ಇದೇನ ಸಭ್ಯತೆ ಇದೇನ ಸಂಸ್ಕೃತಿ...

0

ನಿನ್ನೆ ಕೆಲಸ ಮುಗಿಸಿಕೊಂಡು ಬಸ್ಸಿನಲ್ಲಿ ಹೋಗೋವಾಗ ಎಫ್ ಎಂ ಕೇಳ್ತಿದ್ದೆ, ಸಂಜೆ 6.30ಕ್ಕೆ 104 ಸ್ಟೇಶನ್ನಲ್ಲಿ ಏನೋ ಸ್ಪರ್ಧೆ ನಡೀತಾ ಇತ್ತು. ಸರಿ ಕೇಳೋಣ ಅಂದ್ಕೊಂಡು ಹಾಕಿ ಕುಳಿತೆ.

ಹಾಡು ಹೇಳೋ ಸ್ಪರ್ಧೆ ಅನ್ಸತ್ತೆ, ಒಬ್ಬಳು ಹುಡುಗಿ ಕರೆ ಮಾಡಿದ್ಲು. ಕಾರ್ಯಕ್ರಮ ನಡೆಸಿಕೊಡುವವನು ಶುರುಮಾಡಿ ಅಂದ, ಅವಳು 'ನಗುವ ನಯನ ಮಧುರ ಮೌನ...' ಅಂತ ಹಾಡಿದ್ಲು.

ಹಾಡಿದ ಮೇಲೆ, ಈ ನನ್ಮಗ ಆ ಹುಡುಗಿ ವಯಸ್ಸು ಕೇಳಿದ, ಅವಳು 19 ಅಂದ್ಲು. ಅದಕ್ಕೆ ಇವನು, ಇನ್ನೊಂದೆರಡು ವರ್ಷ ಜಾಸ್ತಿ ಇದ್ದಿದ್ರೆ ನಿಮ್ಮನ್ನ ಮದ್ವೆಯಾಗಿಬಿಡ್ತಿದ್ದೆ ಅನ್ನೋದಾ....

ಇದೇನಾ ಇವರುಗಳು ಇಲ್ಲಿವರೆಗೆ ಕಲಿತದ್ದು??

ಆ ಹುಡುಗನಿಗಂತೂ ಇನ್ನೂ ಬುದ್ಧಿ ಬಂದಿಲ್ಲ ಅಂದ್ರೂ ಆ ಸ್ಟೇಶನ್ನಲ್ಲಿ ಅವರನ್ನು ಸಂದರ್ಶನ ಮಾಡುವವರಿಗಾದ್ರೂ ಬುದ್ಧಿ ಬೇಡ್ವ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನೂ ಮಾಡೋಕ್ಕಾಗಲ್ಲ ಚೇತು ... ಇವ್ನೂ ಇಂಟರ್ವ್ಯೂಲೂ ಹೀಗೇ ಎಂತಾದ್ರೂ ಮಾಡಿದ್ದು, ಇಂಟರ್ವ್ಯೂ ಮಾಡಿದ್ದ್ಗುಬಾಲ್ 'ದಿಸ್ಗೈ ಸೀಮ್ಸ್ಟು ಬೀ ಸೋ ಕೂಲ್! ಲೆಟ್ಸ್ಗೆಟ್ ಹಿಮಾನೇರ್' ಅಂದಿರ್ತಾನೆ.

ಪಾಪ್ಯುಲಾರಿಟಿಗೇಂತಾ ಏನೇನೋ ಮಾಡೋ ಎಮ್ಮ್ಟೀವಿ/ಚಾನಲ್ವೀ ನಾ ಇವು (ತಮ್ಗಾದ್ಮಟ್ಟಿಗೆ) ಇಮಿಟೇಟ್ಮಾಡ್ತಿವೆ ಅಷ್ಟೇ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೂ ಎಷ್ಟೊಂದು ಜನ ಕೇಳ್ತಿರ್ತರೆ ಅನ್ನೋ ಪರಿಜ್ನಾನವೂ ಇಲ್ಲವಲ್ಲ ಅವ್ರಿಗೆ :) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್,
ತುಂಬ ಜನ ಕೇಳ್ತಿರ್ತಾರೆ ಅಂತ ಅವ್ರಿಗೆ ಗೊತ್ತಿದೆ ಅದಕ್ಕೆ ಅವ್ರು ಹೆಂಡ ಕುಡಿದ ಕೋತಿಗಳ ತರ ಆಡೋದು.. ಆದರೆ ಅವ್ರಿಗೆ ಕೇಳ್ತಿರೋರಲ್ಲಿ ಎಲ್ಲಾ ಹಿರಿಯರು, ಹೆಂಗಸರು, ಪ್ರೌಢಾವಸ್ಥೆಗೆ ಕಾಲಿಡ್ತಿರೊ ಹೆಣ್ಣು ಮಕ್ಕಳಿರ್ತಾರೆ ಅನ್ನೊ ಪರಿಜ್ಙಾನ ಇಲ್ಲ ಅಷ್ಟೆ. ಈ ರೇಡಿಯೊ ಜಾಕಿಗಳು ಮಾಡೊ ವಿಚಿತ್ರ ಕುಚೇಷ್ಟೆಗಳಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಕ್ಷಣಕ್ಕೆ ತಿಳಿಯದ ಎಳೆ ವಯಸ್ಸಿನ ಹುಡುಗಿಯರು, ಕನ್-ಫ್ಯೂಸ್ ಆಗಿ ಪೆಕರರಂತೆ ನಕ್ಕು ಸುಮ್ನಾಗೋದು ನೋಡಿದ್ರೆ ಬೇಸರ ಆಗತ್ತೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್, ನಿಮ್ಮ ಮಾತು ನೂರಕ್ಕೆ ನೂರು ಸತ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಂದೆಯಾದವನೇ ತನ್ನ ಹೆಣ್ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಕಲಿ ಕಾಲ ಇದು - ಭವ್ಯ ದೇಶ ಇದು.
ಹಾಗಿರುವಾಗ ಮದುವೆ ಆಗ್ಬಿಡ್ತಿದ್ದೆ ಅಂತ ತಮಾಷೆಗೆ ಹೇಳಿದ್ದನ್ನು ಅಸಭ್ಯತೆ ಅಂತೀರಲ್ರೀ...?

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ಯ ಹೆಗ್ಡೆಯವರೆ, ನ್ಯೂಸ್ ಕೇಳೋದಕ್ಕೆ ಅಸಹ್ಯ ಆಗತ್ತೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆ ಹೇಳಿದಾಗ ಕರೆ ಮಾಡಿದವರು ಹ್ಹಿ ಹ್ಹಿ ಹ್ಹಿ ಅಂತ ನಗದೇ ಸರಿಯಾಗಿ ಮುಖಕ್ಕೆ ಉಗಿದರೆ ಸರಿಹೋಗ್ತಾರೆ.
ನಾಲ್ಕು ಜನ ಉಗ್ದ್ರೆ ಎಲ್ಲಾ ರೇಡಿಯೋ ಜಾಕಿಗಳೂ ಬುದ್ಧಿ ಕಲಿತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಆ ಹುಡುಗಿ ಮುಚ್ಕೊಂಡು ಇಡೋ ಫೋನ್ ಅನ್ನಬೇಕಿತ್ತು ಆಗ ಸರಿಯಾಗಿರೋದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಸುಮಾರು ಎರಡು ವರ್ಷಆತು ಈ "ಬೆಂಗಾಡೆಂಬ ಬೆಂಗಳೂರಿಗೆ " ಬಂದು .ದಿನಾ ನೋಡತೇನಿ ಕಿವಿ
ಮುಚ್ಚಿಕೊಂಡು ಆ ರೇಡಿಯೋ ಜಾಕಿಗಳ ಅಸಂಬದ್ಢ ಪ್ರಲಾಪ ಕೇಳುವವರೇ ಎಲ್ಲ ಅವ್ರು ಹೆಚ್ ಗೊಂಡಿದ್ದಾರೆ
ಒದ್ದು ಬುದ್ಢಿ ಹೇಳ್ ಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರಿಗೆ ಒದಿಬೇಕು? ಜಾಕಿಗಳಿಗಾ ಅಥವಾ ಅವರು ಹೇಳಿದ್ದನ್ನು ಕೇಳುವವರಿಗಾ?
ಜಾಕಿಗಳದ್ದೇ ತಪ್ಪು ಎಂದಾದರೆ ಸಭ್ಯ ಜನ ಎಲ್ಲ FM Rainbow ಅನ್ನೋ, ವಿವಿಧ ಭಾರತಿಯನ್ನೋ ಕೇಳುತ್ತಿದ್ದಾರ? ಆ ಸ್ಟೇಶನ್ ನವರು ಏನೂ ಅಸಂಬಧ್ಧ ಪ್ರಲಾಪ ಮಾಡುವಿದಿಲ್ಲವಲ್ಲ?
FM ರೇಡಿಯೋ ಸ್ಟೇಶನ್ ಗಳು ವ್ಯಾಪಾರ ಮಾಡೋಕೆ ಇರೋದು. ಯಾವ ಸಾಮಾನು ಹೆಚ್ಚು ಖರ್ಚು ಆಗುತ್ತೋ ಅದನ್ನು ಮಾರೋದು ಅವರ ಧರ್ಮ. ಅವರ ಮೇಲೆ 'ಹೊಡಿಮಗ ಬಡಿಮಗ' ಅಸ್ತ್ರ ಪ್ರಯೋಗ ಮಾಡೋದಕ್ಕಿಂತ ನಮ್ಮನ್ನ ನಾವು ಸರಿ ಮಾಡಿಕೊಂಡರೆ ಸಾಕು. ಅದರ effectiveness ಇನ್ನೂ ಜಾಸ್ತಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ ಸರಿಯಾಗೇ ಇದಾರೆ ಸಾರ್.

ಈಗಿನ ಕೇಸ್ ತಗೋಳ್ಳಿ, ಆ ಹುಡುಗಿ ಏನು ರೇಡಿಯೋ ಜಾಕಿಗೆ ಲೈನ್ ಹೊಡಿತಿದಿನಿ ಅಂತ ಹೇಳಿರಲಿಲ್ಲ. ಅವಳು ಸುಮ್ಮನೆ ರೇಡಿಯೋ ಕಾರ್ಯಕ್ರಮವೊಂದಕ್ಕೆ ಕರೆ ಮಾಡಿ ಹಾಡು ಹೇಳಿದ್ದಷ್ಟೆ. ಇಲ್ಲಿ ಕೋತಿ ತರ ಆಡಿದ್ದು ರೇಡಿಯೋ ಜಾಕಿ. ಅದಕ್ಕೆ ಪಾಪ ಆ ಹುಡುಗಿ (ಕೇಳುಗರು) ಏನು ಮಾಡೋಕಾಗತ್ತೆ.

ಕಾಮುಕ ಶಿಕ್ಷಕನೊಬ್ಬ ಒಂದು ಹುಡುಗಿ ಜೊತೆ ಅಸಭ್ಯ ವರ್ತನೆ ಮಾಡಿದರೆ ಶಾಲೆಗೇ ಹೋಗುವವರದ್ದೇ ತಪ್ಪು ಅಂದಂಗಾಯ್ತು ನೀವು ಹೇಳಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡ್ರೇ,
ನಾನು ಹೇಳಿದ್ದು ಹುಡುಗಿಯ ತಪ್ಪು ಅಂತಲ್ಲ. FM ಕೆಂದ್ರಗಳೂ, ಅಲ್ಲಿನ ಆರ್ಜೆ ಗಳೂ ಕೆಲಸ ಮಾಡುವುದು commercial interest ನಿಂದ ಅಲ್ಲವೇ? ಆದ್ದರಿಂದ ಇಷ್ಟು ಕೀಳು ಅಭಿರುಚಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿಯೂ ಅವು ಜನಪ್ರಿಯವಾಗಿವೆ ಎಂದರೆ ಬರೀ ಅವರೆಡೆಗೆ ಬೆರಳು ತೋರಿಸದೇ ನಾವು ಕೂಡ ಆತ್ಮವಿಮರ್ಶೆ ಮಾಡಿಕೊLLಅಬೇಕು ಎಂದು ನನ್ನ ಅಭಿಪ್ರಾಯ.
ಇದೇ ರೀತಿ ಕನ್ನಡ ಸಿನಿಮಾಗಳಲ್ಲಿ ಅಂಗಾಂಗ ಪ್ರದರ್ಶನಕ್ಕೂ ಅನ್ವಯವಾಗುತ್ತದೆ. ದಟ್ಸ್ ಕನ್ನಡದ ಪುಟಗಳನ್ನು ನೋಡಿ, ಮನೆಯವರ ಜೊತೆಯಲ್ಲಿ ಕುಳಿತು ಒಂದು ಉತ್ತಮ ಲೇಖನವನ್ನು ಓದಲು ಮುಜುಗರವಾಗುವಹಾಗೆ ಇರುತ್ತವೆ. ಇವೆಲ್ಲಾ ಯಕಪ್ಪಾ ಎಂದರೆ cheap tastes sell.

ಅಷ್ಟಕ್ಕೂ ನನಗೆ ಈ ರೀತಿಯ ಕಾರ್ಯಕ್ರಮಗಳು ಕೀಳು ಅಭಿರುಚಿಯವು ಅನ್ನುವುದರಲ್ಲಿ ಭಿನ್ನಾಭಿಪ್ರ್ರಾಯವಿಲ್ಲ. ಆದರೆ ದೇಸಾಯಿಯವರು ಹೇಳಿದಂತೆ 'ಇಕ್ರಲಾ ಒದಿರ್ಲಾ' ಮಾರ್ಗ ಇದಕ್ಕೆ ಮದ್ದು ಅನ್ನುವುದಕ್ಕೆ ಮಾತ್ರ ನನ್ನ ಭಿನ್ನಾಭಿಪ್ರಾಯ. ನಮಗೆ ನಿಜವಾಗಿಯೂ ಬದಲಾವಣೆ ಬೇಕು ಎಂದರೆ ಈ ರೇಡಿಯೋ ಕಾರ್ಯಕ್ರಮಗಳನ್ನು ಕೇಳುವುದು ಬಿಡಬಹುದು. (FM ಗಳಲ್ಲಿ ಹಿಂದಿ ಹೋಗಿ ಕನ್ನಡ ಬಂದಿದ್ದು ಇದಕ್ಕೆ ಉದಾಹರಣೆ). ಇಲ್ಲದಿದ್ದರೆ ನಾವು ಯಾವುದಕ್ಕೆ ಸೂಕ್ತರೋ, ಅದು ನಮಗೆ ಸಿಗುತ್ತದೆ. (We get what we deserve).

ಆಮೇಲೆ ಕಾಮುಕ ಶಿಕ್ಷಕನ ಅಸಭ್ಯ ವರ್ತನೆಗೂ, ನಾನು ಹೇಳುತ್ತಿರುವ ವಿಶಯಕ್ಕೂ ಇರುವು ಅಂತರ ನನ್ನ ಮೇಲಿನ ವಿಶದೀಕರಣದಿಂದ ವ್ಯಕ್ತವಾಗುತ್ತದೆಯಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇವೆಲ್ಲಾ ಯಕಪ್ಪಾ ಎಂದರೆ cheap tastes sell.
ನೂರ್ಕ್ನೂರ್ನಿಜಾ ಸಾರ್! ಮಚ್ಚು-ಲಾಂಗು-ಲವ್ವು-ಸೇಡು-ಐಟಮ್ಸಾಂಗ್ ಫಿಲ್ಮ್ಗಳ/ಹಾಡುಗಳ ಪಾಪ್ಯುಲಾರಿಟಿ, ಎಮ್ಮ್ಟೀವಿ ರೋಡೀಸ್, ಸ್ಪ್ಲಿಟ್ಸ್ವಿಲ್ಲಾ, ಇನ್ನೆಂತೆಂತದೋ ರಿಯಾಲಿಟಿ (ಹಾರರ್) ಶೋಗಳು, ಐದ್ಪೈಸೆ ಪ್ರಯೋಜ್ನಕ್ಕಿಲ್ದಿರೋ ಬರೀ ವಿವಾಹೇತರ ಸಂಬಂಧಗಳ, ಮನೆ ವ್ಯಾಜ್ಯದ ಬಗೆಗಿನ ಸೀರಿಯಲ್ಲುಗಳು, ಅಲ್ಲಿ ಯಾವಳೋ ಚಿತ್ರನಟಿ ಎಲ್ಲೋಯಾವನ್ಜೊತೆನೋ ಕಂಡ್ರೆ ಇನ್ನಿಲ್ಲ್ದಂತೆ ಸುದ್ದೀಂತಾ ಮಾಡಿ ಅದ್ರಿಂದ ಟಿಆರ್ಪೀ ಏರ್ಸೋ ಚಾನಲ್ಗಳು.

ಹೀಗೇ ಪಟ್ಟಿ ಬೆಳೀತ್ಲೇ ಹೋಗತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

summer_glau ಅವರೇ,

ನನ್ನ ಪ್ರತಿಕ್ರಿಯೆ ಬಸವರಾಜ ಪಾಟೀಲರ ಈ ಕೆಳಗಿನ ಮಾತುಗಳಿಗೆ ಮಾತ್ರವಾಗಿತ್ತು. (ಇನ್ನೊಮ್ಮೆ ಓದಿ ನೋಡಿ).

>>ಕೆಲವರಿದ್ದಾರೆ ಸ೦ಪದ ಬಳಗದಲ್ಲಿ ಅವ್ರಿಗೆ ಒಳ್ಳೇದು ಕೆಟ್ಟದ್ದು ಪಾಪ ಗೊತ್ತಿಲ್ಲ ಮತಿಗೇಡಿಗಳು. ವಾದ ಮಾಡಬೇಕಲ್ಲ ಅದ್ಕೆ ವಾದ ಮಾಡಬೇಕು. <<

ಅವರು ನೇರವಾಗಿ ಅಥವಾ ಪರೋಕ್ಷವಾಗಿ ಯಾರನ್ನೇ ಆಗಲಿ ಮತಿಗೇಡಿಗಳು ಎಂದು ಕರೆಯುವುದು ಸರಿಯಲ್ಲ ಎಂದು ಎರಡು ಮಾತು ಹೇಳಿದ್ದೆ. ಅಷ್ಟೆ.

ನೀವು ಯಾಕೆ ನನಗೆ ಉತ್ತರಿಸುತ್ತಿದ್ದೀರೊ ಅರ್ಥವಾಗುತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆ ಅವರೆ,
ನಾನು ಪ್ರತಿಕ್ರಿಯಿಸಿದ್ದು ವಿ.ರಾ.ಹೆ. ಅವರಿಗೆ! ಅವರ ಹೆಸರು ವಿಕಾಸ ಹೆಗಡೆ.
ಇಬ್ಬರು ಹೆಗಡೆಯರಾಗಿ ಈ ಗೊಂದಲ! ನಾನು ಯಾರಿಗೆ ಪ್ರತಿಕ್ರಿಯೆ ಎಂದು ಸ್ಪಷ್ಟ ಮಾಡದೇ ಇದ್ದುದ್ದಕ್ಕೆ ಕ್ಷಮೆ ಇರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ ನನ್ನದೇ ತಪ್ಪು..ಮರೆತು ಬಿಡಿ.

ಆದರೂ ಪಾಟೀಲರ ಉತ್ತರ ನಿರೀಕ್ಷೆಯಲ್ಲಿದ್ದೇನೆ.
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮ್ಮರ್ ರವರೆ, ನಮ್ಮಪ್ಪನೋ ನಮ್ಮಮ್ಮನೋ ಕೆಟ್ಟದ್ದು ಮಾಡು ಅಥವಾ ಮಾಡು ಅಂದ್ರೆ ಹಾಗೆ ಮಾಡೋಕಾಗತ್ತ, ನಾನು ಮಾಡ್ತಿರೋದು ಸರೀನಾ ಅಂತ ಆತ್ಮಾವಲೋಕನ ಮಾಡಿಕೊಳ್ಳುವುದು ಆ ಹುಡುಗನ ಜವಾಬ್ದಾರಿ....

ಯಾರಿಗೆ ಒದಿಬೇಕು? ಜಾಕಿಗಳಿಗಾ ಅಥವಾ ಅವರು ಹೇಳಿದ್ದನ್ನು ಕೇಳುವವರಿಗಾ? > ಹೀಗೆ ಹೇಳಿದ್ದೀರಲ್ವಾ, ಕೇಳಿ.
ಯಾವ ಸ್ಟೇಶನ್ನಲ್ಲಿ ಒಳ್ಳೆ ಹಾಡು ಬರತ್ತೆ ಅಂತ ಹುಡುಕುವುದನ್ನು ಎಲ್ಲರೂ ಮಾಡುತ್ತಾರೆ, ಆ ಸಮಯದಲ್ಲಿ ಯಾರಾದ್ರೂ ಹಾಡಿದ್ರೆ, ಚೆನ್ನಾಗಿ ಮಾತಾಡಿದ್ರೆ ಕೇಳುವ ಮನಸ್ಸಾಗುವುದು ಸಹಜ, ಇದರಲ್ಲಿ ಕೇಳುವವನ ತಪ್ಪು ಎಲ್ಲಿಂದ ಬಂತು, ಕೆಟ್ಟದ್ದು ಅಂತ ಬಂದಾಗ ಪ್ರಸ್ತಾಪ ಮಾಡುವುದರಲ್ಲಿ ತಪ್ಪಿಲ್ಲ, ಅದಕ್ಕ್ಯಾಕೆ ಕೇಳುವ‌ವರಿಗೆ ಒದಿಬೇಕು??.
ಕೆಲವು ಕೆಲಸಗಳಿಗೆ ಸೇರಿಕೊಳ್ಳುವುದಕ್ಕೆ ಅದರದ್ದೇ ಆದ ಮಿತಿಗಳು, ಅರ್ಹತೆಗಳಿರ್ತವೆ, ಅದನ್ನು ಸ್ಟೇಶನ್ನವರು ಪಾಲಿಸಿದ್ರೆ ಈ ತರಹ ಅನಾಹುತಗಳಾಗುವುದಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.