ಇಲ್ಲ, ಅದೇ ರೀತಿ ನನಗೂ ಸಹ (ಅಂದ್ರೆ ಅವರ ಡ್ರೈವಿಂಗ್ ಮೇಲೆ ನನಗೆ ಭರವಸೆ ಇಲ್ಲ).

ಕಾರಿನ ಬ್ಯಾಟರಿ ತುಂಬಾ ಸಲ ನಮ್ಮಪ್ಪಂಗೆ ಕೈ ಕೊಡ್ತಿತ್ತು, ಅದನ್ನೇ ರಿಪೇರಿ ಮಾಡ್ಸ್ತಿದ್ರು.

ಈಗ ವಿಷಯಕ್ಕೆ ಬರೋಣ, ಸುಮಾರು 10 ಗಂಟೆ ಆಗಿತ್ತು, ಇನ್ನೂ ಅರ್ಧ ಗಂಟೆ ದಾರಿ ಬಾಕಿ ಇತ್ತು, ಸುತ್ತ ಭಯಾನಕ ಕತ್ತಲು, ಹೆಡ್ಲೈಟ್ ಆಫ್ ಮಾಡಿದ್ರೆ ಯಾರೂ ಕಾಣ್ತಿರ್ಲಿಲ್ಲ, ಕಾರು ಮನೆಯ ಹಾದಿಯಲ್ಲಿ ಸಾಗುತ್ತಿತ್ತು. ನಮ್ಮಪ್ಪ, ಹೀಗೆ ಮಾತಾಡ್ತಾ, ಹೆಡ್ಲೈಟ್ ಜಾಸ್ತಿ ಉಪಯೋಗಿಸಿದರೆ ಬ್ಯಾಟರಿ ವೀಕ್ ಆಗತ್ತೆ ಗೊತ್ತಾ ಅಂದ್ರು (ಸುಮ್ನೆ ವಿಷಯ ಹೀಗೆ ಅಂತ ಹೇಳಿದ್ರು).

ನಾನು ತಕ್ಷಣ, ಈಗೇನು ಆಫ್ ಮಾಡ್ಲಾ? ಅಂದೆ......

ನಮ್ಮಮ್ಮ ಬಿದ್ದು ಬಿದ್ದು ನಗಾಡ್ತಿತ್ತು, ನಮ್ಮಪ್ಪ ಒಂದು 10 ನಿಮಿಷ ಏನು ಮಾತನಾಡದೆ ಸುಮ್ಮನೆ ಕುಳಿತಿದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಪ್ರಶ್ನೆ ಸಾಂದರ್ಭಿಕವಾಗಿತ್ತು...
:)

>>ನಮ್ಮಮ್ಮ ಬಿದ್ದು ಬಿದ್ದು ನಗಾಡ್ತಿತ್ತು, ನಮ್ಮಪ್ಪ ಒಂದು 10 ನಿಮಿಷ ಏನು ಮಾತನಾಡದೆ ಸುಮ್ಮನೆ ಕುಳಿತಿದ್ರು.<<

ಅಮ್ಮ ನಗಾಡ್ತಾ ಇತ್ತು
ಅಪ್ಪ ಸುಮ್ಮನೆ ಕುಳಿತಿದ್ರು.

ಇದ್ಯಾಕೆ ಹೀಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮಪ್ಪಂಗೆ ಏನು ಹೇಳ್ಬೇಕು ಅಂತ ತೋಚಲಿಲ್ಲ ಅನ್ಸತ್ತೆ ಹೆಗಡೆಯವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ನಮ್ಮಪ್ಪಂಗೆ ಏನಾದ್ರೂ ಹಿಂಗೇ ಒಂದು ಪಾಯಿಂಟ್ ಹಾಕೋಕಂತ ಕಾಯ್ತಿರ್ತೀನಿ. ಇದೂವರ್ಗು ನಮ್ಮಪ್ಪಂಗೆ ಸೋಲ್ಸಕ್ಕಾಗಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಅವಕಾಶಕ್ಕೆ ಕಾಯ್ತಾನೇ ಇರ್ತೀನಿ ವಿನಯ್, ಯಾರೂ ಅಂತ ನೋಡೋಲ್ಲ, ಹೇಳಿಬಿಡೋದು ಅಷ್ಟೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ತಮಾಷೆ.....ನಾನು ತಕ್ಷಣ, ಈಗೇನು ಆಫ್ ಮಾಡ್ಲಾ? ಅಂದೆ......
ಒಂದ್ನಿಮಿಷ ಆಫ್ ಮಾಡ್ಬಿಡ್ಬೇಕಿತ್ತು....
ಅಪ್ಪ ಅಮ್ಮನ ಜೊತೆ ಈ ಥರದ ಮಾತುಗಳು ಏನೊ ಒಂಥರ ಖುಷಿಕೊಡುತ್ತಲ್ವ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂಂ ಮಾಲತಿಯವರೆ ತುಂಬಾ ಖುಷಿ ಕೊಡತ್ತೆ, ಆಫ್ ಮಾಡಿದ್ರೆ ಒಂದೇ ದಿನ 3 ತಿಥಿ ಸಿಗ್ತಿತ್ತು ನಮ್ಮ ಊರಿನ ಜನಕ್ಕೆ, ಆಗ್ಲೂ ಬೈಕೊಳ್ತಿದ್ರು :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.